Homeಕರ್ನಾಟಕದಯವಿಟ್ಟು ಇದನ್ನು ಮಾಧ್ಯಮ ವೈರಸ್ ಎಂದು ಕರೆಯಬೇಡಿ. ಏಕೆಂದರೆ..

ದಯವಿಟ್ಟು ಇದನ್ನು ಮಾಧ್ಯಮ ವೈರಸ್ ಎಂದು ಕರೆಯಬೇಡಿ. ಏಕೆಂದರೆ..

- Advertisement -
- Advertisement -

ದಯವಿಟ್ಟು ಕನ್ನಡಿಗರಲ್ಲಿ ಒಂದು ಮನವಿ. ಇಡೀ ವಿಶ್ವವನ್ನೇ ನಡುಗಿಸಿರುವ ಕೊರೋನಾ ವೈರಸ್ ಕೊನೆಗೆ ನಮ್ಮ ಮಾಧ್ಯಮ ಮಿತ್ರರನ್ನೂ ಬಿಟ್ಟಿಲ್ಲ. ಅದಕ್ಕಾಗಿ ಕರೋನಾ ಕಂಟಕವನ್ನು ಮಾಧ್ಯಮ ಕಂಟಕ, ಮಾಧ್ಯಮ ವೈರಸ್ ಎಂದು ಕರೆಯಬೇಡಿ. ಯಾರೂ ನಮ್ಮ ಮಾಧ್ಯಮ ಮಿತ್ರರನ್ನು TV9 ವೈರಸ್ ಎನ್ನಬೇಡಿ, ಸುವರ್ಣ TV ವೈರಸ್ ಎಂದು ಹೇಳಲೇಬೇಡಿ. ಇನ್ನೂ PUBLIC TV ವೈರಸ್ ಎಂದು ಮಾತ್ರ ಮೊದಲೇ ಕರೆಯಬೇಡಿ. ಅವರನ್ನು ದಯವಿಟ್ಟು ಅವಮಾನಿಸಬೇಡಿ. ಇದು ಜಸ್ಟ್ ಒಂದು ಖಾಯಿಲೆ ಅಷ್ಟೇ…!

ಈ ಮೇಲಿನ ಸಾಲುಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿರುವ ಬರಹ. ಅಸಲಿಗೆ ಸಾಮಾನ್ಯ ಜನ ಮಾಧ್ಯಮಗಳ ಬಗೆಗೆ ಅದೆಂತಹಾ ತಾತ್ಸಾರಕ್ಕೆ ಒಳಗಾಗಿದ್ದಾರೆ ಎಂಬುದಕ್ಕೆ ಇದೊಂದೇ ಬರಹದ ಉದಾಹರಣೆ ಸಾಕೇನೋ?. ಆದರೆ, ಮಾಧ್ಯಮಗಳು ಇಂತಹ ತಾತ್ಸಾರಕ್ಕೆ ಒಳಗಾಗಲು ಇತ್ತೀಚೆಗಿನ ಅವರ ನಡೆಯೇ ಕಾರಣ ಎಂದರೂ ತಪ್ಪಾಗಲಾರದು.

ಯಾವ ಮಾಧ್ಯಗಳು ಸತತವಾಗಿ ತಬ್ಲಿಘಿ ವೈರಸ್ ಜಿಹಾದ್, ನಂಜನಗೂಡಿನ ನಂಜು, ಪಾದರಾಯಪುರ ಪುಂಡರು, ಬಿಹಾರಿ ವೈರಸ್ ಕಂಟಕ ಎಂದು ಸರಣಿ ಸುದ್ದಿ ಮಾಡಿದ್ದವೋ? ಆಂಕರ್‍ಗಳು ತಾವೇ ನ್ಯಾಯಾಧೀಶರಂತೆ ವರ್ತಿಸುತ್ತಾ ಅರಚಾಡಿ-ಕಿರುಚಾಡಿ ಸಮಾಜದಲ್ಲಿ ಅಶಾಂತಿಗೆ ಕಾರಣರಾದರೋ? ಅದೇ ಸುದ್ದಿಗಳು ಇಂದು ಅವೇ ಸುದ್ದಿ ಮಾಧ್ಯಮಗಳಿಗೆ ಕಂಟಕವಾಗಿ ಪರಿಮಿಸಿರುವುದು ಮಾತ್ರ ವಿಪರ್ಯಾಸ.

ವೈರಸ್ ಪೀಡಿತರನ್ನು ಸಾಮಾಜಿಕ ಕಳಂಕಿತರಂತೆ ಬಿಂಬಿಸಿದ್ದ ಮಾಧ್ಯಮಗಳು

ಅಸಲಿಗೆ ಕೊರೋನಾ ವೈರಸ್ ಕಳೆದ ಡಿಸೆಂಬರ್ ತಿಂಗಳಲ್ಲೇ ಚೀನಾ ದೇಶದಲ್ಲಿ ಗದ್ದಲ ಎಬ್ಬಿಸಿತ್ತು. ಜನವರಿ ವೇಳೆಗೆ ಸಾಲು ಸಾಲು ಹೆಣ ಬೀಳಿಸಿತ್ತು. ಅಲ್ಲಿಂದಲೇ ಇಟಲಿಗೂ ವ್ಯಾಪಿಸಿದ್ದ ಕೊರೋನಾ, ಜನವರಿ ಅಂತ್ಯದ ವೇಳೆಗೆ 2,300 ಕ್ಕೂ ಅಧಿಕ ಸಾವಿಗೆ ಕಾರಣವಾಗಿತ್ತು. ಆಗಲೇ ಹಲವಾರು ತಜ್ಞರು ಮತ್ತು ವಿಜ್ಞಾನಿಗಳು ಕೇಂದ್ರ ಸರ್ಕಾರವನ್ನು ಎಚ್ಚರಿಸಿದ್ದರು. ಶೀಘ್ರದಲ್ಲಿ ಕ್ರಮ ತೆಗೆದುಕೊಳ್ಳದಿದ್ದರೆ ಈ ವೈರಸ್ ಭಾರತಕ್ಕೂ ಕಂಟಕವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು..

ಆದರೆ, ಕೇಂದ್ರ ಸರ್ಕಾರ ಆ ಸಂದರ್ಭದಲ್ಲಿ ಗುಜರಾತ್ ರಾಜ್ಯದ ಅಹಮದಾಬಾದ್ ನಗರದ ಮೊಟೆರಾ ಕ್ರೀಡಾಂಗಣದಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮ ಆಯೋಜನೆಯಲ್ಲಿ ಬ್ಯುಸಿ ಆಗಿತ್ತು. ಮಾಧ್ಯಮಗಳೂ ಈ ಸುದ್ದಿ ಕವರೇಜ್‍ನಲ್ಲಿ ಬ್ಯುಸಿ ಆಗಿದ್ದವು. ಈ ಕಾರ್ಯಕ್ರಮದ ನಂತರ ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲ ಆರಂಭವಾಗುತ್ತಿದ್ದಂತೆ ಕೇಂದ್ರ ಸರ್ಕಾರ ಮತ್ತು ಮಾಧ್ಯಮಗಳು ಎಂದಿನಂತೆ ಮತ್ತೆ ಬ್ಯುಸಿ ಆದವು. ಆದರೆ, ಕೊರೋನಾ ಕುರಿತು ಯಾರೂ ಎಚ್ಚರಿಕೆ ವಹಿಸಲೇ ಇಲ್ಲ. ಜವಾಬ್ದಾರಿಯುತವಾಗಿ ನಡೆದುಕೊಳ್ಳಲೇ ಇಲ್ಲ.

ಕೊರೋನಾ ಕುರಿತು ಅಂತಾರಾಷ್ಟ್ರೀಯ ಮಾಧ್ಯಮಗಳು ಜನವರಿಯಿಂದಲೂ ಇಡೀ ವಿಶ್ವವನ್ನು ಎಚ್ಚರಿಸುವ ಕೆಲಸಕ್ಕೆ ಮುಂದಾಗಿದ್ದವು. ದಿ ಡಾನ್, ಟೆಲಿಗ್ರಾಪ್, ಅಲ್ ಜಜೀರಾದಂತಹ ಮಾಧ್ಯಮಗಳು ಸಾಲು ಸಾಲು ವರದಿ ಮಾಡಿದವು. ಪರಿಣಾಮ ಚೀನಾದ ಮಗ್ಗುಲಲ್ಲೆ ಇರುವ ತೈವಾನ್ ಎಂಬ ಪುಟ್ಟ ದ್ವೀಪ ರಾಷ್ಟ್ರ ತನ್ನ ನೆಲಕ್ಕೆ ಕೊರೋನಾ ಕಾಲಿಡದಂತೆ ಎಚ್ಚರಿಕೆ ವಹಿಸಿತ್ತು. WHO ಕರೋನಾ ವೈರಸ್ ಅನ್ನು ಮಹಾಮಾರಿ ಅಂತ ಘೋಷಿಸಿದ್ದರು ಸಹಿತ ಮೋದಿ ಸರಕಾರ ಕ್ಯಾರೆ ಅನ್ನಲಿಲ್ಲ..

ಇದೇರೀತಿ ಭಾರತದ ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಾಧ್ಯಮಗಳು ಸಹ ಈ ಕುರಿತು ವರದಿ ಪ್ರಕಟಿಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಬಹುದಿತ್ತು. ತಮ್ಮ ಮಾಧ್ಯಮ ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸಬಹುದಿತ್ತು. ಆದರೆ, ಇಂತಹ ಕೆಲಸಗಳಿಗೆ ನಮ್ಮ ಮಾಧ್ಯಮಗಳು ಸುತಾರಾಂ ಮುಂದಾಗಲೇ ಇಲ್ಲ.

ಇದೇ ಕೊರೋನಾ ವೈರಸ್ ಭಾರತಕ್ಕೆ ಅಧಿಕೃತವಾಗಿ ಪ್ರವೇಶ ಪಡೆದ ನಂತರ ಮಾತ್ರ ಮಾಧ್ಯಮಗಳು ಈ ಕುರಿತು ಸಾಲು ಸಾಲು ವರದಿ ಮಾಡಿದವು. ಆಕರ್ಷಕ ಶೀರ್ಷಿಕೆಗಳನ್ನು ನೀಡುವ ಮೂಲಕ ಸುದ್ದಿಯನ್ನು ಅತಿರಂಜಕವಾಗಿಸಿದವು. ತಬ್ಲಿಘಿ ಜಿಹಾದ್, ನಂಜನಗೂಡಿನ ನಂಜು, ಪಾದರಾಯಪುರ ಪುಂಡರು, ಬಿಹಾರಿ ವೈರಸ್ ಕಂಟಕ ಎಂದರು. ಅಬ್ಬಬ್ಬಾ ಮಾಧ್ಯಮಗಳ ಕ್ರೀಯಾಶೀಲ ಶೀರ್ಷಿಕೆಗಳ ಆರ್ಭಟ ಒಂದೇ ಎರಡೇ.

ಇಷ್ಟೇ ಆಗಿದ್ದರೂ ಸಮಸ್ಯೆ ಇರಲಿಲ್ಲ. ಆದರೆ, ಕೆಲವು ಮಾಧ್ಯಮದ ಮುಖ್ಯಸ್ಥರೇ ಟಿವಿ ಪರದೆಯಲ್ಲಿ ಕಾಣಿಸಿಕೊಂಡಿದ್ದರು. ಲಾಕ್ಡೌನ್ ನಿಯಮಗಳನ್ನು ಮುರಿದು ಮನೆಯಿಂದ ಹೊರಬರುವವರನ್ನು ಕ್ರಿಮಿನಲ್‍ಗಳ ರೀತಿಯಲ್ಲಿ ಬಿಂಬಿಸಿದ್ದರು. ಮನೆಯಿಂದ ಹೀಗೆ ಹೊರಬರುವ ಬದಲು ಆತ್ಮಹತ್ಯೆ ಮಾಡಿಕೊಳ್ಳಿ, ಇಂತವರನ್ನು ಗುಂಡಿಟ್ಟು ಕೊಲ್ಲಿ ಎಂದು ಪ್ರೇರೇಪಿಸಿದ್ದರು. ಈ ಮೂಲಕ ಕೊರೋನಾ ವೈರಸ್ ಪೀಡಿತರು ಸಾಮಾಜಕ್ಕೆ ಕಳಂಕ ಎಂಬಂತೆ ಬಿಂಬಿಸುವ ಕೆಲಸ ವ್ಯಾಪಕವಾಗಿ ನಡೆದಿತ್ತು.

ಕೊರೋನಾ ವೈರಸ್ ಅನ್ನು ಸಾಮಾಜಿಕ ಕಳಂಕ ಎಂದು ಬಿಂಬಿಸಿದರಿಂದಲೇ ಸಮಾಜದಲ್ಲಿ ವೈರಸ್ ಪೀಡಿತರು ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆಗೆ ಮುಂದಾಗುತ್ತಿಲ್ಲ. ತಮಗೆ ವೈರಸ್ ತಗುಲಿರುವುದು ಗೊತ್ತಾದರೆ ನಮ್ಮನ್ನು ನೋಡುವ ರೀತಿ ಬದಲಾಗುತ್ತದೆ. 14 ದಿನ ಏಕಾಂತಗೊಳಿಸಲಾಗುತ್ತದೆ ಎಂಬ ಭಯದಿಂದಲೇ ಯಾರೂ ಪರೀಕ್ಷೆಗೆ, ಕ್ವಾರಂಟೈನ್‍ಗೆ ಮುಂದಾಗುತ್ತಿಲ್ಲ. ಎಲ್ಲರೂ ಖಾಯಿಲೆ ಉಲ್ಭಣವಾದ ನಂತರ ಚಿಕಿತ್ಸೆಗೆ ಮುಂದಾಗುತ್ತಿದ್ದಾರೆ. ಇಂತಹ ಸಮಯದಲ್ಲಿ ಅವರನ್ನು ಬದುಕಿಸುವುದೂ ಕಷ್ಟವಾಗುತ್ತಿದೆ ಎಂದು ಹೇಳುತ್ತಿದ್ದಾರೆ ನುರಿತ ವೈದ್ಯರು. ಆದರೆ, ಮಾಧ್ಯಮಗಳು ಮಾತ್ರ ಎಂದಿನಂತೆ ಕೊರೋನಾ ಪೀಡಿತರನ್ನು ಸಾಮಾಜಿಕ ಕಳಂಕ ಎಂದು ಬಿಂಬಿಸುವುದರಲ್ಲೇ ನಿರತವಾಗಿತ್ತು.

ಒಂದು ಹಂತದಲ್ಲಿ ಭಾರತದಲ್ಲಿ ಕೊರೋನಾ ಹುಟ್ಟಿಸಿದ್ದ ಭೀತಿಗಿಂತ ಮಾಧ್ಯಮಗಳು ಹುಟ್ಟಿಸಿದ್ದ ಭೀತಿಗೆ ಜನ ಭಯಭೀತರಾಗಿದ್ದರು ಎಂದರೆ ತಪ್ಪಾಗಲಾರದು.

ಆದರೆ, ಯಾವ ಕೊರೋನಾವನ್ನು ಮಾಧ್ಯಮಗಳು ಕೆಲವು ಜಾತಿ, ಧರ್ಮ, ಪ್ರದೇಶಗಳಿಗೆ ಆರೋಪಿಸಿ ವೈಭವೀಕರಿಸಿ ಸುದ್ದಿ ಬಿತ್ತರಿಸಿತ್ತೋ? ಇವರೆಲ್ಲರೂ ಸಮಾಜಕ್ಕೆ ಕಳಂಕಿತರು ಎಂಬ ಅಭಿಪ್ರಾಯ ರೂಪಿಸಿತ್ತೋ? ಇಂದು ತಾನು ಸೃಷ್ಟಿಸಿದ ಅದೇ ಜೇಡರ ಬಲೆಯಲ್ಲಿ ಮಾಧ್ಯಮಗಳು ಸಿಲುಕಿವೆ. ಪರಿಣಾಮ ಈ ಹಿಂದೆ ಜೋರು ಶಬ್ಧದಲ್ಲಿ ಅಬ್ಬರಿಸುತ್ತಿದ್ದ ದ್ವನಿಗಳು ಇಂದು ಹುಡುಗಿ ಹೋಗಿವೆ.

ಮೀಡಿಯಾ ಕಂಟಕ

ಅಸಲಿಗೆ ಕೊರೋನಾ ಭೀತಿ ಭಾರತದಲ್ಲಿ ಆರಂಭವಾದ ದಿನದಿಂದಲೂ ಮಾಧ್ಯಮದವರು ಎಲ್ಲೆಡೆ ಓಡಾಡಿ ಕೆಲಸ ಮಾಡಿದ್ದಾರೆ. ತಮ್ಮ ತಮ್ಮ ಸಂಸ್ಥೆಗಳಿಗಾಗಿ ದುಡಿದಿದ್ದಾರೆ. ಹೀಗಾಗಿ ಮಾಧ್ಯಮದವರಿಗೂ ಏಕೆ ಕೊರೋನಾ ಪರೀಕ್ಷೆ ನಡೆಸಬಾರದು? ಎಂಬ ವಾದವೊಂದು ಮುನ್ನೆಲೆಗೆ ಬರುತ್ತಿದ್ದಂತೆ ಮೊದಲ ಪರೀಕ್ಷೆಗೊಳಗಾದದ್ದೆ ಮುಂಬೈ ಪತ್ರಕರ್ತರು.

ಕಳೆದ ವಾರ ಮುಂಬೈ ಪತ್ರಕರ್ತರನ್ನು ಪರೀಕ್ಷೆ ಮಾಡಲಾಗಿ ಸುಮಾರು 51 ಜನರಲ್ಲಿ ಈ ಸೋಂಕು ಇರುವುದು ಪತ್ತೆಯಾಗಿತ್ತು. ಈ ಸುದ್ದಿ ಹೊರ ಬೀಳುತ್ತಿದ್ದಂತೆ ಇಡೀ ಭಾರತದ ಪತ್ರಿಕೋದ್ಯಮ ಬೆಚ್ಚಿ ಬಿದ್ದಿತ್ತು.

ಮಹಾರಾಷ್ಟ್ರದ ನಂತರದ ಕರ್ನಾಟಕದಲ್ಲೂ ಪತ್ರಕರ್ತರಿಗೆ ಉಚಿತವಾಗಿ ಏಪ್ರಿಲ್ 24ರಂದು ಕೊರೋನಾ ಪರೀಕ್ಷೆ ಮಾಡಲಾಗಿತ್ತು. ಈ ಪರೀಕ್ಷೆಯಲ್ಲಿ ಖಾಸಗಿ ಸುದ್ದಿ ವಾಹಿನಿಯೊಂದರ ಕ್ಯಾಮೆರಾ ಜರ್ನಲಿಸ್ಟ್ ಒಬ್ಬರಿಗೆ ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ. ಪರಿಣಾಮ ಅವರ ಜೊತೆಗೆ ಸಂಪರ್ಕ ಹೊಂದಿದ್ದ ವಿವಿಧ ಸುದ್ದಿ ಸಂಸ್ಥೆಗಳ ಸುಮಾರು 35 ಜನ ಪತ್ರಕರ್ತರನ್ನು ಒಂದು ಖಾಸಗಿ ಹೋಟೆಲ್‍ನಲ್ಲಿ ಕ್ವಾರಂಟೈನ್ ಮಾಡಲಾಗಿದೆ.

ಅಸಲಿಗೆ ಕರ್ನಾಟಕದಲ್ಲಿ ಕೊರೋನಾ ಕರಿಛಾಯೆ ಆವರಿಸಿದ್ದ ಸಂದರ್ಭದಲ್ಲೇ ಹಲವು ಸುದ್ದಿ ಮಾಧ್ಯಮಗಳ ಪತ್ರಕರ್ತರು ವರದಿಗಾರರು ತಾವು ಕಚೇರಿಯಿಂದ ಹೊರಹೋಗಿ ಸುದ್ದಿ ಮಾಡಲು ಭಯ ವ್ಯಕ್ತಪಡಿಸಿದ್ದಾರೆ. ಆದರೆ, ಸುದ್ದಿ ಮಾಧ್ಯಮ ಸಂಸ್ಥೆಗಳು ಮಾತ್ರ ರಸ್ತೆಗೆ ಇಳಿದು ಕೆಲಸ ಮಾಡಿ ಇಲ್ಲವೇ ಕೆಲಸ ಬಿಡಿ ಎಂಬ ಅಮಾನವೀಯ ಆಯ್ಕೆಯನ್ನು ಮುಂದಿಟ್ಟಿವೆ. ಸ್ವಾಭಾವಿಕವಾಗಿ ಕೆಲಸದ ಅನಿಶ್ಚಿತತೆಯ ನಡುವೆಯೇ ಬದುಕುತ್ತಿರುವ ಪತ್ರಕರೂ ಸಹ ಬೇರೆ ದಾರಿ ಕಾಣದೆ ರಸ್ತೆಗಿಳಿದಿದ್ದಾರೆ. ಪರಿಣಾಮ ಇಂದು ಮಾರಣಾಂತಿಕ ಖಾಯಿಲೆಗೆ ಅವರು ಒಳಗಾಗಿದ್ದಾರೆ.

ಭಾರತದಲ್ಲಿ ಕೊರೋನಾ ಹರಡುತ್ತಿದ್ದಂತೆ ಒಂದು ಜಾತಿ, ಧರ್ಮ ಪ್ರದೇಶದ ಜನರಿಗೆ ಆರೋಪಿಸಿ ಸುದ್ದಿ ಮಾಡಿದ್ದ ಕನ್ನಡ ಮಾಧ್ಯಮಗಳು ಮಾತ್ರ ಪ್ರಸ್ತುತ ತಮ್ಮ ಸಂಸ್ಥೆಯ ಒಳಗೇ ಹೆಡೆ ಎತ್ತಿರುವ ಕೊರೋನಾ ಭೀತಿಯ ಕುರಿತು ಈವರೆಗೆ ಸುದ್ದಿ ಮಾಡಲೇ ಇಲ್ಲ. ತಮ್ಮ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆಯುವ ಭೀತಿ ಒಡ್ಡಿಯೇ ಕೆಲಸಕ್ಕೆಂದು ರಸ್ತೆಗೆ ಇಳಿಸಲಾಯಿತು ಎಂದು ಅವರು ಅಪ್ಪಿತಪ್ಪಿಯೂ ಒಪ್ಪಿಕೊಳ್ಳುತ್ತಿಲ್ಲ.

ಇದರ ಜೊತೆಗೆ ಜಿಲ್ಲಾ ವರದಿಗಾರರಿಗೆ ಯಾವುದೇ ಕಾರಣಕ್ಕು ಕರೋನಾ ಟೆಸ್ಟ್ ಮಾಡಿಸಿಕೊಳ್ಳಬೇಡಿ ಎಂದು ಚಾನಲ್‍ನ ಎಸಿ ರೂಂ ನಲ್ಲಿ ಕುಳಿತು ಕೆಲಸ ಮಾಡುವವರು ಫರ್ಮಾನು ಹೊರಡಿಸಿದ್ದಾರೆ, ಆದರೆ ಈ ವಿಷಯವನ್ನು ಪಬ್ಲಿಕ್ ಆಗಿ ಹೇಳುತ್ತಿಲ್ಲ, ಇದು ಪತ್ರಕರ್ತರಿಗೆ ಸುವರ್ಣ ಕಾಲವಂತು ಅಲ್ಲ, ಹಗಲಿರಳೆನ್ನದೆ ಜನರ ಮಧ್ಯ ದುಡಿಯುತ್ತಿರುವ ವರದಿಗಾರರ ಬಗ್ಗೆ ಚಾನಲ್ ಮುಖ್ಯಸ್ಥರ ಸದಭಿಪ್ರಾಯ,,, ಇದಕ್ಕೆ ಯಾವ ವಾಹಿನಿಯು ಹೊರತಲ್ಲ..

ಅದಿರಲಿ ಇಷ್ಟು ದಿನ ಕೊರೋನಾವನ್ನು ಸಾಮಾಜಿಕ ಕಳಂಕ ಎಂದು ಟಿವಿ ಪರದೆಯ ಮುಂದೆ ಅಬ್ಬರಿಸುತ್ತಿದ್ದವರು, ಆತ್ಮಹತ್ಯೆ ಮಾಡಿಕೊಳ್ಳಿ, ಇಂತವರನ್ನು ಗುಂಡಿಕ್ಕಿ ಕೊಲ್ಲಿ ಎಂದು ದೊಡ್ಡ ದ್ವನಿಯಲ್ಲಿ ಪ್ರೇರೇಪಿಸುತ್ತಿದ್ದವರು ಇಂದು ತಣ್ಣಗಾಗಿದ್ದಾರೆ. ದ್ವನಿ ಅಡಗಿಹೋಗಿದೆ. ಅಷ್ಟೇ ಅಲ್ಲ ಈ ಸೋಂಕನ್ನು ದಯವಿಟ್ಟು tigmatize ಮಾಡಬೇಡಿ. ಇದು ಎಲ್ಲರಿಗೂ ಬರುವ ಸಾಮಾನ್ಯ ಸೋಂಕು ಎಂದು ಹೇಳುವ ಮಟ್ಟಕ್ಕೆ ಬಂದಿದ್ದಾರೆ.

ಆದರೆ, ಮುಖ್ಯವಾಹಿನಿ ಮಾಧ್ಯಮಗಳಿಂದ ಮರೆಮಾಚಲಾದ ಈ ಸುದ್ದಿಗಳಿಗೆ ಸಾಮಾಜಿಕ ಮಾಧ್ಯಮಗಳು ಸ್ಥಾನ ಕಲ್ಪಿಸಿವೆ. ಮಾಧ್ಯಮ ಸಿಬ್ಬಂದಿಗಳಿಗೂ ಕೊರೋನಾ ಸೋಂಕು ಹರಡಿರುವ ಸುದ್ದಿ ಕಳೆದ ಮೂರು-ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಮತ್ತು ನಗೆ ಪಾಟಲಿಗೆ ಒಳಗಾಗುತ್ತಿದೆ. ಅಲ್ಲದೆ, ಆರಂಭದಲ್ಲಿ ಮಾಧ್ಯಮಗಳು ಈ ಸೋಕನ್ನು ಬಿಹಾರಿ ಕಂಟಕ, ನಂಜನಗೂಡು ನಂಜು, ತಬ್ಲಿಘಿ ಜಿಹಾದ್ ವೈರಸ್ ಎಂದು ಹೀಯಾಳಿಸಿತ್ತು. ಹೀಗಾಗಿ ನಾವೇಕೆ ಈಗ TV9 ವೈರಸ್, ಸುವರ್ಣ TV ವೈರಸ್, ಪಬ್ಲಿಕ್ TV ವೈರಸ್ ಎಂದು ಕರೆಯಬಾರದು ಎಂದು ಹಲವರು ಪ್ರಶ್ನೆ ಎಬ್ಬಿಸುತ್ತಿದ್ದಾರೆ.

ಆದರೆ, ಮಾಧ್ಯಮದವರು ಕೆಲವು ಸಂದರ್ಭದಲ್ಲಿ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದ ಮಾತ್ರಕ್ಕೆ ಜನ ಸಾಮಾನ್ಯರೂ ಸಹ ಹಾಗೆ ವರ್ತಿಸಬೇಕು ಎಂದೇನಿಲ್ಲ. ಅವರು ತಬ್ಲಿಘಿಗಳೇ ಇರಲಿ, ಬಿಹಾರಿಗಳೇ ಇರಲಿ ಅಥವಾ ಮಾಧ್ಯಮದವರೇ ಇರಲಿ ಯಾರೂ ಬೇಕೆಂದು ಈ ಸೋಂಕಿಗೆ ಒಳಗಾಗಿರುವುದಿಲ್ಲ. ಅಲ್ಲದೆ, ಎಲ್ಲಾ ಸೋಂಕಿತರನ್ನೂ ಪ್ರೀತಿಯಿಂದ ಕಾಣಬೇಕಾದದ್ದು ಮತ್ತು ಅವರು ಶೀಘ್ರ ಗುಣಮುಖರಾಗಲು ಶ್ರಮಿಸಬೇಕಾದದ್ದು ಈ ಪ್ರಜಾಪ್ರಭುತ್ವ ವ್ಯವಸ್ಥೆಯ ಆದ್ಯ ಕರ್ತವ್ಯ. ಹೀಗಾಗಿ ಯಾವುದೇ ಕಾರಣಕ್ಕೂ ಇದು “ಮಾಧ್ಯಮ ವೈರಸ್” ಎಂದು ಮಾತ್ರ ಯಾರೂ ಕರೆಯದಿರಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Don’t justify TV media it is not just virus, virus attack can be cured call these people as AIDS, Cancer and call some TV media’s has pimp ‘s of ruling party,
    these people will go to any extent just for money, people use to call fourth piller of Democracy those days, these people are shame in democracy.

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...