Homeಮುಖಪುಟಮುಂಬೈನಲ್ಲಿ ಉಪವಾಸ ಧರಣಿ ಆರಂಭಿಸಿದ ಕರ್ನಾಟಕದ ವಲಸೆ ಕಾರ್ಮಿಕರು

ಮುಂಬೈನಲ್ಲಿ ಉಪವಾಸ ಧರಣಿ ಆರಂಭಿಸಿದ ಕರ್ನಾಟಕದ ವಲಸೆ ಕಾರ್ಮಿಕರು

- Advertisement -
- Advertisement -

ಕಳೆದ 45 ದಿನಗಳಿಂದ ಮಹಾರಾಷ್ಟ್ರದ ನವಿ ಮುಂಬೈನ ವಾಸಿ ಚಿಡ್ಕೊ ವಸ್ತುಪ್ರದರ್ಶನ ಕೇಂದ್ರದ ನಿರಾಶ್ರಿತ ಶಿಬಿರದಲ್ಲಿ ಕರ್ನಾಟಕದ 180ಕ್ಕೂ ಹೆಚ್ಚು ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬ ಗುರುವಾರ ಮಧ್ಯಾಹ್ನದಿಂದ ಉಪವಾಸ ಧರಣಿ ಆರಂಭಿಸಿದ್ದಾರೆ. ಈಗ ಅದೇ ಶಿಬಿರವನ್ನು ಕೋವಿಡ್‌ ಕೇರ್‌ ಸೆಂಟರ್‌ ಆಗಿ ಪರಿವರ್ತಿಸುತ್ತಿರುವುದರಿಂದ ನಮ್ಮನ್ನು ಯಾವಾಗ ನಮ್ಮ ಊರುಗಳಿಗೆ ಕಳಿಸುಲಾಗುತ್ತದೆ ಎಂಬ ಮಾಹಿತಿ ನೀಡಬೇಕೆಂದು ಕಾರ್ಮಿಕರು ಪಟ್ಟು ಹಿಡಿದಿದ್ದಾರೆ.

ನಮ್ಮನ್ನು ಚಿಡ್ಕೊ ವಸ್ತುಪ್ರದರ್ಶನ ಕೇಂದ್ರದ ನಿರಾಶ್ರಿತ ಶಿಬಿರದಿಂದ ಬೇರೆಡೆಗೆ ವರ್ಗಾಹಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದು ಸರಿಯಲ್ಲಿ. ಬದಲಿಗೆ ಬಸ್‌ ಅಥವಾ ರೈಲು ವ್ಯವಸ್ಥೆ ಮಾಡಿ ನಮ್ಮನ್ನು ನಮ್ಮ ಊರುಗಳಿಗೆ ಕಳಿಸಿಕೊಡಬೇಕು. ನಾವು ಇಲ್ಲಿ ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದೇವೆ. ಲಾಕ್‌ಡೌನ್‌ ಘೋಷಣೆಯಾದಾಗ ಪೊಲೀಸರು ನಮ್ಮನ್ನು ಇಲ್ಲಿಗೆ ಕರೆತಂದಿದ್ದಾರೆ ಎಂದು ಕೆ ರಾಥೋಡ್‌ ಎಂಬುವ ಕಾರ್ಮಿಕರೊಬ್ಬರೂ ಆರೋಪಿಸಿದ್ದಾರೆ ಎಂದು ಟೈಮ್ಸ್‌ ಆಪ್‌ ಇಂಡಿಯಾ ವರದಿ ಮಾಡಿದೆ.

ಮತ್ತೊಬ್ಬ ವಲಸೆ ಕಾರ್ಮಿಕರಾದ ಹರಿಶ್ಚಂದ್ರ ಜಾಧವ್‌ ಮಾತನಾಡಿ, ಕೆಲ ಆರೋಗ್ಯ ಅಧಿಕಾರಿಗಳು ಈಗಾಗಲೇ ಇಲ್ಲಿ ಕೆಲವು ವೈದ್ಯಕೀಯ ಉಪಕರಣಗಳನ್ನು ಅಳವಡಿಸುತ್ತಿದ್ದಾರೆ. ನಮ್ಮನ್ನು ನಮ್ಮ ಊರಿಗೆ ಯಾವಾಗ ಕರೆದೊಯ್ಯುತ್ತೇವೆ ಎಂದು ಯಾರೂ ಹೇಳುತ್ತಿಲ್ಲ. ಹಾಗಾಗಿ ನಾವು ಊಟ ಮಾಡುವುದನ್ನು ಬಿಟ್ಟಿದ್ದೇವೆ. ಅವರಿಂದ ಸಮರ್ಪಕ ಉತ್ತರ ಬರುವವರೆಗೂ ಊಟ ಮಾಡುವುದಿಲ್ಲ, ಉಪವಾಸ ಮಾಡುತ್ತೇವೆ ಎಂದಿದ್ದಾರೆ.

ಇಲ್ಲಿರುವ ವಲಸೆ ಕಾರ್ಮಿಕರಿಗೆ ದಿನನಿತ್ಯ ಊಟ ಸರಬರಾಜು ಮಾಡುವ ಇನ್ಫೋಟೆಕ್‌ ಎಂಟರ್‌ಪ್ರೀನರ್‌ ಅಂಡ್‌ ಮ್ಯಾನೇಜಿಂಗ್‌ ಡೈರಕ್ಟರ್‌ ಆಫ್‌ ಇಂಟರ್‌ನೆಟ್‌ ಬ್ರಾಡ್‌ಬ್ಯಾಂಡ್‌ನ ಭೂಪೇಶ್‌ ಗುಪ್ತ ಪ್ರತಿಕ್ರಿಯಿಸಿ, “ಸದ್ಯಕ್ಕೆ 200 ಜನ ಇಲ್ಲಿ ವಾಸಿಸುತ್ತಿದ್ದಾರೆ. ಅದರಲ್ಲಿ ಕರ್ನಾಟಕದವರೆ ಹೆಚ್ಚು. ಅವರು ಸಹಜವಾಗಿ ಯಾವಾಗ ತಮ್ಮೂರಿಗೆ ಹೋಗಬಹುದೆಂಬ ಭರವಸೆಯಲ್ಲಿದ್ದಾರೆ. ಅವರ ಭವಿಷ್ಯ ಅಭದ್ರವಾಗಿದೆ” ಎಂದಿದ್ದಾರೆ.

ಈ ಕಾರ್ಮಿಕರನ್ನು ನವೀ ಮುಂಬೈನ ಮುನಿಸಿಪಲ್‌ ಶಾಲೆಗೆ ಸ್ಥಳಾಂತರಿಸಲು ಯೋಚಿಸಲಾಗುತ್ತಿದೆ. ಆದರೆ ಅದರ ಬದಲಿಗೆ ಇವರನ್ನು ತಮ್ಮ ತಮ್ಮ ಸ್ವಗ್ರಾಮಗಳಿಗೆ ಏಕೆ ಕಳಿಸಬಾರದೆಂದು ಜನ ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಅವರು ಬಹಳ ಚಿಂತಿತರಾಗಿದ್ದಾರೆ ಎಂದು ಭೂಪೇಶ್ ಗುಪ್ತ ತಿಳಿಸಿದ್ದಾರೆ.

ನವಿಮುಂಬೈ ಮುನಿಸಿಪಲ್‌ ಕಾರ್ಪೋರೇಷನ್‌ನ ಕಮಿಷನರ್‌ ಎ.ಬಿ ಮಿಶಲ್‌ “ನಾವು ಇಲ್ಲಿ ಕೋವಿಡ್‌ ಕೇರೆ ಆಸ್ಪತ್ರೆ ಕಟ್ಟುತ್ತೇವೆ. ಇಲ್ಲಿರುವ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು ಕಾನೂನುರಿತ್ಯಾ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಅನಾರ್ಜಿತ್‌ ಚೌವಾಣ್‌ ಮಾತನಾಡಿ “ಇಲ್ಲಿರುವ ವಲಸೆ ಕಾರ್ಮಿಕರು ಬಡವರು. ಆದಷ್ಟು ಬೇಗ ಅವರನ್ನು ತಮ್ಮ ತಮ್ಮ ಸ್ವಂತ ಊರುಗಳಿಗೆ ಕಳಿಸಿಕೊಡಲಾಗುವುದು ಎಂಬ ಭರವಸೆ ನೀಡಲಾಗಿತ್ತು. ಆದರೆ ಮೂರನೇ ಬಾರಿ ಲಾಕ್‌ಡೌನ್‌ ಘೋಷಣೆಯಾದಾಗ ಇಲ್ಲಿರುವ ಕಾರ್ಮಿಕರಿಗೆ ತಮಗೆ ಮೋಸ ಮಾಡಲಾಗುತ್ತಿದೆ ಎಂಬ ಭಾವನೆ ಬೆಳೆದಿದೆ. ಇವರನ್ನು ಆದಷ್ಟು ಬೇಗ ಅವರ ಸ್ವಂತ ಊರುಗಳಿಗೆ ಕಳಿಸಕೊಡಬೇಕೆಂದು ನಾನು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಯವರಲ್ಲಿ ಮನವಿ ಮಾಡುತ್ತೇನೆ ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read