ಅಲೆಮಾರಿ ಸಮುದಾಯದಕ್ಕೆ ಸೇರಿದ ಕರ್ನಾಟಕದ ಸುಮಾರು 95 ಜನರು ಲಾಕ್‌ಡೌನ್ ಕಾರಣಕ್ಕೆ ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ಸಿಕ್ಕಿಕೊಂಡಿದ್ದು, ಕರ್ನಾಟಕಕ್ಕೆ ವಾಪಸ್ ಬರಲು ಪರಿತಪಿಸುತ್ತಿದ್ದಾರೆ.
ಈ ಕುರಿತು ವಿಡಿಯೋ ಒಂದನ್ನು ಮಾಡಿ ಮನವಿ ಮಾಡಿರುವ ಅವರು ತಮ್ಮ ಮೂಲ ಸ್ಥಳ ಹಾವೇರಿ ಜಿಲ್ಲೆಯ ತಿಮ್ಮನಕಟ್ಟಿ ಗ್ರಾಮಕ್ಕೆ ಸೇರಬೇಕೆಂದು ಅವರು ಬಯಸಿದ್ದಾರೆ.
ಸ್ಟೇಷನರಿ ಸಾಮಾನುಗಳ ಮಾರಾಟ ಮತ್ತು ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದ ಇವರು ಲಾಕ್‌ಡೌನ್ ಕಾರಣಕ್ಕಾಗಿ ವ್ಯಾಪಾರವಿಲ್ಲದೇ ಕಂಗಾಲಾಗಿದ್ದಾರೆ. ಹಾಗಾಗಿ ತಮ್ಮ ಗ್ರಾಮಕ್ಕೆ ಕಳಿಸಿಕೊಡಿ ಎಂದು ಗೋಗೆರೆಯುತ್ತಿದ್ದಾರೆ.
ಠಾಣಾ ಜಿಲ್ಲೆಯ ಪಲವಾ ತಾಲ್ಲೂಕಿನ ಸಾಯಿನಾಥ್‌ನಗರದಲ್ಲಿದ್ದೇವೆ. ನಾವು ಇಷ್ಟು ದಿನ ವ್ಯಾಪಾರ ಮಾಡಿಕೊಂಡಿದ್ದೆವು. ಲಾಕ್‌ಡೌನ್ ಆದ ಕಾರಣ ಸಿಕ್ಕಿಕೊಂಡಿದ್ದೇವೆ. ಹಾಗಾಗಿ ದಯವಿಟ್ಟು ನಮ್ಮನ್ನು ನಮ್ಮ ಊರಿಗೆ ಕಳಿಸಿ ಎಂದು ಮನವಿ ಮಾಡಿದ್ದಾರೆ.
ನಮ್ಮ ಚಿಕ್ಕಮಕ್ಕಳನ್ನು ಕರ್ನಾಟಕದಲ್ಲಿಯೇ ಬಿಟ್ಟು ಬಂದಿದ್ದೇವೆ. ನಮಗೆ ರೇಷನ್ ಕಾರ್ಡ್ ಇಲ್ಲ. ದಯವಿಟ್ಟು ನಮ್ಮ ಊರಿಗೆ ಕಳಿಸಿ ಎಂದು ಮಹಿಳೆಯರು ಮನವಿ ಮಾಡಿದ್ದಾರೆ.
ವಿಡಿಯೋ ನೋಡಿ.
ಕರ್ನಾಟಕದ ಅಲೆಮಾರಿ ಜನರು ಮಹಾರಾಷ್ಟ್ರದಿಂದ ಮನವಿ
ಕರ್ನಾಟಕದ ಸುಮಾರು 95 ಜನ ಅಲೆಮಾರಿ ಸಮುದಾಯದವರು ಲಾಕ್‌ಡೌನ್ ಕಾರಣದಿಂದ ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ಸಿಕ್ಕಿಕೊಂಡಿದ್ದು, ವಾಪಸ್ ತಮ್ಮ ಹಾವೇರಿ ಜಿಲ್ಲೆಯ ತಿಮ್ಮನಕಟ್ಟಿ ಗ್ರಾಮಕ್ಕೆ ಹೋಗಲು ಬಯಸಿದ್ದಾರೆ.
Posted by Naanu Gauri on Friday, May 8, 2020
ಇದನ್ನೂ ಓದಿ: ಮುಂಬೈನಲ್ಲಿ ಉಪವಾಸ ಧರಣಿ ಆರಂಭಿಸಿದ ಕರ್ನಾಟಕದ ವಲಸೆ ಕಾರ್ಮಿಕರು


