ಕೇಂದ್ರ ಗೃಹ ಸಚಿವಾಲಯ ಆರೋಗ್ಯ ಸೇತು ಆಪ್ ಡೌನ್ ಲೋಡ್ ಕಡ್ಡಾಯಗೊಳಿಸಿರುವುದು ಸಂಪೂರ್ಣ ಕಾನೂನುಬಾಹಿರವಾಗಿದೆ ಎಂದು ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಹೇಳಿದ್ದಾರೆಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಖಾಸಗಿ ಮತ್ತು ಸಾರ್ವಜನಿಕ ವಲಯದ ಎಲ್ಲಾ ನೌಕರರು ಆರೋಗ್ಯ ಸೇತು ಆಪ್ ತಮ್ಮ ಮೊಬೈಲ್ ಗಳಲ್ಲಿ ಡೌನ್ ಮಾಡಿಕೊಳ್ಳುವುದು ಕಡ್ಡಾಯ. ಕಂಟೈನ್ಮೆಂಟ್ ವಲಯದಲ್ಲಿ ಶೇ. 100 ರಷ್ಟು ಆಪ್ ಡೌನ್ ಲೋಡ್ಆಗಿದೆ ಎಂದು ಸ್ಥಳೀಯ ಪ್ರಾಧಿಕಾರಗಳು ಖಚಿತಪಡಿಸಿವೆ.
ನೋಯಿಡಾದಲ್ಲಿ ಆರೋಗ್ಯ ಸೇತು ಆಪ್ ಹೊಂದಿಲ್ಲದಿರುವುದು ಶಿಕ್ಷಾರ್ಹ ಅಪರಾಧ. ಅಂಥವರಿಗೆ ಆರು ತಿಂಗಳು ಜೈಲು ಮತ್ತು ಒಂದು ಸಾವಿರ ರೂಪಾಯಿ ದಂಡ ವಿಧಿಸಲಾಗುವುದು ಎಂದು ಪೊಲೀಸರು ಆದೇಶ ಹೊರಡಿಸಿದ್ದಾರೆ.
ಓದಿ: ಆರೋಗ್ಯ ಸೇತು ಆ್ಯಪ್ ಕಡ್ಡಾಯ ಪ್ರಶ್ನಿಸಿ ಕೇರಳ ಹೈಕೋರ್ಟ್‌ನಲ್ಲಿ ಅರ್ಜಿ
ನೋಯಿಡಾ ಪೊಲೀಸ್ ಇಲಾಖೆಯ ಈ ಆದೇಶ ಕಾನೂನುಬಾಹಿರವಾಗಿದೆ. ಇದನ್ನು ನೋಡಿದರೆ ಇದು ಪ್ರಜಾಪ್ರಭುತ್ವ ದೇಶವೇ? ಎಂಬ ಪ್ರಶ್ನೆ ಮೂಡುತ್ತದೆ. ಹಾಗಾಗಿ ಪೊಲೀಸರ ಈ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದು ನಿವೃತ್ತ ನ್ಯಾಯಮೂರ್ತಿ ಶ್ರೀಕೃಷ್ಣ ಸಲಹೆ ಮಾಡಿದ್ದಾರೆ.
ಆರೋಗ್ಯ ಸೇತು ಆಪ್ ಕುರಿತು ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿಗಳಿಗೆ ಕಾನೂನು ಬೆಂಬಲ ಇಲ್ಲ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಆರೋಗ್ಯ ಸೇತು ಆಪ್ ಕಡ್ಡಾಯ ಮಾಡಿರುವುದು ರಾಷ್ಟ್ರೀಯ ಕಾರ್ಯಕಾರಿ ಸಮಿತಿ ದೃಷ್ಟಿಯಲ್ಲಿ ಶಾಸನಬದ್ದವಲ್ಲ ಎಂದು ಜೆಸ್ಟೀಸ್ ಶ್ರೀಕೃಷ್ಣ ತಿಳಿಸಿದ್ದಾರೆ.
ಇದನ್ನೂ ಓದಿ: ದೇಶಪ್ರೇಮ ಇದ್ದರೆ, ಆರೋಗ್ಯ ಸೇತು ಸೋರ್ಸ್ ಕೋಡ್ ಪ್ರಕಟಿಸಿ | ಭಾರತ ಸರ್ಕಾರಕ್ಕೆ ಹ್ಯಾಕರ್ ಸವಾಲು
ವಿಡಿಯೋ ನೋಡಿ: ಸದ್ದು…ಈ ಸುದ್ದಿಗಳೇನಾದವು – 7 ನೇ ಸಂಚಿಕೆ



ಆಂಡ್ರಾಯ್ಡ್ ಪೋನ್ ಇಲ್ಲದವರು ಏನು ಮಾಡಬೇಕು? ಕನಿಷ್ಟ ಜ್ಞಾನವೂ ಇಲ್ಲದವರು ಆಡಳಿತಾರೂಢರಾದರೆ ಇಂತಹ ಕಾನೂನುಗಳು ಜಾರಿಗೆ ಬರುತ್ತವೆ.