ಕೊರೊನಾ ವೈರಸ್ ಮತ್ತು ಲಾಕ್ ಡೌನ್‌ನಿಂದಾಗಿ ಆರ್ಥಿಕತೆಯೆಯ ಮೇಲಾದ ಪರಿಣಾಮವನ್ನು ನಿಭಾಯಿಸಲು ಪ್ರಧಾನಿ ನರೇಂದ್ರ ಮೋದಿ ನಿನ್ನೆ ಘೋಷಿಸಿದ 20 ಲಕ್ಷ ಕೋಟಿ ರೂ. ಪ್ಯಾಕೇಜಿನ ಮಾಹಿತಿಯನ್ನು ಇಂದು ಸಂಜೆ 4 ಗಂಟೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೀಡಲಿದ್ದಾರೆ.
ನಿನ್ನೆ ರಾತ್ರಿ 8 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಭಾರತದ ಜಿಡಿಪಿಯ ಶೇಕಡಾ 10 ರಷ್ಟು ಅಂದರೆ 20 ಲಕ್ಷ ಕೋಟಿ ರೂ.ಗಳನ್ನು ಆರ್ಥಿಕ ಮತ್ತು ವಿತ್ತೀಯ ಕ್ರಮಗಳಲ್ಲಿ 50 ದಿನಗಳ ಕೊರೊನಾ ಲಾಕ್‌ಡೌನ್‌ನಿಂದ ತೀವ್ರವಾಗಿ ಹಾನಿಗೊಳಗಾದ ಆರ್ಥಿಕತೆಯನ್ನು ಬೆಂಬಲಿಸಲು ಘೋಷಿಸಿದರು.
ಈ ಪ್ಯಾಕೇಜ್‌ನಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಯಲು ದೇಶವು ಲಾಕ್‌ಡೌನ್‌ಗೆ ಮೊರೆಹೋದ ಕೆಲವು ದಿನಗಳ ನಂತರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಘೋಷಿಸಿದ್ದ 1.74 ಲಕ್ಷ ಕೋಟಿ ರೂ.ಗಳ ನಿಧಿಯನ್ನು ಒಳಗೊಂಡಿದೆ.
ಪ್ರಧಾನಿ ಮೋದಿ ನಿನ್ನೆ ರಾತ್ರಿಯೇ ಪ್ಯಾಕೇಜಿನ ವಿವರಗಳನ್ನು ಸಚಿವೆ ನಿರ್ಮಲಾ ಸೀತಾರಾಮನ್ ನೀಡಲಿದ್ದಾರೆ ಎಂದು ಹೇಳಿದ್ದರು. ಪ್ರಧಾನಿಯ ಭಾಷಣದ ನಂತರದ ಸರಣಿ ಟ್ವೀಟ್‌ಗಳಲ್ಲಿ, ಹಣಕಾಸು ಸಚಿವರು ಇದನ್ನು ಕೇವಲ ಹಣಕಾಸಿನ ಪ್ಯಾಕೇಜ್ ಮಾತ್ರವಲ್ಲದೆ “ಸುಧಾರಣಾ ಪ್ರಚೋದನೆ ಮತ್ತು ಮನಸ್ಥಿತಿಯ ಕೂಲಂಕುಷ ಪರೀಕ್ಷೆ” ಎಂದು ಕರೆದಿದ್ದಾರೆ.
If our sankalp is #selfreliantIndia since we have everything that it takes for achieving it we indeed can attain the goal. Skill, enterprise and the spirit that converted the earth-quake affected Kutch (Gujarat) into a prosperous area can help our sankalp.
— Nirmala Sitharaman (@nsitharaman) May 12, 2020
Indian economy has acquired strength in its various dimensions. Now, we can confidently engage with the world. We aim at overall transformation & not incremental changes. We shall convert the pandemic challenge into an opportunity. #AatmanirbharBharat will integrate not isolate.
— Nirmala Sitharaman (@nsitharaman) May 12, 2020
“#ಆತ್ಮನಿರ್ಭರಭಾರತ್ ಅಭಿಯಾನ ಕೇವಲ ಹಣಕಾಸಿನ ಪ್ಯಾಕೇಜ್ ಆಗಿರಬಾರದು, ಅದು ಸುಧಾರಣಾ ಪ್ರಚೋದನೆ, ಮನಸ್ಥಿತಿ ಕೂಲಂಕುಷ ಪರೀಕ್ಷೆ ಮತ್ತು ಆಡಳಿತದಲ್ಲಿ ಹೆಚ್ಚಿನ ಒತ್ತು ನೀಡಲಿದೆ”ಎಂದು ಸೀತಾರಾಮನ್ ಪೋಸ್ಟ್ ಮಾಡಿದ್ದಾರೆ.
ಶಿರ್ಷಿಕೆಯೊಂದಿಗೆ ಖಾಲಿ ಪುಟ ಕೊಟ್ಟ ಪ್ರಧಾನಿ: ಪಿ. ಚಿದಂಬರಂ
ಪ್ರಧಾನಿ ಶೀರ್ಷಿಕೆಯೊಂದಿಗೆ ಖಾಲಿ ಪುಟವನ್ನು ನಮಗೆ ಕೊಟ್ಟಿದ್ದಾರೆ, ಖಾಲಿ ಬಿಟ್ಟ ಪುಟವನ್ನು ಇಂದು ಹಣಕಾಸು ಸಚಿವರು ಭರ್ತಿ ಮಾಡುವುದನ್ನು ನಾವು ಎದುರುನೋಡುತ್ತಿದ್ದೇವೆ. ಸರ್ಕಾರವು ಆರ್ಥಿಕತೆಗೆ ಹೆಚ್ಚುವರಿಯಾಗಿ ನೀಡುವ ಪ್ರತಿಯೊಂದು ರೂಪಾಯಿಯನ್ನೂ ನಾವು ಎಚ್ಚರಿಕೆಯಿಂದ ಎಣಿಸುತ್ತೇವೆ ಎಂದು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಟ್ವೀಟ್ ಮಾಡಿದ್ದಾರೆ.
Yesterday, PM gave us a headline and a blank page. Naturally, my reaction was a blank!
Today, we look forward to the FM filling the blank page. We will carefully count every ADDITIONAL rupee that the government will actually infuse into the economy.
— P. Chidambaram (@PChidambaram_IN) May 13, 2020
ಯಾರಿಗೆ ಏನು ಸಿಗುತ್ತದೆ ಎಂಬುದನ್ನೂ ನಾವು ಎಚ್ಚರಿಕೆಯಿಂದ ಪರಿಶೀಲಿಸುತ್ತೇವೆ. ಬಡವರು, ಹಸಿವಿನಿಂದ ಕಂಗೆಟ್ಟಿರುವವರು ಮತ್ತು ಕೆಲಸದ ಸ್ಥಳಗಳಿಂದ ಬೇರ್ಪಟ್ಟು ನೂರಾರು ಕಿಲೋ ಮೀಟರ್ ದೂರ ನಡೆದು ತವರು ರಾಜ್ಯಗಳಿಗೆ ತೆರಳಿರುವ ವಲಸೆ ಕಾರ್ಮಿಕರಿಗೆ ಏನು ಸಿಗಬಹುದು ಎಂಬುದನ್ನು ಮೊದಲು ಗಮನಿಸುತ್ತೇವೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ಅವರು ಉಲ್ಲೇಖಿಸಿದ್ದಾರೆ.
ಓದಿ: ಯಡಿಯೂರಪ್ಪನವರು ಮೋದಿ ಬಳಿ ಕೋವಿಡ್ ಪ್ಯಾಕೇಜ್ ಕೇಳಬೇಕು – ಕುಮಾರಸ್ವಾಮಿ
ವಿಡಿಯೋ ನೋಡಿ: ಈಡೇರದ ಭರವಸೆಗಳು, ಮುಚ್ಚಿ ಹೋದ ಹಗರಣಗಳು, ಕರ್ನಾಟಕಕ್ಕಾದ ಅನ್ಯಾಯ ಮತ್ತು ಕೊರೊನಾ. ಸದ್ದು…… ಈ ಸುದ್ದಿಗಳೇನಾದವು?-8 ನೇ ಸಂಚಿಕೆ


