Homeಮುಖಪುಟಎಪಿಎಂಸಿ ಕಾಯ್ದೆ ತಿದ್ದುಪಡಿಗೆ ರಾಜ್ಯಪಾಲರ ಕಚೇರಿ ತರಾತುರಿ ಮಾಡಿದ್ದೇಕೆ? ಈಗ ಹಿಂದಕ್ಕೆ ಕಳಿಸಿದ್ದು ನಿಜವಾ?

ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ರಾಜ್ಯಪಾಲರ ಕಚೇರಿ ತರಾತುರಿ ಮಾಡಿದ್ದೇಕೆ? ಈಗ ಹಿಂದಕ್ಕೆ ಕಳಿಸಿದ್ದು ನಿಜವಾ?

ಇಂದು ರಾಜ್ಯಸರ್ಕಾರವು ಕಾಯ್ದೆಗೆ ತಿದ್ದುಪಡಿ ತರುವುದಕ್ಕಾಗಿ ಸುಗ್ರಿವಾಜ್ಞೆ ವಿಧೇಯಕದ ಸಹಿಗಾಗಿ ರಾಜ್ಯಪಾಲರ ಕಚೇರಿಗೆ ಕಳಿಸಿದ್ದು ಆಶ್ಚರ್ಯಕರ ರೀತಿಯಲ್ಲಿ ರಾಜ್ಯಪಾಲರು ಅದಕ್ಕೆ ಸಹಿ ಹಾಕದೇ ವಾಪಸ್‌ ಕಳಿಸಿದ್ದಾರೆ ಎಂಬು ಸುದ್ದಿ ತಿಳಿದುಬಂದಿದೆ.

- Advertisement -
- Advertisement -

ಕರ್ನಾಟಕದಲ್ಲಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ವಿವಾದ ಭುಗಿಲೆದ್ದಿದೆ. ತಾನೇ ಕಾಯ್ದೆಯನ್ನು ತರಲು ಹೊರಟುಬಿಟ್ಟಿದ್ದ ಒಕ್ಕೂಟ ಸರ್ಕಾರವು ಎಪಿಎಂಸಿ ರಾಜ್ಯಪಟ್ಟಿಯಲ್ಲಿ ಬರುವುದರಿಂದ ರಾಜ್ಯಸರ್ಕಾರಗಳಿಗೆ ಸುತ್ತೋಲೆಯೊಂದನ್ನು ಕಳಿಸಿ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ತರುವಂತೆ ಒತ್ತಡ ತಂದಿತ್ತು.

ಈ ನಡುವೆ ಕರ್ನಾಟಕದ ರಾಜ್ಯಪಾಲರ ಕಚೇರಿಯು ಸರ್ಕಾರಕ್ಕೆ ಆದಷ್ಟು ಬೇಗ ತಿದ್ದುಪಡಿ ತರಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿತ್ತೆಂಬ ಸುದ್ದಿಯು ತಡವಾಗಿ ಹೊರಬಿದ್ದಿದೆ. ಎಷ್ಟರಮಟ್ಟಿಗೆಂದರೆ ಪ್ರತಿ ಗಂಟೆಗೊಮ್ಮೆ ಸುಗ್ರೀವಾಜ್ಞೆಯ ಸಹಿಗಾಗಿ ರಾಜ್ಯಪಾಲರ ಕಚೇರಿಗೆ ಆದಷ್ಟು ಬೇಗ ಕಳಿಸಿಕೊಡಬೇಕೆಂದು ಒತ್ತಾಯಿಸಲಾಗುತ್ತಿತ್ತು ಎಂದು ಹೆಸರು ಹೇಳಲಿಚ್ಚಿಸದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು ಈ ಕುರಿತು ರಾಜ್ಯಸರ್ಕಾರದ ಅಡಿಷನಲ್‌ ಚೀಫ್ ಸೆಕ್ರಟರಿ ಡಾ.ನಾಗಾಂಬಿಕಾ ದೇವಿಯವರಿಗೆ ಪತ್ರ ಬರೆದಿದ್ದು, ನೀವು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಎಪಿಎಲ್‌ಎಂ 2017ರ ಕಾಯ್ದೆಗೆ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ತರಬೇಕೆಂದು ಸೂಚಿಸಿರುವ ಪತ್ರವು ಈಗಾಗಲೇ ಸಾಕಷ್ಟು ಓಡಾಡಿತ್ತು. ಅಷ್ಟೇ ಅಲ್ಲದೇ ಅದಕ್ಕೆ ಮುಂಚೆಯೇ ಕೇಂದ್ರವು ತಯಾರಿಸಿದ್ದ ಮಾದರಿ ಕಾಯ್ದೆಯ ಪ್ರತಿಯು ರೈತ ಮುಖಂಡರಿಂದ ನಾನುಗೌರಿ.ಕಾಂಗೆ ಲಭ್ಯವಾಗಿದೆ.

ರಾಜ್ಯಪಾಲರ ಕಚೇರಿಯು ಈ ಕುರಿತು ಬೇಗ ಸುಗ್ರಿವಾಜ್ಞೆ ವಿಧೇಯಕ ಕಳಿಸಬೇಕೆಂದು ಪಟ್ಟು ಹಿಡಿದಿದ್ದಕ್ಕೂ ಕೇಂದ್ರ ಸರ್ಕಾರದ ಒತ್ತಡವೇ ಕಾರಣ ಎನ್ನಲಾಗಿದೆ. ಎಪಿಎಂಸಿ ರಾಜ್ಯಪಟ್ಟಿಯಲ್ಲಿರುವುದರಿಂದ ಕೇಂದ್ರವು ತುಂಬಾ ಒತ್ತಡ ಹೇರಲು ಸಾಧ್ಯವಿಲ್ಲದ್ದರಿಂದ ರಾಜ್ಯಪಾಲರ ಕಚೇರಿಯನ್ನು ಬಳಸಿಕೊಂಡು ಒತ್ತಡ ಹೇರಿರುವ ಸಾಧ್ಯತೆಯಿದೆ.

ವಾಪಸ್‌ ಕಳಿಸಿದರೇ ರಾಜ್ಯಪಾಲರು?

ಇನ್ನು ಇಂದು ರಾಜ್ಯಸರ್ಕಾರವು ಕಾಯ್ದೆಗೆ ತಿದ್ದುಪಡಿ ತರುವುದಕ್ಕಾಗಿ ಸುಗ್ರಿವಾಜ್ಞೆ ವಿಧೇಯಕದ ಸಹಿಗಾಗಿ ರಾಜ್ಯಪಾಲರ ಕಚೇರಿಗೆ ಕಳಿಸಿದ್ದು ಆಶ್ಚರ್ಯಕರ ರೀತಿಯಲ್ಲಿ ರಾಜ್ಯಪಾಲರು ಅದಕ್ಕೆ ಸಹಿ ಹಾಕದೇ ವಾಪಸ್‌ ಕಳಿಸಿದ್ದಾರೆ ಎಂಬು ಸುದ್ದಿ ತಿಳಿದುಬಂದಿದೆ.

ವಿಧೇಯಕಕ್ಕಾಗಿ ತರಾತುರಿ ಮಾಡಿದ ರಾಜ್ಯಪಾಲರು ಈಗ ಏಕಾಏಕಿ ವಿಧೇಯಕಕ್ಕೆ ಸಹಿ ಮಾಡದೇ ವಾಪಸ್‌ ಕಳಿಸಿದ್ದೇಕೆ ಎಂಬ ಪ್ರಶ್ನೆ ಎದ್ದಿದೆ. ಇಂದು ಬೆಳಿಗ್ಗೆಯಿಂದಲೇ ರೈತ ಸಂಘಟನೆಗಳ ಪ್ರಬಲ ವಿರೋಧ, ವಿರೋಧ ಪಕ್ಷಗಳ ಟೀಕೆಗೆ ಬೆದರಿ ರಾಜ್ಯಪಾಲರು ವಿಧೇಯಕಕ್ಕೆ ಸಹಿ ಮಾಡಿಲ್ಲ ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಅದು ಎಷ್ಟರ ಮಟ್ಟಿಗೆ ನಿಜ ಎಂದು ಗೊತ್ತಾಗಲು ನಾಳೆಯವರೆಗೆ ಕಾಯಬೇಕು. ಅಂತಿಮವಾಗಿ ಎಪಿಎಂಸಿ ಕಾಯ್ದೆಯ ತಿದ್ದುಪಡಿ ವಿಚಾರ ಎಲ್ಲಿಗೆ ಹೋಗಿ ನಿಲ್ಲುತ್ತದೆ ಕಾದು ನೋಡಬೇಕಿದೆ.


ಇದನ್ನೂ ಓದಿ: ತಿದ್ದುಪಡಿ ಕಾಯ್ದೆಗೆ ಮುಚ್ಚಲಿವೆ ಎಪಿಎಂಸಿಗಳು; ಲಕ್ಷಾಂತರ ಕಾರ್ಮಿಕರು ಬೀದಿಪಾಲು ಸಾಧ್ಯತೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಮನುವಾದಿಗಳು, ಕಾರ್ಮಿಕರ ಮತ್ತು ರೈತರ ವಿರೋಧಿಗಳು ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

LEAVE A REPLY

Please enter your comment!
Please enter your name here

- Advertisment -

Must Read

‘ಸತ್ಯ ಆದಷ್ಟು ಬೇಗ ಹೊರಬರಲಿದೆ..’; ಲೈಂಗಿಕ ಹಗರಣದ ಆರೋಪಿ ಪ್ರಜ್ವಲ್ ರೇವಣ್ಣ ಮೊದಲ ಪ್ರತಿಕ್ರಿಯೆ

0
ದೇಶದಾದ್ಯಂತ ಭಾರೀ ಸುದ್ದಿಯಾಗಿರುವ, ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ಲೈಂಗಿಕ ಹಗರಣದ ಪ್ರಮುಖ ಆರೋಪಿ, ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಸಂಸದ, ಎನ್‌ಡಿಎ ಎಂಪಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮೊದಲ ಬಾರಿಗೆ ಪ್ರತಿಕ್ರಿಯೆ...