Homeನಿಜವೋ ಸುಳ್ಳೋಫ್ಯಾಕ್ಟ್‌ಚೆಕ್‌: ನಾವು ನಂಬಿಯೇಬಿಟ್ಟಿದ್ದ ಈ ವಾರದ 5 ಫೇಕ್‌ನ್ಯೂಸ್‌ಗಳು ಮತ್ತು ಅದರಿಂದಿರುವ ಸತ್ಯಗಳು

ಫ್ಯಾಕ್ಟ್‌ಚೆಕ್‌: ನಾವು ನಂಬಿಯೇಬಿಟ್ಟಿದ್ದ ಈ ವಾರದ 5 ಫೇಕ್‌ನ್ಯೂಸ್‌ಗಳು ಮತ್ತು ಅದರಿಂದಿರುವ ಸತ್ಯಗಳು

- Advertisement -
- Advertisement -

ಸುಳ್ಳು ಸುದ್ದಿಗಳ ಹರಡವಿಕೆ ಎಗ್ಗಿಲ್ಲದೇ ನಡೆಯುತ್ತಿದೆ. ಅದರಲ್ಲಿಯೂ ಕೊರೊನಾ ಸೋಂಕಿನ ನಂತರವಂತು ಅವುಗಳ ಸಂಖ್ಯೆ ದ್ವಿಗುಣವಾಗಿದೆ. ಈ ನಿಟ್ಟಿನಲ್ಲಿ ನಾವು ನಂಬಿಯೇಬಿಟ್ಟಿದ್ದ ಈ ವಾರದ 5 ಫೇಕ್‌ನ್ಯೂಸ್‌ಗಳು ಮತ್ತು ಅದರಿಂದಿರುವ ವಾಸ್ತವಾಂಶಗಳು ಇಲ್ಲಿವೆ.

  1. ಐಸಿಎಂಆರ್ ನೀಡಿದ ಪ್ರಮುಖ ಮುನ್ನೆಚ್ಚರಿಕೆಗಳು ನಿಜವೇ?

ಐಸಿಎಂಆರ್ ನವದೆಹಲಿ ಕೊರೊನಾ ತಡೆಯಲು ನೀಡಿದ ಪ್ರಮುಖ ಮುನ್ನೆಚ್ಚರಿಕೆಗಳು ಎಂಬ ಬರಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಕುರಿತು ಐಸಿಎಂಆರ್ ನಿರ್ದೇಶಕರಾದ ಡಾ.ರಜನಿಕಾಂತ್‌ರವರ ಸ್ಪಷ್ಟನೆ ನೀಡಿ ವೈರಲ್ ಬರಹ ಸಂಪೂರ್ಣ ಸುಳ್ಳು ಎಂದಿದ್ದಾರೆ. ನಾವು ಆ ರೀತಿಯ ಯಾವುದೇ ಮುನ್ನೆಚ್ಚರಿಕೆಗಳನ್ನು ನೀಡಿಲ್ಲ. ನಮ್ಮ ಪತ್ರಿಕಾ ಹೇಳಿಕೆಗಳು ವೆಬ್‌ಸೈಟ್‌ನಲ್ಲಿ ಮೀಡಿಯಾ ವಿಭಾಗದಲ್ಲಿದ್ದು ಅವು ಮಾತ್ರ ಸತ್ಯ ಎಂದು ಸ್ಪಷ್ಟಪಡಿಸಿದ್ದಾರೆ.

2 ಕೊರೊನಾ ಕಾಲದಲ್ಲಿಯೂ ತೆಲಂಗಾಣದಲ್ಲಿ ಸರ್ಕಾರದಿಂದ ಈದ್ ಮುಬಾರಕ್ ಗಿಫ್ಟ್ ಹಂಚಿಕೆ?

ಸುದರ್ಶನ್ ನ್ಯೂಸ್‌ನ ಸಂಪಾದಕ ಸುರೇಶ್ ಚವಾಂಕೆಯವರು ಕಳೆದ ಭಾನುವಾರ ಟ್ವೀಟ್ ಮಾಡಿ “ತೆಲಗಾಂಣ ಸರ್ಕಾರ ಈದ್ ಹಬ್ಬಕ್ಕಾಗಿ ಮುಸ್ಲಿಮರಿಗೆ ಗಿಫ್ಟ್ ನೀಡುತ್ತಿದೆ. ಆದರೆ ಹಿಂದೂಗಳ ಹಬ್ಬವಾದ ರಾಮನವಮಿ, ಯುಗಾದಿ, ಹನುಮಾನ್ ಜಯಂತಿಯ ದಿನ ಹಿಂದೂಗಳನ್ನು ಮನೆಯಿಂದ ಹೊರಗೆ ಬರಲು ಸಹ ಬಿಡಲಿಲ್ಲ” ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಗಾಳಿಸುದ್ದಿಗಳು ಹಬ್ಬಿದಾಗ ತೆಲಂಗಾಣ ಸರ್ಕಾರ ಸುತ್ತೋಲೆಯೊಂದನ್ನು ಹೊರಡಿಸಿ “ಕೊರೊನಾ ಕಾರಣದಿಂದ ಈ ವರ್ಷ ರಂಜಾನ್ ಹಬ್ಬಕ್ಕೆ ಸರ್ಕಾರದಿಂದ ಯಾವುದೇ ಗಿಫ್ಟ್ ನೀಡುತ್ತಿಲ್ಲ” ಎಂದು ಸ್ಪಷ್ಟೀಕರಣ ನೀಡಿದೆ.

ಹಾಗಾದರೆ ಸುರೇಶ್ ಚವಾಂಕೆಯವರು ಮಾಡಿರುವ ಟ್ವೀಟ್‌ನಲ್ಲಿ ಫೋಟೊ ಯಾವುದೆಂದು ಹುಡುಕಿದಾಗ ಅದು 5 ವರ್ಷದ ಹಳೆಯ ಫೋಟೊ ಎಂದು ತಿಳಿದುಬಂದಿದೆ. ಜೊತೆಗೆ ಅವರು ಹೇಳಿದಂತೆ ಕೇವಲ ಮುಸ್ಲಿಮರ ಹಬ್ಬಕ್ಕೆ ಮಾತ್ರ ಸರ್ಕಾರ ಗಿಫ್ಟ್ಗಳನ್ನು ನೀಡದೇ ಹಿಂದೂಗಳ ಭತುಕಮ್ಮ ಹಬ್ಬ ಮತ್ತು ಕ್ರಿಶ್ಚಿಯನ್ನರ ಕ್ರಿಸ್‌ಮಸ್ ಹಬ್ಬಕ್ಕೂ ಸರ್ಕಾರ ಗಿಫ್ಟ್ಗಳನ್ನು ನೀಡಿದೆ. ಈ ಕೆಳಗಿನ ಪತ್ರಿಕಾ ವರದಿಗಳನ್ನು ಗಮನಿಸಿ.

3 ಗಿಲ್ಗಿಟ್-ಬಾಲ್ಟಿಸ್ತಾನ್ ಸ್ವತಂತ್ರ ಅಫಿಶಿಯಲ್ ಟ್ವಿಟ್ಟರ್ ಅಕೌಂಟ್ ಹೊಂದಿದೆಯೇ?

ಮೇ 4 ರಂದು ವಿದೇಶಾಂಗ ಸಚಿವಾಲಯ (ಎಂಎಚ್‌ಎ) ಗಿಲ್ಗಿಟ್-ಬಾಲ್ಟಿಸ್ತಾನ್ ಸೇರಿದಂತೆ “ಭಾರತದ ಭೂಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಪಾಕಿಸ್ತಾನ ಆಕ್ರಮಿತ ಪ್ರದೇಶಗಳನ್ನು” ಖಾಲಿ ಮಾಡುವಂತೆ ಪಾಕಿಸ್ತಾನವನ್ನು ಕೇಳಿದೆ. ಮೇ 12 ರಂದು, ಗಿಲ್ಗಿಟ್-ಬಾಲ್ಟಿಸ್ತಾನ್, ಲಡಾಖ್ ಕೇಂದ್ರಾಡಳಿತ ಪ್ರದೇಶದ ಅಧಿಕೃತ ಖಾತೆಯನ್ನು ಸರ್ಕಾರವು ಸ್ಥಾಪಿಸಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ನಡೆದಿತ್ತು.

 

ಮೋದಿ ಸರ್ಕಾರವೂ ಪಾಕ್ ಆಕ್ರಮಿತ ಪ್ರದೇಶಗಳಲ್ಲಿ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶವನ್ನು ವಾಪಸ್ ಪಡೆದಿದೆ ಎಂದೆಲ್ಲಾ ಸಂಭ್ರಮಿಸಲಾಗಿತ್ತು.

ಪಿಐಬಿ (ಪ್ರೆಸ್ ಇನ್ಫರ್ಮೇಷನ್ ಬ್ಯೂರೋದ ಫ್ಯಾಕ್ಟ್ ಚೆಕ್ ವಿಂಗ್) ಇದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದೆ. ಅಲ್ಲದೇ ವಿದೇಶಾಂಗ ಸಚಿವಾಲಯವು ಕೂಡ ಸ್ಪಷ್ಟನೆ ನೀಡಿದ್ದು, ಲಡಾಖ್ ಪ್ರದೇಶವು ಕೇವಲ 2 ಅಧಿಕೃತ ಟ್ವಿಟರ್ ಹ್ಯಾಂಡಲ್‌ಗಳನ್ನು ಹೊಂದಿದೆ, ಅಂದರೆ @DIPR_Leh & @ InformationDep4. ಗಿಲ್ಗಿಟ್-ಬಾಲ್ಟಿಸ್ತಾನ್ ಖಾತೆಯೂ ನಕಲಿ ಖಾತೆಯಾಗಿದೆ ಎಂದಿದೆ.

4. ಈ ವೈರಲ್ ಫೋಟೊ ವಲಸೆ ಕಾರ್ಮಿಕರದ್ದಲ್ಲ. ಮತ್ತೆ?

ಲಾಕ್‌ಡೌನ್ ಘೋಷಣೆಯಾದಾಗಿನಿಂದ ವಲಸೆ ಕಾರ್ಮಿಕರು ಬೀದಿಗೆ ಬಿದ್ದಿದ್ದು, ನೂರಾರು, ಸಾವಿರಾರು ಕಿ.ಮೀ ಗಟ್ಟಲೇ ನಡೆದು ಸಾಗುತ್ತಿರುವ ಮನಕಲಕುವ ಫೋಟೊಗಳು ಎಲ್ಲೆಡೆ ವೈರಲ್ ಆಗಿವೆ. ಅದರಲ್ಲಿಯೂ ರೈಲು ಸೇವೆ ಪ್ರಾರಂಭಿಸುತ್ತೇವೆ ಎಂದು ಹೇಳಿ ಸಮರ್ಪಕ ವ್ಯವಸ್ಥೆ ಮಾಡದೇ ಹೋದಾಗ ಮತ್ತಷ್ಟು ಕಾರ್ಮಿಕರು ನಡೆದು ಹೊರಟಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ತುಂಬಿ ಹೋಗಿವೆ. ಈ ನಡಿಗೆಯಲ್ಲಿ ಬಹಳಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ ಕೂಡ.

ಅದೇ ರೀತಿಯಲ್ಲಿ ವಯಸ್ಸಾದ ವ್ಯಕ್ತಿಯೊಬ್ಬ ಮಹಿಳೆಯೊಬ್ಬರನ್ನು ತನ್ನ ಬೆನ್ನಿನ ಮೇಲೆ ಹೊತ್ತುಕೊಂಡು ನಡೆಯುತ್ತಿರುವ ಚಿತ್ರ ಎಲ್ಲರ ಮನಕರಗಿಸಿತ್ತು. ಇದು ವಲಸೆ ಕಾರ್ಮಿಕರ ಸ್ಥಿತಿಗತಿಯೆಂದು ಸಾವಿರಾರು ಜನ ಅದನ್ನು ಹಂಚಿಕೊಂಡಿದ್ದರು.

ಈ ಕುರಿತು ಫ್ಯಾಕ್ಟ್‌ಚೆಕ್ ನಡೆಸಿದಾಗ ಅದು ವಲಸೆ ಕಾರ್ಮಿಕರ ಫೋಟೊ ಅಲ್ಲ ಎಂದು ತಿಳಿದುಬಂದಿದೆ. ಅದು 2017ರ ಚಿತ್ರವಾಗಿದ್ದು ಬಾಂಗ್ಲಾದೇಶದ ರೋಹಿಂಗ್ಯ ಮುಸ್ಲಿಂ ನಿರಾಶ್ರಿತರ ಫೋಟೊ ಆಗಿದೆ. ರೋಹಿಂಗ್ಯಾ ಮುಸ್ಲಿಂ ಒಸಿಯೂರ್ ರೆಹಮಾನ್ ಎಂದು ಗುರುತಿಸಲ್ಪಟ್ಟ ವ್ಯಕ್ತಿಯು ತನ್ನ ತಾಯಿಯನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಮ್ಯಾನ್ಮಾರ್‌ನಿಂದ ಬಾಂಗ್ಲಾದೇಶಕ್ಕೆ ಹೊರಟಾಗಿನ ಫೋಟೊ ಇದಾಗಿದೆ. ಈ ಕುರಿತ ವಿಡಿಯೋ ಸಾಕ್ಷ್ಯ ಇಲ್ಲಿದೆ.

#টেকনাফ সীমান্তের হোয়াইক্যং লম্বাবিল সীমান্ত দিয়ে মা'কে কাঁধে নিয়ে বাংলাদেশে প্রবেশ করা এক রোহিঙ্গার কান্না। #লম্বাবিল সীমান্ত থেকে সরওয়ার আলম শাহীন।

Posted by UkhiyaNews.Com on Wednesday, September 6, 2017

5. ಡಿಎಂಕೆ ಮುಖಂಡ ವೈದ್ಯೆಯೊಬ್ಬಳಿಗೆ ಕಾಲಿನಿಂದ ಒದ್ದರೆ? ಈ ಸುದ್ದಿ ನಿಜವಲ್ಲ..

ತಮಿಳುನಾಡಿನ ಡಿಎಂಕೆ ಮುಖಂಡ ವೈದ್ಯೆಯೊಬ್ಬಳಿಗೆ ಕಾಲಿನಿಂದ ಒದ್ದು ಅವಮಾನಿಸಿದ್ದಾರೆ ಎಂಬ ವಿಡಿಯೋ ವೈರಲ್ ಆಗಿದೆ.

ಆ ವಿಡಿಯೋದಲ್ಲಿ ಬಿಳಿಅಂಗಿ ಮತ್ತು ಬಿಳಿ ಪಂಚೆ ತೊಟ್ಟ ವ್ಯಕ್ತಿಯೊಬ್ಬ ಮಹಿಳೆಗೆ ಒದೆಯುತ್ತಿರುವ ದೃಶ್ಯಗಳನ್ನು ವೈದ್ಯೆಯ ಮೇಲೆ ಹಲ್ಲೆ ಎಂದು ಸುದ್ದಿ ಹರಡಲಾಗಿದೆ.

ಈ ಕುರಿತು ಫ್ಯಾಕ್ಟ್‌ಚೆಕ್ ನಡೆಸಿದಾಗ ಹಲ್ಲೆನಡೆಸಿದ ವ್ಯಕ್ತಿ ಡಿಎಂಕೆ ಪಕ್ಷದ ಕೌನ್ಸಿಲರ್ ಸೆಲ್ವಕುಮಾರ್ ಎಂದು ತಿಳಿದುಬಂದಿದೆ. ಆದರೆ ಹಲ್ಲೆಗೊಳಗಾದ ಮಹಿಳೆ ವೈದ್ಯಳಲ್ಲ ಬದಲಿಗೆ ಡಿಎಂಕೆ ಪಕ್ಷದ ಪ್ರಾಥಮಿಕ ಸದಸ್ಯತ್ವ ಹೊಂದಿರುವ ಬ್ಯೂಟಿಪಾರ್ಲರ್ ನಡೆಸುವ ಮಹಿಳೆಯಾಗಿದ್ದಾರೆ. ಅಲ್ಲದೇ ಇದು ಎರಡು ವರ್ಷಗಳಷ್ಟು ಹಿಂದಿನ ಹಳೆಯ ವಿಡಿಯೋವಾಗಿದೆ. ಇವರಿರ್ವರ ನಡುವೆ ವಯಕ್ತಿಕ ಹಣಕಾಸಿನ ವಿಷಯಕ್ಕೆ ಜಗಳವಿದ್ದ ಕಾರಣ ಹಲ್ಲೆ ನಡೆಸಲಾಗಿದೆ ಎಂದು ದಿ ನ್ಯೂಸ್ ಮಿನಿಟ್ ಮತ್ತು ಎಎನ್‌ಐ 2018ರಲ್ಲಿಯೇ ವರದಿ ಮಾಡಿವೆ.

ಇವಿಷ್ಟು ಈ ವಾರದವು. ನಾವು ಮೋಸ ಹೋಗಬಾರದು. ಯಾವುದೇ ಸುದ್ದಿ ಹಂಚುವ ಮುನ್ನ ಪರಿಶೀಲಿಸಿ ಹಂಚಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನಾನು ಗೌರಿ.ಕಾಂ ನಲ್ಲಿ ಬರುತ್ತಿರುವ ಸುದ್ದಿಗಳು ಎಲ್ಲವೂ ನೂರಕ್ಕೆ 98 ಭಾಗ BJP ಪಕ್ಷ ದವರು ವಿರುದ್ಧ ಆರೋಪಗಳನ್ನು ಮಾಡುತ್ತಿದಿರಿ ಇದು ಸರಿ ಯಗಿ ಇಲ್ಲ ನೀವು ನಿಮ್ಮ ನಡುವಳಿಕೆ ಬದಲಾಯಿಸ ಬೇಕು ಇಲ್ಲ ಅಂದ್ರೆ ನಿಮ್ಮ ಭವಿಷ್ಯ ನೋಡಲು ಯಾರು ಕಾಣಿಸಲಿಲ್ಲ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...