Homeಅಂತರಾಷ್ಟ್ರೀಯಕೊರೊನಾ ವೈರಸ್ ಎಂದಿಗೂ ಹೋಗದಿರಬಹುದು: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಕೊರೊನಾ ವೈರಸ್ ಎಂದಿಗೂ ಹೋಗದಿರಬಹುದು: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

- Advertisement -
- Advertisement -

ವಿಶ್ವ ಆರೋಗ್ಯ ಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರು, ಕೊರೊನಾ ಸೋಂಕು ಎಂದಿಗೂ ಹೋಗುವುದಿಲ್ಲ, ಇದು ದೀರ್ಘಕಾಲ ಇರಬಹುದೆಂದು ಬುಧವಾರ ಎಚ್ಚರಿಕೆ ನೀಡಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಉನ್ನತ ಅಧಿಕಾರಿ ಡಾ. ಮೈಕೆಲ್ ರಯಾನ್ ಈ ವೈರಸ್ ಎಂದಿಗೂ ಹೋಗುವುದಿಲ್ಲ, ಕೊರೊನಾ ಸೋಂಕಿಗೆ ಒಳಗಾದವರ ಸಂಖ್ಯೆ ಇಲ್ಲಿಯವರೆಗೆ ಕಡಿಮೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಯಾವುದೇ ಲಸಿಕೆ ಇಲ್ಲದೆ ಜನರಿಗೆ ಸಾಕಷ್ಟು ಪ್ರಮಾಣದಲ್ಲಿ ರೋಗ ನಿರೋಧಕ ಹೆಚ್ಚಿಸಲು ವರ್ಷಗಳೇ ತೆಗೆದುಕೊಳ್ಳಬಹುದು. ಇದರ ಕುರಿತು ನಾವು ಹೆಚ್ಚು ಹೆಚ್ಚು ಚರ್ಚೆಗಳನ್ನು ನಡೆಸಬೇಕು ಎಂದು ಅವರು ಹೇಳಿದರು.

ಈ ವೈರಸ್ ನಮ್ಮ ನಡುವೆ ಮತ್ತೊಂದು ವೈರಸ್ ಆಗಬಹುದು, ಈ ಹಿಂದಿನ ಎಚ್‌ಐವಿಯಂತಹ ಇತರ ಹೊಸ ಕಾಯಿಲೆಗಳು ಎಂದಿಗೂ ಕಣ್ಮರೆಯಾಗಿಲ್ಲ, ಆದರೆ ಜನರು ರೋಗದೊಂದಿಗೆ ಬದುಕಲು ಅನುಕೂಲವಾಗುವಂತೆ ಪರಿಣಾಮಕಾರಿ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ಹೇಳಿದರು.

ಪರಿಣಾಮಕಾರಿಯಾದ ಲಸಿಕೆ ಅಭಿವೃದ್ಧಿಪಡಿಸಲಾಗುವುದು ಎಂಬ ಭರವಸೆ ಉಳಿದಿದೆ, ಆದರೆ ಆಗಲೂ ಸಹ ಅದನ್ನು ತಯಾರಿಸಲು ಹಾಗೂ ಮತ್ತು ರೋಗನಿರೋಧಕ ಶಕ್ತಿಯನ್ನು ಹೊಂದಲು ಅಗತ್ಯವಿರುವ ಜನರಿಗೆ ಅವುಗಳನ್ನು ವಿಶ್ವಾದ್ಯಂತ ವಿತರಿಸಲು ಹೆಚ್ಚಿನ ಪ್ರಮಾಣದ ಕೆಲಸದ ಅಗತ್ಯವಿರುತ್ತದೆ. ಈ ಪ್ರತಿಯೊಂದು ಹಂತವೂ ಸವಾಲುಗಳಿಂದ ಕೂಡಿದೆ ಎಂದು ರಯಾನ್ ಹೇಳಿದರು.

ವಿಶ್ವ ಆರೋಗ್ಯ ಸಂಸ್ಥೆಯ, ತಾಂತ್ರಿಕ ಮುಖ್ಯಸ್ಥ ಮರಿಯಾ ವ್ಯಾನ್ ಕೆರ್ಖೋವ್, ಕೆಲವು ದೇಶಗಳ ಜನರು ನಿರಾಶೆಯ ಸ್ಥಿತಿಯಲ್ಲಿದ್ದಾರೆ ಎಂದು ಗುರುತಿಸಿದ್ದಾಗಿ ಹೇಳಿದ್ದಾರೆ. ಆದರೆ ವೈದ್ಯಕೀಯ ಹಸ್ತಕ್ಷೇಪವಿಲ್ಲದೆ ವೈರಸ್ ಅನ್ನು ನಿಲ್ಲಿಸುವುದು ಸಾಧ್ಯ ಎಂದು ಗಮನಸೆಳೆದರು.

ಈ ವೈರಸ್ ಇನ್ನೂ ನಮ್ಮ ಕೈಯಲ್ಲಿದೆ ಎಂದಿರುವ ಅವರು, ಕೆಲವು ದೇಶಗಳು ವೈರಸ್ ಅನ್ನು ನಿಯಂತ್ರಣಕ್ಕೆ ತಂದಿರುವುದನ್ನು ನಾವು ನೋಡಿದ್ದೇವೆ ಎಂದು ಹೇಳಿದ್ದಾರೆ.

ಪ್ರಪಂಚದಾದ್ಯಂತ 44 ಲಕ್ಷಕ್ಕಿಂತಲೂ ಕೊರೊನಾ ಪ್ರಕರಣ ವರದಿಯಾಗಿದ್ದು, 2 ಲಕ್ಷದ 98 ಸಾವಿರ ಜನರು ಸಾವಿಗೀಡಾಗಿದ್ದಾರೆ.


ಓದಿ: ಕೊರೊನಾ ವಿರುದ್ದ ಕೇರಳದ ಹೋರಾಟ: ಅಮೆರಿಕಾದಿಂದ ನೈಜೀರಿಯಾವರೆಗಿನ ಮಾಧ್ಯಮಗಳಲ್ಲಿ ಮೆಚ್ಚುಗೆ!


ಮರಯಲೇಬಾರದ ಸುದ್ದಿಗಳು, ಸದ್ದು…ಈ ಸುದ್ದಿಯೇನಾಗಿದೆ ಸಂಚಿಕೆಗೆ ಇಲ್ಲಿ ಕ್ಲಿಕ್ ಮಾಡಿ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರದಲ್ಲಿ ಹಿಂಸಾಚಾರಕ್ಕೆ ಉತ್ತೇಜನ ನೀಡಿದ ಬಿಜೆಪಿ ಸಿಎಂ ಬಿರೇನ್ ಸಿಂಗ್: ಅಸ್ಸಾಂ ರೈಫಲ್ಸ್ ವರದಿ

0
ಮಣಿಪುರದಲ್ಲಿನ ಸಂಘರ್ಷಕ್ಕೆ ಸಂಬಂಧಿಸಿ ರಾಜ್ಯದಲ್ಲಿ ಅಸ್ಸಾಂ ರೈಫಲ್ಸ್‌ನ ಅಧಿಕಾರಿಗಳು ನಡೆಸಿದ ಮೌಲ್ಯಮಾಪನದಲ್ಲಿ ಸ್ಪೋಟಕ ಅಂಶಗಳನ್ನು ಉಲ್ಲೇಖಿಸಲಾಗಿದ್ದು, ಮಣಿಪುರದಲ್ಲಿನ ಸಂಘರ್ಷಕ್ಕೆ ಸಿಎಂ ಬಿರೇನ್ ಸಿಂಗ್ ಉತ್ತೇಜನ ಕಾರಣ ಎಂದು ಹೇಳಿದೆ. ಅಸ್ಸಾಂ ಸಿಎಂ ಬಿರೇನ್ ಸಿಂಗ್...