Homeಅಂತರಾಷ್ಟ್ರೀಯಡೋಕ್ಲಾಮ್ ಮಾದರಿಯ ಬಿಕ್ಕಟ್ಟು; ಲಡಾಖ್‌ನಲ್ಲಿ ಭಾರತ-ಚೀನಾ ಸೈನಿಕರ ಮುಖಾಮುಖಿ

ಡೋಕ್ಲಾಮ್ ಮಾದರಿಯ ಬಿಕ್ಕಟ್ಟು; ಲಡಾಖ್‌ನಲ್ಲಿ ಭಾರತ-ಚೀನಾ ಸೈನಿಕರ ಮುಖಾಮುಖಿ

- Advertisement -
- Advertisement -

ಪೂರ್ವ ಲಡಾಖ್‌ನ ಲೈನ್‌ ಆಫ್‌ ಕಂಟ್ರೋಲ್‌ ಉದ್ದಕ್ಕೂ ಹಲವಾರು ಪ್ರದೇಶಗಳಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರು ಮುಖಾಮುಖಿಯಾಗಿದ್ದಾರೆ. ಇದು 2017 ರಲ್ಲಿ ಡೋಕ್ಲಾಮ್ ಬಿಕ್ಕಟ್ಟಿನ ನಂತರ ಅತಿದೊಡ್ಡ ಮಿಲಿಟರಿ ಮುಖಾಮುಖಿಯಾಗಿದೆ ಎಂದು ವರದಿಯಾಗಿದೆ.

ಚೀನಾದ ಸೈನ್ಯವು ಸುಮಾರು 2,000 ದಿಂದ 2,500 ಸೈನಿಕರನ್ನು ನಿಯೋಜಿಸುತ್ತಿದೆ ಎಂದು ತಿಳಿದು ಬಂದಿರುವ ಹಿನ್ನಲೆಯಲ್ಲಿ ಎರಡು ವಿವಾದಾಸ್ಪದ ಪ್ರದೇಶಗಳಾದ ಪಾಂಗೊಂಗ್ ತ್ಸೋ ಮತ್ತು ಗಾಲ್ವಾನ್ ಕಣಿವೆಯಲ್ಲಿ ಭಾರತವು ತನ್ನ ಬಲವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಉನ್ನತ ಮಿಲಿಟರಿ ಮೂಲಗಳು ತಿಳಿಸಿವೆ.

“ಈ ಪ್ರದೇಶದಲ್ಲಿ ಭಾರತೀಯ ಸೇನೆಯ ಸಾಮರ್ಥ್ಯವು ನಮ್ಮ ಎದುರಾಳಿಗಿಂತ ಉತ್ತಮವಾಗಿದೆ” ಎಂದು ಮಿಲಿಟರಿ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

“ಇದು ಗಂಭೀರವಾಗಿದೆ, ಇದು ಸಾಮಾನ್ಯ ರೀತಿಯ ಉಲ್ಲಂಘನೆಯಲ್ಲ” ಎಂದು ಉತ್ತರ ಸೇನೆಯ ಮಾಜಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಡಿ.ಎಸ್. ಹೂಡಾ ಹೇಳಿದ್ದಾರೆ. ಈ ಪ್ರದೇಶದಲ್ಲಿ ಎರಡು ಕಡೆಯವರ ನಡುವೆ ಯಾವುದೇ ವಿವಾದಗಳಿಲ್ಲದ ಕಾರಣ ಗಾಲ್ವಾನ್‌ನಂತಹ ಪ್ರದೇಶಗಳಿಗೆ ಚೀನಾ ಅತಿಕ್ರಮಣಕ್ಕೆ ಚಿಂತಿಸುತ್ತಿದೆ ಎಂದು ಅವರು ವಿಶೇಷವಾಗಿ ಒತ್ತಿ ಹೇಳಿದ್ದಾರೆ.

ಕಾರ್ಯತಂತ್ರ ವ್ಯವಹಾರಗಳ ತಜ್ಞ ರಾಯಭಾರಿ ಅಶೋಕ್ ಕೆ ಕಾಂತಾ ಅವರು ಲೆಫ್ಟಿನೆಂಟ್ ಜನರಲ್ ಹೂಡಾ ಅವರ ವಾದವನ್ನು ಒಪ್ಪಿ, “ಚೀನಾದ ಸೈನ್ಯದಿಂದ ಅನೇಕ ಆಕ್ರಮಣಗಳು ನಡೆದಿವೆ. ಇದು ಕಳವಳಕ್ಕೆ ಕಾರಣವಾಗಿದೆ. ಇದು ದಿನನಿತ್ಯದ ನಿಲುಗಡೆಯಲ್ಲ. ಇದು ಗೊಂದಲದ ಪರಿಸ್ಥಿತಿ” ಎಂದು ಕಾಂತಾ ಹೇಳಿದರು.

ಎರಡು ಸೇನೆಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಪರಿಹರಿಸಲು ರಾಜತಾಂತ್ರಿಕ ಪ್ರಯತ್ನಗಳನ್ನು ಹೆಚ್ಚಿಸಬೇಕು ಮತ್ತು ಪಾಂಗೊಂಗ್ ತ್ಸೊ, ಡೆಮ್‌ಚಾಕ್ ಮತ್ತು ದೌಲತ್ ಬೇಗ್ ಓಲ್ಡಿ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಎರಡೂ ಕಡೆಯ ಸೈನಿಕರು ಮುಖಾಮುಖಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಚೀನಾದ ಕಡೆಯವರು ವಿಶೇಷವಾಗಿ ಗಾಲ್ವಾನ್ ಕಣಿವೆಯಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಿದ್ದಾರೆ. ಕಳೆದ ಎರಡು ವಾರಗಳಲ್ಲಿ ಸುಮಾರು 100 ಡೇರೆಗಳನ್ನು ನಿರ್ಮಿಸಿದ್ದಾರೆ ಮತ್ತು ಬಂಕರ್‌ಗಳ ನಿರ್ಮಾಣಕ್ಕಾಗಿ ಭಾರೀ ಉಪಕರಣಗಳನ್ನು ತಂದಿದ್ದಾರೆ. ಡೆಮ್ಚೋಕ್ ಮತ್ತು ದೌಲತ್ ಬೇಗ್ ಓಲ್ಡಿ ಸೇರಿದಂತೆ ಹಲವಾರು ಸೂಕ್ಷ್ಮ ಪ್ರದೇಶಗಳಲ್ಲಿ ಭಾರತೀಯ ಪಡೆಗಳು ಗಸ್ತು ತಿರುಗಲು ಪ್ರಾರಂಭಿಸಿವೆ ಎಂದು ಮೂಲಗಳು ತಿಳಿಸಿವೆ.

ಮೇ 9 ರಂದು ಉತ್ತರ ಸಿಕ್ಕಿಂನಲ್ಲಿ ಇದೇ ರೀತಿಯ ಘಟನೆ ಹಾಗೂ ಪಾಂಗೊಂಗ್ ತ್ಸೊದಲ್ಲಿ ನಡೆದ ಘಟನೆಯ ನಂತರ, ಚೀನಾ ಮಿಲಿಟರಿ ತನ್ನ ಸೈನಿಕರಿಂದಾಗಿ ಸಾಮಾನ್ಯ ಗಸ್ತು ತಿರುಗಲು ಅಡ್ಡಿಯಾಗುತ್ತಿದೆ ಎಂದು ಭಾರತ ಕಳೆದ ವಾರ ಹೇಳಿದೆ. ಗಡಿ ನಿರ್ವಹಣೆಯ ಬಗ್ಗೆ ಭಾರತ ಯಾವಾಗಲೂ ಅತ್ಯಂತ ಜವಾಬ್ದಾರಿಯುತ ಮಾರ್ಗವನ್ನು ತೆಗೆದುಕೊಂಡಿದೆ ಎಂದು ಪ್ರತಿಪಾದಿಸಿದೆ.

ಪತ್ರಿಕಾಗೋಷ್ಠಿಯಲ್ಲಿ, ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಅವರು, ಭಾರತೀಯ ಪಡೆಗಳ ಅತಿಕ್ರಮಣದಿಂದಾಗಿ ಉದ್ವಿಗ್ನತೆ ಉಂಟಾಗಿದೆ ಎಂಬ ಚೀನಾದ ವಾದವನ್ನು ಬಲವಾಗಿ ನಿರಾಕರಿಸಿದರು.

ಸಿಕ್ಕಿಂ ಮತ್ತು ಲಡಾಖ್‌ನಲ್ಲಿನ ವಾಸ್ತವಿಕ ನಿಯಂತ್ರಣ ರೇಖೆಯನ್ನು ಏಕಪಕ್ಷೀಯವಾಗಿ ಬದಲಾಯಿಸುವ ಪ್ರಯತ್ನವನ್ನು ಭಾರತೀಯ ಸೈನ್ಯ ನಡೆಸುತ್ತಿದೆ ಎಂದು ಚೀನಾ ಆರೋಪಿಸಿದ ಎರಡು ದಿನಗಳ ನಂತರ ಭಾರತದ ಪ್ರತಿಕ್ರಿಯೆ ಹೊರಬಿದ್ದಿದೆ.

ಮೇ 5 ರಂದು, ಭಾರತೀಯ ಮತ್ತು ಚೀನಾದ ಸೈನಿಕರು ಪಂಗೊಂಗ್ ತ್ಸೋ ಸರೋವರ ಪ್ರದೇಶದಲ್ಲಿ ಕಬ್ಬಿಣದ ಸ್ಟಿಕ್ಕುಗಲು, ಕೋಲುಗಳಿಂದ ಘರ್ಷಣೆ ನಡೆಸಿ,  ಕಲ್ಲು ತೂರಾಟ ನಡೆಸಿದ್ದರು. ಇದರಿಂದಾಗಿ ಎರಡೂ ಕಡೆಯ ಸೈನಿಕರು ಗಾಯಗೊಂಡಿದ್ದರು.


ಓದಿ: ಮೋದಿ ಆತ್ಮನಿರ್ಭರತೆ V/S ಸ್ವದೇಶಿ, ಸ್ವಾವಲಂಬನೆ, ಸ್ವಾಭಿಮಾನ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿಯನ್ನು ಟೀಕಿಸಿದ್ದಕ್ಕೆ ಸ್ವಪಕ್ಷದ ನಾಯಕನ ಬಂಧನ: ಮೌನಕ್ಕೆ ಶರಣಾದ ಬಿಜೆಪಿ ಅಲ್ಪಸಂಖ್ಯಾತ ಘಟಕದ ನಾಯಕರು

0
ರಾಜಸ್ಥಾನದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಉಸ್ಮಾನ್‌ ಘನಿ ಬಂಧನದ ಬಗ್ಗೆ ಮಾತನಾಡಲು ಸ್ವಪಕ್ಷದ ಅಲ್ಪಸಂಖ್ಯಾತ ಘಟಕದ ನಾಯಕರು ಮುಂದೆ ಬರುತ್ತಿಲ್ಲ. 'ಪ್ರಜಾಪ್ರಭುತ್ವ' ದೇಶದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವುದು ಅಪರಾಧವಲ್ಲ ಎಂದು ತಿಳಿದಿದ್ದರೂ ಈ...