ಕಳೆದ ಮೂರು ವಾರಗಳಿಂದ ಲಡಾಖ್‌ನ ಪೂರ್ವ ಭಾಗದಲ್ಲಿ ಭಾರತ-ಚೀನಾ ಗಡಿ ವಿವಾದ ತಾರಕ್ಕಕ್ಕೇರಿದೆ. ಇದರ ಹಿನ್ನೆಲೆಯಲ್ಲಿ ಇಸ್ರೇಲ್, ರಷ್ಯಾ, ಅಮೆರಿಕ ಮತ್ತು ಜಪಾನ್ ದೇಶಗಳ ಮುಖ್ಯಸ್ಥರು ಭಾರತದ ಪರವಾಗಿ ನಿಂತಿದ್ದಾರೆ ಎಂದು ಮಹೇಶ್ ವಿಕ್ರಮ್ ಹೆಗ್ಡೆ ಅವರ ಪೋಸ್ಟ್‌ಕಾರ್ಡ್ ನ್ಯೂಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಒಂದನ್ನು ಹರಿಯಬಿಟ್ಟಿದ್ದಾರೆ.(ಆರ್ಕೈವ್).
ಈ ಪೋಸ್ಟರನ್ನು ಈ ವರೆಗೆ 850 ಕ್ಕಿಂತಲೂ ಹೆಚ್ಚು ಜನರು ಹಂಚಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಜಪಾನ್ ಪ್ರಧಾನಿ ಶಿಂಜೊ ಅಬೆ ಮುಂತಾದವರು, ಒಂದು ವೇಳೆ ಚೀನಾ ಭಾರತದ ಮೇಲೆ ಎರಗಿದರೆ ಚೀನಾದ ಕತೆ ಮುಗಿದಂತೆಯೆ, ನಾವು ಭಾರತದ ಜೊತೆ ಇದ್ದೇವೆ ಎಂದು ಹೇಳಿದ್ದಾರೆ ಎಂದು ಸೂಚಿಸಲಾಗಿತ್ತು.

ಫ್ಯಾಕ್ಟ್-ಚೆಕ್
ವಾಸ್ತವವಾಗಿ, ಅಮೇರಿಕಾ ಮತ್ತು ರಷ್ಯಾದೇಶಗಳು ಭಾರತ ಮತ್ತು ಚೀನಾ ನಡುವಿನ ನಿಲುವಿನ ಬಗ್ಗೆ ಅಧಿಕೃತ ಹೇಳಿಕೆಗಳನ್ನು ನೀಡಿವೆ. ಆದರೆ ಪೋಸ್ಟರಿನಲ್ಲಿ ಉಲ್ಲೇಖಿಸಿದ ರೀತಿಯಲ್ಲಿ ಯಾವ ನಾಯಕನೂ ಭಾರತದ ಪರವಾಗಿ ಹೇಳಿಲ್ಲ.
ಮೇ 27 ರಂದು ಅಮೆರಿಕಾ ಅಧ್ಯಕ್ಷ ಟ್ರಂಪ್ ಭಾರತ ಹಾಗೂ ಚೀನಾದ ನಡುವಿನ ವಿವಾದವನ್ನು ತಣಿಸಲು ಮಧ್ಯಸ್ಥಿಕೆ ವಹಿಸುತ್ತೇನೆ ಎಂದು ಹೇಳಿದ್ದರು.
We have informed both India and China that the United States is ready, willing and able to mediate or arbitrate their now raging border dispute. Thank you!
— Donald J. Trump (@realDonaldTrump) May 27, 2020
ಇದಲ್ಲದೆ ಮರುದಿನವೂ ಟ್ರಂಪ್ “ಭಾರತ-ಚೀನಾ ವಿವಾದದ ವಿಚಾರವಾಗಿ ಪ್ರಧಾನಿ ಮೋದಿ ಜೊತೆ ತಾನು ಮಾತನಾಡಿದ್ದೇನೆ, ಅವರು ’ಉತ್ತಮ ಮನಸ್ಥಿತಿಯಲ್ಲಿಲ್ಲ’ ” ಎಂದು ಹೇಳಿದ್ದರು.
ಆದರೆ ಭಾರತ ಸರ್ಕಾರ ಇದನ್ನು ತಳ್ಳಿ ಹಾಕಿ, ಈ ರೀತಿಯ ಯಾವುದೇ ಮಾತುಕತೆ ನಡೆದಿಲ್ಲ ಎಂದು ಹೇಳಿದ್ದರು.
ಜೂನ್ 1 ರಂದು ರಷ್ಯಾದ ರಾಯಭಾರಿ ರೋಮನ್ ಬಾಬುಷ್ಕಿ ಇಂಡಿಯಾ ಟುಡೆ ಜೊತೆ ಮಾತನಾಡುವಾಗ ಗಡಿ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅವರು, ಭಾರತ-ಚೀನಾಗಗಳು ವಿವಾದಗಳನ್ನು ತಣ್ಣಗಾಗಿಸಲು ಅವರ ನಡುವೆಯೇ ಕಾರ್ಯವಿಧಾನಗಳಿವೆ. ಈ ನಿಟ್ಟಿನಲ್ಲಿ ನಾವು ಅವರ ಪ್ರತಿ ಪ್ರಯತ್ನವನ್ನೂ ಪ್ರೋತ್ಸಾಹಿಸುತ್ತೇವೆ ಎಂದು ಹೇಳಿದ್ದರು.
ಇನ್ನು ಜಪಾನ್ ಮತ್ತು ಇಸ್ರೇಲ್ ಈ ವಿವಾದದ ಬಗ್ಗೆ ಯಾವುದೇ ಸಾರ್ವಜನಿಕ ಪ್ರತಿಕ್ರಿಯೆಗಳನ್ನು ನೀಡಿಲ್ಲ. ಅಷ್ಟೇ ಅಲ್ಲದೆ ಕಳೆದ ಕೆಲವು ವರ್ಷಗಳಿಂದ ಚೀನಾ ಹಾಗೂ ಇಸ್ರೇಲ್ ಜೊತೆಗಿನ ಸಂಬಂಧಗಳು ತುಂಬಾ ಚೆನ್ನಾಗಿದ್ದು, 2004 ರಿಂದ ನಿರಂತರವಾಗಿ ವ್ಯಾಪಾರವನ್ನು ಹೆಚ್ಚಿಸಿದೆ.

ಒಟ್ಟಿನಲ್ಲಿ ಭಾರತ-ಚೀನಾ ಗಡಿ ವಿವಾದದ ವಿಚಾರವಾಗಿ ಯಾವುದೇ ದೇಶಗಳು ಭಾರತವನ್ನು ಬೆಂಬಲಿಸಿಲ್ಲ.
ಓದಿ: ಭಾರತ-ಚೀನಾ ಗಡಿವಿವಾದ ಮಧ್ಯಸ್ಥಿಕೆ ವಹಿಸಲು ಸಿದ್ದ: ಡೊನಾಲ್ಡ್ ಟ್ರಂಪ್


