Homeಮುಖಪುಟಗರ್ಭಿಣಿ ಆನೆ ಹತ್ಯೆ: ಪ್ರಕಾಶ್ ಜಾವಡೇಕರ್ ಹೇಳಿಕೆಗೆ ಕಿಡಿಕಾರಿದ ನೆಟ್ಟಿಗರು

ಗರ್ಭಿಣಿ ಆನೆ ಹತ್ಯೆ: ಪ್ರಕಾಶ್ ಜಾವಡೇಕರ್ ಹೇಳಿಕೆಗೆ ಕಿಡಿಕಾರಿದ ನೆಟ್ಟಿಗರು

- Advertisement -
- Advertisement -

ಸ್ಫೋಟಕ ತುಂಬಿದ ಅನಾನಸ್ ಹಣ್ಣನ್ನು ತಿಂದು ಗರ್ಭಿಣಿ ಆನೆಯೊಂದು ಮೃತಪಟ್ಟಿರುವ ಘಟನೆಯನ್ನು ವಿರೋಧಿಸಿ “ಇದು ಭಾರತೀಯ ಸಂಸ್ಕೃತಿಯಲ್ಲ” ಎಂದು ಹೇಳಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್‌ ಹೇಳಿಕೆಗೆ ಸಾಮಾಜಿಕ ಜಾಲತಾಣಿಗರು ಕಿಡಿಕಾರಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಹೆದ್ದಾರಿಯಲ್ಲಿ ಕಷ್ಟಪಟ್ಟು ನಡೆದ ಗರ್ಭಿಣಿ ಮಹಿಳೆಯರಿಗೂ ಇದೇ ಅನುಕಂಪ ತೋರಿಸಿ ಎಂದು‌ ಜಾವಡೇಕರ್ ಅವರಿಗೆ ನೆಟ್ಟಿಗರು ಸವಾಲು ಹಾಕಿದ್ದಾರೆ.

ಕಳೆದ ಬುಧವಾರ ಕೇರಳದ ಪಾಲಕ್ಕಾಡ್‌ನ ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನದ ಬಳಿಯ ಹಳ್ಳಿಯೊಂದಕ್ಕೆ ಗರ್ಭಿಣಿ ಕಾಡು ಆನೆಯೊಂದು ದಾರಿ ತಪ್ಪಿ ಬಂದಿದೆ. ಪಟಾಕಿ ತುಂಬಿದ ಅನಾನಸ್ ತಿಂದು ಆನೆಯೂ ಸಾವನ್ನಪ್ಪಿದೆ. ಈ ಘಟನೆಗೆ ಭಾರತದಾದ್ಯಂತ ಅನುಕಂಪದ ಅಲೆಯೇ ಸೃಷ್ಟಿಯಾಗಿದ್ದು ಹಲವಾರು ಜನರು ಇದಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಇಂದು ಕೇಂದ್ರ ಪರಿಸರ ಮತ್ತು ವನ್ಯ ಸಂರಕ್ಷಣೆ ಖಾತೆ ಸಚಿವರು ಟ್ವೀಟ್ ಮಾಡಿ “ಪಟಾಕಿಗಳನ್ನು ಇಟ್ಟು ಕೊಲ್ಲುವುದು ಭಾರತೀಯ ಸಂಸ್ಕೃತಿಯಲ್ಲ, ಕೇರಳದ ಮಲಪ್ಪುರಂನ ಆನೆ ಹತ್ಯೆಯ ಬಗ್ಗೆ ಕೇಂದ್ರ ಸರ್ಕಾರ ಬಹಳ ಗಂಭೀರವಾಗಿ ಗಮನಿಸಿದೆ. ಸರಿಯಾಗಿ ತನಿಖೆ ನಡೆಸಲು ಮತ್ತು ಅಪರಾಧಿಗಳನ್ನು ಬಂಧಿಸಲಾಗುವುದು” ಎಂದು ಹೇಳಿದ್ದಾರೆ. ಆದರೆ ಸಚಿವರ ಹೇಳಿಕೆಯಲ್ಲಿ ನಡೆದ ಸ್ಥಳವೂ ಮಲಪ್ಪುರಂ ಎಂದು ತಪ್ಪಾಗಿ ಸೂಚಿಸಲಾಗಿದೆ.

ಸಚಿವರ ಹೇಳಿಕೆಯಲ್ಲಿರುವ ದ್ವಂದ್ವತೆಯನ್ನು ಎತ್ತಿ ತೋರಿಸಿರುವ ಜಾಲತಾಣಿಗರು ಅವರ ವಿರುದ್ದ ಕಿಡಿ ಕಾರಿದ್ದಾರೆ. ಈ ಬಗ್ಗೆ ಬಿಹಾರದಲ್ಲಿ 200 ಕ್ಕೂ ಹೆಚ್ಚಿನ ನೀಲ್ಗಾಯ್‌ಗಳನ್ನು ಕೇಂದ್ರದ ಪರಿಸರ ಸಚಿವಾಲಯದ ಅನುಮತಿಯೊಂದಿಗೆ ಗುಂಡಿಟ್ಟು ಕೊಲ್ಲಲಾಗಿತ್ತು, ಹಾಗೂ ಇದನ್ನು ಪರಿಸರ ಸಚಿವ ಜಾವಡೇಕರ್‌ ಸಮರ್ತಿಸಿಕೊಂಡಿದ್ದರು ಎಂದು ಆಲ್ಟ್ ನ್ಯೂಸ್ ವರದಿಗಾರ ಮೊಹಮ್ಮದ್ ಝುಬೈರ್‌ ನೆನಪಿಸಿ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್‌ನ ಬಿಸ್ಮಯ ಮಹಾಪಾತ್ರ, “ಭಾರತೀಯ ಸಂಸ್ಕೃತಿಯ ಬಗ್ಗೆ ಭಾರೀ ದೊಡ್ಡ ಮಾತು, ಏನು ಇದು ಭಾರತೀಯ ಸಂಸ್ಕೃತಿಯೇ” ಎಂದು ದೆಹಲಿ ಗಲಭೆಯಲ್ಲಿ ನಡೆದ ಹಿಂಸಾಚಾರದ ಚಿತ್ರವನ್ನು ಹಾಕಿದ್ದಾರೆ.

ಡೆರಿಲ್ ಎಂಬರವು, ಆತ್ಮೀಯ ಪ್ರಕಾಶ್ ಜಿ, ಇದು ತುಂಬಾ ಚೆನ್ನಾಗಿದೆ. ಹಾಗೆಯೇ ಕೇಂದ್ರ ಸರ್ಕಾರ ಇದೇ ಉತ್ಸಾಹವನ್ನು ಶ್ರಮಿಕ ರೈಲುಗಳಲ್ಲಿ ಸತ್ತ ಮನುಷ್ಯ ಜೀವಗಳ ಮೇಲೆಯೂ ತೋರಿಸಲಿ ಎಂದು ಹೇಳಿದ್ದಾರೆ.

ಆನೆ ಹತ್ಯೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಈ ಕುರಿತು ಎಸ್‌ಐಟಿಯನ್ನು ರಚಿಸಲಾಗಿದೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್‌ ಸಲ್ಲಿಸಲಾಗಿದೆಯಾದರೂ. ಈವರೆಗೆ ಯಾರನ್ನೂ ಬಂಧಿಸಿಲ್ಲ.


ಓದಿ: ರೈಲುಗಳಲ್ಲಿ ವಲಸೆ ಕಾರ್ಮಿಕರ ಸಾವು ಸಣ್ಣ ಘಟನೆ: ಬಂಗಾಳ BJP ಅಧ್ಯಕ್ಷ ದಿಲೀಪ್ ಘೋಷ್


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚರ್ಚ್‌ಗಳಲ್ಲಿ ‘ದಿ ಕೇರಳ ಸ್ಟೋರಿ’ ಪ್ರದರ್ಶನ: ಕೋಮು ಅಜೆಂಡಾ ಬಗ್ಗೆ ಎಚ್ಚರಿಸಿದ ತಲಶ್ಶೇರಿ ಬಿಷಪ್

0
ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕೇರಳದ ಕೆಲ ಚರ್ಚ್‌ಗಳಲ್ಲಿ ವಿವಾದಿತ 'ದಿ ಕೇರಳ ಸ್ಟೋರಿ' ಸಿನಿಮಾ ಪ್ರದರ್ಶನ ಮಾಡಲಾಗಿತ್ತು. ಮುಸ್ಲಿಮರ ಬಗ್ಗೆ ಸುಳ್ಳು ಪ್ರತಿಪಾದಿತ ಈ ಸಿನಿಮಾ ಪ್ರದರ್ಶನದ ಮೂಲಕ ಮುಸ್ಲಿಮರ ಬಗ್ಗೆ ಕ್ರಿಶ್ಚಿಯನ್ನರಲ್ಲಿ...