Homeಅಂತರಾಷ್ಟ್ರೀಯಎಚ್-1ಬಿ ವೀಸಾಗಳಿಗೆ ಹೊಸ ನಿರ್ಬಂಧಗಳನ್ನು ವಿಧಿಸಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಎಚ್-1ಬಿ ವೀಸಾಗಳಿಗೆ ಹೊಸ ನಿರ್ಬಂಧಗಳನ್ನು ವಿಧಿಸಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

- Advertisement -
- Advertisement -

ವಿವಿಧ ಕೆಲಸಗಳ ವೀಸಾಗಳಿಗೆ ಹೊಸ ನಿರ್ಬಂಧಗಳನ್ನು ಪ್ರಕಟಿಸುವುದಾಗಿ ಟ್ರಂಪ್ ಫಾಕ್ಸ್ ನ್ಯೂಸ್ ಸಂದರ್ಶನದಲ್ಲಿ ತಿಳಿಸಿದ್ದಾರೆ. ಈ ಯೋಜನೆಯು ಈಗಾಗಲೇ ಅಮೇರಿಕಾದಲ್ಲಿರುವ ಕೆಲವು ಕಾರ್ಮಿಕರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅವರು ಹೇಳಿದ್ದಾರೆ.

ಉದ್ಯೋಗ ಆಧಾರಿತ ವೀಸಾಗಳನ್ನು ನಿರ್ಬಂಧಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಈ ಯೋಜನೆಯಿಂದ ತಂತ್ರಜ್ಞಾನ, ಹಣಕಾಸು ಮತ್ತು ಆತಿಥ್ಯ ಕೈಗಾರಿಕೆಗಳಲ್ಲಿ ಕೆಲಸ ಮಾಡಲು ಬಯಸುವ ಸುಮಾರು 240,000 ಜನರ ಮೇಲೆ ಪರಿಣಾಮ ಬೀರಬಹುದು ಎಂದು ಅಂದಾಜಿಲಾಗಿದೆ.

“ಕೆಲವು ಸಂದರ್ಭಗಳಲ್ಲಿ ಇಂತಹ ಹೊರಗಿಡುವಿಕೆ ಅವಶ್ಯಕವಾಗಿದ್ದು, ದೊಡ್ಡ ಉದ್ಯಮಗಳಿಗೆ ಇದು ಅಗತ್ಯವಾಗಿದೆ, ಅಲ್ಲಿವ ಕೆಲವು ಜನರು ದೀರ್ಘಕಾಲದದಿಂದ ಬರುತ್ತಿದ್ದಾರೆ” ಎಂದು ಟ್ರಂಪ್ ಹೇಳಿದರು.

ಒಂದು ಸಾಧ್ಯತೆಯ ಪ್ರಕಾರ ಎಚ್ -1 ಬಿ ವೀಸಾ ವಿಭಾಗಗಳಲ್ಲಿ 180 ದಿನಗಳವರೆಗೆ ಜನರು ಅಮರಿಕಾಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸುತ್ತದೆ ಎಂದು ಬ್ಲೂಮ್‌ಬರ್ಗ್ ನ್ಯೂಸ್ ಜೂನ್ 12 ರಂದು ವರದಿ ಮಾಡಿದೆ. ಆ ವೀಸಾಗಳನ್ನು ಮಂಜೂರು ಮಾಡಿದೆ. ಆದರೆ ದೇಶದ ಹೊರಗೆ ಉಳಿದಿರುವ ಕಾರ್ಮಿಕರಿಗೆ ಆದೇಶದ ಅವಧಿ ಮುಗಿಯುವವರೆಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ.

ಈ ಕ್ರಮದಿಂದಾಗಿ ನೂರಾರು ಕಂಪನಿಗಳು ಹಾಗೂ ಸಾವಿರಾರು ಜನರ ಮೇಲೆ ಪರಿಣಾಮ ಬೀರುತ್ತದೆ, 2019 ರ ಆರ್ಥಿಕ ವರ್ಷದಲ್ಲಿ, ಕಂಪನಿಯೊಂದಿಗೆ ಆರಂಭಿಕ ಉದ್ಯೋಗವನ್ನು ಪ್ರಾರಂಭಿಸುವ ಸುಮಾರು 133,000 ಕಾರ್ಮಿಕರಿಗೆ ಎಚ್ -1 ಬಿ ವೀಸಾವನ್ನು ನೀಡಲಾಗಿತ್ತು. ಆರಂಭಿಕ ಅರ್ಜಿಗಳಲ್ಲಿ 12,000 ಕ್ಕೂ ಹೆಚ್ಚು ಜನರಿಗೆ ಎಲ್ -1 ವೀಸಾಗಳನ್ನು ನೀಡಲಾಗಿತ್ತು ಅಲ್ಲದೆ 98,000 ಕ್ಕೂ ಹೆಚ್ಚು ಜನರಿಗೆ ಎಚ್ -2 ಬಿ ವೀಸಾಗಳನ್ನು ನೀಡಲಾಗಿತ್ತು.

ಟ್ರಂಪ್ ಹೇಳಿರುವ ಹೊರಗಿಡುವಿಕೆಯನ್ನು ಹೊರತುಪಡಿಸಿದರೂ, ಯೋಜನೆಯಿಂದ ಈ ಮೂರು ಕೆಲಸದ ವೀಸಾ ವಿಭಾಗಗಳ ಆಧಾರದ ಮೇಲೆ 240,000 ಕ್ಕೂ ಹೆಚ್ಚು ಅರ್ಜಿದಾರರ ಮೇಲೆ ಪರಿಣಾಮ ಬೀರಬಹುದು.

ಕೊರೊನಾ ವೈರಸ್ ಸಾಂಕ್ರಾಮಿಕದ ಉತ್ತುಂಗದಲ್ಲಿ ಟ್ರಂಪ್ “ಅಮೆರಿಕಾಕ್ಕೆ ವಲಸೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು” ಯೋಜಿಸಿದ್ದಾರೆ ಎಂದು ಯುಎಸ್ ಚೇಂಬರ್ ಆಫ್ ಕಾಮರ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಉದ್ಯಮ ಮಂಡಳಿಯಂತಹ ಕೈಗಾರಿಕಾ ಗುಂಪುಗಳು ಟ್ರಂ‌ಪ್‌ಗೆ ಪತ್ರಗಳನ್ನು ಬರೆದಿದ್ದು, ಈ ನಿರ್ಬಂಧಗಳು ವ್ಯವಹಾರವನ್ನು ಹಾಗೂ ಬೆಳವಣಿಗೆಗೆ ಅಡ್ಡಿಪಡಿಸುತ್ತದೆ ಎಂದು ಹೇಳಿದ್ದರು.

ಕಳೆದ ಕೆಲವು ವರ್ಷಗಳಲ್ಲಿ, ಟ್ರಂಪ್ ಆಡಳಿತವು ಎಚ್ -1ಬಿ ವೀಸಾ ಕಾರ್ಯಕ್ರಮವನ್ನು ಬಿಗಿಗೊಳಿಸಲು ಮುಂದಾಗಿದ್ದು, ಅರ್ಜಿಗಳಿಗೆ ಅನುಮೋದನೆ ದರ ಕಡಿಮೆಯಾಗಿದೆ. ತಂತ್ರಜ್ಞಾನ ಉದ್ಯಮವು ವಿಶೇಷವಾಗಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ವಿದೇಶಿ ಪ್ರತಿಭೆಗಳನ್ನು ನೇಮಿಸಿಕೊಳ್ಳಲು ಎಚ್ -1ಬಿ ವೀಸಾಗಳನ್ನು ಅವಲಂಬಿಸಿದೆ.


ಓದಿ: ಡೊನಾಲ್ಡ್‌ ಟ್ರಂಪ್‌ ಜಾಹೀರಾತುಗಳನ್ನು ನಿಷೇಧಿಸಿದ ಫೇಸ್‌ಬುಕ್


ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...