Homeಮುಖಪುಟಬೋರ್‌ವೆಲ್ ಕೊರೆಸಿದ್ದಕ್ಕೆ ದಲಿತನ ಮೇಲೆ ಹಲ್ಲೆ: ಆರೋಪಿಗಳ ಬೆಂಬಲಕ್ಕೆ ನಿಂತ ರಾಜಕಾರಣಿ?

ಬೋರ್‌ವೆಲ್ ಕೊರೆಸಿದ್ದಕ್ಕೆ ದಲಿತನ ಮೇಲೆ ಹಲ್ಲೆ: ಆರೋಪಿಗಳ ಬೆಂಬಲಕ್ಕೆ ನಿಂತ ರಾಜಕಾರಣಿ?

- Advertisement -
- Advertisement -

ಬೋರ್‌ವೆಲ್ ಕೊರೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ತಿಪ್ಪಾಪುರ ಗ್ರಾಮದ ದಲಿತ ವ್ಯಕ್ತಿ ಹನುಮಂತಪ್ಪ ಮೇಲೆ ಸವರ್ಣೀಯರ ಕುಟುಂಬವೊಂದು ಹಲ್ಲೆ ನಡೆಸಿರುವ ಪ್ರಕರಣ ಹೊಸ ತಿರುವುದು ಪಡೆದುಕೊಂಡಿದೆ. ದೌರ್ಜನ್ಯಕ್ಕೆ ಒಳಗಾದ ಕುಟುಂಬದ ರಕ್ಷಣೆಗೆ ಬರಬೇಕಿದ್ದ ಪೊಲೀಸರು ಆರೋಪಿಗಳನ್ನೇ ರಕ್ಷಿಸುವ ಯತ್ನ ನಡೆಸುತ್ತಿದ್ದಾರೆ. ಹಲ್ಲೆಗೊಳಗಾದ ಹನುಮಂತಪ್ಪನ ಇಬ್ಬರು ಮಕ್ಕಳನ್ನೂ ಬಂಧಿಸಿದ್ದಾರೆ. ಜಿಲ್ಲೆಯ ಪ್ರಬಲ ರಾಜಕಾರಣಿಯೊಬ್ಬರು ಆರೋಪಿಗಳ ಬೆಂಬಲಕ್ಕೆ ನಿಂತಿರುವುದೇ ಇದಕ್ಕೆ ಕಾರಣ ಎಂಬ ಮಾತುಗಳು ಕೇಳಿಬಂದಿವೆ.

ತುಮಕೂರು ಜಿಲ್ಲೆ ಮಧುಗಿರಿಯ ತಿಪ್ಪಾಪುರದ ದಲಿತ ವ್ಯಕ್ತಿ ಹನುಮಂತಪ್ಪ ತನ್ನ ಜಮೀನಿನಲ್ಲಿ ಬೋರ್‌ವೆಲ್ ಕೊರೆಸಿದರು. ನೀರು ಚನ್ನಾಗಿಯೇ ಸಿಕ್ಕಿತ್ತು. ಇದಾದ ಕೆಲವು ದಿನಗಳ ನಂತರ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶ್ವತ್ಥಪ್ಪ ಕೂಡ ಅದೇ ಬೋರ್‌ವೆಲ್‌ಗೆ ಸಮಾನಾಂತರವಾಗಿ ಪಕ್ಕದ ತನ್ನ ಜಮೀನಿನಲ್ಲಿ ಬೋರ್‌ವೆಲ್ ಕೊರೆಸಿದರು. ಆದರೆ ನಿರೀಕ್ಷೆಯಷ್ಟು ನೀರು ಸಿಗಲಿಲ್ಲ. ತನಗೆ ನೀರು ಸಿಗದಿದ್ದುದ್ದಕ್ಕೆ ಹನುಮಂತಪ್ಪನೇ ಕಾರಣ ಎಂದು ಗ್ರಾ.ಪಂ ಅಧ್ಯಕ್ಷ ಅಶ್ವತ್ಥಪ್ಪ ಬಗೆದಿದ್ದಾರೆ.

ಇದನ್ನೇ ನೆಪಮಾಡಿಕೊಂಡು ಸವರ್ಣೀಯರಾದ ಆಶ್ವತ್ಥಪ್ಪ ಮತ್ತು ಆತನ ಸೋದರ ನರಸಿಂಹಮೂರ್ತಿ ಜಮೀನಿನಿಂದ ಮನೆಗೆ ಮರಳುತ್ತಿದ್ದ ದಲಿತ ವ್ಯಕ್ತಿ ಹನುಮಂತಪ್ಪ ಮೇಲೆ ದಾಳಿ ನಡೆಸಿದ್ದರು. ನುಮಂತಪ್ಪರ ಕೈ ಮುರಿದು ಹಾಕಿದ್ದರು. ಈ ಕುರಿತು ಹನುಮಂತಪ್ಪ ಪುತ್ರ, ತಮ್ಮ ತಂದೆಯನ್ನು ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ದೂರು ನೀಡಿದ್ದರು.

ಮಧುಗಿರಿ ಪೊಲೀಸರು ಆರಂಭದಲ್ಲಿ ದಲಿತ ದೌರ್ಜನ್ಯ ತಡೆ ಕಾಯ್ದೆ ಹಿಂದೇಟು ಹಾಕಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಯಿಂದ ಒತ್ತಡ ಬಂದ ಮೇಲೆ ಅನಿವಾರ್ಯವಾಗಿ ಸವರ್ಣೀಯರಾದ ಅಶ್ವತ್ಥಪ್ಪ ಮತ್ತು ನರಸಿಂಹಮೂರ್ತಿ ಮೇಲೆ ಎಫ್.ಐ.ಆರ್ ದಾಖಲಿಸಲಾಯಿತು. ತದನಂತರ ಹನುಮಂತಪ್ಪ ಮತ್ತು ಅವರ ಪುತ್ರರ ವಿರುದ್ಧ ಕೌಂಟರ್ ಎಫ್ಐಆರ್ ದಾಖಲಿಸಲಾಗಿದೆ!

ದಲಿತರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣದಲ್ಲಿ ಕೌಂಟರ್ ಎಫ್ಐಆರ್ ದಾಖಲಿಸಲು ಅವಕಾಶ ಇರಲಿಲ್ಲ. ತುಮಕೂರಿನ ಪ್ರಬಲ ರಾಜಕಾರಣಿ ಕೆ.ಎನ್‌ ರಾಜಣ್ಣನವರು ಪೊಲೀಸರ ಮೇಲೆ ಒತ್ತಡ ಹಾಕಿ ದೌರ್ಜನ್ಯಕ್ಕೆ ಒಳಗಾದವರ ವಿರುದ್ಧವೇ ದೂರು ದಾಖಲಿಸುವಂತೆ ಮಾಡಿದ್ದಾರೆ ಎಂದು ದಲಿತ ಸಂಘಟನೆಗಳು ಆರೋಪಿಸಿವೆ.

ದಲಿತ ವ್ಯಕ್ತಿ ಹನುಮಂತಪ್ಪ ಅವರ ಪುತ್ರರಾದ ಅಶೋಕ್ ಮತ್ತು ಮಂಜುನಾಥ್ ವಿರುದ್ಧ ಮಹಿಳೆಯ ಮೇಲೆ ಅತ್ಯಾಚಾರ ಯತ್ನ ಕೇಸು ಸೇರಿದಂತೆ ಆರು ಕೇಸುಗಳನ್ನು ಹಾಕಲಾಗಿದೆ. ತಮ್ಮ ತಂದೆಯನ್ನು ಹಲ್ಲೆಕೋರರಿಂದ ಬಿಡಿಸಿಕೊಳ್ಳಲು ಹೋಗಿದ್ದ ಮಂಜುನಾಥ್ ಮತ್ತು ಅಶೋಕ್ ನ್ಯಾಯಾಂಗ ಬಂಧನದಲ್ಲಿರಬೇಕಾಗಿದೆ.

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಜನಪರ ಚಿಂತಕ, ಮತ್ತು ಹೋರಾಟಗಾರ ಕೆ.ದೊರೈರಾಜ್, “ಅಟ್ರಾಸಿಟಿ ಕೇಸ್‌ನಲ್ಲಿ ಕೌಂಟರ್ ಕೇಸು ಹಾಕಲು ಬರುವುದಿಲ್ಲ. ಆದರೆ ದಲಿತರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಕೇಸನ್ನು ದುರ್ಬಲಗೊಳಿಸುವ ಉದ್ದೇಶದಿಂದ ಕೌಂಟರ್ ಕೇಸ್ ದಾಖಲಿಸಿ ದೌರ್ಜನ್ಯಕ್ಕೊಳಗಾದವರನ್ನೇ ಜೈಲಿಗೆ ಕಳಿಸಿದ್ದಾರೆ. ಇದು ಪೊಲೀಸರು ಕಾನೂನಿನ ಮೂಲಕ ದೌರ್ಜನ್ಯ ನಡೆಸುವುದಾಗಿದೆ. ಇಂತಹ ಪ್ರಕರಣಗಳಲ್ಲಿ ಕೌಂಟರ್ ಕೇಸ್ ಹಾಕಲಿರುವ ನಿಯಮಾವಳಿಗಳನ್ನು ಪರಿಶೀಲಿಸುವಂತೆ ಎಸ್.ಸಿ ಎಸ್.ಟಿ ಕಮೀಷನ್ ಮತ್ತು ಮಾನವ ಹಕ್ಕುಗಳ ಆಯೋಗವನ್ನು ಒತ್ತಾಯಿಸುತ್ತೇನೆ” ಎಂದರು.

ಮಧುಗಿರಿಯಲ್ಲಿ ಸಭೆ ಸೇರಿದ ದಲಿತ ಸಂಘಟನೆಗಳ ಮುಖಂಡರು ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಹನುಮಂತಪ್ಪಗೆ ನ್ಯಾಯ ದೊರೆಯದ್ದರೆ ಹೋರಾಟ ಅನಿವಾರ್ಯ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಪೊಲೀಸರು ಕಾಣದ ಕೈಗಳ ಒತ್ತಡಕ್ಕೆ ಒಳಗಾಗಿ ಅಟ್ರಾಸಿಟಿ ಕೇಸನ್ನು ದುರ್ಬಲಗೊಳಿಸುವ ಯತ್ನ ನಡೆಯುತ್ತಿದೆ. ಇದು ಸರಿಯಲ್ಲ ಎಂದು ದಲಿತ ಮುಖಂಡ ಬಾಲು ದೂರವಾಣಿ ಮೂಲಕ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದ ವಿಡಿಯೋ ವರದಿ ನೋಡಿ. ಕೃಪೆ: ಬೆವರ ಹನಿ ಮೀಡಿಯಾ

ದಲಿತ ಸಂಘಟನೆಗಳ ಕಣ್ಣೊರೆಸುವ ಕಾರಣಕ್ಕೆ ಆರೋಪಿಗಳಾದ ಅಶ್ವತ್ಥಪ್ಪ ಮತ್ತು ನರಸಿಂಹಮೂರ್ತಿಯನ್ನು ಬಂಧಿಸಲಾಗಿದೆ. ಆರೋಪಿಗಳ ಬೆಂಬಲಕ್ಕೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ನಿಂತಿದ್ದಾರೆ. ಪೊಲೀಸರ ಮೇಲೆ ಕ್ರಮ ಕೈಗೊಳ್ಳದಂತೆ ಒತ್ತಡ ಹಾಕುತ್ತಿದ್ದಾರೆ. ದೌರ್ಜನ್ಯಕ್ಕೊಳಕಾದವರ ಪರ ನಿಲ್ಲಬೇಕಾದ ರಾಜಣ್ಣ ಆರೋಪಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.


ಇದನ್ನೂ ಓದಿ: ಕೊಳವೆ ಬಾವಿ ತೋಡಿಸಿದ್ದಕ್ಕೆ ದಲಿತ ವ್ಯಕ್ತಿಯ ಕೈ ಕಾಲು ಮುರಿದ ಗ್ರಾ.ಪಂ ಅಧ್ಯಕ್ಷ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರ ಪ್ರದೇಶ: ದಲಿತ ಬಾಲಕಿಯ ಸಜೀವ ದಹನ

0
ಬಯಲು ಶೌಚಾಲಯಕ್ಕೆ ತೆರಳಿದ್ದ 13 ವರ್ಷದ ದಲಿತ ಬಾಲಕಿಯನ್ನು ಸುಟ್ಟು ಹಾಕಿರುವ ಆಘಾತಕಾರಿ ಘಟನೆ ಬಿಜೆಪಿ ಆಡಳಿತದ ಉತ್ತರಪ್ರದೇಶದ ಹರಯಾ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದಿದೆ. ಬಲರಾಂಪುರ್ ಗ್ರಾಮದಲ್ಲಿ ಬಹಿರ್ದೆಸೆಗೆ ತೆರಳಿದ್ದ 13...