Homeಅಂತರಾಷ್ಟ್ರೀಯಪಾಕ್ ವಿಮಾನ ಅಪಘಾತಕ್ಕೆ ಪೈಲಟ್‌ಗಳೇ ಕಾರಣ: ಅವರು ಕೊರೊನಾ ಬಗ್ಗೆ ಚರ್ಚಿಸುತ್ತಿದ್ದರು!

ಪಾಕ್ ವಿಮಾನ ಅಪಘಾತಕ್ಕೆ ಪೈಲಟ್‌ಗಳೇ ಕಾರಣ: ಅವರು ಕೊರೊನಾ ಬಗ್ಗೆ ಚರ್ಚಿಸುತ್ತಿದ್ದರು!

- Advertisement -
- Advertisement -

ಕಳೆದ ತಿಂಗಳು ಪಾಕಿಸ್ತಾನದಲ್ಲಿ 97 ಜನರು ಸಾವನ್ನಪ್ಪಿದ ವಿಮಾನ ಅಪಘಾತಕ್ಕೆ ಮಾನವ ದೋಷವೇ ಕಾರಣವಾಗಿದೆ ಎಂದು ಇಂದು ಬಿಡುಗಡೆಯಾದ ದುರಂತದ ಆರಂಭಿಕ ವರದಿಯು ತಿಳಿಸಿದೆ.

ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ಲೈನ್ಸ್ (ಪಿಐಎ) ವಿಮಾನವು ಮೇ 22 ರಂದು ಕರಾಚಿ ವಿಮಾನ ನಿಲ್ದಾಣವನ್ನು ಸಮೀಪಿಸುತ್ತಿದ್ದಂತೆ ಎರಡೂ ಎಂಜಿನ್‌ಗಳು ವಿಫಲವಾದ ನಂತರ ಲಯ ತಪ್ಪಿ ಬಿದ್ದು ವಿಮಾನದಲ್ಲಿದ್ದ ಇಬ್ಬರನ್ನು ಹೊರತುಪಡಿಸಿ ಎಲ್ಲರೂ ಸಾವನ್ನಪ್ಪಿದರು.

“ಪೈಲಟ್ ಮತ್ತು ನಿಯಂತ್ರಕ ಪ್ರಮಾಣಿತ ನಿಯಮಗಳನ್ನು ಅನುಸರಿಸಲಿಲ್ಲ” ಎಂದು ದೇಶದ ವಾಯುಯಾನ ಸಚಿವ ಗುಲಾಮ್ ಸರ್ವಾರ್ ಖಾನ್ ಸಂಸತ್ತಿನಲ್ಲಿ ತಿಳಿಸಿದ್ದಾರೆ.

ಏರ್‌ಬಸ್ ಎ 320 ವಿಮಾನ ಇಳಿಯುತ್ತಿದ್ದಾಗ ಪೈಲಟ್‌ಗಳು ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಬಗ್ಗೆ ಚರ್ಚಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ.

“ಪೈಲಟ್ ಮತ್ತು ಸಹ-ಪೈಲಟ್ ಇಬ್ಬರೂ ಸಹ ಇಂಜಿನ್ ವಿಫಲವಾದುದ್ದನ್ನು ಗಮನಹರಿಸಲಿಲ್ಲ. ಅವರು ವಿಮಾನಯಾನದ ಉದ್ದಕ್ಕೂ ಕೊರೊನಾ ವೈರಸ್ ಬಗ್ಗೆ ಸಂಭಾಷಣೆ ನಡೆಸುತ್ತಿದ್ದರು” ಎಂದು ಖಾನ್ ಹೇಳಿದ್ದಾರೆ.

ಫ್ರೆಂಚ್ ಸರ್ಕಾರ ಮತ್ತು ವಾಯುಯಾನ ಉದ್ಯಮದ ಅಧಿಕಾರಿಗಳನ್ನು ಒಳಗೊಂಡ ಪಾಕಿಸ್ತಾನದ ತನಿಖಾ ತಂಡವು ಡೇಟಾ ಮತ್ತು ಧ್ವನಿ ರೆಕಾರ್ಡರ್‌ಗಳನ್ನು ವಿಶ್ಲೇಷಿಸಿ ವರದಿ ತಯಾರಿಸಿದೆ.

ವಿಮಾನ ಹಾರಾಟಕ್ಕೆ 100 ಪ್ರತಿಶತ ಸೂಕ್ತವಾಗಿತ್ತು, ಯಾವುದೇ ತಾಂತ್ರಿಕ ದೋಷವಿರಲಿಲ್ಲ ಎಂದು ಸಚಿವರು ಹೇಳಿದ್ದಾರೆ.

ಎರಡು ತಿಂಗಳ ಕೊರೊನಾ ವೈರಸ್ ಲಾಕ್‌ಡೌನ್ ನಂತರ ದೇಶೀಯ ವಾಣಿಜ್ಯ ವಿಮಾನಗಳು ಪುನರಾರಂಭಗೊಂಡ ಕೆಲವೇ ದಿನಗಳಲ್ಲಿ ಈ ಮಾರಕ ವಾಯುಯಾನ ಅಪಘಾತ ಸಂಭವಿಸಿತ್ತು. ಮುಸ್ಲಿಂ ರಜಾದಿನಗಳಾದ ಈದ್ ಅಲ್-ಫಿತರ್ ಅನ್ನು ಪ್ರೀತಿಪಾತ್ರರೊಡನೆ ಕಳೆಯಲು ಅನೇಕ ಪ್ರಯಾಣಿಕರು ತೆರಳುತ್ತಿದ್ದರು ಎಂದು ಹೇಳಲಾಗಿದೆ.


ಇದನ್ನೂ ಓದಿ: ಪಾನ್ ಮಸಾಲ ಬ್ಯಾನ್ ಮಾಡಲು PIL: PM ಕೇರ್ಸ್‌ಗೆ 10 ಕೋಟಿ ದಾನ ನೀಡಿದ್ದೇವೆ ಎಂದ ಕಂಪನಿ! 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...