Homeಕರೋನಾ ತಲ್ಲಣಬಡ ರೋಗಿಗಳ ಉಚಿತ ಚಿಕಿತ್ಸೆಗೆ ದಾಖಲೆಗಳನ್ನು ನಿರೀಕ್ಷಿಸಬೇಡಿ: ಬಾಂಬೆ ಹೈಕೋರ್ಟ್

ಬಡ ರೋಗಿಗಳ ಉಚಿತ ಚಿಕಿತ್ಸೆಗೆ ದಾಖಲೆಗಳನ್ನು ನಿರೀಕ್ಷಿಸಬೇಡಿ: ಬಾಂಬೆ ಹೈಕೋರ್ಟ್

- Advertisement -
- Advertisement -

ಆಸ್ಪತ್ರೆಗಳಿಗೆ ದಾಖಲಾಗುವ ಬಡ ಅಥವಾ ಸಾಮಾನ್ಯ ವಿಭಾಗದ ಕೊರೊನಾ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲು ದಾಖಲೆಗಳನ್ನು ನಿರೀಕ್ಷೆ ಮಾಡಬಾರದು ಎಂದು ಬಾಂಬೆ ಹೈಕೊರ್ಟ್ ಅಭಿಪ್ರಾಯಪಟ್ಟಿದೆ.

ಕೆ ಜೆ ಸೋಮಯ್ಯ ಆಸ್ಪತ್ರೆಯಿಂದ ಏಪ್ರಿಲ್ 11 ಮತ್ತು ಏಪ್ರಿಲ್ 28 ರ ನಡುವೆ ಕೊರೊನಾ ಚಿಕಿತ್ಸೆಗಾಗಿ 12.5 ಲಕ್ಷ ಶುಲ್ಕ ವಿಧಿಸಲಾಗಿದ್ದ ಬಾಂದ್ರಾದಲ್ಲಿನ ಕೊಳೆಗೇರಿ ಪುನರ್ವಸತಿ ಕಟ್ಟಡದ ಏಳು ನಿವಾಸಿಗಳು ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ಶುಕ್ರವಾರ ವಿಚಾರಣೆ ನಡೆಸುತ್ತಿತ್ತು.

ಬಿಲ್ಲು ಪಾವತಿಸಲು ವಿಫಲವಾದರೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸುವುದಿಲ್ಲ ಎಂದು ಹೆದರಿಸಿರುವುದರಿಂದ ಆಸ್ಪತ್ರೆಯೂ ಕೇಳಿದ್ದ 12.5 ಲಕ್ಷ ರುಪಾಯಿಗಳಲ್ಲಿ 10 ಲಕ್ಷ ರುಪಾಯಿಗಳನ್ನು ಸಾಲಮಾಡಿ ಪಾವತಿ ಮಾಡಿದ್ದರು ಎಂದು ಅರ್ಜಿದಾರರ ವಕೀಲರಾಗಿರುವ ವಿವೇಕ್ ಶುಕ್ಲ ಕೋರ್ಟ್‌ಗೆ ಮಾಹಿತಿ ನೀಡಿದರು. ಅದಕ್ಕಾಗಿ ನ್ಯಾಯಮೂರ್ತಿಗಳಾದ ರಮೇಶ್ ಧನುಕಾ ಮತ್ತು ಮಾಧವ್ ಜಮ್ದಾರ್ ಅವರ ನ್ಯಾಯಪೀಠವು 10 ಲಕ್ಷ ರುಪಾಯಿಯನ್ನು ನ್ಯಾಯಾಲಯದಲ್ಲಿ ಠೇವಣಿ ಇಡುವಂತೆ ಆಸ್ಪತ್ರೆಗೆ ನಿರ್ದೇಶಿಸಿತು.

ಮನವಿಯಲ್ಲಿ, ಬಳಕೆಯಾಗದ ಪಿಪಿಇ ಕಿಟ್‌ಗಳು ಹಾಗೂ ಸೇವೆಗಳಿಗೆ ಅರ್ಜಿದಾರರಿಗೆ ಶುಲ್ಕ ವಿಧಿಸಲಾಗಿದೆ ಎಂದು ಆರೋಪಿಸಲಾಗಿದೆ.

ಜೂನ್ 13 ರಂದು ನ್ಯಾಯಾಲಯವು ರಾಜ್ಯ ದತ್ತಿ ಆಯುಕ್ತರಿಗೆ ಆಸ್ಪತ್ರೆಯು ಬಡ ಮತ್ತು ಇತರ ರೋಗಿಗಳಿಗೆ 20% ಹಾಸಿಗೆಗಳನ್ನು ಕಾಯ್ದಿರಿಸಿದೆ ಮತ್ತು ಅವರಿಗೆ ಉಚಿತ ಅಥವಾ ಸಬ್ಸಿಡಿ ಚಿಕಿತ್ಸೆಯನ್ನು ನೀಡಿದೆಯೇ ಎಂದು ತನಿಖೆ ನಡೆಸುವಂತೆ ನಿರ್ದೇಶಿಸಿತ್ತು.

ಆಸ್ಪತ್ರೆಯು ಅಂತಹ ಹಾಸಿಗೆಗಳನ್ನು ಕಾಯ್ದಿರಿಸಿದ್ದರೂ, ಲಾಕ್‌ಡೌನ್‌ನಿಂದಾಗಿ ಕೇವಲ ಮೂರು ಬಡ ವ್ಯಕ್ತಿಗಳಿಗೆ ಮಾತ್ರ ಚಿಕಿತ್ಸೆ ನೀಡಿದೆ ಎಂದು ಕಳೆದ ವಾರ ಜಂಟಿ ದತ್ತಿ ಆಯುಕ್ತರು ನ್ಯಾಯಾಲಯಕ್ಕೆ ತಿಳಿಸಿದ್ದರು.

ಸಾಂಕ್ರಮಿಕದಂತಹ ಈ ಸಮಯದಲ್ಲಿ ಬಡ ರೋಗಿಗಳಿಗೆ ಮೀಸಲಿಟ್ಟಿದ್ದ 90 ಹಾಸಿಗೆಗೆಳಲ್ಲಿ ಕೇವಲ ಮೂವರು ಬಡ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಲಾಗಿದೆ ಎಂಬುವುದನ್ನು ಒಪ್ಪಲಾಗದು ಎಂದು ಶುಕ್ಲಾ ಹೇಳಿದ್ದಾರೆ.

ತೊಂದರೆಯಲ್ಲಿರುವ ಕೊರೊನಾ ರೋಗಿಗಳ ಆದಾಯ ಪ್ರಮಾಣಪತ್ರ ಮತ್ತು ದಾಖಲೆಗಳನ್ನು ನಿರೀಕ್ಷೆ ಮಾಡಬಾರದು ಎಂದು ಅವರು ವಾದಿಸಿದ್ದರು.


ಓದಿ: ಮುಂಬೈನ ಧಾರಾವಿ ಸ್ಲಂ ವೈರಸ್‌ ಅನ್ನು ಹಿಮ್ಮೆಟ್ಟಿಸಿದ್ದು ಹೀಗೆ.. : ಇದು ಉಳಿದವರಿಗೂ ಪಾಠ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...