Homeಅಂಕಣಗಳುಹಣ ಇರುವೆಡೆ ಮನುಷ್ಯರ ಗುಣ ಎಂಥದ್ದು? ಗೌರಿ ಲಂಕೇಶರ ಚಿಂತನಾರ್ಹ ಬರಹ

ಹಣ ಇರುವೆಡೆ ಮನುಷ್ಯರ ಗುಣ ಎಂಥದ್ದು? ಗೌರಿ ಲಂಕೇಶರ ಚಿಂತನಾರ್ಹ ಬರಹ

ಹೊಸ ಯೋಜನೆಗಳನ್ನು ಜಾರಿಗೆ ತರುವ ಹುಮ್ಮಸ್ಸಿನಲ್ಲಿದ್ದ ಅಜಯ್, ಐಶಾರಾಮಿ ಬದುಕಿನ ಕನಸ್ಸು ಕಾಣುತ್ತಿದ್ದ ಪ್ರೀತಿ, ತನ್ನ ಗಂಡ ನಲ್ಲೆಯೋರ್ವಳನ್ನು ಇಟ್ಟುಕೊಂಡಿದ್ದು ಗೊತ್ತಾಗಿರುವ ಸ್ವರ್ಣ ಎಲ್ಲರೂ ಸದಾನಂದನ ವಿಲ್‍ನಲ್ಲಿರುವ ಶರತ್ತುಗಳನ್ನು ಕೇಳಿ ದಂಗುಬಡಿದುಹೋಗುತ್ತಾರೆ.

- Advertisement -
- Advertisement -

ಶ್ರಮಜೀವಿಯಾದ ಸದಾನಂದ ಪಟೇಲ್ ಕಷ್ಟಪಟ್ಟು ದುಡಿದು ಕೋಟ್ಯಾಂತರ ರೂಪಾಯಿಗಳ ಆಸ್ತಿಯ ಮಾಲೀಕನಾಗಿದ್ದಾನೆ. ತನ್ನ ಸಾಧನೆ ಬಗ್ಗೆ ಆತನಿಗೆ ತುಂಬಾ ಹೆಮ್ಮೆ ಇದೆ. ಹಾಗೆಯೇ ಅಶಿಕ್ಷಿತಳಾದ ಹೆಂಡತಿ ಸ್ವರ್ಣಳ ಬಗ್ಗೆ, ಇನ್ನೂ ಉಂಡಾಡಿ ಗುಂಡನಂತಾಡುವ ಮಗ ಅಜಯ್ ಬಗ್ಗೆ ಮತ್ತು ಸೌಮ್ಯ ಸ್ವಭಾವದವಳಂತೆ ಕಂಡರೂ ಒಳಗೊಳಗೆ ಕುತಂತ್ರಿಯಾದ ಸೊಸೆ ಪ್ರೀತಿ ಬಗ್ಗೆ ಸದಾನಂದನಿಗೆ ಇನ್ನಿಲ್ಲದಷ್ಟು ಕೋಪ, ಅಸಹನೆ ಮತ್ತು ಸೇಡಿನ ಭಾವನೆ. ಈ ಮೂವರೂ ತನ್ನ ಮರಣದ ನಂತರ ತಾನು ಕಷ್ಟಪಟ್ಟು ದುಡಿದಿದ್ದ ಆಸ್ತಿಯನ್ನೆಲ್ಲ ಮಜಾ ಮಾಡುತ್ತಾ ಕರಗಿಸುತ್ತಾರೆ ಎಂಬ ಗುಮಾನಿ. ಅದಕ್ಕಿಂತ ಮುಖ್ಯವಾಗಿ ಇವರೆಲ್ಲರಿಂದಾಗಿ ತನ್ನದು ಎಂಬುದು ಯಾವುದೂ ಈ ಭೂಮಿಯ ಮೇಲೆ ಉಳಿದಿರುವುದಿಲ್ಲ ಎಂಬ ಜಿಗುಪ್ಸೆ.

ಈತನ ಹೆಸರು ಸದಾನಂದ ಎಂಬುದಾದರೂ ಈತ ಕೋಪಿಷ್ಟ. ಈತ ನಕ್ಕಿದ್ದನ್ನು ನೋಡಿದವರೇ ಇಲ್ಲ. ಇತರರ ಬಗ್ಗೆ ಅಸೂಕ್ಷ್ಮವಾಗಿ ವರ್ತಿಸುವ, ಸದಾ ತನ್ನ ಬಗ್ಗೆ ಮಾತ್ರ ಯೋಚಿಸುವ ಸದಾನಂದ ಆಫೀಸಿನಲ್ಲೂ, ಮನೆಯಲ್ಲೂ ಸರ್ವಾಧಿಕಾರಿ ಧೋರಣೆಯನ್ನು ಮೆರೆಯುವವನು. ಇದರಿಂದ ಬೇಸರವಾದರೂ ಸಂಪ್ರದಾಯಸ್ಥ ಗೃಹಿಣಿಯಾದ ಸ್ವರ್ಣ ಪ್ರತಿಭಟಿಸುವುದಿಲ್ಲ. ಆದರೆ ಅವರ ಮಗ ಅಜಯ್ ಹಾಗಲ್ಲ. ಕಾರಣವಿದ್ದರೂ, ಇರದಿದ್ದರೂ ತನ್ನ ಅಪ್ಪ ಸದಾನಂದ ತಾಳಿರುವ ನಿಲುವಿಗೆ ವಿರುದ್ಧವಾದ ನಿಲುವನ್ನು ತೆಗೆದುಕೊಳ್ಳುವುದು ಅಜಯ್‍ನ ಸ್ವಭಾವ. ಆ ಮೂಲಕವಾದರೂ ತನ್ನನ್ನು ಸದಾ ಅವಮಾನಿಸುವ ಅಪ್ಪನ ವಿರುದ್ಧ `ಕ್ರಾಂತಿ’ ಸಾಧಿಸಿದ್ದೇನೆಂಬ ಭಾವನೆ ಅವನಿಗೆ.

ಸದಾನಂದನ ಸೊಸೆ ಪ್ರೀತಿ ಮೇಲುನೋಟಕ್ಕೆ ತಗ್ಗಿಬಗ್ಗಿ ನಡೆಯುವ ಯುವತಿಯಂತೆ ಕಂಡರೂ ಆಕೆ ಧನಪಿಶಾಚಿ. ಮುಂದೊಂದು ದಿನ ಸದಾನಂದ ಸತ್ತು ಆತನ ಆಸ್ತಿಯೆಲ್ಲಾ ಅಜಯ್ ಪಾಲಿಗೆ ಬರುತ್ತೆ ಎಂಬ ಕಾರಣಕ್ಕೇ ಆ ಉಂಡಾಡಿಗುಂಡನನ್ನು ಮದುವೆ ಆಗಿರುವವಳು.

ಈ ಮೂವರಲ್ಲದೆ ಸದಾನಂದನ ಬದುಕಿನಲ್ಲಿ ಪ್ರಮುಖ ಪಾತ್ರವಹಿಸುತ್ತಿರುವವಳು ಮಧ್ಯವಯಸ್ಕಿನ ಮಹಿಳೆ ಕಿರಣ್ ಮೆಣಸಿನಕಾಯಿ. ಸದಾನಂದನ ಕಂಪನಿಯ ಬೋರ್ಡ್‍ನಲ್ಲಿ ಪ್ರಮುಖ ಸದಸ್ಯೆಯಾಗಿರುವ ಕಿರಣ್ ಸದಾನಂದನ ಪ್ರೇಯಸಿ ಕೂಡ ಹೌದು. ಬೇರೆಯವರ ಬದುಕನ್ನು ನಿಯಂತ್ರಿಸುವಲ್ಲಿ ಎತ್ತಿದ ಕೈಯಾದ ಸದಾನಂದ ತನ್ನ ಮತ್ತು ಕಿರಣ್ ನಡುವಿನ ಸಂಬಂಧದ ಬಗ್ಗೆ ಬೇರೆಯವರಿಗೆ ಸುಳಿವು ಸಿಗಕೂಡದೆಂದು ಆಕೆಗೆ ಕುಡುಕನೊಬ್ಬನೊಂದಿಗೆ ಮದುವೆ ಮಾಡಿರುತ್ತಾನೆ. ಹಾಗೆ ಮಾಡುವ ಮೂಲಕ ಆಕೆಗೆ ಸಮಾಜದಲ್ಲಿ ಸ್ಥಾನಮಾನ, ಆಕೆಯ ಗಂಡನಿಗೆ ದಿನನಿತ್ಯ ಗುಂಡು ಮತ್ತು ತನಗೆ ಓರ್ವ ಸುಂದರ ಮತ್ತು ದಕ್ಷ ನಲ್ಲೆ ಸಿಗುವಂತೆ ಏರ್ಪಾಡು ಮಾಡಿಕೊಂಡಿರುತ್ತಾನೆ.

ಗುಂಡು, ಸಿಗರೇಟು ಹವ್ಯಾಸಗಳನ್ನು ಹೊಂದಿರುವ ಸದಾನಂದ ಹೈ ಬಿಪಿ, ಡಯಾಬಿಟೀಸ್ ಮತ್ತು ಹೈ ಕೊಲೆಸ್ಟರಾಲ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ. ತಾನು ಬದುಕಿರುವಾಗ ತನ್ನ ಸುತ್ತಲಿನವರನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಿರುವ ಸದಾನಂದ ತಾನು ಸತ್ತ ಮೇಲೂ ಅವರೆಲ್ಲರ ಮೇಲೆ ನಿಯಂತ್ರಣ ಹೊಂದಿರುವುದು ಹೇಗೆ ಎಂದು ಯೋಚಿಸುತ್ತಾನೆ. ತನ್ನ ಅಪಾರ ಸಂಪತ್ತಿನಲ್ಲಿ ನಯಾಪೈಸೆಗೂ ತನ್ನ ಪತ್ನಿ ಸ್ವರ್ಣ, ಮಗ ಅಜಯ್, ಸೊಸೆ ಪ್ರೀತಿ ಮತ್ತು ಕೊನೆಗೆ ನಲ್ಲೆ ಕಿರಣ್ ಕೂಡ ಅರ್ಹರಲ್ಲ ಎಂದೇ ನಂಬಿರುವ ಸದಾನಂದ ಸಾಯುವ ಮುನ್ನ ಒಂದು ವಿಚಿತ್ರ ವಿಲ್ ಬರೆದಿಡುತ್ತಾನೆ.

ಆ ವಿಲ್‍ನಲ್ಲಿ ತನ್ನ ಸರ್ವ ಸಂಪತ್ತನ್ನು ಒಂದು ಟ್ರಸ್ಟ್‍ಗೆ ಬರೆದಿರುತ್ತಾನೆ. ಆ ಟ್ರಸ್ಟ್‍ಗೆ ಕಿರಣ್‍ಳನ್ನೇ ಟ್ರಸ್ಟೀ ಮಾಡಿರುತ್ತಾನೆ. ತನ್ನ 23ರ ಹರೆಯದ ಮಗ ಅಜಯ್‍ಗೆ 45 ವರ್ಷ ವಯಸ್ಸು ತುಂಬಿದಾಗ ಟ್ರಸ್ಟ್ ಅನ್ನು ಇಲ್ಲವಾಗಿಸಿ ತನ್ನ ಇಡೀ ಆಸ್ತಿ ಮಗನಿಗೆ ಬರಬೇಕು ಎಂದು ಆದೇಶಿಸಿರುತ್ತಾನೆ. ಆದರೆ ಅದಕ್ಕೂ ಹತ್ತಾರು ಶರತ್ತುಗಳನ್ನು ವಿಧಿಸಿರುತ್ತಾನೆ. ಪ್ರತಿದಿನ ಅಜಯ್ ಆಫೀಸಿಗೆ ಹಾಜರಾಗಬೇಕೆಂದೂ, ತನಗೆ ಇಷ್ಟವಾದ ಹಲ್ವಾವನ್ನು ಸಕ್ಕರೆ ಕಾಯಿಲೆಯಿಂದಾಗಿ ತಿನ್ನಲಾಗಿದ್ದರಿಂದ ಮಗನೂ ತನ್ನ ಜೀವಮಾನವಿಡೀ ಹಲ್ವಾ ತಿನ್ನಬಾರದೆಂದೂ ಶರತ್ತು ಹಾಕಿರುತ್ತಾನೆ. ಮನೆ ನಿರ್ವಹಣೆಗೆ, ಕೈಕಾಸಿಗೆ ತನ್ನ ಕುಟುಂಬದ ಮೂವರಿಗಲ್ಲದೆ ಟ್ರಸ್ಟಿ ಆಗಿರುವ ಕಿರಣ್‍ಳಿಗೂ ಮಾಸಾಶನವನ್ನು ನಿಗದಿ ಮಾಡಿರುತ್ತಾನೆ. ಹೀಗೆ ತನ್ನ ಸಮಾಧಿಯಿಂದಲೂ ತನ್ನ ಕುಟುಂಬದ ಮೇಲೆ ನಿಯಂತ್ರಣವನ್ನು ಸ್ಥಾಪಿಸಲು ಹವಣಿಸುವ ಸದಾನಂದ ತನ್ನ ನಲ್ಲೆ ಕಿರಣ್‍ಳನ್ನು ಸುಮ್ಮನೆ ಬಿಡುತ್ತಾನೆಯೇ? ಆಕೆ ಕೂಡ ತನ್ನ ಕುಡುಕ ಗಂಡನನ್ನು ತೊರೆದು ತನ್ನ ಮನೆಯಲ್ಲೇ ತನ್ನ ಸಂಸಾರದ ಸದಸ್ಯೆಯಂತೆ ವಾಸಿಸಬೇಕು ಎಂದು ಆದೇಶಿಸಿರುತ್ತಾನೆ. ತಾನು ವಿಧಿಸಿರುವ ಶರತ್ತುಗಳಲ್ಲಿ ಒಂದೇ ಒಂದನ್ನೂ ತನ್ನ ಕುಟುಂಬದ ಸದಸ್ಯರು ಪಾಲಿಸದಿದ್ದರೆ ತನ್ನ ಇಡೀ ಆಸ್ತಿಯನ್ನು ತಾನು ಪಟ್ಟಿ ಮಾಡಿರುವ ಸಂಘ ಸಂಸ್ಥೆಗಳಿಗೆ ದಾನ ಮಾಡಿ ತನ್ನ ಕುಟುಂಬಕ್ಕೆ ನಯಾಪೈಸೆ ಸಿಗಕೂಡದೆಂದು ಹೇಳಿರುತ್ತಾನೆ. ಆದರೆ ಈ ವಿಲ್‍ಅನ್ನು ಸದಾನಂದ ಗೌಪ್ಯವಾಗಿಟ್ಟಿರುತ್ತಾನೆ.

ಮಹೇಶ್ ದತ್ತಾನಿ

ಒಂದು ದಿನ ಸದಾನಂದ ಹೃದಯಘಾತದಿಂದ ಸತ್ತೇ ಹೋಗುತ್ತಾನೆ. ತಾನು ಬರೆದಿಟ್ಟಿರುವ ವಿಲ್‍ಗೆ ತನ್ನ ಕುಟುಂಬದ ಸದಸ್ಯರು ಹೇಗೆ ಪ್ರತಿಕ್ರಿಯಿಸುತ್ತಾರೆಂದು ನೋಡಲು ಆತನ ಆತ್ಮ ಅಲ್ಲೇ ಅವರೆಲ್ಲರ ಮಧ್ಯೆ ಸುಳಿದಾಡುತ್ತಿರುತ್ತದೆ. ಆದರೆ ಅವರು ಯಾರಿಗೂ ಆತನ ಆತ್ಮ ತಮ್ಮ ಮಧ್ಯೆ ಇರುವುದು ಗೊತ್ತಿರುವುದಿಲ್ಲ.

ಹೊಸ ಯೋಜನೆಗಳನ್ನು ಜಾರಿಗೆ ತರುವ ಹುಮ್ಮಸ್ಸಿನಲ್ಲಿದ್ದ ಅಜಯ್, ಐಶಾರಾಮಿ ಬದುಕಿನ ಕನಸ್ಸು ಕಾಣುತ್ತಿದ್ದ ಪ್ರೀತಿ, ತನ್ನ ಗಂಡ ನಲ್ಲೆಯೋರ್ವಳನ್ನು ಇಟ್ಟುಕೊಂಡಿದ್ದು ಗೊತ್ತಾಗಿರುವ ಸ್ವರ್ಣ ಎಲ್ಲರೂ ಸದಾನಂದನ ವಿಲ್‍ನಲ್ಲಿರುವ ಶರತ್ತುಗಳನ್ನು ಕೇಳಿ ದಂಗುಬಡಿದುಹೋಗುತ್ತಾರೆ. ಅವರು ಇಂತಹ ಪರಿಸ್ಥಿತಿಯಲ್ಲಿರುವಾಗಲೇ ಅವರೊಂದಿಗೆ ವಾಸಿಸಲು ಕಿರಣ್ ಬರುತ್ತಾಳೆ.

ಸದಾನಂದನ ವಿಲ್‍ನಿಂದಾಗಿ ಆತನ ಕುಟುಂಬದ ಸದಸ್ಯರ ಬದುಕೇ ಉಲ್ಟಾ ಪಲ್ಟಾ ಅಗಿದೆ. ಆದರೆ ವಿಧಿ ಇಲ್ಲ. ಆತನ ಕೋಟ್ಯಾಂತರ ರೂಪಾಯಿಗಳ ಆಸ್ತಿ ಬರಬೇಕೆಂದರೆ ಆತನ ಎಲ್ಲಾ ಶರತ್ತುಗಳನ್ನು ಪಾಲಿಸಬೇಕು. ಅಜಯ್ ಕೊನೆಗೂ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದನ್ನು ಕಲಿಯುತ್ತಾನೆ. ಆತನ ಹೆಂಡತಿ ಸ್ವರ್ಣ ಗೃಹಿಣಿಯಾಗಿ, ಹೆಂಡತಿಯಾಗಿ ತನ್ನ ಮಿತಿಗಳನ್ನು ಅರ್ಥಮಾಡಿಕೊಳ್ಳುತ್ತಾಳೆ. ಸೊಸೆ ಪ್ರೀತಿ ಕೂಡ ಬದುಕಿನಲ್ಲಿ ಹಣವೇ ಮುಖ್ಯವಲ್ಲ ಎಂದು ಮನಗಾಣುತ್ತಾಳೆ. ಇನ್ನು ಕಿರಣ್‍ಳಲ್ಲೂ ಬದಲಾವಣೆಗಳಾಗುತ್ತವೆ. ಸದಾನಂದ ಹೇಗೆ ತನ್ನನ್ನು ಮತ್ತು ತನ್ನ ಕುಟುಂಬದವರನ್ನು ಮರಣೋತ್ತರವೂ ನಿಯಂತ್ರಿಸುತ್ತಿದ್ದಾನೆ ಎಂದು ಗೊತ್ತಾಗುತ್ತದೆ. ಕೊನೆಗೆ ಅವರೆಲ್ಲ ಜೊತೆಗೂಡಿ ಸದಾನಂದನ ಕೀಲುಬೊಂಬೆಗಳಾಗಿ ಬದುಕುವುದನ್ನು ನಿಲ್ಲಿಸುವ ಮೂಲಕ ಆತನ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾನೆ.

-ಇದು ಯಾವುದೋ ಸಿನಿಮಾದ ಕತೆಯಲ್ಲ. ಬದಲಾಗಿ ನನ್ನ ಹಲವಾರು ವರ್ಷಗಳ ಸ್ನೇಹಿತನೂ, ಸಾಹಿತಿಯೂ ಆಗಿರುವ ಮಹೇಶ್ ದತ್ತಾನಿ ಬರೆದಿರುವ ಒಂದು ನಾಟಕದ ಕಥಾಸಾರಾಂಶ. ಇದನ್ನು ಒಂದು ಸೀರಿಯಸ್ ವಿಷಯದ ಸುತ್ತ ಹೆಣೆದಿದ್ದರೂ ಡೈಲಾಗ್‍ಗಳು ತುಂಬಾ ಮಜವಾಗಿದ್ದು ಇದೊಂದು ಕಾಮಿಡಿ ನಾಟಕವಾಗಿದೆ. ಈ ಇಂಗ್ಲಿಷ್ ನಾಟಕದ ಹೆಸರು `Where there is a will’. ಈಗ ಈ ನಾಟಕವು ಬೆಂಗಳೂರು ಮತ್ತು ಅಲಹಾಬಾದ್ ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಿದೆ.

ಆಗಸ್ಟ್ 14, 2013


ಇದನ್ನು ಓದಿ: ನೆರೆಯ ಕೇರಳ ಮಾದರಿ ಅನುಸರಿಸಲು ಸರ್ಕಾರ ಸಿದ್ದವಿಲ್ಲವೇಕೆ? : ಕುಮಾರಸ್ವಾಮಿ ಪ್ರಶ್ನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...