ಫೇಸ್‌ಬುಕ್‌ನ ಹಲವಾರು ಬಳಕೆದಾರರು ಭಾರಿ ಸಂಖ್ಯೆಯ ಜನರು ಬೀದಿಗಳಲ್ಲಿ ಮೆರವಣಿಗೆ ನಡೆಸುತ್ತಿರುವ 35 ಸೆಕೆಂಡುಗಳ ಕ್ಲಿಪ್ ಅನ್ನು ಪೋಸ್ಟ್ ಮಾಡಿ ’’ಒಲಿ ಸರ್ಕಾರದ ಚೀನಾ ಪರ ನಿಲುವಿನ ವಿರುದ್ಧ ನೇಪಾಳದಲ್ಲಿ ಈ ಬೃಹತ್ ಪ್ರತಿಭಟನೆ ನಡೆಯುತ್ತಿದ” ಎಂದು ಆರೋಪಿಸಿರುವ ಪೋಸ್ಟೊಂದು ವೈರಲ್ ಆಗಿದೆ.
ನೇಪಾಳವು ಇತ್ತೀಚೆಗೆ ಭಾರತೀಯ ಭೂಪ್ರದೇಶದಲ್ಲಿ ನಿರ್ಮಿಸಲಾದ ರಸ್ತೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು ಹಾಗೂ ಭಾರತೀಯ ಭೂಪ್ರದೇಶಗಳಿರುವ ಹೊಸ ರಾಜಕೀಯ ನಕ್ಷೆಯನ್ನು ಸಧನದಲ್ಲಿ ಅಂಗೀಕರಿಸಿ, ಆ ಭೂಪ್ರದೇಶ ತನ್ನದು ಹಾಗೂ ಅದನ್ನು ಭಾರತ ಬಿಟ್ಟು ಕೊಡಬೇಕು ಎಂದು ಆಗ್ರಹಿಸಿತ್ತು.
ವೈರಲಾದ ಈ ವಿಡಿಯೋ ಫೇಸ್‌ಬುಕ್‌ನಲ್ಲಿ ಹಲವಾರು ಬಳಕೆದಾರರು ಹಂಚಿಕೊಂಡಿದ್ದಾರೆ. ವೀಡಿಯೊದೊಂದಿಗೆ ಬಂಗಾಳಿ ಭಾಷೆಯ ಶೀರ್ಷಿಕೆ, “ಚೀನಾದ ಗುಲಾಮನಂತೆ ವರ್ತಿಸಿದ್ದಕ್ಕಾಗಿ ತಮ್ಮ ಪ್ರಧಾನ ಮಂತ್ರಿಯ ವಿರುದ್ಧ ದಂಗೆ ಮಾಡಲು ನೇಪಾಳದ ಜನರು ಪ್ರಾರಂಭಿಸಿದ್ದಾರೆ. ನಾವು ನೇಪಾಳದ ಜನರಿಗೆ ಧನ್ಯವಾದಗಳು ಹೇಳುತ್ತಿದ್ದೇವೆ. ಭಾರತ ಮತ್ತು ನೇಪಾಳ ನಡುವಿನ ಸಹೋದರ ಸಂಬಂಧ ದೀರ್ಘಕಾಲ ಚಿರಾಯುವಾಗಲಿ. ” ಎಂದು ಹೇಳುತ್ತದೆ.
চীনের হয়ে দালালি করার জন্য নেপালের বাসিন্দাদের বিদ্রোহ শুরু হয়েছে নেপালের প্রধানমন্ত্রীর বিরুদ্ধে. ধন্যবাদ বাদ জানাই নেপালের এই বাসিন্দাদের. ভারত ও নেপালের ভাই -ভাই এই সম্পর্ক অটুট থাকুক. ??????
Posted by Bidhan Kora on Tuesday, June 16, 2020
ಈ ಪ್ರತಿಭಟನೆಯೂ ಕಠ್ಮಂಡುವಿನಲ್ಲಿ ನಡೆದಿದೆಯಾದರೂ ಅದು ಅಲ್ಲಿನ ಸರ್ಕಾರ ಕೊರೊನಾವನ್ನು ನಿಭಾಯಿಸಲು ವಿಫಲವಾಗಿರುವುದಕ್ಕೆ ನಡೆದ ಪ್ರತಿಭಟನೆಯಾಗಿದೆ.
ಪೋಸ್ಟ್‌ಗಳ ಆರ್ಕೈವ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಇಷ್ಟೇ ಅಲ್ಲದೆ ಇನ್ನೂ ಹಲವಾರು ಇದೇ ಪೋಸ್ಟನ್ನು ಹಾಕಿದ್ದಾರೆ.
ಫ್ಯಾಕ್ಟ್‌ಚೆಕ್
ಇದೇ ವಿಡಿಯೊವನ್ನು ರಿವರ್ಸ್ ಹುಡುಕಾಟ ಮಾಡಿದಾಗ, ಈ ವಿಡಿಯೋ ಜೂನ್ 11 ರಂದು “ಕಿನಿಮಾ ಟಿವಿ” ಎಂಬ ಯೂಟ್ಯೂಬ್ ಚಾನೆಲ್ ಅಪ್‌ಲೋಡ್ ಮಾಡಿದೆ ಎಂದು ಕಂಡು ಬಂದಿದೆ. ವೀಡಿಯೊದ ಶೀರ್ಷಿಕೆಯಲ್ಲಿ “ಲಾಕ್‌ಡೌನ್ ವಿರುದ್ದ, ಕಠ್ಮಂಡುವಿನ ಜನತೆ ಬೀದಿಗಿಳಿದ್ದಾರೆ” ಎಂದಿದೆ.
ಅಷ್ಟೇ ಅಲ್ಲದೆ ಜೂನ್ 11 ರಂದು ನೇಪಾಳದ ಹಿರಿಯ ಪತ್ರಕರ್ತೆ ಮತ್ತು ನಿರೂಪಕಿ ಅನಿತಾ ಬಿಂದು ಕೂಡಾ ಟ್ವೀಟ್ ಮಾಡಿ ಅದೇ ಪ್ರತಿಭಟನೆಯ ಚಿತ್ರಗಳನ್ನು ಹಾಕಿ ಇದು ಸರ್ಕಾರದ ವಿರುದ್ಧ ನೇಪಾಳಿ ಯುವಕರ ದಂಗೆ ಎಂದು ಹೇಳಿದ್ದಾರೆ.
नेपाली युवालाइ अक्सर राजनीति लाग्दैन र सक्रिय राजनीतिमा रुचि देखाउँदैनन् पनि । तर जहिले जहिले नेपाली युवालाई राजनीति लागेको छ त्यतिखेर राजनीतिको कोर्स परिवर्तन भएको इतिहास साक्षी छ । प्राप्त उपलब्धिको रक्षा गर्दै समृद्ध नेपाल निर्माण गर्न आज सडकमा निस्किएका युवालाई बेलैमा सुनौ ! pic.twitter.com/xDjSTE7t2j
— Anita Bindu (@AnitaBindu) June 11, 2020
ಅಷ್ಟೇ ಅಲ್ಲದೆ ನೇಪಾಳದ ಹಲವಾರು ಸುದ್ದಿ ವೆಬ್‌ಸೈಟ್‌ಗಳು ಮತ್ತು ಯೂಟ್ಯೂಬ್ ಚಾನೆಲ್‌ಗಳಲ್ಲಿನ ಪ್ರತಿಭಟನಾ ಮೆರವಣಿಗೆಯ ಸುದ್ದಿ ವರದಿಗಳು ಬಂದಿದೆ. ವರದಿಯಲ್ಲಿ ಜೂನ್ ಆರಂಭದಲ್ಲಿ ಒಲಿ ಸರ್ಕಾರವು ಕೊರೊನಾ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ವಿಫಲವಾದ ಕಾರಣ ಈ ಪ್ರತಿಭಟನೆ ನಡೆದಿದೆ ಎಂದು ಖಚಿತಡಿಸುತ್ತದೆ.
ಈ ಸುದ್ದಿ ವರದಿಗಳ ಪ್ರಕಾರ, ಜೂನ್ 11 ರಂದು, ಪ್ರಧಾನ ಮಂತ್ರಿಯ ನಿವಾಸದ ಸಮೀಪವಿರುವ ಕಠ್ಮಂಡುವಿನ ಬಲುವಾತಾರ್ ಪ್ರದೇಶಕ್ಕೆ ಮೆರವಣಿಗೆ ನಡೆಸುತ್ತಿದ್ದ ನೂರಾರು ಜನರ ಗುಂಪು ನೇಪಾಳ ಪೊಲೀಸರಿಂದ ತೀವ್ರ ಪ್ರತಿರೋಧವನ್ನು ಎದುರಿಸಿತು, ಅವರು ಪ್ರತಿಭಟನಾಕಾರರ ವಿರುದ್ಧ ಜಲ ಫಿರಂಗಿಗಳನ್ನು ಮತ್ತು ಲಾಠಿಗಳನ್ನು ಬಳಸಿದರು ಎಂದು ಹೇಳುತ್ತದೆ.
ಒಟ್ಟಿಲ್ಲಿ ಈ ಪ್ರತಿಭಟನೆಯೂ ಒಲಿ ಸರ್ಕಾರದ ವಿರುದ್ದವಾಗಿದೆ ಎಂಬುವುದು ನಿಜವಾಗಿದ್ದರೂ, ಫೇಸ್‌ಬುಕ್ ವೈರಲ್ ಸಂದೇಶದಲ್ಲಿ ಇರುವಂತೆ ಚೀನಾ ಪರವಾಗಿ ನಿಲುವು ತೆಗೆದುಕೊಂಡಿರುವುದಕ್ಕೆ ಅಲ್ಲ ಎಂದು ಇಲ್ಲಿ ನಾವು ಗಮನಿಸಬಹುದು.
ಓದಿ: ದಿಟ ನಾಗರ; ನಾನುಗೌರಿ.ಕಾಮ್ ಫ್ಯಾಕ್ಟ್‌ಚೆಕ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ


