Homeಅಂತರಾಷ್ಟ್ರೀಯಫ್ಯಾಕ್ಟ್‌ಚೆಕ್‌: ಚೀನಾ ಪರ ನಿಲುವು ತೆಗೆದುಕೊಂಡ ಒಲಿ ಸರ್ಕಾರದ ವಿರುದ್ದ ನೇಪಾಳಿಗರು ಪ್ರತಿಭಟಿಸಿದರೆ?

ಫ್ಯಾಕ್ಟ್‌ಚೆಕ್‌: ಚೀನಾ ಪರ ನಿಲುವು ತೆಗೆದುಕೊಂಡ ಒಲಿ ಸರ್ಕಾರದ ವಿರುದ್ದ ನೇಪಾಳಿಗರು ಪ್ರತಿಭಟಿಸಿದರೆ?

ನಾವು ನೇಪಾಳದ ಜನರಿಗೆ ಧನ್ಯವಾದಗಳು ಹೇಳುತ್ತಿದ್ದೇವೆ. ಭಾರತ ಮತ್ತು ನೇಪಾಳ ನಡುವಿನ ಸಹೋದರ ಸಂಬಂಧ ದೀರ್ಘಕಾಲ ಚಿರಾಯುವಾಗಲಿ ಎಂದು ವೈರಲ್ ಸಂದೇಶ ಹೇಳುತ್ತದೆ.

- Advertisement -
- Advertisement -

ಫೇಸ್‌ಬುಕ್‌ನ ಹಲವಾರು ಬಳಕೆದಾರರು ಭಾರಿ ಸಂಖ್ಯೆಯ ಜನರು ಬೀದಿಗಳಲ್ಲಿ ಮೆರವಣಿಗೆ ನಡೆಸುತ್ತಿರುವ 35 ಸೆಕೆಂಡುಗಳ ಕ್ಲಿಪ್ ಅನ್ನು ಪೋಸ್ಟ್ ಮಾಡಿ ’’ಒಲಿ ಸರ್ಕಾರದ ಚೀನಾ ಪರ ನಿಲುವಿನ ವಿರುದ್ಧ ನೇಪಾಳದಲ್ಲಿ ಈ ಬೃಹತ್ ಪ್ರತಿಭಟನೆ ನಡೆಯುತ್ತಿದ” ಎಂದು ಆರೋಪಿಸಿರುವ ಪೋಸ್ಟೊಂದು ವೈರಲ್ ಆಗಿದೆ.

ನೇಪಾಳವು ಇತ್ತೀಚೆಗೆ ಭಾರತೀಯ ಭೂಪ್ರದೇಶದಲ್ಲಿ ನಿರ್ಮಿಸಲಾದ ರಸ್ತೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು ಹಾಗೂ ಭಾರತೀಯ ಭೂಪ್ರದೇಶಗಳಿರುವ ಹೊಸ ರಾಜಕೀಯ ನಕ್ಷೆಯನ್ನು ಸಧನದಲ್ಲಿ ಅಂಗೀಕರಿಸಿ, ಆ ಭೂಪ್ರದೇಶ ತನ್ನದು ಹಾಗೂ ಅದನ್ನು ಭಾರತ ಬಿಟ್ಟು ಕೊಡಬೇಕು ಎಂದು ಆಗ್ರಹಿಸಿತ್ತು.

ವೈರಲಾದ ಈ ವಿಡಿಯೋ ಫೇಸ್‌ಬುಕ್‌ನಲ್ಲಿ ಹಲವಾರು ಬಳಕೆದಾರರು ಹಂಚಿಕೊಂಡಿದ್ದಾರೆ. ವೀಡಿಯೊದೊಂದಿಗೆ ಬಂಗಾಳಿ ಭಾಷೆಯ ಶೀರ್ಷಿಕೆ, “ಚೀನಾದ ಗುಲಾಮನಂತೆ ವರ್ತಿಸಿದ್ದಕ್ಕಾಗಿ ತಮ್ಮ ಪ್ರಧಾನ ಮಂತ್ರಿಯ ವಿರುದ್ಧ ದಂಗೆ ಮಾಡಲು ನೇಪಾಳದ ಜನರು ಪ್ರಾರಂಭಿಸಿದ್ದಾರೆ. ನಾವು ನೇಪಾಳದ ಜನರಿಗೆ ಧನ್ಯವಾದಗಳು ಹೇಳುತ್ತಿದ್ದೇವೆ. ಭಾರತ ಮತ್ತು ನೇಪಾಳ ನಡುವಿನ ಸಹೋದರ ಸಂಬಂಧ ದೀರ್ಘಕಾಲ ಚಿರಾಯುವಾಗಲಿ. ” ಎಂದು ಹೇಳುತ್ತದೆ.

চীনের হয়ে দালালি করার জন্য নেপালের বাসিন্দাদের বিদ্রোহ শুরু হয়েছে নেপালের প্রধানমন্ত্রীর বিরুদ্ধে. ধন্যবাদ বাদ জানাই নেপালের এই বাসিন্দাদের. ভারত ও নেপালের ভাই -ভাই এই সম্পর্ক অটুট থাকুক. ??????

Posted by Bidhan Kora on Tuesday, June 16, 2020

ಈ ಪ್ರತಿಭಟನೆಯೂ ಕಠ್ಮಂಡುವಿನಲ್ಲಿ ನಡೆದಿದೆಯಾದರೂ ಅದು ಅಲ್ಲಿನ ಸರ್ಕಾರ ಕೊರೊನಾವನ್ನು ನಿಭಾಯಿಸಲು ವಿಫಲವಾಗಿರುವುದಕ್ಕೆ ನಡೆದ ಪ್ರತಿಭಟನೆಯಾಗಿದೆ.

ಪೋಸ್ಟ್‌ಗಳ ಆರ್ಕೈವ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಇಷ್ಟೇ ಅಲ್ಲದೆ ಇನ್ನೂ ಹಲವಾರು ಇದೇ ಪೋಸ್ಟನ್ನು ಹಾಕಿದ್ದಾರೆ.

ಫ್ಯಾಕ್ಟ್‌ಚೆಕ್

ಇದೇ ವಿಡಿಯೊವನ್ನು ರಿವರ್ಸ್ ಹುಡುಕಾಟ ಮಾಡಿದಾಗ, ಈ ವಿಡಿಯೋ ಜೂನ್ 11 ರಂದು “ಕಿನಿಮಾ ಟಿವಿ” ಎಂಬ ಯೂಟ್ಯೂಬ್ ಚಾನೆಲ್ ಅಪ್‌ಲೋಡ್ ಮಾಡಿದೆ ಎಂದು ಕಂಡು ಬಂದಿದೆ. ವೀಡಿಯೊದ ಶೀರ್ಷಿಕೆಯಲ್ಲಿ “ಲಾಕ್‌ಡೌನ್‌ ವಿರುದ್ದ, ಕಠ್ಮಂಡುವಿನ ಜನತೆ ಬೀದಿಗಿಳಿದ್ದಾರೆ” ಎಂದಿದೆ.

ಅಷ್ಟೇ ಅಲ್ಲದೆ ಜೂನ್ 11 ರಂದು ನೇಪಾಳದ ಹಿರಿಯ ಪತ್ರಕರ್ತೆ ಮತ್ತು ನಿರೂಪಕಿ ಅನಿತಾ ಬಿಂದು ಕೂಡಾ ಟ್ವೀಟ್ ಮಾಡಿ ಅದೇ ಪ್ರತಿಭಟನೆಯ ಚಿತ್ರಗಳನ್ನು ಹಾಕಿ ಇದು ಸರ್ಕಾರದ ವಿರುದ್ಧ ನೇಪಾಳಿ ಯುವಕರ ದಂಗೆ ಎಂದು ಹೇಳಿದ್ದಾರೆ.

 

ಅಷ್ಟೇ ಅಲ್ಲದೆ ನೇಪಾಳದ ಹಲವಾರು ಸುದ್ದಿ ವೆಬ್‌ಸೈಟ್‌ಗಳು ಮತ್ತು ಯೂಟ್ಯೂಬ್ ಚಾನೆಲ್‌ಗಳಲ್ಲಿನ ಪ್ರತಿಭಟನಾ ಮೆರವಣಿಗೆಯ ಸುದ್ದಿ ವರದಿಗಳು ಬಂದಿದೆ. ವರದಿಯಲ್ಲಿ ಜೂನ್ ಆರಂಭದಲ್ಲಿ ಒಲಿ ಸರ್ಕಾರವು ಕೊರೊನಾ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ವಿಫಲವಾದ ಕಾರಣ ಈ ಪ್ರತಿಭಟನೆ ನಡೆದಿದೆ ಎಂದು ಖಚಿತಡಿಸುತ್ತದೆ.

ಈ ಸುದ್ದಿ ವರದಿಗಳ ಪ್ರಕಾರ, ಜೂನ್ 11 ರಂದು, ಪ್ರಧಾನ ಮಂತ್ರಿಯ ನಿವಾಸದ ಸಮೀಪವಿರುವ ಕಠ್ಮಂಡುವಿನ ಬಲುವಾತಾರ್ ಪ್ರದೇಶಕ್ಕೆ ಮೆರವಣಿಗೆ ನಡೆಸುತ್ತಿದ್ದ ನೂರಾರು ಜನರ ಗುಂಪು ನೇಪಾಳ ಪೊಲೀಸರಿಂದ ತೀವ್ರ ಪ್ರತಿರೋಧವನ್ನು ಎದುರಿಸಿತು, ಅವರು ಪ್ರತಿಭಟನಾಕಾರರ ವಿರುದ್ಧ ಜಲ ಫಿರಂಗಿಗಳನ್ನು ಮತ್ತು ಲಾಠಿಗಳನ್ನು ಬಳಸಿದರು ಎಂದು ಹೇಳುತ್ತದೆ.

ಒಟ್ಟಿಲ್ಲಿ ಈ ಪ್ರತಿಭಟನೆಯೂ ಒಲಿ ಸರ್ಕಾರದ ವಿರುದ್ದವಾಗಿದೆ ಎಂಬುವುದು ನಿಜವಾಗಿದ್ದರೂ, ಫೇಸ್‌ಬುಕ್‌ ವೈರಲ್‌ ಸಂದೇಶದಲ್ಲಿ ಇರುವಂತೆ ಚೀನಾ ಪರವಾಗಿ ನಿಲುವು ತೆಗೆದುಕೊಂಡಿರುವುದಕ್ಕೆ ಅಲ್ಲ ಎಂದು ಇಲ್ಲಿ ನಾವು ಗಮನಿಸಬಹುದು.


ಓದಿ: ದಿಟ ನಾಗರ; ನಾನುಗೌರಿ.ಕಾಮ್ ಫ್ಯಾಕ್ಟ್‌ಚೆಕ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...