ಛತ್ರಪತಿ ಶಿವಾಜಿಯನ್ನು ಅವಮಾನಿಸಿದ ಆರೋಪದ ಮೇಲೆ ಮುಂಬೈ ಮೂಲದ ಸ್ಟ್ಯಾಂಡ್-ಅಪ್ ಹಾಸ್ಯನಟಿ ಅಗ್ರಿಮಾ ಜೋಶುವಾಗೆ ಅತ್ಯಾಚಾರ ಮತ್ತು ಜೀವ ಬೆದರಿಕೆ ಹಾಕಲಾಗಿದೆ.
ಜೋಶುವಾ ಅವರ ಹಾಸ್ಯಗಳು ಮಹಾರಾಷ್ಟ್ರದ ಆಡಳಿತಾರೂಡ ಪಕ್ಷ ಶಿವಸೇನೆಯನ್ನು ಅಸಮಾಧಾನಗೊಳಿಸಿದ್ದು, ಗೃಹ ಸಚಿವ ಅನಿಲ್ ದೇಶ್ಮುಖ್ ಆಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಭಾರಿ ನಿಂದನೆ ಎದುರಿಸಿದ ನಂತರ ಜೋಶುವಾ ಟ್ವಿಟರ್‌ನಲ್ಲಿ ಕ್ಷಮೆಯಾಚಿಸಿದ್ದರು.
ಆದರೆ ಬೆದರಿಕೆಗಳು ನಿಂತಿಲ್ಲ ಎನ್ನಲಾಗಿದ್ದು, ಯೂಟ್ಯೂಬ್‌ನಲ್ಲಿ ಭಾರಿ ಅನುಯಾಯಿಗಳನ್ನು ಹೊಂದಿರುವ ಸಾಮಾಜಿಕ ಜಾಲತಾಣ ಬಳಕೆದಾರ ಶುಭಮ್ ಮಿಶ್ರಾ ಅಸಭ್ಯ ಭಾಷೆ ಬಳಸಿ ಮತ್ತು ಜೋಶುವಾ ವಿರುದ್ಧ ಅತ್ಯಾಚಾರ ಬೆದರಿಕೆ ಹಾಕುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಜುಲೈ 12 ರ ಭಾನುವಾರ ವಡೋದರಾ ಪೊಲೀಸರು ಈ ವಿಷಯದಲ್ಲಿ ಸ್ವಯಂ ಪ್ರೇರಿತ ಕ್ರಮ ಕೈಗೊಂಡು, ಮಿಶ್ರಾ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಿದರು. ಈ ವಿಷಯದಲ್ಲಿ ಶೀಘ್ರದಲ್ಲೇ ಎಫ್‌ಐಆರ್ ದಾಖಲಿಸುವ ಸಾಧ್ಯತೆ ಇದೆ.

ಅನೇಕ ಸ್ಟ್ಯಾಂಡ್-ಅಪ್ ಹಾಸ್ಯನಟರು ಮತ್ತು ಬಾಲಿವುಡ್ ನಟರು ವೀಡಿಯೊದ ಬಗ್ಗೆ ಕಳವಳ ವ್ಯಕ್ತಪಡಿಸಿದ ನಂತರ, ರಾಷ್ಟ್ರೀಯ ಮಹಿಳಾ ಆಯೋಗವು ಈ ವಿಷಯವನ್ನು ಗಣನೆಗೆ ತೆಗೆದುಕೊಂಡಿದೆ. ಮಿಶ್ರಾ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಗುಜರಾತ್ ಪೊಲೀಸರನ್ನು ಕೋರಲಾಗಿದೆ ಎಂದು ಟ್ವಿಟ್ಟರ್ನಲ್ಲಿ ಬರೆದಿದೆ.
ಅಗ್ರಿಮಾ ಜೋಶುವಾ ವಿವಾದದ ಮಧ್ಯೆ ಏಕೆ?
ಮುಂಬೈನ ಖಾರ್ (ಪಶ್ಚಿಮ) ದಲ್ಲಿ ಹಾಸ್ಯ ಮತ್ತು ಸಂಗೀತ ಕೆಫೆಯಲ್ಲಿ ಪ್ರದರ್ಶನ ನೀಡುತ್ತಿರುವ ಜೋಶುವಾ ಅವರ ಹಳೆಯ ವಿಡಿಯೋ ವೈರಲ್ ಆಗಿದ್ದು, ಅಲ್ಲಿ ಅರೇಬಿಯನ್ ಸಮುದ್ರದಲ್ಲಿ ಮರಾಠಾ ರಾಜನ ಮುಂಬರುವ ಪ್ರತಿಮೆಯ ಬಗ್ಗೆ ಹಾಸ್ಯ ಮಾಡಿದ್ದಾರೆ. ಕಳೆದ ವರ್ಷ ಈ ವಿಡಿಯೊ ಕೋಲಾಹಲ ಸೃಷ್ಟಿಸಿತ್ತು, ಈಗ ಮತ್ತೊಮ್ಮೆ ಶಿವಸೇನೆಯ ಥಾಣೆ ಶಾಸಕ ಪ್ರತಾಪ್ ಸರ್ನಾಯಕ್ ಅವರು ಜೋಶುವಾ ಅವರ ಬಂಧನಕ್ಕೆ ಒತ್ತಾಯಿಸಿ ಗೃಹ ಸಚಿವ ಅನಿಲ್ ದೇಶ್ಮುಖ್ ಅವರಿಗೆ ಪತ್ರ ಬರೆದಿದ್ದಾರೆ.
ಪ್ರಸ್ತುತ ಡಿಲೀಟ್ ಮಾಡಲಾಗಿರುವ ವೀಡಿಯೊದಲ್ಲಿ, ಅರಬ್ಬಿ ಸಮುದ್ರದಲ್ಲಿ ನಿರ್ಮಿಸುವ ರಾಜ್ಯ ಸರ್ಕಾರದ ಯೋಜನೆಯ ಊಹಾಪೋಹಗಳ ಬಗ್ಗೆ ಜೋಶುವ ಹಾಸ್ಯ ಮಾಡಿದ್ದರು.
ಶನಿವಾರ ಮಧ್ಯಾಹ್ನ ಈ ವಿಷಯದ ಬಗ್ಗೆ ತಿಳಿದುಕೊಂಡ ದೇಶ್ಮುಖ್ “ನಾನು ಕಾನೂನು ಕ್ರಮ ಕೈಗೊಳ್ಳುವಂತೆ ಸಿಪಿ (ಪೊಲೀಸ್ ಆಯುಕ್ತ) ಮುಂಬೈ ಮತ್ತು ಐಜಿ (ಇನ್ಸ್‌ಪೆಕ್ಟರ್ ಜನರಲ್) ಗೆ ಸೂಚನೆ ನೀಡಿದ್ದೇನೆ. ಪ್ರತಿಯೊಬ್ಬರೂ ಶಾಂತವಾಗಿರಿ, ಕಾನೂನು ತನ್ನ ಕೆಲಸವನ್ನು ಮಾಡುತ್ತದೆ” ಎಂದಿದ್ದಾರೆ.
I ve instructed CP Mumbai and IG Cyber to take legal action expeditiously ..I urge everyone to maintain calm and law will take its course. https://t.co/laFCARvKUC
— ANIL DESHMUKH (@AnilDeshmukhNCP) July 11, 2020
ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜೋಶುವ ಅವರ ಮನೆ, ಕಛೇರಿಯ ಮೇಲೆ ದಾಳಿ ನಡೆಸಲಾಗಿದೆ.
ವಿವಾದ ಹೆಚ್ಚಾಗುತ್ತಿದ್ದಂತೆ, ಜೋಶುವಾ ಟ್ವಿಟರ್‌ನಲ್ಲಿ ಕ್ಷಮೆಯಾಚಿಸಿದರು. “ಮಹಾನ್ ನಾಯಕ ಛತ್ರಪತಿ ಶಿವಾಜಿ ಮಹಾರಾಜರ ಅನೇಕ ಅನುಯಾಯಿಗಳ ಭಾವನೆಗಳನ್ನು ನೋಯಿಸಿದ್ದಕ್ಕಾಗಿ ನನಗೆ ವಿಷಾದವಿದೆ. ನಾನು ಪ್ರಾಮಾಣಿಕವಾಗಿ ಗೌರವಿಸುವ ಮಹಾನ್ ನಾಯಕನ ಅನುಯಾಯಿಗಳಿಗೆ ಹೃತ್ಪೂರ್ವಕವಾಗಿ ಕ್ಷಮೆಯಾಚಿಸುತ್ತೇವೆ. ವೀಡಿಯೊವನ್ನು ಈಗಾಗಲೇ ತೆಗೆದುಹಾಕಲಾಗಿದೆ. ದಯವಿಟ್ಟು ಕ್ಷಮಿಸಿ ಎಂದು ಜೋಶುವಾ ಕೇಳಿಕೊಂಡಿದ್ದಾರೆ.
मेरी क्षमायाचना स्वीकार करे,
Please accept my humble apology,@cmoMaharashtra @authackrey@anildeshmukhncp@nitinraut@RajThackrey pic.twitter.com/uHBZMBPOfB— Agrima Joshua ?? (@Agrimonious) July 11, 2020
ಇದನ್ನೂ ಓದಿ: ಆನ್‌ಲೈನ್ ಪರೀಕ್ಷೆ ನಡೆಸುವ ನಿರ್ಧಾರವನ್ನು ವಿರೋಧಿಸಿ ಬೆಂಗಳೂರು ಕ್ರೈಸ್ಟ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಪ್ರತಿಭಟನೆ


