Homeಕರೋನಾ ತಲ್ಲಣತಿರುಮಲ ತಿರುಪತಿ ದೇವಸ್ಥಾನದ 91 ಉದ್ಯೋಗಿಗಳು ಕೊರೊನಾ ಸೋಂಕಿತರು

ತಿರುಮಲ ತಿರುಪತಿ ದೇವಸ್ಥಾನದ 91 ಉದ್ಯೋಗಿಗಳು ಕೊರೊನಾ ಸೋಂಕಿತರು

ಜುಲೈ 9 ಮತ್ತು 10 ರ ವೇಳೆಗೆ ಕನಿಷ್ಠ 3,569 ಉದ್ಯೋಗಿಗಳನ್ನು ಪರೀಕ್ಷಿಸಲಾಯಿತು. ಅವರಲ್ಲಿ 91 ಮಂದಿಗೆ ಸೋಂಕು ದೃಢಪಟ್ಟಿರುವುದು ತಿಳಿದುಬಂದಿದೆ.

- Advertisement -
- Advertisement -

ತಿರುಮಲ ತಿರುಪತಿ ದೇವಸ್ಥಾನದ (TTD) 91 ಉದ್ಯೋಗಿಗಳಿಗೆ ಈವರೆಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್ ಭಾನುವಾರ (ಜುಲೈ 12) ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಆಂಧ್ರಪ್ರದೇಶದ ಅಲಿಪಿರಿ ಮತ್ತು ತಿರುಮಲಾದಲ್ಲಿ ನೌಕರರು ಮತ್ತು ಸಂದರ್ಶಕರ ಮೇಲೆ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ಜುಲೈ 9 ಮತ್ತು 10 ರ ವೇಳೆಗೆ ಕನಿಷ್ಠ 3,569 ಉದ್ಯೋಗಿಗಳನ್ನು ಪರೀಕ್ಷಿಸಲಾಯಿತು. ಅವರಲ್ಲಿ 91 ಮಂದಿಗೆ ಸೋಂಕು ದೃಢಪಟ್ಟಿರುವುದು ತಿಳಿದುಬಂದಿದೆ.

ಹೆಚ್ಚಿನ ರೋಗಿಗಳು ವಿಶೇಷ ಸಂರಕ್ಷಣಾ ಪಡೆ (ಎಸ್‌ಪಿಎಫ್) ಸದಸ್ಯರಾಗಿದ್ದು, ಅವರಲ್ಲಿ ಹೆಚ್ಚಿನವರು ಲಕ್ಷಣರಹಿತರು ಎಂದು ಅಧಿಕಾರಿ ತಿಳಿಸಿದ್ದಾರೆ.

“ಅವರಲ್ಲಿ ಕೆಲವರು ಅನಂತಪುರ ಅಥವಾ ಕರ್ನೂಲ್‌ಗೆ ಹೋಗಿ ಹಿಂದಿರುಗಿದ್ದರು. ಅನೇಕ ಎಸ್‌ಪಿಎಫ್ ಸಿಬ್ಬಂದಿಗಳು ನಿಕಟ ಪ್ರದೇಶಗಳಲ್ಲಿ ವಾಸಿಸುತ್ತಿರುವುದರಿಂದ, ಅವರಲ್ಲಿ ಅನೇಕರು ಸೋಂಕಿಗೆ ಒಳಗಾಗಿದ್ದಾರೆ ಎಂದು ಅವರು ದಿ ನ್ಯೂಸ್ ಮಿನಿಟ್ ಗೆ ಹೇಳಿದ್ದಾರೆ.

ಜೂನ್ 18 ಮತ್ತು ಜೂನ್ 25 ರ ನಡುವೆ 700 ಸಂದರ್ಶಕರನ್ನು ಪರೀಕ್ಷಿಸಲಾಗಿದೆ ಎಂದು TTD ಹೇಳಿದೆ. ಆದರೆ ಅವರಲ್ಲಿ ಸೋಂಕು ಕಂಡುಬಂದಿಲ್ಲ. ಜುಲೈ 1 ಮತ್ತು ಜುಲೈ 7 ರ ನಡುವೆ ಪರೀಕ್ಷಿಸಿದ 1,943 ಸಂದರ್ಶಕರಿಗೆ ಫಲಿತಾಂಶಗಳು ನಕಾರಾತ್ಮಕವಾಗಿ ಬಂದಿದೆ.

ಲಾಕ್ ಡೌನ್ ನಂತರ ಜೂನ್ 11 ರಿಂದ ಯಾತ್ರಾರ್ಥಿಗಳಿಗಾಗಿ ಈ ದೇವಾಲಯವನ್ನು ಮತ್ತೆ ತೆರೆಯಲಾಯಿತು. ಪ್ರತಿದಿನ ಸುಮಾರು 50,000 ಲಕ್ಷ ಪ್ರವಾಸಿಗರನ್ನು ಬರುತ್ತಿದ್ದರು. ಕೊರೊನಾ ಬಿಕ್ಕಟ್ಟಿನ ದೃಷ್ಟಿಯಿಂದ ಈ ಸಂಖ್ಯೆಯನ್ನು 6,000 ಕ್ಕೆ ಇಳಿಸಲಾಯಿತು. ನಂತರ ಅದನ್ನು 12,000 ಕ್ಕೆ ಹೆಚ್ಚಿಸಲಾಯಿತು.


ಇದನ್ನೂ ಓದಿ: ಪುಲ್ವಾಮ ಜಿಲ್ಲೆಯ ದೇವಸ್ಥಾನದ ಜೀರ್ಣೋದ್ದಾರಕ್ಕೆ ಜೊತೆಯಾದ ಮುಸ್ಲೀಮರು


 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ಆಡಳಿತದ 10 ವರ್ಷಗಳಲ್ಲಿ ‘ED’ ದಾಳಿಗಳಲ್ಲಿ ಹೆಚ್ಚಳ: ವರದಿ

0
ಮೋದಿ ಆಡಳಿತದ ಕಳೆದ 10 ವರ್ಷಗಳಲ್ಲಿ ಜಾರಿ ನಿರ್ದೇಶನಾಲಯದ ದಾಳಿ ಮತ್ತು, ಆಸ್ತಿಮುಟ್ಟುಗೋಲು ಪ್ರಮಾಣದಲ್ಲಿ ಭಾರೀ ಹೆಚ್ಚಳವಾಗಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ಬಿಜೆಪಿ ಸರಕಾರ 'ಇಡಿ' ಮತ್ತು ಸಿಬಿಐಯಂತಹ ಸರಕಾರಿ ಸಂಸ್ಥೆಗಳನ್ನು ಪ್ರತಿಪಕ್ಷಗಳ...