ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಸೋಮವಾರ ಡೆಹ್ರಾಡೂನ್ ಹೆಸರನ್ನು ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ ಉರ್ದು ಬದಲಿಗೆ ಸಂಸ್ಕೃತದಲ್ಲಿ ಬರೆದಿರುವ “ಡೆಹ್ರಾಡೂನಮ್” ಎಂದು ತೋರಿಸಿರುವ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.
SANSKRIT pic.twitter.com/6coUpaIQyF
— Sambit Patra (@sambitswaraj) July 13, 2020
ಈ ಕುರಿತು ಸ್ಪಷ್ಟೀಕರಣ ನೀಡಿರುವ ದೆಹಲಿಯ ಉತ್ತರ ರೈಲ್ವೆ ಅಧಿಕಾರಿಗಳು “ಇದೀಗ ಡೆಹ್ರಾಡೂನ್ ನಿಲ್ದಾಣದಲ್ಲಿನ ಸೈನ್‌ಬೋರ್ಡ್‌ಗಳಲ್ಲಿ ಸಂಸ್ಕೃತದಲ್ಲಿ ಬರೆದಿಲ್ಲ. ವಿವಿಧ ಬೋರ್ಡ್‌ಗಳಲ್ಲಿ ಇಂಗ್ಲಿಷ್, ಹಿಂದಿ ಮತ್ತು ಉರ್ದು ಭಾಷೆಗಳಲ್ಲಿ ಪ್ರದರ್ಶಿಸಲಾಗಿದೆ. ಸಂಸ್ಕೃತ ಇರುವ ಫೋಟೊ ಸಾಮಾಜಿಕ ಮಾಧ್ಯಮದಲ್ಲಿ ಸೃಷ್ಟಿಸಲಾದ “ಗೊಂದಲ” ಎಂದು ಹೇಳಿದ್ದಾರೆ.
ಸೋಮವಾರ ಬೆಳಿಗ್ಗೆ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ವಿನಯ್ ಸಹಸ್ರಬುದ್ದೆ ಅವರು ‘ಈಗಲ್ ಐ’ ಹೆಸರಿನಲ್ಲಿರುವ ಎರಡು ಚಿತ್ರಗಳಿರುವ ಪೋಸ್ಟನ್ನು ಷೇರ್ ಮಾಡಿದಾಗ ಈ ವಿಷಯ ವೈರಲ್ ಅಯಿತು. ಅದರಲ್ಲಿ ಒಂದು ಚಿತ್ರವು ಡೆಹ್ರಾಡೂನ್‌ನ ಹಳೆಯ ನಿಲ್ದಾಣದ ಸಂಕೇತ ಫಲಕದಲ್ಲಿ ಹೆಸರನ್ನು ಹಿಂದಿ, ಇಂಗ್ಲಿಷ್ ಮತ್ತು ಉರ್ದು ಭಾಷೆಯಲ್ಲಿ ಬರೆಯಲಾಗಿದೆ. ಆದರೆ ಮತ್ತೊಂದು ಚಿತ್ರದಲ್ಲಿ ಉರ್ದು ಬದಲಿಗೆ ಸಂಸ್ಕೃತದಲ್ಲಿ ಬರೆಯಲಾಗಿದೆ ಎಂದು ತೋರಿಸಲಾಗಿದೆ.
ಸಹಸ್ರಬುದ್ಧೆ ಟ್ವೀಟ್‌ನಲ್ಲಿ, “@RailMinIndia ನ ಈ ಮಹತ್ವದ ಕ್ರಮವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು” ಎಂದು ಬರೆದಿದ್ದಾರೆ.
ವಾಸ್ತವವೇನು?
ಕಳೆದ ವರ್ಷ ನಾಮಫಲಕಗಳಲ್ಲಿ ಉರ್ದು ಬದಲಿಗೆ ಸಂಸ್ಕೃತ ಬಳಸಲು ಅಧಿಕಾರಿಗಳು ಮುಂದಾಗಿದ್ದರು. ಆದರೆ ಕೆಲವು ಸ್ಥಳೀಯ ಸಂಸ್ಥೆಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದವು. ನಂತರ ಈ ಯೋಜನೆ ಮುಂದುವರೆಯಲಿಲ್ಲ ಎಂದು ಮೂಲಗಳು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿವೆ. ಆ ವರ್ಷ ಸಂಸ್ಕೃತದಲ್ಲಿ ಬರೆದಿದ್ದ ನಾಮಫಲಕವನ್ನು ಬಳಸದೇ ಬಿಸಾಡಲಾಗಿದ್ದು ಆ ಫೋಟೊ ಈಗ ಸಾಮಾಜಿಕ ಜಾಲತಾಣದಲ್ಲ ವೈರಲ್ ಆಗಿದೆ ಅಷ್ಟೇ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಡೆಹ್ರಾಡೂನ್ ರೈಲ್ವೇ ಸ್ಟೇಷನ್ ನಲ್ಲಿ ನವೀಕರಣ ಕೆಲಸ ನಡೆಯುತ್ತಿದೆ. ಅಲ್ಲಿ ನಿರ್ಮಾಣ ಮಾಡುತ್ತಿರುವಾಗ ಕೆಲಸದವರಿಗೆ ಕೆಲವು ಹಳೆಯ ಸೈನ್‌ಬೋರ್ಡ್‌ಗಳು ದೊರೆತಿವೆ. ಅದರಲ್ಲಿ ಉರ್ದು ಬದಲಿಗೆ ಸಂಸ್ಕೃತದಲ್ಲಿ ಬರೆಯಲಾಗಿದ್ದ ಬೋರ್ಡ್ ಸಹ ಸಿಕ್ಕಿದೆ. ಆದರೆ ಅದು ಹಳೆಯದು. ಈಗ ಮೊದಲಿನಂತೆಯೇ ಇಂಗ್ಲಿಷ್, ಹಿಂದಿ ಮತ್ತು ಉರ್ದು ಭಾಷೆಯಲ್ಲಿ ಹೆಸರನ್ನು ಬರೆಯಲಾಗಿದೆ ”ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೈಲ್ವೆ ವರ್ಕ್ಸ್ ಮ್ಯಾನ್ಯುವಲ್ ಪ್ರಕಾರ, ನಿಲ್ದಾಣದ ಹೆಸರುಗಳನ್ನು ಇಂಗ್ಲಿಷ್, ಹಿಂದಿ ಮತ್ತು ಸ್ಥಳೀಯ ಅಧಿಕೃತ ಭಾಷೆಯಲ್ಲಿ ಬರೆಯಬೇಕಾಗಿದೆ. ರೈಲ್ವೆ ಸಾಮಾನ್ಯವಾಗಿ ತನ್ನ ನಿಲ್ದಾಣದ ಹೆಸರುಗಳ ವ್ಯವಹಾರದಲ್ಲಿ ತಲೆಹಾಕುವುದಿಲ್ಲ. ಇದರ ಕುರಿತು ಸಂಬಂಧಪಟ್ಟ ರಾಜ್ಯಕ್ಕೆ ಅಧಿಕಾರವಿರುವುದು ಎಂದು ಅದು ಅಧಿಕೃತವಾಗಿ ಹೇಳಿದೆ.
ಹೆಸರನ್ನು/ಭಾಷೆಯನ್ನು ಬದಲಾಯಿಸಲು ಬಯಸಿದರೆ ರಾಜ್ಯಗಳು ಸಾಮಾನ್ಯವಾಗಿ ಗೃಹ ಸಚಿವಾಲಯಕ್ಕೆ ಕೋರಿಕೆಯನ್ನು ಕಳುಹಿಸುತ್ತವೆ.
ಇದನ್ನೂ ಓದಿ: ಸಂಸ್ಕೃತ ಭಾಷೆಯಿಂದ ಸಕ್ಕರೆ ಕಾಯಿಲೆ, ಕೊಬ್ಬು ನಿಯಂತ್ರಣ: ಸಂಸದ ಗಣೇಶ್ ಸಿಂಗ್ ಹೇಳಿಕೆಗೆ ವ್ಯಾಪಕ ಟೀಕೆ
ಲಾಕ್‌ಡೌನ್ ಉಲ್ಲಂಘಿಸಿದ ಗುಜರಾತ್ ಸಚಿವರ ಪುತ್ರನನ್ನು ಪ್ರಶ್ನಿಸಿದ್ದ ಮಹಿಳಾ ಕಾನ್ಸ್ಟೇಬಲ್ ರಾಜೀನಾಮೆ!


