Homeಮುಖಪುಟಲಾಕ್‌ಡೌನ್‌ ಉಲ್ಲಂಘಿಸಿದ ಗುಜರಾತ್ ಸಚಿವರ ಪುತ್ರನನ್ನು ಪ್ರಶ್ನಿಸಿದ್ದ ಮಹಿಳಾ ಕಾನ್ಸ್ಟೇಬಲ್‌ ರಾಜೀನಾಮೆ!

ಲಾಕ್‌ಡೌನ್‌ ಉಲ್ಲಂಘಿಸಿದ ಗುಜರಾತ್ ಸಚಿವರ ಪುತ್ರನನ್ನು ಪ್ರಶ್ನಿಸಿದ್ದ ಮಹಿಳಾ ಕಾನ್ಸ್ಟೇಬಲ್‌ ರಾಜೀನಾಮೆ!

- Advertisement -
- Advertisement -

ಕಳೆದ ವಾರ ಗುಜರಾತ್‌ನ ಸೂರತ್‌ನಲ್ಲಿ ಲಾಕ್‌ಡೌನ್‌ನ ರಾತ್ರಿ ಕರ್ಫ್ಯೂ ನಿಯಮಗಳನ್ನು ಉಲ್ಲಂಘಿಸಿದ್ದ ಸಚಿವರ ಪುತ್ರನನ್ನು ತಡೆದು ಪ್ರಶ್ನಿಸಿದ್ದ ಮಹಿಳಾ ಕಾನ್ಸ್ಟೇಬಲ್ ಕೊನೆಗೂ ರಾಜೀನಾಮೆ ನೀಡಿದ್ದಾರೆ.

ಆರೋಗ್ಯ ಸಚಿವ ಕುಮಾರ್‌ ಕನಾನಿ ಪುತ್ರ ಪ್ರಕಾಶ್ ಪೊಲೀಸ್ ತಮ್ಮ ಸ್ನೇಹಿತರೊಂದಿಗೆ ರಾತ್ರಿ ವೇಳೆ ತಮ್ಮ ತಂದೆಯ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಪೊಲೀಸರ್ ಸಿಬ್ಬಂದಿ ಸುನೀತಾ ಯಾದವ್‌ರವರು ತಡೆದಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರ ನಡುವೆಯೂ ಜೋರು ಮಾತುಕತೆ ನಡೆದಿದೆ.

ವೈರಲ್ ವಿಡಿಯೋದಲ್ಲಿ ದಾಖಲಾದಂತೆ “ನಾನು ಮನಸ್ಸು ಮಾಡಿದ್ದರೆ ನಿನ್ನನ್ನು 365  ದಿನವೂ ಇಲ್ಲೇ ನಿಲ್ಲುವಂತೆ ಮಾಡಬಲ್ಲೇ” ಎಂದು ಸಚಿವರ ಪುತ್ರ ಹೇಳಿದ್ದಾರೆ. ಇದಕ್ಕೆ ನಾನು ಸಚಿವರಿಗೆ ಹೆದರುವ ಗುಲಾಮಳಲ್ಲ ಎಂದು ಮಹಿಳಾ ಪೊಲೀಸ್ ಹೇಳಿದ್ದಾರೆ.

ನಾನು ಆಸ್ಪತ್ರೆಯಲ್ಲಿ ದಾಖಲಾಗಿರುವ ನಮ್ಮ ಮಾವನನ್ನು ನೋಡಲು ಹೋಗುತ್ತಿದ್ದೇನೆ ಎಂದು ಸಚಿವರ ಪುತ್ರ ಹೇಳಿದ್ದಕ್ಕೆ, ಮಾಸ್ಕ್ ಏಕೆ ಧರಿಸಿಲ್ಲ? ಎಂಎಲ್‌ಎ ಎಂದು ಬರೆದಿರುವ ಈ ಕಾರು ಯಾರದು? ನೀವೇಕೆ ಬಳಸುತ್ತಿದ್ದೀರಿ ಎಂದು ಮಹಿಳಾ ಪೊಲೀಸ್ ಪ್ರಶ್ನಿಸಿದ್ದಾರೆ.

ಕೂಡಲೇ ತಮ್ಮ ತಂದೆಗೆ ಫೋನಾಯಿಸಿದ ಪ್ರಕಾಶ್ ಕನಾನಿ ಮಹಿಳಾ ಪೊಲೀಸ್ ಮೇಲೆ ಆರೋಪಗಳ ಸುರಿಮಳೆಗೈದಿದ್ದಾರೆ. ಅಲ್ಲಿಂದ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಫೋನ್ ಹೋಗಿ ಕೆಲ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಸಚಿವರ ಪುತ್ರರನ್ನು ಅಲ್ಲಿಂದ ಕಳಿಸಲಾಗಿದೆ. ಮಹಿಳಾ ಪೊಲೀಸ್ ಅನ್ನು ಸಹ ಅಲ್ಲಿಂದ ಹೊರಕಳಿಸಲಾಗಿದೆ.

ಅಂದು ನಡೆದ ಘಟನೆಯನ್ನು ಕೆಲವರು ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಮಹಿಳಾ ಪೊಲೀಸ್ ತನ್ನ ಕೆಲಸ ತಾನು ಮಾಡಿದ್ದಾರೆ. ಆದರೆ ಸಚಿವರ ಪುತ್ರ ನಿಯಮ ಮೀರಿ ವರ್ತಿಸಿದ್ದು, ಬೆದರಿಕೆ ಹಾಕಿದ್ದಾನೆ. ಶಿಕ್ಷೆ ಆಗಬೇಕಾದುದ್ದು ಆತನಿಗೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

ಕಳೆದ ಬುಧವಾರ ರಾತ್ರಿ ಸೂರತ್‌ನ ಮಂಗಂಧ್ ಚೌಕ್‌ನಲ್ಲಿ ರಾತ್ರಿ 10.30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ (ವಿಶೇಷ ಶಾಖೆ) ಪಿಎಲ್ ಚೌಧರಿ ತಿಳಿಸಿದ್ದಾರೆ. “ಆಡಿಯೋ ಕ್ಲಿಪ್ ಸೂರತ್ ಪೊಲೀಸ್ ಆಯುಕ್ತ (ಆರ್ ಬಿ ಬ್ರಹ್ಮಭಟ್) ಅವರ ಗಮನಕ್ಕೆ ಬಂದಿದೆ. ಅವರು ಎಸಿಪಿ (ಎ-ಡಿವಿಷನ್) ಸಿಕೆ ಪಟೇಲ್ ಅವರಿಗೆ ವಿಚಾರಣೆ ನಡೆಸಲು ಆದೇಶಿಸಿದ್ದಾರೆ ಎಂದು ತಿಳಿಸಿದ್ದರು.

ಇಂದು ವಿಚಾರಣೆಯ ಬಳಿಕೆ ಮಹಿಳಾ ಪೊಲೀಸ್‌ದೆ ತಪ್ಪು ಎಂದು ಅಧಿಕಾರಿಗಳು ತಿಳಿಸಿದ್ದರಿಂದ ಸುನೀತಾ ಯಾದವ್ ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ. ತನಿಖೆ ನಡೆದರೆ ಸೇವೆಯಿಂದ ಅಮಾನತು ಮಾಡಬೇಕು, ಅಥವಾ ವಜಾಗೊಳಿಸಬೇಕು. ಆದರೆ ಇಲ್ಲಿ ಮಹಿಲಾ ಪೊಲೀಸ್ ವತಿಯಿಂದಲೇ ರಾಜೀನಾಮೆ ಪಡೆಯಲಾಗಿದೆ. ಇದರಲ್ಲಿ ಅಧಿಕಾರದ ದುರ್ಬಳಕೆ ನಡೆದಿದೆ ಎಂದು ಹಲವರು ಆರೋಪಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಬಿಜೆಪಿಗೆ ಮತ ಹಾಕುವಂತೆ...

0
ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹಿರಿಯ ರಾಜಕಾರಣಿ ಅಧೀರ್ ರಂಜನ್ ಚೌಧರಿ ಅವರಿ ಬಿಜೆಪಿ ಪರ ಮಾತನಾಡಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ " ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷಕ್ಕೆ ಮತ...