ರಾಜಸ್ಥಾನದ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರ ಪತ್ನಿ ಸಾರಾ ಪೈಲಟ್ ಅವರ ಹೆಸರಿನಲ್ಲಿ ಮಾಡಿರುವ ನಕಲಿ ಟ್ವಿಟ್ಟರ್ ಖಾತೆಯ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಟ್ವೀಟ್‌ನಲ್ಲಿ ರಾಜಸ್ಥಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ವ್ಯಂಗ್ಯ ಮಾಡಲಾಗಿದೆ.
ಆದರೆ ಸುದ್ದಿ ಸಂಸ್ಥೆ ಐಎಎನ್‌ಎಸ್ ಇದನ್ನು ನಿಜವೆಂದು ನಂಬಿ ಸಾರಾ ಪೈಲಟ್ ಧಮಕಿ ಹಾಕಿರುವುದಾಗಿ ಸುದ್ದಿ ಮಾಡಿದೆ. ಇದರಿಂದ ಈ ಟ್ವೀಟ್ ಮತ್ತಷ್ಟು ವೈರಲ್ ಆಯಿತು. ಆದರೆ ವಾಸ್ತವದಲ್ಲಿ, ಸಾರಾ ಅಂತಹ ಯಾವುದೇ ವಿಷಯವನ್ನು ಟ್ವೀಟ್ ಮಾಡಿಲ್ಲ ಎಂದು ತಿಳಿದುಬಂದಿದೆ.
ಸಾರಾ ಪೈಲಟ್ ಹೆಸರಿನ ಟ್ವೀಟ್‌ನಲ್ಲಿ, “ಗೆಹ್ಲೋಟ್‌ನ ಹೆಸರನ್ನು ಉಲ್ಲೇಖಿಸದೇ ಅವರ ಮೇಲೆ ಆಕ್ರಮಣ ಮಾಡಲಾಗಿದೆ. ದೊಡ್ಡ ಜಾದೂಗಾರರು ಸಹ ಪೈಲಟ್ ದೆಹಲಿಗೆ ತೆರಳಿದರೆ ಬೆವರುತ್ತಾರೆ ಎಂದು ವ್ಯಂಗ್ಯ ಮಾಡಲಾಗಿದೆ. ಈ ಟ್ವೀಟ್‌ಗೆ 16,000 ಕ್ಕಿಂತಲೂ ಹೆಚ್ಚಿನ ಲೈಕ್ಸ್ ಬಂದಿವೆ.
ಮತ್ತೊಂದು ಟ್ವೀಟ್‌ನಲ್ಲಿಯೂ ಕೂಡ ಮುಖ್ಯಮಂತ್ರಿ ಗೆಹ್ಲೋಟ್‌ರನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ. ಇದನ್ನು ಆಧರಿಸಿ ಐಎಎನ್‌ಎಸ್ ಸುದ್ದಿ ಮಾಡಿದ ನಂತರ, ಔಟ್‌ಲುಕ್, ದಿ ಫ್ರಿ ಪ್ರೆಸ್ ಸೇರಿದಂತೆ ಹಲವಾರು ಮಾಧ್ಯಮಗಳು ಸುದ್ದಿ ಮಾಡಿವೆ.
6 साल गांव ढाणी सडको पर चलने वालो के पेरो मे छाले पड गये।
संघर्ष भरे जीवन पर पानी फेरकर जयचंद सत्ता हथियाने मे लग गये। – @INCIndia#Sachin_pilot #Sachin_RajasthanKaPilot pic.twitter.com/0qwijT9xcg— Sarah Sachin Pilot (@SarahSachin) July 12, 2020
ಫ್ಯಾಕ್ಟ್ ಚೆಕ್: ಈ ಅಕೌಂಟ್‌ಗೆ ಹಲವು ಫಾಲೋವರ್ಸ್ ಇದ್ದಾಗಲೂ ಕೂಡ ವೈರಿಫೈಡ್ ಆಗಿಲ್ಲ. ಅದರ ಬಯೋದಲ್ಲಿ ಹಲವು ಪದಗಳನ್ನು ತಪ್ಪಾಗಿ ಬರೆಯಲಾಗಿದೆ. ಜೊತೆಗೆ ಸಚಿನ್ ಪೈಲಟ್ ಪತ್ನಿ ಸಾರಾ ಪೈಲಟ್ ಟ್ವಿಟ್ಟರ್ ಖಾತೆ ಹೊಂದಿಲ್ಲ ಎಂದು ತಿಳಿದುಬಂದಿದೆ.
ರಾಜಸ್ಥಾನ ಮೂಲಕ ಪತ್ರಕರ್ತೆ ತಬೀನಾಹ್ ಅಂಜುಮ್ ಎಂಬುವವರು ಇದು ಫೇಕ್ ಅಕೌಂಟ್ ಎಂದು ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ ಸಾರಾ ಹೆಸರಿನ ನಕಲಿ ಖಾತೆ ಇದಾಗಿದೆ ಎಂಬುದು ಸ್ಪಷ್ಟವಾಗಿದೆ.
ಇದನ್ನೂ ಓದಿ: 30 ಶಾಸಕರ ಬೆಂಬಲವಿದೆ; ವಿಡಿಯೋ ಬಿಡುಗಡೆ ಮಾಡಿದ ಸಚಿನ್ ಪೈಲಟ್ ತಂಡ


