Homeಮುಖಪುಟ30 ಶಾಸಕರ ಬೆಂಬಲವಿದೆ; ವಿಡಿಯೋ ಬಿಡುಗಡೆ ಮಾಡಿದ ಸಚಿನ್ ಪೈಲಟ್ ತಂಡ

30 ಶಾಸಕರ ಬೆಂಬಲವಿದೆ; ವಿಡಿಯೋ ಬಿಡುಗಡೆ ಮಾಡಿದ ಸಚಿನ್ ಪೈಲಟ್ ತಂಡ

ಸೋಮವಾರ ಬೆಳಿಗ್ಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ ಶಾಸಕರ ಸಭೆ ಕರೆದಿದ್ದು ಸಭೆಯಲ್ಲಿ 106 ಜನ ಭಾಗವಹಿಸಿದ್ದರು. ಅವರೆಲ್ಲರೂ ಅಶೋಕ್ ಗೆಹ್ಲೋಟ್‌ರವರನ್ನು ಬೆಂಬಲಿಸುವ ನಿರ್ಣಯ ಕೈಗೊಂಡಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.

- Advertisement -
- Advertisement -

ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಎದುರಿಸುತ್ತಿರುವ ರಾಜಕೀಯ ಬಿಕ್ಕಟ್ಟಿನ ಕೇಂದ್ರಬಿಂದು ಆಗಿರುವ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ತಮಗೆ 30 ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಅವರ ತಂಡ ಸುಮಾರು 15 ಶಾಸಕರು ಒಟ್ಟಿಗೆ ಕುಳಿತಿರುವ ವಿಡಿಯೋವನ್ನು ಬಿಡುಗಡೆ ಮಾಡಿದೆ.

ಆ ವೀಡಿಯೊದಲ್ಲಿ ಆಶ್ಚರ್ಯಕರವಾಗಿ ಸಚಿನ್ ಪೈಲಟ್ ಕಾಣಿಸಿಕೊಂಡಿಲ್ಲ. ಬದಲಿಗೆ ಕೆಲವು ಶಾಸಕರು ಕ್ಯಾಮೆರಾ ಎದುರು ವೃತ್ತಾಕಾರವಾಗಿ ಕುಳಿತಿರುವುದನ್ನು ಕಾಣಬಹುದಾಗಿದೆ. ವಿಡಿಯೋ ಚಿತ್ರೀಕರಿಸಿದ ಸ್ಥಳವನ್ನು ಬಹಿರಂಗಪಡಿಸಿಲ್ಲ.

ಕಳೆದ ಶನಿವಾರದಿಂದ ಕಾಣೆಯಾಗಿರುವ ಸಚಿನ್ ಪೈಲಟ್ ಮತ್ತವರ ತಂಡ ಮೂಲವೊಂದರ ಪ್ರಕಾರ ಹರಿಯಾಣದ ಮಾನೇಸರ್ ಹೊಟೇಲ್‌ನಲ್ಲಿದೆ ಎಂದು ಹೇಳಲಾಗಿದೆ.

ಇನ್ನೊಂದೆಡೆ ರಾಜ್ಯ ಕಾಂಗ್ರೆಸ್ ಪಕ್ಷ ಆರಂಭದಲ್ಲಿ ಪೈಲಟ್‌ರೊಂದಿಗೆ 16 ಜನ ಶಾಸಕರಿದ್ದಾರೆ ಎಂದು ಹೇಳಿತ್ತು. ನಂತರ ಈಗ ಕೇವಲ 12-10 ಶಾಸಕರಿರಬಹುದು ಎಂದಿದೆ.

ಸೋಮವಾರ ಬೆಳಿಗ್ಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ ಶಾಸಕರ ಸಭೆ ಕರೆದಿದ್ದು ಸಭೆಯಲ್ಲಿ 106 ಜನ ಭಾಗವಹಿಸಿದ್ದರು. ಅವರೆಲ್ಲರೂ ಅಶೋಕ್ ಗೆಹ್ಲೋಟ್‌ರವರನ್ನು ಬೆಂಬಲಿಸುವ ನಿರ್ಣಯ ಕೈಗೊಂಡಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.

ಇದು ಒಂದು ಮಟ್ಟಿಗೆ ಕುಸಿತದಿಂದ ಕಾಂಗ್ರೆಸ್‌ ಅನ್ನು ಕಾಪಾಡುವ ಭರವಸೆಯಾಗಿ ಕಂಡುಬಂದಿದೆ. ಸಭೆಯ ನಂತರ ಎಲ್ಲಾ ಶಾಸಕರನ್ನು ಬಿಜೆಪಿ ಖರೀದಿಸುವ ಭಯದಿಂದ ರೆಸಾರ್ಟ್‌ಗೆ ಕಳಿಸಲಾಗಿದೆ.

ಇನ್ನೊಂದೆಡೆ ಸಚಿನ್ ಪೈಲಟ್ ಬಿಜೆಪಿಗೆ ಸೇರುವುದಿಲ್ಲ ಎನ್ನುತ್ತಲೇ ಬಿಜೆಪಿಯೊಂದಿಗಿನ ಮಾತುಕತೆಗಳನ್ನು ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಿನ್ನೆ ಬಿಜೆಪಿಯ ಹಿರಿಯ ನಾಯಕಿ ಮತ್ತು ಕೇಂದ್ರ ಸಚಿವೆ ಉಮಾಭಾರತಿ ಸಚಿನ್ ಪೈಲಟ್‌ ಬಿಜೆಪಿ ಸೇರಲು ಮುಕ್ತ ಆಹ್ವಾನ ನೀಡಿದ್ದಾರೆ. ಸಚಿನ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಇಬ್ಬರು ನನ್ನ ಅಳಿಯರಿದ್ದಂತೆ. ಸಚಿನ್‌ ಕೂಡ ಇಲ್ಲಿಗೆ ಬಂದರೆ ನಮಗೆ ತುಂಬಾ ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: ರಾಜಸ್ಥಾನ ರಾಜಕೀಯ ಬಿಕ್ಕಟ್ಟು: ಕಾಂಗ್ರೆಸ್ ಮುಖಂಡರ ನಿವಾಸಗಳ ಮೇಲೆ ಐಟಿ ದಾಳಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...