ಬರಹಗಾರ-ಕವಿ ಹಾಗೂ ಸಾಮಾಜಿಕ ಕಾರ್ಯಕರ್ತ ವರವರ ರಾವ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ತಕ್ಷಣದ ವೈದ್ಯಕೀಯ ತಪಾಸಣೆಗೆ ಅವಕಾಶ ನೀಡುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ಕೋರಿ ಬಾಂಬೆ ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ.
ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ 2018 ರಿಂದ ಜೈಲಿನಲ್ಲಿರುವ ವರವರ ರಾವ್ ಜೈಲಿನೊಳಗೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರಿಗೆ ಸೂಕ್ತ ವೈದ್ಯಕೀಯ ನೆರವು ನೀಡಲಾಗಿಲ್ಲ ಎಂಬುದು ಅವರ ಮನವಿಯಲ್ಲಿ ಹೇಳಿದ್ದಾರೆ.
ಅವರ ಕುಟುಂಬ ಪತ್ರಿಕಾಗೋಷ್ಠಿ ನಡೆಸಿ ವೈದ್ಯಕೀಯ ಆಧಾರದ ಮೇಲೆ ಬಿಡುಗಡೆ ಮಾಡಬೇಕೆಂದು ಕೇಳಿತ್ತು.
ಜೂನ್ 2 ರಂದು ಜೈಲಿನೊಳಗೆ ಪ್ರಜ್ಞೆ ತಪ್ಪಿದ ನಂತರ ರಾವ್ ಅವರನ್ನು ಜೆಜೆ ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು. ರಾವ್ ಅವರಿಗೆ ಸಹಾಯ ಮಾಡುವ ಬಗ್ಗೆ ಆಸ್ಪತ್ರೆಯು ಪ್ರಿಸ್ಕ್ರಿಪ್ಷನ್ ನೀಡಿತ್ತು. ಜೂನ್‌ನಲ್ಲಿ ಜೆಜೆ ಆಸ್ಪತ್ರೆಯ ಸಲಹೆಯಂತೆ ಅಧಿಕಾರಿಗಳು ರಾವ್‌ಗೆ ವೈದ್ಯಕೀಯ ತಪಾಸಣೆ ನಡೆಸಿಲ್ಲ ಎಂದು ಅವರ ಪರವಾಗಿ ಇಂದು ಸಲ್ಲಿಸಲಾದ ಹೊಸ ರಿಟ್ ಅರ್ಜಿಯು ಆರೋಪಿಸಿದೆ.
ಜೂನ್ 2 ರ ಆಸ್ಪತ್ರೆಯ ಪ್ರಿಸ್ಕ್ರಿಪ್ಷನ್‌ಗೆ ಅನುಗುಣವಾಗಿ ಅಧಿಕಾರಿಗಳು ಅನುಸರಿಸಿದ ಕ್ರಮ, ಅವುಗಳ ಜೊತೆಗೆ ರಾವ್ ಅವರ ಸಂಪೂರ್ಣ ವೈದ್ಯಕೀಯ ದಾಖಲೆಗಳು ಹಾಗೂ ವರದಿಗಳನ್ನು ತಯಾರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನಿರ್ಧೇಶಿಸುತ್ತದೆ.
ರಾವ್ ಅವರ ಆರೋಗ್ಯದ ಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ತಪಾಸಣೆಗೆ ಕಳುಹಿಸಲು ತಕ್ಷಣದ ಕ್ರಮವನ್ನು ಸಹ ಕೋರಲಾಗಿದೆ.
ಈ ಹಿಂದೆ ರಾವ್ ಅವರು ವೈದ್ಯಕೀಯ ಕಾರಣಗಳಿಗಾಗಿ ಮಧ್ಯಂತರ ಜಾಮೀನು ಕೋರಿ ಬಾಂಬೆ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಅದು ಜೂನ್‌ನಲ್ಲಿ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು.
ಮುಂಬೈನ ತಾಲೋಜಾ ಸೆಂಟ್ರಲ್ ಜೈಲಿನಲ್ಲಿರುವ ರಾವ್, ಈ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಪಡೆಯಲು ಆಧಾರವಾಗಿ ತನ್ನ ವೃದ್ಧಾಪ್ಯ ಮತ್ತು ಕೊರೊನಾಗೆ ಒಳಗಾಗುವ ಸಾಧ್ಯತೆಯನ್ನು ಉಲ್ಲೇಖಿಸಿದ್ದರು.
ಭೀಮಾ ಕೋರೆಗಾಂವ್ ಯುದ್ಧದ 200 ನೇ ಸ್ಮರಣಾರ್ಥ ಜನವರಿ 1, 2018 ರಂದು ಪುಣೆಯಲ್ಲಿ ನಡೆದ ಗಲಭೆಗಳಿಗೆ ಎಲ್ಗರ್ ಪರಿಷತ್ ಕಾರಣ ಹಾಗೂ ಈ ಕಾರ್ಯಕ್ರಮವನ್ನು ನಿಷೇಧಿತ ಸಂಘಟನೆಗಳು ಬೆಂಬಲಿಸಿ ಆಯೋಜಿಸಿದ್ದವು ಎಂದು ಆರೋಪಿಸಿ ಇವರನ್ನು ಬಂಧಿಸಲಾಗಿತ್ತು.
ಓದಿ:ಜೈಲಿನಲ್ಲಿ ಕವಿ ವರವರ ರಾವ್‌ರನ್ನು ಕೊಲ್ಲಬೇಡಿ! ಕುಟುಂಬ ಸದಸ್ಯರ ಮನವಿ