HomeಮುಖಪುಟRPWD Act : ವಿಕಲಚೇತನರ ಹಕ್ಕುಗಳ ಕಾಯಿದೆ ತಿದ್ದುಪಡಿ ವಿರುದ್ಧ ಸಂಘಟಿತ ಜಯ

RPWD Act : ವಿಕಲಚೇತನರ ಹಕ್ಕುಗಳ ಕಾಯಿದೆ ತಿದ್ದುಪಡಿ ವಿರುದ್ಧ ಸಂಘಟಿತ ಜಯ

- Advertisement -
- Advertisement -

ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಕಾಯಿದೆ 2016 (ಆರ್‌ಪಿಡಬ್ಲುಡಿ)ರಲ್ಲಿ ಸಣ್ಣಪುಟ್ಟ ಅಪರಾಧಗಳಿಗೆ ಶಿಕ್ಷೆ/ದಂಡ ವಿಧಿಸುವ ವಿಧಿ 89, 92 ಮತ್ತು 93ಕ್ಕೆ ತಿದ್ದುಪಡಿ ತಂದು ಅಂತಹ ಅಪರಾಧಗಳನ್ನು ಶಿಕ್ಷೆಯಿಂದ ಮುಕ್ತಗೊಳಿಸುವ ಕುರಿತು ತಮ್ಮ ಚಿಂತನೆ/ ಸಲಹೆ ಸೂಚನೆ/ ಅಭಿಪ್ರಾಯಗಳನ್ನು ನೀಡುವಂತೆ ಕೋರಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ನಿರ್ದೇಶಕ ಕೆ.ವಿ.ಎಸ್. ರಾವ್ ಅವರು ಆಯ್ದ ಏಳು ಸರಕಾರೇತರ ಸಂಸ್ಥೆಗಳಿಗೆ (ಎನ್‍ಜಿಒ/ಡಿಪಿಒ) ಈ ವರ್ಷದ ಜೂನ್ ತಿಂಗಳಲ್ಲಿ ಪತ್ರ ಬರೆದಿದ್ದರು. ಚಿಕ್ಕಪುಟ್ಟ ಅಪರಾಧಗಳನ್ನು ಕ್ರಿಮಿನಲ್ ಅಪರಾಧೀಕರಣದಿಂದ ಮುಕ್ತಗೊಳಿಸಿ ವ್ಯಾಪಾರೀ ಭಾವನೆಗಳನ್ನು ಸುಧಾರಿಸಿ, ಕೋರ್ಟು ಕಚೇರಿ ವ್ಯವಹಾರಗಳನ್ನು ಸರಾಗಗೊಳಿಸುವುದು ಈ ತಿದ್ದುಪಡಿಗಳ ಉದ್ದೇಶ ಎಂದು ಹೇಳಲಾಗಿತ್ತು.

ಇದರ ಹಿನ್ನೆಲೆಯನ್ನು 2020ರ ಜೂನ್ 10ರಂದು ಹಣಕಾಸು ಸಚಿವಾಲಯವು ಚೆಕ್ ಅಮಾನ್ಯ ಮತ್ತು ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಚಿಕ್ಕಪುಟ್ಟ ಅಪರಾಧಗಳನ್ನು ಕ್ರಿಮಿನಲ್ ಅಪರಾಧೀಕರಣದಿಂದ ಹೊರತುಪಡಿಸುವಂತೆ ಮಾಡಿದ ಪ್ರಸ್ತಾಪದೊಂದಿಗೆ ಗುರುತಿಸಬಹುದು.

ಹಣಕಾಸು ಸಚಿವಾಲಯದ ಪ್ರಕಾರ 19 ಆರ್ಥಿಕ ಕಾನೂನುಗಳಲ್ಲಿರುವ ಚಿಕ್ಕಪುಟ್ಟ ಅಪರಾಧಗಳನ್ನು ಕ್ರಿಮಿನಲ್ ಅಪರಾಧೀಕರಣದಿಂದ ಹೊರತುಪಡಿಸಿದರೆ, ಅದು ಕೋವಿಡ್-19 ಪಿಡುಗಿನ ಪರಿಣಾಮವಾಗಿ ತತ್ತರಿಸುತ್ತಿರುವ ಉದ್ಯಮಗಳಿಗೆ ಉಪಶಮನ ನೀಡಬಹುದು ಮತ್ತು ವ್ಯಾಪಾರವನ್ನು ಇನ್ನಷ್ಟು ಸುಲಭಗೊಳಿಸಿ, ವ್ಯಾಪಾರಿಗಳ ಮೇಲಿನ ಹೊರೆಯನ್ನು ಕಡಿಮೆ ಮಾಡಬಹುದು ಎಂಬುದಾಗಿತ್ತು.

ಈ ಪ್ರಸ್ತಾವನೆಯ ಪ್ರಕಾರ “ಚಿಕ್ಕಪುಟ್ಟ ಅಪರಾಧ”ಗಳನ್ನು ಕ್ರಿಮಿನಲ್ ಅಪರಾಧೀಕರಣದಿಂದ ಮುಕ್ತಗೊಳಿಸುವ ಮೂಲಕ ಸರಕಾರವು ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಕಾಯಿದೆಯ ಮೂಲಸ್ವರೂಪವನ್ನೇ ಬದಲಿಸಲು ಹೊರಟಿತ್ತು. “ಇಂತಹ ಕ್ರಿಮಿನಲ್ ಅಪರಾಧೀಕರಣ ಹಿಂಜರಿಕೆಗೆ ಕಾರಣವಾಗುತ್ತದೆ ಮತ್ತು ವಿದೇಶಿ ಮತ್ತು ದೇಶೀಯ ಹೂಡಿಕೆಗಳ ಮೇಲೆ ಅಡ್ಡಪರಿಣಾಮ ಬೀರುವ ಪ್ರಮುಖ ಅಂಶಗಳು” ಎಂದು ಸರಕಾರ ಹೇಳಿತ್ತು. ವಿದೇಶಿಯರಾಗಲೀ, ಭಾರತೀಯರೇ ಆಗಿರಲಿ, ಯಾವುದೇ ಹೂಡಿಕೆದಾರರು ತಾವು ಉದ್ಯಮ ನಡೆಸಬಯಸುವ ಈ ನೆಲದ ಕಾನೂನುಗಳನ್ನು ಪಾಲಿಸುವುದು ಅಗತ್ಯವಾಗಿರುತ್ತದೆ. ಅವುಗಳನ್ನು ಅವರ ಹಿತಾಸಕ್ತಿಗಳಿಗೆ ಸರಿಹೊಂದುವಂತೆ ಬದಲಿಸಲಾಗುವುದಿಲ್ಲ. ಪ್ರಸ್ತಾಪಿತ ತಿದ್ದುಪಡಿಗಳು ಈ ಕಾಯಿದೆಯಲ್ಲಿರುವ ಕಾನೂನು ಪರಿಪಾಲನೆ ಕುರಿತ ಅಧಿಕಾರವನ್ನೇ ಇಲ್ಲವಾಗಿಸುವ ಉದ್ದೇಶಗಳನ್ನು ಹೊಂದಿವೆ.

ಆರ್‍ಪಿಡಬ್ಲ್ಯೂಡಿ ಕಾಯಿದೆಗೆ ಪ್ರಸ್ತಾಪಿತ ತಿದ್ದುಪಡಿಗಳು ವಿಕಲಚೇತನ ವ್ಯಕ್ತಿಗಳ ಕಮೀಷನರ್ ಅಥವ ಸರಕಾರಿ ಕಮೀಷನರ್‍ಗೆ ಕಸ್ಟಡಿಯಲ್ಲಿ ಇದ್ದಿರಬಹುದಾದ ಅಪರಾಧಿಯನ್ನು ಬಿಡುಗಡೆಗೊಳಿಸುವ ಅಧಿಕಾರ ನೀಡುವ ಉದ್ದೇಶ ಹೊಂದಿವೆ.

ಇವು ವಿಧಿ 89 (ಇಲ್ಲಿರುವ ನಿಯಮ ಮತ್ತು ನಿಯಂತ್ರಣಗಳ ಉಲ್ಲಂಘನೆಗೆ ಶಿಕ್ಷೆ ವಿಧಿಸುವುದು); ವಿಧಿ 92 (ಎ) (ಯಾರೊಬ್ಬರೇ ಆಗಿರಲಿ ಯಾವುದೇ ವಿಕಲಚೇತನ ವ್ಯಕ್ತಿಯನ್ನು ಯಾವುದೇ ಸ್ಥಳದಲ್ಲಿ ಸಾರ್ವಜನಿಕವಾಗಿ ಬೇಕಂತಲೇ ಅವಮಾನ ಮಾಡುವುದು, ನಿಂದಿಸುವುದು ಅಥವಾ ಬೆದರಿಕೆ ಹಾಕುವುದು) ಮತ್ತು ವಿಧಿ 93 (ಮಾಹಿತಿ ನೀಡಲು ತಪ್ಪಿದಲ್ಲಿ ಶಿಕ್ಷೆ ವಿಧಿಸುವುದು) ಇತ್ಯಾದಿಗಳಿಗೆ ಸಂಬಂಧಿಸಿದೆ.

ಆದರೆ, ಕಡೆಗಣಿಸಲ್ಪಟ್ಟ ಸಮುದಾಯದ ಹಕ್ಕುಗಳನ್ನು ಪಡೆದುಕೊಳ್ಳಲು ಇಷ್ಟು ವರ್ಷಗಳ ಕಾಲ ಹೋರಾಟ ಮಾಡಿ ಗೆಲುವು ಸಾಧಿಸಿರುವಾಗ, ವ್ಯಾಪಾರ ಮಾಡುವುದಕ್ಕೆ ಹೂಡಿಕೆದಾರರಿಗೆ ಹೆಚ್ಚಿನ ಸೌಲಭ್ಯ ಒದಗಿಸುವ, ಉತ್ತಮ ವಾತಾವರಣ ನಿರ್ಮಾಣ ಮಾಡುವ ಸಲುವಾಗಿ ಆ ಹಕ್ಕುಗಳನ್ನು ಕಡೆಗಣಿಸಿ ಮೂಲೆಗೆ ತಳ್ಳಬೇಕು ಎಂದಾಗಬೇಕಿಲ್ಲ ಅಲ್ಲವೇ? ಆದರೆ, ದುರದೃಷ್ಟವಶಾತ್ ಸರಕಾರಕ್ಕೆ ಸಾಮಾನ್ಯ ಜನರ ಹಿತಾಸಕ್ತಿಗಳಿಗಿಂತ ವ್ಯಾಪಾರಿ, ಉದ್ಯಮಿಗಳ ಹಿತಾಸಕ್ತಿಗಳು ಹೆಚ್ಚು ಮುಖ್ಯವಾಗಿವೆ.

ಈ ಕಾನೂನುಗಳಲ್ಲಿರುವ ಶಿಕ್ಷೆಯ ಅವಕಾಶಗಳು ಕೇವಲ ಹಿಂಜರಿಕೆ ಉಂಟುಮಾಡುವಂತವುಗಳು ಅಲ್ಲ. ಸರಿಯಾಗಿ ಅನುಷ್ಟಾನ ಮಾಡಿದಲ್ಲಿ, ದೂರದೃಷ್ಟಿಯಿಂದ ನೋಡಿದಲ್ಲಿ ಕಾನೂನನ್ನು ಪಾಲಿಸುವ ಮತ್ತು ಎಲ್ಲರನ್ನೂ ಒಳಗೊಳ್ಳುವ ವಾತಾವರಣವನ್ನು ಸೃಷ್ಟಿ ಮಾಡಬಲ್ಲವು. ಅದಕ್ಕಿಂತ ಮಹತ್ವದ ವಿಷಯ ಎಂದರೆ, ಈ ಆರ್‍ಪಿಡಬ್ಲ್ಯೂಡಿ ಕಾಯಿದೆಯ ಅಡಿಯಲ್ಲಿ ದಾಖಲಾದ ಪ್ರಕರಣಗಳು ಅಥವಾ ಅವುಗಳಿಗೆ ಸಂಬಂಧಿಸಿ ಆದ ಶಿಕ್ಷೆ/ದಂಡಗಳ ಕುರಿತು ಅಂಕಿಅಂಶಗಳು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ.

ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವ ಯಾವುದೇ ದತ್ತಾಂಶ ಇಲ್ಲದ ಸರಕಾರದ ವಿರುದ್ಧ ವಿಕಲಚೇತನ ವ್ಯಕ್ತಿಗಳು ತೀವ್ರವಾಗಿ ಪ್ರತಿಭಟನೆ ನಡೆಸಿದರು. ಈ ಪ್ರಸ್ತಾಪಿತ ತಿದ್ದುಪಡಿಗಳ ಸಮರ್ಥನೆಗಾಗಿ ಸರಕಾರ ನೀಡಿದ ನಾಟಕೀಯ ನೆಪಗಳು ನಗೆಪಾಟಲಿಗೆ ಗುರಿಯಾದವು. ಕೊರೊನಾ ಪಿಡುಗು ಎಲ್ಲಾ ಕಡೆ ಹರಡಿರುವಾಗ ವಿಕಲಚೇತನ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುವುದು ಸಾಧ್ಯವಿಲ್ಲ. ಸುಮಾರು 125ರಷ್ಟು ವಿಕಲಚೇತನ ಹಕ್ಕುಗಳ, ನಾಗರಿಕ ಸಮಾಜ ಸಂಘಟನೆಗಳು ಮತ್ತು ಕಾರ್ಯಕರ್ತರು ಜಂಟಿಯಾಗಿ ಪತ್ರ ಬರೆದು ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಕಾಯಿದೆ, 2016 ರನ್ನು ತೆಳುಗೊಳಿಸುವ ಅಥವಾ ಇಲ್ಲದಂತೆ ಮಾಡುವ ಉದ್ದೇಶ ಹೊಂದಿರುವ ಈ ತಿದ್ದುಪಡಿಗಳಿಗೆ ಬಲವಾದ ವಿರೋಧ ವ್ಯಕ್ತಪಡಿಸಿವೆ. ಸ್ಥಳೀಯವಾಗಿಯೂ ಈ ಕ್ರಮದ ವಿರುದ್ಧ ಪ್ರತಿಭಟನೆಗಳು ನಡೆದಿವೆ.

ಈ ಕಾಯಿದೆಯ ಅಂಶಗಳು ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ರಕ್ಷಣೆಗೆ ಪೂರಕವಾಗಿದೆ ಎಂದು ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೆಲಸ ಮಾಡುವ ಬೇರೆಬೇರೆ ಮೂಲಗಳು ಪ್ರತಿಸ್ಪಂದಿಸಿರುವಂತೆ ಈ ಕಾಯಿದೆಯ ಪರಿಣಾಮಕಾರಿ ಅನುಷ್ಟಾನ ಅಗತ್ಯ ಇದೆ ಎಂದು ವಿಕಲ ಚೇತನ ವ್ಯಕ್ತಿಗಳ ಸಬಲೀಕರಣ ಸಚಿವಾಲಯವೇ ಈಗ ಒಪ್ಪಿಕೊಂಡಿದೆ. “ಈ ಸಂಬಂಧವಾಗಿ ಹಲವು ವಲಯಗಳಿಂದ ಮೂಡಿರುವ ಭಾವನೆಗಳನ್ನು ಪರಿಗಣಿಸಿ, ಅಪರಾಧೀಕರಣವನ್ನು ದುರ್ಬಲಗೊಳಿಸುವ ಪ್ರಸ್ತಾಪಿತ ತಿದ್ದುಪಡಿಗಳು ವಿಕಲಚೇತನ ವ್ಯಕ್ತಿಗಳ ಹಿತಾಸಕ್ತಿಗೆ ವಿರುದ್ಧವಾಗಿವೆ ಎಂಬ ಅಭಿಪ್ರಾಯವನ್ನು ಇಲಾಖೆ ತಳೆದಿದೆ” ಎಂದು ಹೇಳಿಕೆ ಕೊಟ್ಟಿದ್ದು, ಆದುದರಿಂದ, ಈ ತಿದ್ದುಪಡಿಯನ್ನು ಮುಂದುವರಿಸದಿರುವ ನಿರ್ಧಾರವನ್ನು ಕೈಕೊಂಡಿದೆ. ವಿಕಲ ಚೇತನ ವ್ಯಕ್ತಿಗಳ ಹಕ್ಕುಗಳ ಕಾಯಿದೆಗೆ ತಿದ್ದುಪಡಿ ತರುವ ಸರ್ಕಾರದ ಪ್ರತಿಗಾಮಿ ನಿರ್ಧಾರವನ್ನು ಸರ್ಕಾರ ಕೈಬಿಟ್ಟಿರುವುದು ವಿಕಲಚೇತನ ವ್ಯಕ್ತಿಗಳ ಹಕ್ಕುಗಳನ್ನು ಕಾಪಾಡುವ ಹೋರಾಟಕ್ಕೆ ಸಂದ ಜಯವಾಗಿದೆ.

ಜಿ. ರವಿ, ವಿಕಲಚೇತನ ಹಕ್ಕುಗಳ ಚಳವಳಿಯಲ್ಲಿ ಸಕ್ರಿಯವಾಗಿರುವ ಕಾರ್ಯಕರ್ತರು


ಇದನ್ನು ಓದಿ: ಸ್ತ್ರೀಮತಿ- 2: ಲಾಕ್ – ಅನ್ ಲಾಕ್ ಗಳ ನಡುವೆ ಕಳೆದುಹೋದ ಕೀಲಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್...

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...