Homeಕರೋನಾ ತಲ್ಲಣ’ಪಿಡಿಒ’ಗೆ ಕೊರೊನಾ ಸೋಂಕು; ಹೆಬ್ಬೂರು ಗ್ರಾ.ಪಂ ಕಚೇರಿ ಸೀಲ್‌ಡೌನ್

’ಪಿಡಿಒ’ಗೆ ಕೊರೊನಾ ಸೋಂಕು; ಹೆಬ್ಬೂರು ಗ್ರಾ.ಪಂ ಕಚೇರಿ ಸೀಲ್‌ಡೌನ್

ಈ ನಡುವೆ ಪೌರಕಾರ್ಮಿಕರೊಬ್ಬರಿಗೆ ಕೊರೊನಾ ತಗುಲಿದ್ದು, ಮಹಾನಗರ ಪಾಲಿಕೆ ಕಾರ್ಮಿಕರಿಗೆ ಮೂಲಭೂತ ಸೌಕರ್ಯಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಲಾಗಿದೆ.

- Advertisement -
- Advertisement -

ಪಿಡಿಒ ಹಾಗೂ ಬಿಲ್ ಕಲೆಕ್ಟರ್ ಒಬ್ಬರಿಗೆ ಕೊರೊನ ಸೋಂಕು ದೃಢಪಟ್ಟಿರುವುದರಿಂದ ತುಮಕೂರು ತಾಲೂಕು ಹೆಬ್ಬೂರು ಗ್ರಾಮ ಪಂಚಾಯ್ತಿ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ. ಸೋಂಕಿತರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ತುಮಕೂರು ಗ್ರಾಮಾಂತರ ಕ್ಷೇತ್ರದ ಹೆಬ್ಬೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸೋಂಕಿತರೊಂದಿಗೆ ಕೆಲಸ ನಿರ್ವಹಿಸುತ್ತಿದ್ದ ಎಂಟು ಮಂದಿ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

ಗ್ರಾಮ ಪಂಚಾಯಿತಿ ಕಚೇರಿ ಸೀಲ್ ಡೌನ್ ಮಾಡಿದ್ದು ಜನರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.  ಜನರು ಯಾವುದೇ ಕಾರಣಕ್ಕೂ ಭೀತಿಗೆ ಒಳಗಾಗಬಾರದು. ಮಾಸ್ಕ್ ಧರಿಸಿ ದೈಹಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಪಿ.ಎಸ್.ಐ. ಭೂಪೇಶ್ ತಿಳಿಸಿದ್ದಾರೆ.

ಈ ನಡುವೆ ತುಮಕೂರಿನಲ್ಲಿ ಪೌರಕಾರ್ಮಿಕರೊಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ಅವರ ಸಂಪರ್ಕದಲ್ಲಿದ್ದ ಸುಮಾರು 15 ಮಂದಿ ಪೌರಕಾರ್ಮಿಕರನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ.

ಕೊರೊನಾ ವಾರಿಯರ್‌ಗಳಾಗಿ ದುಡಿಯುತ್ತಿರುವ ಪೌರಕಾರ್ಮಿಕರಿಗೆ ಪಿಪಿಇ ಕಿಟ್ ಗಳು ಮತ್ತು ಸುರಕ್ಷಾ ಸಲಕರಣೆಗಳನ್ನು ಕೊಡಬೇಕು. ಸ್ಯಾನಿಟೈಜರ್ ನೀಡಬೇಕು ಎಂದು ಒತ್ತಡ ಹೇರಿದರೂ ಪಾಲಿಕೆ ಅಧಿಕಾರಿಗಳು ಗಮನಹರಿಸಿಲ್ಲ ಎಂದು ಸಿಐಟಿಯು ಆರೋಪಿಸಿದೆ.

ಪ್ರತಿನಿತ್ಯ ಕೆಲಸ ಮಾಡವ ಪೌರಕಾರ್ಮಿಕರಿಗೆ ಅವರು ಕೆಲಸ ಮಾಡುವ ಸ್ಥಳದಲ್ಲೇ ಸ್ನಾನ ಮಾಡಿಕೊಂಡು ಹೋಗುವಂತಹ ವ್ಯವಸ್ಥೇ ಮಾಡಬೇಕು. ಕೊರೊನಾ ಸೋಂಕು ಸಮುದಾಯಕ್ಕೆ ಹರಡುವುದನ್ನು ತಡೆಯಬೇಕು ಎಂದು ಮನವಿ ಸಲ್ಲಿಸಿದ್ದರೂ ತುಮಕೂರು ಮಹಾನಗರ ಪಾಲಿಕೆ ಆಯುಕ್ತರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಲಾಗಿದೆ.

ನಾನುಗೌರಿ.ಕಾಂ ಈ ಕುರಿತು ವರದಿ ಮಾಡಿದ್ದರೂ ಅದಕ್ಕೆ ಜಿಲ್ಲಾಡಳಿತವಾಗಲೀ ಮತ್ತು ಮಹಾನಗರ ಪಾಲಿಕೆಯಾಗಲೀ ಸ್ಪಂದಿಸಿಲ್ಲ.

ಕೆಲಸದ ಸ್ಥಳದಲ್ಲೇ ಸ್ನಾನ ಮಾಡಿಕೊಂಡು ಹೋಗುವುದರಿಂದ ಪೌರಕಾರ್ಮಿಕರ ಕುಟುಂಬಗಳಿಗೆ ಸೋಂಕು ಹರಡುವುದನ್ನು ತಡೆಯಬಹುದು ಎಂದು ಎನ್. ಕೆ. ಸುಬ್ರಮಣ್ಯ ತಿಳಿಸಿದರು.


ಓದಿ: ಭಾರತದ ಕೊರೊನಾ ಸಾವಿನ ಪ್ರಮಾಣ ವಿಶ್ವಕ್ಕಿಂತ ಕಡಿಮೆ; 8.8 ಲಕ್ಷ ಸೋಂಕಿತರು ಗುಣ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...