ಫ್ಯಾಕ್ಟ್‌ಚೆಕ್: ಮಾಸ್ಕ್ ಧರಿಸದ ಮೇಕೆ ಬಂಧಿಸಿದ ಕಾನ್ಪುರ ಪೊಲೀಸರು?- ತಪ್ಪು ವರದಿ ಮಾಡಿದ ಮಾಧ್ಯಮಗಳು

0
15

ಮಾಸ್ಕ್ ಧರಿಸದ ಮೇಕೆ ಒಂದನ್ನು ಕಾನ್ಪುರ ಪೊಲೀಸರು ಬಂಧಿಸಿದ್ದಾರೆ ಎಂಬ ವಿಲಕ್ಷಣ ಸುದ್ದಿ ಜುಲೈ 27 ರಂದು ಹಲವು ಮಾಧ್ಯಮಗಳಲ್ಲಿ ಪ್ರಕಟವಾಯಿತು. ಕನ್ನಡದ ಸುವರ್ಣ ಟಿವಿ ಸೇರಿದಂತೆ, ನ್ಯಾಷನಲ್ ಹೆರಾಲ್ಡ್, ಒರಿಸ್ಸಾ ಪೋಸ್ಟ್ ಮತ್ತು ನ್ಯೂಸ್ 18 ಇಂಗ್ಲಿಷ್‌ ಸೇರಿದಂತೆ ಹಲವು ಪತ್ರಿಕೆಗಳು ಇದೇ ಸುದ್ದಿಯನ್ನು ವರದಿ ಮಾಡಿವೆ.

ಸುದ್ದಿ ಸಂಸ್ಥೆ ಐಎಎನ್‌ಎಸ್ ಪ್ರಕಾರ “ಈ ಘಟನೆ ವಾರಾಂತ್ಯದಲ್ಲಿ ನಡೆಯಿತು ಮತ್ತು ಬೆಕೊಂಗಂಜ್ ಪೊಲೀಸರು ಜೀಪ್‌ನಲ್ಲಿ ಮೇಕೆ ಎತ್ತಿಕೊಂಡು ಪೊಲೀಸ್ ಠಾಣೆಗೆ ಕರೆದೊಯ್ದರು ಎಂದು ಪೊಲೀಸರು ತಮ್ಮ ಜೀಪಿನಲ್ಲಿ ಮೇಕೆ ತುಂಬುವ ವಿಡಿಯೋವನ್ನು ಹಲವರು ಪ್ರಸಾರ ಮಾಡಿದ್ದಾರೆ.

ಟೈಮ್ಸ್ ನೌ, ರಿಪಬ್ಲಿಕ್ ಮತ್ತು ಇಂಡಿಯಾ ಟೈಮ್ಸ್ ಇದೇ ರೀತಿಯ ವರದಿಗಳನ್ನು ಮಾಡಿವೆ. ಕೆಲ ಮಾಧ್ಯಮಗಳು ವ್ಯಕ್ತಿಯೊಬ್ಬ ಮಾಸ್ಕ್ ಧರಿಸದೆ ಮೇಕೆಯೊಂದನ್ನು ಹಿಡಿದು ಹೋಗುತ್ತಿದ್ದ, ಪೊಲೀಸರು ಬಂದ ತಕ್ಷಣ ಮೇಕೆ ಬಿಟ್ಟು ಓಡಿ ಹೋಗಿದ್ದಾನೆ. ಪೊಲೀಸರು ಮೇಕೆಯನ್ನು ಬಂಧಿಸಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ತಪ್ಪು ವರದಿ

ಮೇಲ್ನೋಟಕ್ಕೆ ಇದು ಹಾಸ್ಯದ ಸಂಗತಿಯಾಗಿ ಗೋಚರಿಸುತ್ತದೆ. ಸಾಮಾನ್ಯ ಜ್ಞಾನವಿರುವ ಯಾರೂ ಕೂಡ ಇದನ್ನು ನಂಬಲು ಸಾಧ್ಯವಿಲ್ಲ. ಆದರೆ ಹಲವು ಮಾಧ್ಯಮಗಳು ಇದನ್ನು ‘ಸುದ್ದಿ’ಯನ್ನಾಗಿ ಪ್ರಕಟ ಮಾಡಿವೆ. ಜನರಲ್ಲಿ ಗೊಂದಲ ಹುಟ್ಟಿಸುವುದು ಆ ಮೂಲಕ ಅವರು ಈ ಸುದ್ದಿಯನ್ನು ಓದುವಂತೆ ಮಾಡುವುದು ಅವರ ಉದ್ದೇಶವಾಗಿದೆ. ಪೊಲೀಸ್ ಜೀಪ್‌ಗೆ ಮೇಕೆ ತುಂಬುವ ವಿಡಿಯೋವನ್ನು ಮಾಧ್ಯಮಗಳು ಪದೇ ಪದೇ ತೋರಿಸಿವೆ. ಇನ್ನು ಕೆಲವರು ತನ್ನ ಮೇಕೆಯನ್ನು ಪೊಲೀಸರು ಬಲವಂತವಾಗಿ ತೆಗೆದುಕೊಂಡು ಹೋಗಿದ್ದಾರೆ ಎಂದು ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ ಎಂದು ಟ್ವಿಟ್ಟರ್‌ನಲ್ಲಿ ದೂರಿದ್ದಾರೆ. ಒಟ್ಟಿನಲ್ಲಿ ಗಾಸಿಪ್ ಹುಟ್ಟುಹಾಕುವಲ್ಲಿ ಮಾಧ್ಯಮಗಳು ಯಶಸ್ವಿಯಾಗಿವೆ. ಆದರೆ ಈ ಎಲ್ಲಾ ವರದಿಗಳು ತಪ್ಪಾಗಿವೆ.

ವಾಸ್ತವವೇನು?

ಲಾಕ್‌ಡೌನ್ ಸಮಯದಲ್ಲಿ ದಾದಾ ಮಿಯಾನ್ ಎಂಬ ಪ್ರದೇಶದಲ್ಲಿ ಮಾಲೀಕರಿಲ್ಲದ ಮೇಕೆಯೊಂದು ತಿರುಗಾಡುತ್ತಿದೆ. ಈ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಕಾರಣ ಬೆಕೊಂಗಂಜ್ ಪೊಲೀಸರು ಅದನ್ನು ಠಾಣೆಗೆ ಕರೆತಂದಿದ್ದಾರೆ. ಸ್ವಲ್ಪ ಸಮಯದ ಬಳಿಕ ಅದರ ಮಾಲೀಕ ಮೊಹಮ್ಮದ್ ಅಲಿಯ ಮಗ ಖಾನಿಕುಜ್ಮಾ ಅವರಿಗೆ ಹಸ್ತಾಂತರಿಸಲಾಗಿದೆ ಎಂದು ಕಾನ್ಪುರ್ ಪೊಲೀಸರು ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

ಆಲ್ಟ್ ನ್ಯೂಸ್ ಈ ಕುರಿತು ಫ್ಯಾಕ್ಟ್‌ಚೆಕ್ ನಡೆಸಿದ್ದು, ಬೆಕೊಂಗಂಜ್ ಪೊಲೀಸರನ್ನು ಕೇಳಿದಾಗ “ಮಾಲೀಕರಿಲ್ಲದೆ ತಿರುಗಾಡುತ್ತಿದ್ದ ಮೇಕೆಯನ್ನು ಕರೆತಂದಿದ್ದವು. ನಂತರ ಅದರ ಮಾಲೀಕರಿಗೆ ಹಸ್ತಾಂತರಿಸಲಾಗಿದೆ. ಮಾಸ್ಕ್ ಧರಿಸದ ಕಾರಣ ನಾವು ಮೇಕೆಯನ್ನು ಬಂಧಿಸಿದ್ದೇವೆ ಎಂಬು ಸುದ್ದಿ ಸಂಪೂರ್ಣ ಸುಳ್ಳು” ಎಂದಿದ್ದಾರೆ.

ಮೇಕೆ ಮಾಲೀಕರಾದ ಮೊಹಮ್ಮದ್ ಅಲಿ, ಪತ್ರಿಕೆಗಳಲ್ಲಿನ ಸುದ್ದಿ ವರದಿಗಳನ್ನು ನೋಡಿ ನಕ್ಕಿದ್ದಾರೆ. “ಪೊಲೀಸರು ನಮಗೆ ಸಹಾಯ ಮಾಡಿದರು. ಅವರು ಅದನ್ನು ಪೊಲೀಸ್ ಠಾಣೆಗೆ ತಂದು ನಮಗೆ ತಿಳಿಸದಿದ್ದರೆ ನಮ್ಮ ಮೇಕೆ ಕಳೆದುಹೋಗುತ್ತದೆ” ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: ಕೊರೊನಾ Fact check : ಜನ ಮನೆಯಿಂದ ಹೊರಬರದಿರಲು ಬೀದಿಗಳಿಗೆ 800 ಸಿಂಹಗಳನ್ನು ಬಿಟ್ಟ ರಷ್ಯಾ? 

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here