Homeದಿಟನಾಗರಫ್ಯಾಕ್ಟ್‌‌ಚೆಕ್‌: ಈ ಫೋಟೋ ಅಂಗಾಂಗ ಕಳ್ಳಸಾಗಣೆ ದಂಧೆ ನಡೆಸುವವರದ್ದೇ?

ಫ್ಯಾಕ್ಟ್‌‌ಚೆಕ್‌: ಈ ಫೋಟೋ ಅಂಗಾಂಗ ಕಳ್ಳಸಾಗಣೆ ದಂಧೆ ನಡೆಸುವವರದ್ದೇ?

ವೈರಲ್‌ ಆಗುತ್ತಿರುವ ಫೋಟೋಗಳಲ್ಲಿ ಕೊರೊನಾ ಸಾಂಕ್ರಮಿಕದ ನಡುವೆ ಮಹಾರಾಷ್ಟ್ರದಲ್ಲಿ ಅಂಗಾಂಗ ಕಳ್ಳಸಾಗಣೆ ದಂಧೆ ನಡೆಯುತ್ತಿದೆ ಎಂದು ಉಲ್ಲೇಖಿಸಲಾಗಿದೆ.

- Advertisement -
- Advertisement -

ವಿದ್ಯುತ್ ಚಿತಾಗಾರದಲ್ಲಿ ನಡೆಯುತ್ತಿರುವ ಶವ ಸಂಸ್ಕಾರದಂತೆ ತೋರುವ ಹಲವಾರು ಫೋಟೋಗಳನ್ನು ಕೊರೊನಾ ಸಾಂಕ್ರಮಿಕದ ನಡುವೆ ಮಹಾರಾಷ್ಟ್ರದಲ್ಲಿ ಅಂಗಾಂಗ ಕಳ್ಳಸಾಗಣೆ ದಂಧೆ ನಡೆಯುತ್ತಿದೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಮಹಿಳೆ ಹಾಗೂ ಇಬ್ಬರು ಪುರುಷರು ಸೇರಿಕೊಂಡು ಈ ಶವ ಸಂಸ್ಕಾರ ನಡೆಸುತ್ತಿರುವ ಫೋಟೋಗಳಲ್ಲಿ ದೇಹವನ್ನು ಹಾಳೆಯಲ್ಲಿ ಸುತ್ತಿರುವುದನ್ನು ತೋರಿಸುತ್ತದೆ. ಈ ಚಿತ್ರವನ್ನು ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್‌ ಸೋಗಿನಲ್ಲಿ ಅಂಗಾಂಗ ದಂಧೆ ನಡೆಯುತ್ತಿದೆ ಎಂಬ ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ವೈರಲ್ ಸಂದೇಶವು ವಿಸ್ತಾರವಾದ ಕತೆಯನ್ನು ಹೇಳುತ್ತದೆ. ಅದರ ಪ್ರಕಾರ, “ಭಯಂದರ್‌ನ ಗೋರೈ ಪ್ರದೇಶದಲ್ಲಿ ಯಾವುದೇ ಕೊರೊನಾ ವೈರಸ್ ಪ್ರಕರಣಗಳು ಕಂಡುಬಂದಿಲ್ಲ. ಆದರೆ ಕಳೆದ ಕೆಲವು ದಿನಗಳಲ್ಲಿ ಸಾಧಾರಣವಾದ ಕೆಮ್ಮು ಮತ್ತು ಶೀತದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿ ಅವರನ್ನು ಬಲವಂತವಾಗಿ ಆಸ್ಪತ್ರೆಯಲ್ಲಿ ದಾಖಲಿಸಿ ಅವರು ಕೊರೊನಾ ಪಾಸಿಟಿವ್ ಆಗಿದ್ದಾರೆ ಎಂದು ಹೇಳಿದ್ದಾರೆ”

ನಂತರ ಆ ವ್ಯಕ್ತಿ ಮೃತಪಟ್ಟಿದ್ದು, ಕುಟುಂಬದ ಸದಸ್ಯರು ಅವರ ಅಂತ್ಯ ಕ್ರಿಯೆ ಮಾಡಲು ಹೊರಟಿದ್ದರು. ಈ ಸಮಯದಲ್ಲಿ ಶವವನ್ನು ನೋಡಲು ಒತ್ತಾಯಿಸಿದ್ದರು ಆಗ ಶವದ ಎಲ್ಲಾ ಅಂಗಾಂಗಳು ಕಾಣೆಯಾಗಿದ್ದವು ಎಂದು ಆ ಪೋಸ್ಟ್ ಹೇಳುತ್ತದೆ.

ವೈದ್ಯರನ್ನು ದೇವರ ಸ್ವರೂಪವಾಗಿ ನೋಡುತ್ತಿರುವಾಗ, ವೈದ್ಯರು ಇಂತಹ ಘೋರ ಕೃತ್ಯಗಳನ್ನು ಮಾಡಿದ್ದಾರೆ ಎಂದು ವೈರಲ್‌ ಪೋಸ್ಟ್‌ ಆರೋಪಿಸುತ್ತದೆ. ಇದಕ್ಕಿಂತಲೂ ಮೊದಲು ಇಂತಹ ಎಷ್ಟು ಘಟನೆಗಳು ನಡೆದಿವೆಯೊ ಎಂದು ಆಶ್ಚರ್ಯ ವ್ಯಕ್ತಪಡಿಸಿ ಇದನ್ನು ಸಿಬಿಐ ತನಿಖೆ ನಡೆಸಬೇಕು ಎಂದು ಅದು ಒತ್ತಾಯಿಸಿದೆ.

ಫೇಸ್‌ಬುಕ್ ಹಾಗೂ ಟ್ವಿಟರ್‌ನಲ್ಲಿ ಇದೇ ರೀತಿಯ ಸಂದೇಶದೊಂದಿಗೆ ಅನೇಕ ಜನರು ಈ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಅಂತಹ ಹೆಚ್ಚಿನ ಪೋಸ್ಟ್‌ಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಫೋಟೋಗಳನ್ನು ರಿವರ್ಸ್ ಇಮೇಜ್ ಹುಡುಕಾಟ ನಡೆಸಿ ಅದು ದೆಹಲಿ ಕ್ರೈಮ್ ಪ್ರೆಸ್ ಎಂಬ ವೆಬ್‌ಸೈಟ್‌ ಬರೆದಿರುವ ಲೇಖನವೆಂದು ದಿ ಕ್ವಿಂಟ್ ಪತ್ತೆ ಹಚ್ಚಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಅದೇ ವೈರಲ್ ಕತೆಯಲ್ಲಿ ಅಲ್ಲೂ ಕೂಡಾ ಫೋಟೋಗಳನ್ನು ಬಳಸಲಾಗಿದೆ.

ಈ ಲೇಖನವನ್ನು ಓಂ ಶುಕ್ಲಾ ಎಂಬವರು ಬರೆದಿದ್ದು, ಅವರ ಫೇಸ್‌ಬುಕ್‌ ಬಯೊದಲ್ಲಿ ಅವರನ್ನು ಸ್ಪೆಷಲ್‌ ಇನ್ವೆಸ್ಟಿಗೇಟರ್‌ ಎಂದು ಉಲ್ಲೇಖಿಸಿದ್ದಾರೆ.

ನಂತರ, ಫೇಸ್‌ಬುಕ್‌ನಲ್ಲಿ ’ಮಾನವ ಅಂಗಾಂಗ ಕಳ್ಳಸಾಗಣೆ’ (मानव अंगो की तस्करी) ಎಂಬ ಕೀವರ್ಡ್ ಅನ್ನು ಶುಕ್ಲಾ ಅವರ ಹೆಸರಿನೊಂದಿಗೆ ಹುಡುಕಾಟವನ್ನು ನಡೆಸಿದಾಗ, ಲಕ್ನೋ ಮೂಲದ ಮಹಿಳೆಯಾದ ’ವರ್ಷಾ ವರ್ಮಾ’ ಎಂಬ ಹೆಸರಿನ ಪೋಸ್ಟ್ ಕಂಡುಕೊಳ್ಳಲಾಗಿದೆ.

ಜುಲೈ 21 ರ ದಿನಾಂಕದಂದು ಹಾಕಲಾದ ಅವರ ಪೋಸ್ಟ್,  ವೈರಲ್ ಫೋಟೋಗಳಲ್ಲಿ ಕಾಣಿಸಿಕೊಂಡ ಮಹಿಳೆ ಇವರೆ ಆಗಿದ್ದು. ಮಹಾರಾಷ್ಟ್ರದಲ್ಲಿ ಅಂಗಾಂಗ ದಂಧೆ ನಡೆಯುತ್ತಿದೆ ಎಂದು ತಪ್ಪಾಗಿ ಉಲ್ಲೇಖಿಸಲು ತನ್ನ ಫೋಟೋಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ವೈರಲ್ ಫೋಟೊದಲ್ಲಿ ಅವರು, ಅವರ ಸಹೋದ್ಯೋಗಿ ದೀಪಕ್ ಮಹಾಜನ್, ”ಏಕ್ ಕೋಶಿಶ್ ಐಸಿ ಭಿ” ಎನ್‌ಜಿಒ ಮೂಲಕ ವಾರಸುದಾರರ ಶವಗಳನ್ನು ದಫನ್ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ವೈರಲ್‌ ಆಗುತ್ತಿರುವ ಚಿತ್ರವನ್ನು ವರ್ಷಾ ವರ್ಮ ಜುಲೈ 18 ರಂದು ಪೋಸ್ಟ್ ಮಾಡಿದ್ದರು. ಆ ಪೋಸ್ಟ್‌ನಲ್ಲಿ ಲಕ್ನೋದ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯದಲ್ಲಿ ಮೃತಪಟ್ಟ 43 ವರ್ಷದ ವಾರಸುದಾರರಿಲ್ಲದ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಯ ನಂತರ ದಹನ ಮಾಡಿದ್ದಾರೆ ಎಂಬ ಸಂದೇಶ ಬರೆದಿದ್ದರು.

ಲಾಕ್‌ಡೌನ್ ಸಮಯದಲ್ಲಿ ಅವರು ಇಲ್ಲಿಯವರೆಗೆ ಅಂತಹ 17 ವಾರಸುದಾರರಿಲ್ಲದ ಶವಗಳನ್ನು ಅಂತ್ಯಸಂಸ್ಕಾರ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಶುಕ್ಲಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿ ವರ್ಷಾ ವರ್ಮ ಸೈಬರ್ ಸೆಲ್‌ಗೆ ಎಫ್‌ಐಆರ್ ಕೂಡ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಜುಲೈ 18 ರಂದು ಲಖನೌದಲ್ಲಿ ಈ ಶವಸಂಸ್ಕಾರ ನಡೆದಿದೆ ಎಂದು “ದಿ ಕ್ವಿಂಟ್” ದೃಡಪಡಿಸಿದೆ.

ವರ್ಷಾ ವರ್ಮ ತನ್ನ ವಕೀಲರ ಸಲಹೆಯನ್ನು ಪಡೆದುಕೊಂಡು ಸ್ಥಳೀಯ ಸೈಬರ್ ಸೆಲ್ ಮತ್ತು ಪೊಲೀಸ್ ಠಾಣೆಯಲ್ಲಿ ಶುಕ್ಲಾ ವಿರುದ್ಧ ಎಫ್ಐಆರ್ ದಾಖಲಿಸಿದ್ದರು ಮತ್ತು ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಯೋಜಿಸುತ್ತಿದ್ದಾರೆ ಎಂದು ದಿ ಕ್ವಿಂಟ್‌ಗೆ ಹೇಳಿದ್ದಾರೆ.

ಒಟ್ಟಿನಲ್ಲಿ ವಾರಿಸುದಾರರಿಲ್ಲದ ಶವವನ್ನು ಅಂತ್ಯ ಕ್ರಿಯೆ ಮಾಡುವ ಫೋಟೋಗಳನ್ನು ಮಹಾರಾಷ್ಟ್ರದಲ್ಲಿ ನಡೆಸುತ್ತಿರುವ ಮಾನವ ಅಂಗಾಂಗ ಕಳ್ಳಸಾಗಣೆ ದಂಧೆ ಬಯಲಾಗಿದೆ ಎಂಬ ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ.
ಕೃಪೆ: ದಿ ಕ್ವಿಂಟ್


ಓದಿ: ಫ್ಯಾಕ್ಟ್‌ಚೆಕ್: ಮಾಸ್ಕ್ ಧರಿಸದ ಮೇಕೆ ಬಂಧಿಸಿದ ಕಾನ್ಪುರ ಪೊಲೀಸರು?- ತಪ್ಪು ವರದಿ ಮಾಡಿದ ಮಾಧ್ಯಮಗಳು 


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೂಡಾ ಹಗರಣ ಆರೋಪ : ಸಿಎಂ ಸಿದ್ದರಾಮಯ್ಯ ಸೇರಿ ಆರು ಮಂದಿ ವಿರುದ್ಧ ಲೋಕಾಯುಕ್ತಕ್ಕೆ...

0
ಆಪಾದಿತ ಮೂಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ನಿ ಬಿ.ಎಂ ಪಾರ್ವತಿ ಸೇರಿ ಆರು ಮಂದಿ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ. ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಇವರ ಸಹೋದರ ಬಿ.ಎಂ ಮಲ್ಲಿಕಾರ್ಜುನಸ್ವಾಮಿ,...