ಗೋವಾದಲ್ಲಿ ಬಿಜೆಪಿಯು ಕಾಂಗ್ರೆಸ್‌ನ 15 ಶಾಸಕರಲ್ಲಿ 10 ಮಂದಿಯನ್ನು ಮೂರನೇ ಎರಡರ ಆಧಾರದ ಮೇಲೆ ತನ್ನ ಪಕ್ಷಕ್ಕೆ ವಿಲೀನಗೊಳಿಸಿತು. ಆಂದ್ರಪ್ರದೇಶದಲ್ಲಿ ಟಿಡಿಪಿಯ 4 ರಾಜ್ಯಸಭಾ ಸಂಸದರು ಬಿಜೆಪಿಯೊಂದಿಗೆ ವಿಲೀನಗೊಂಡರು. ರಾಜಸ್ಥಾನದಲ್ಲಿ ಬಿಎಸ್ಪಿಯ 6 ಶಾಸಕರು ಇಡೀ ಪಕ್ಷವನ್ನು ಕಾಂಗ್ರೆಸ್ ಒಳಗೆ ವಿಲೀನಗೊಳಿಸಿದ್ದಾರೆ. ಬಿಜೆಪಿಯ ವಿಲೀನ ಸರಿಯಾಗಿದ್ದಾಗ, ಕಾಂಗ್ರೆಸ್ ವಿಲೀನ ಹೇಗೆ ತಪ್ಪಾಗಿದೆ? ನೀವು ಅದನ್ನು ಏನೆಂದು ಕರೆಯುತ್ತೀರಿ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪ್ರಶ್ನಿಸಿದ್ದಾರೆ.
गोवा में BJP ने कांग्रेस के 15 में से 10 MLAs दो तिहाई के आधार पर ले लिए। TDP के 4 MPs का राज्यसभा के अंदर BJP में मर्जर हो गया। राजस्थान में BSP के 6 के 6 MLAs पूरी पार्टी कांग्रेस के अंदर मर्जर कर गयी है। जब BJP का मर्जर सही तो यहां मर्जर गलत कैसे? इसे क्या कहोगे?
— Ashok Gehlot (@ashokgehlot51) July 31, 2020
ಮಾಯಾವತಿಯವರನ್ನು ಬಿಜೆಪಿ ಮುಂದೆ ಬಿಟ್ಟಿದೆ ಮತ್ತು ಬಿಜೆಪಿಯ ಆಜ್ಞೆಯ ಮೇರೆಗೆ ಅವರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಿಬಿಐ, ಇಡಿ, ಐಟಿಯನ್ನು ಬಿಜೆಪಿ ದುರುಪಯೋಗಪಡಿಸಿಕೊಂಡು ಮಾಯಾವತಿಯವರನ್ನು ಬೆದರಿಸುತ್ತಿದೆ. ಹಾಗಾಗಿ ಅವರು ಬಿಜೆಪಿಗೆ ಹೆದರಿ, ಬಲವಂತವಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ. ರಾಜಸ್ಥಾನದಲ್ಲಿ ಏನು ನಡೆಯುತ್ತಿದೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಬಿಜೆಪಿಯ ಚಮತ್ಕಾರ ಇಲ್ಲಿ ನಡೆಯಲು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.
बहनजी को BJP ने आगे कर रखा है और उन्हीं के इशारे पर वो बयानबाजी कर रही हैं। BJP जिस प्रकार से CBI, ED, IT का दुरुपयोग कर रही है, सबको ही डरा रही है, धमका रही है, राजस्थान में क्या हो रहा है, सबको मालूम है, ऐसा तमाशा कभी देखा नहीं। वे उनसे डर रही हैं और मजबूरी में बयान दे रही हैं।
— Ashok Gehlot (@ashokgehlot51) July 31, 2020
ರಾಜ್ಯಸಭೆಯೊಳಗೆ 4 ಸಂಸದರು ರಾತ್ರೋರಾತ್ರಿ ಬಿಜೆಪಿಗೆ ವಿಲೀನಗೊಂಡರು, ಆ ವಿಲೀನ ಸರಿಯಾಗಿದೆ. ಅದೇ ರೀತಿ 6 ಶಾಸಕರು ರಾಜಸ್ಥಾನದಲ್ಲಿ ಕಾಂಗ್ರೆಸ್‌ಗೆ ವಿಲೀನಗೊಂಡರು. ಈ ವಿಲೀನ ತಪ್ಪಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಬಿಜೆಪಿ ಮಾಡಿದರೆ ಸರಿ, ಕಾಂಗ್ರೆಸ್ ಮಾಡಿದರೆ ತಪ್ಪೇ? ರಾಜ್ಯಸಭೆಯಲ್ಲಿ ವಿಲೀನಗೊಳ್ಳುವುದು ಸರಿ, ವಿಧಾನಸಭೆಯಲ್ಲಿ ವಿಲೀನಗೊಳ್ಳುವುದು ತಪ್ಪೇ ಎಂದು ಅಶೋಕ್ ಗೆಹ್ಲೋಟ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಅಧಿವೇಶನ ಘೋಷಿಸಿದ ನಂತರ ಕುದುರೆ ವ್ಯಾಪಾರದ ದರ ಹೆಚ್ಚಾಗಿದೆ: ಅಶೋಕ್ ಗೆಹ್ಲೋಟ್


