ಆಂಧ್ರಪ್ರದೇಶವು ಜುಲೈ ತಿಂಗಳೊಂದರಲ್ಲೇ 1,26,337 ಕೊರೊನಾ ಪ್ರಕರಣಗಳನ್ನು ವರದಿ ಮಾಡಿದೆ. ಆ ಮೂಲಕ ಸೋಂಕಿನ ಸಂಖ್ಯೆಯಲ್ಲಿ ಶೇಕಡಾ 865 ರಷ್ಟು ಏರಿಕೆ ದಾಖಲಿಸಿದೆ. ಇದು ದೇಶದ ಇತರೆ ರಾಜ್ಯಗಳಿಗಿಂತ ಅತಿ ಹೆಚ್ಚಾಗಿದೆ.
ಜೂನ್ 30 ರಂದು 14,596 ಪ್ರಕರಣಗಳನ್ನು ವರದಿ ಮಾಡಿದ್ದ ಆಂದ್ರಪ್ರದೇಶ, ಜುಲೈ ಅಂತ್ಯದ ವೇಳೆಗೆ 1.26 ಲಕ್ಷಕ್ಕೆ ಏರಿಕೆಯಾಗಿದೆ.
ರಾಜ್ಯದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಜಿಲ್ಲೆ ಪೂರ್ವ ಗೋದಾವರಿಯಲ್ಲಿ ಶೇ. 1,800 ರಷ್ಟು ಏರಿಕೆ ಕಂಡಿದೆ. ಶುಕ್ರವಾರ ರಾಜ್ಯದಲ್ಲಿ 10,376 ಪ್ರಕರಣಗಳು ವರದಿಯಾಗಿದ್ದು, ಒಟ್ಟು 1,40,933 ಪ್ರಕರಣಗಳು ದಾಖಲಾಗಿವೆ.
ಕಳೆದ 24 ಗಂಟೆಗಳಲ್ಲಿ 68 ಕೊರೊನಾ ಸಾವುಗಳೊಂದಿಗೆ, ರಾಜ್ಯದಲ್ಲಿ ಒಟ್ಟು ಸಾವುಗಳ ಸಂಖ್ಯೆ 1,349ಕ್ಕೆ ತಲುಪಿದೆ. ಆಂಧ್ರಪ್ರದೇಶ ಈಗ ದೆಹಲಿಯನ್ನು ಮೀರಿ ದೇಶದ ಮೂರನೇ ಅತಿದೊಡ್ಡ ಕೊರೊನಾ ವೈರಸ್ ಪೀಡಿತ ರಾಜ್ಯವಾಗಿದೆ.
ಕಳೆದ ಮೂರು ದಿನಗಳಲ್ಲಿ ರಾಜ್ಯವು 30,636 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ. ಮಾರಣಾಂತಿಕ ಸೋಂಕಿಗೆ ಒಳಗಾದವರ ಒಟ್ಟು ಸಂಖ್ಯೆ 1,40,933 ಕ್ಕೆ ಏರಿಕೆಯಾಗಿದೆ. ಇದರಲ್ಲಿ 1,349 ಸಾವುಗಳು ಸೇರಿವೆ.
ಈ ಪಟ್ಟಿಯಲ್ಲಿ ವಾರಗಟ್ಟಲೆ ಮಹಾರಾಷ್ಟ್ರ ಮತ್ತು ತಮಿಳುನಾಡಿನ ನಂತರ ಮೂರನೇ ಸ್ಥಾನದಲ್ಲಿದ್ದ ದೆಹಲಿ 1,195 ಪ್ರಕರಣಗಳನ್ನು ದಾಖಲಿಸಿದ್ದು, ಈಗ ಒಟ್ಟು 1,35,598 ಕ್ಕೆ ತಲುಪಿದೆ.
ರಾಜ್ಯದಲ್ಲಿ ನಡೆಯುತ್ತಿರುವ “ವ್ಯಾಪಕ” ಕೊರೊನಾ ಪರೀಕ್ಷೆಗಳು ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಗೆ ಪ್ರಮುಖ ಕಾರಣ ಎಂದು ಆಂಧ್ರ ಉಪಮುಖ್ಯಮಂತ್ರಿ ಎಕೆಕೆ ಶ್ರೀನಿವಾಸ್ ಹೇಳಿದ್ದಾರೆ.
ಇದನ್ನೂ ಓದಿ: ವಿಶಾಖಪಟ್ಟಣಂ ಶಿಪ್‌ಯಾರ್ಡ್‌ನಲ್ಲಿ ಕ್ರೇನ್ ಕುಸಿತ: 9 ಜನರು ಸಾವು


