ಆಂಧ್ರಪ್ರದೇಶದ ಕೊರೊನಾ ಪ್ರಕರಣಗಳಲ್ಲಿ 865% ರಷ್ಟು ಏರಿಕೆ!

ಜೂನ್ 30 ರಂದು 14,596 ಪ್ರಕರಣಗಳಿಂದ ಈ ಸಂಖ್ಯೆ ಜುಲೈ ಅಂತ್ಯದ ವೇಳೆಗೆ 1.26 ಲಕ್ಷ ಏರಿಕೆಯಾಗಿದೆ.

0
19
ಭಾರತದಲ್ಲಿ ಸೋಂಕಿತರ ಚೇತರಿಕೆ ಪ್ರಮಾಣ 67.19% ಕ್ಕೆ ಏರಿಕೆ
PC: Google

ಆಂಧ್ರಪ್ರದೇಶವು ಜುಲೈ ತಿಂಗಳೊಂದರಲ್ಲೇ 1,26,337 ಕೊರೊನಾ ಪ್ರಕರಣಗಳನ್ನು ವರದಿ ಮಾಡಿದೆ. ಆ ಮೂಲಕ ಸೋಂಕಿನ ಸಂಖ್ಯೆಯಲ್ಲಿ ಶೇಕಡಾ 865 ರಷ್ಟು ಏರಿಕೆ ದಾಖಲಿಸಿದೆ. ಇದು ದೇಶದ ಇತರೆ ರಾಜ್ಯಗಳಿಗಿಂತ ಅತಿ ಹೆಚ್ಚಾಗಿದೆ.

ಜೂನ್ 30 ರಂದು 14,596 ಪ್ರಕರಣಗಳನ್ನು ವರದಿ ಮಾಡಿದ್ದ ಆಂದ್ರಪ್ರದೇಶ, ಜುಲೈ ಅಂತ್ಯದ ವೇಳೆಗೆ 1.26 ಲಕ್ಷಕ್ಕೆ ಏರಿಕೆಯಾಗಿದೆ.

ರಾಜ್ಯದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಜಿಲ್ಲೆ ಪೂರ್ವ ಗೋದಾವರಿಯಲ್ಲಿ ಶೇ. 1,800 ರಷ್ಟು ಏರಿಕೆ ಕಂಡಿದೆ. ಶುಕ್ರವಾರ ರಾಜ್ಯದಲ್ಲಿ 10,376 ಪ್ರಕರಣಗಳು ವರದಿಯಾಗಿದ್ದು, ಒಟ್ಟು 1,40,933 ಪ್ರಕರಣಗಳು ದಾಖಲಾಗಿವೆ.

ಕಳೆದ 24 ಗಂಟೆಗಳಲ್ಲಿ 68 ಕೊರೊನಾ ಸಾವುಗಳೊಂದಿಗೆ, ರಾಜ್ಯದಲ್ಲಿ ಒಟ್ಟು ಸಾವುಗಳ ಸಂಖ್ಯೆ 1,349ಕ್ಕೆ ತಲುಪಿದೆ. ಆಂಧ್ರಪ್ರದೇಶ ಈಗ ದೆಹಲಿಯನ್ನು ಮೀರಿ ದೇಶದ ಮೂರನೇ ಅತಿದೊಡ್ಡ ಕೊರೊನಾ ವೈರಸ್ ಪೀಡಿತ ರಾಜ್ಯವಾಗಿದೆ.

ಕಳೆದ ಮೂರು ದಿನಗಳಲ್ಲಿ ರಾಜ್ಯವು 30,636 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ. ಮಾರಣಾಂತಿಕ ಸೋಂಕಿಗೆ ಒಳಗಾದವರ ಒಟ್ಟು ಸಂಖ್ಯೆ 1,40,933 ಕ್ಕೆ ಏರಿಕೆಯಾಗಿದೆ. ಇದರಲ್ಲಿ 1,349 ಸಾವುಗಳು ಸೇರಿವೆ.

ಈ ಪಟ್ಟಿಯಲ್ಲಿ ವಾರಗಟ್ಟಲೆ ಮಹಾರಾಷ್ಟ್ರ ಮತ್ತು ತಮಿಳುನಾಡಿನ ನಂತರ ಮೂರನೇ ಸ್ಥಾನದಲ್ಲಿದ್ದ ದೆಹಲಿ 1,195 ಪ್ರಕರಣಗಳನ್ನು ದಾಖಲಿಸಿದ್ದು, ಈಗ ಒಟ್ಟು 1,35,598 ಕ್ಕೆ ತಲುಪಿದೆ.

ರಾಜ್ಯದಲ್ಲಿ ನಡೆಯುತ್ತಿರುವ “ವ್ಯಾಪಕ” ಕೊರೊನಾ ಪರೀಕ್ಷೆಗಳು ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಗೆ ಪ್ರಮುಖ ಕಾರಣ ಎಂದು ಆಂಧ್ರ ಉಪಮುಖ್ಯಮಂತ್ರಿ ಎಕೆಕೆ ಶ್ರೀನಿವಾಸ್ ಹೇಳಿದ್ದಾರೆ.


ಇದನ್ನೂ ಓದಿ: ವಿಶಾಖಪಟ್ಟಣಂ ಶಿಪ್‌ಯಾರ್ಡ್‌ನಲ್ಲಿ ಕ್ರೇನ್ ಕುಸಿತ: 9 ಜನರು ಸಾವು

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here