ಎಲ್ಲಾ ಒತ್ತಡಗಳ ನಡೆವೆಯು ಈ ವರ್ಷದ ಐಪಿಎಲ್ ಕ್ರಿಕೆಟ್ ಟೂರ್ನಿ ನಡೆಸುವುದಕ್ಕೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅನುಮತಿ ನೀಡಿದೆ. ಈ ವರ್ಷದ ಐಪಿಎಲ್ ಪಂದ್ಯಗಳು ಸೆಪ್ಟೆಂಬರ್ 19 ರಿಂದ ನವೆಂಬರ್ 10 ರವರೆಗೆ ಯುಎಇ ಯಲ್ಲಿ ನಡೆಯಲಿದೆ.
ಕೊರೊನಾ ಆತಂಕದ ನಡುವೆ ನಡೆಯುತ್ತಿರುವ ಈ ಪಂದ್ಯಕ್ಕೆ ಹಲವಾರು ವಿರೋಧಗಳು ಕೇಳಿ ಬರುತ್ತಿವೆ. ಹಲವಾರು ಸಾಮಾಜಿಕ ಕಾರ್ಯಕರ್ತರು ಸಾಂಕ್ರಾಮಿಕದ ನಡುವೆ ಟೂರ್ನಿ ಬೇಕಿತ್ತೇ ಎಂದು ಪ್ರಶ್ನೆ ಮಾಡಿದ್ದಾರೆ.
ಒಂದೆಡೆ ಚೀನಾದ ಗಡಿ ತಂಟೆಗೆ ಚೀನಾ ಆಪ್‌ಗಳನ್ನು ನಿಷೇಧಿಸಿದ್ದು ಬಹಳ ದೊಡ್ಡ ಸಾಧನೆಯೆಂದು ಬೀಗುತ್ತಿರುವ ಕೇಂದ್ರ ಸರ್ಕಾರ, ಚೀನಾ ಕಂಪೆನಿಗಳ ಪ್ರಾಯೋಜಕತ್ವದಲ್ಲಿ ಐಪಿಎಲ್ ನಡೆಸಲು ಅವಕಾಶ ಕೊಟ್ಟಿದ್ದು ದ್ವಂದ್ವವಲ್ಲವೇ? BCCI ನಲ್ಲಿ ಬಿಜೆಪಿ ಮುಖಂಡರ ಮಕ್ಕಳೇ ಇದ್ದರೂ ಇದು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಚಿಂತಕರಾದ ಶಿವಸುಂದರ್, ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ ”ಜಸ್ಟ್ ಆಸ್ಕಿಂಗ್” ಎಂಬ ಶಿರ್ಷೀಕೆಯ ಲೇಖನದಲ್ಲಿ ಬಿಜೆಪಿಯ ನಾಯಕರು ಹಾಗೂ ಅವರ ಬೆಂಬಲಿಗರಿಗೆ ಪ್ರಶ್ನೆಗಳ ಸರಮಾಲೆಯನ್ನೇ ಎಸೆದಿದ್ದಾರೆ.
ಅವರು ತಮ್ಮ ಬರಹದಲ್ಲಿ , ಈ “ಭಾರತೀಯ” ಪಂದ್ಯವನ್ನು ಹಲವಾರು “ಚೀನಿ ಕಂಪನಿಗಳು” ಪ್ರಾಯೋಜಕತ್ವ ಮಾಡುತ್ತಿವೆ, ಅಲ್ಲದೆ ಈ ಬಾರಿಯ ಪಂದ್ಯಾಟದ ಹೆಸರು ಕೂಡಾ “VIVO IPL 2020” ಎಂದಾಗಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ.
“ಚೀನಾದ ದೈತ್ಯ ಮೊಬೈಲ್ ಕಂಪನಿ VIVO ಐಪಿಎಲ್ ನ ಟೈಟಲ್ ಪ್ರಾಯೋಜನೆ ಮಾಡುತ್ತಿದೆ. ಚೀನಾದ ಅಲಿಬಾಬಾ ಕಂಪನಿಯ ಹೂಡಿಕೆ ಹೊಂದಿರುವ Pay TM “ಅಂಪೈರ್ ಪಾರ್ಟ್ನರ್” ಆಗಿದೆ. ಚೀನಾದ ಹೂಡಿಕೆಯನ್ನು ಹೊಂದಿರುವ Swiggy ಮತ್ತು Dream 11 ಕಂಪನಿಗಳು ಸಹ- ಪ್ರಯೋಜಕರಾಗಿವೆ.” ಇದಕ್ಕೆ ಭಾರತ ಸರ್ಕಾರವೇ ಒಪ್ಪಿಗೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.
ಅಲ್ಲದೆ, ಐಪಿಎಲ್ ಪಂದ್ಯಗಳಿಗೆ ಅನುಮತಿ ಕೊಟ್ಟಿರುವ BCCI ನ ಪದಾಧಿಕಾರಿಗಳಲ್ಲಿ ಭಾರತದ ಗೃಹಮಂತ್ರಿ ಅಮಿತ್ ಷಾ ಅವರ ಮಗ ಜೇ ಶಾ BCCI ನ ಪ್ರಧಾನ ಕಾರ್ಯದರ್ಶಿ ಆಗದ್ದಾರೆ. ಕೇಂದ್ರ ಮಂತ್ರಿ ಅನುರಾಗ್ ಠಾಕೂರ್ ಅವರ ತಮ್ಮ ಅರುಣ್ ಧೋಮಲ್ BCCI ನ ಖಜಾಂಚಿ ಆಗಿದ್ದಾರೆ ಎಂದು ಬಿಜೆಪಿ ಮತ್ತು ಬಿಸಿಸಿಐನ ಸಂಬಂಧವನ್ನು ಉಲ್ಲೇಖಿಸಿದ್ದಾರೆ.
“ಪಾಕಿಸ್ತಾನದೊಂದಿಗೆ ಘರ್ಷಣೆ ನಡೆದಾಗಲೆಲ್ಲಾ ಅದರ ಜೊತೆ ಕ್ರೀಡಾ ಸಂಬಂಧಗಳನ್ನು ಕಡಿದುಕೊಳ್ಳಲು ಬಿಜೆಪಿ ಪಕ್ಷ ಆಗ್ರಹಿಸುತ್ತಿತ್ತು. ಪಾಕಿಸ್ತಾನ ಜನರೊಂದಿಗೆ ಸ್ನೇಹ ಸಂಬಂಧ ಇಟ್ಟುಕೊಳ್ಳಬೇಕೆನ್ನುವವರನ್ನು ದೇಶದ್ರೋಹಿಗಳೆಂದು ಘೋಷಿಸುತ್ತಿತ್ತು. ಈಗ ಬಿಜೆಪಿಯ ಗೌರವಾನ್ವಿತ ಸದಸ್ಯರೇ ಚೀನಾ ಕಂಪನಿಗಳ ಪ್ರಾಯೋಜನೆಯ ಐಪಿಎಲ್‌ಗೆ ಅನುಮತಿ ನೀಡಿದ್ದು ಹೇಗೆ” ಎಂದು ಶಿವಸುಂದರ್ ಪ್ರಶ್ನಿಸಿದ್ದಾರೆ.
ಈಗ ಬಿಜೆಪಿ ಹಾಗೂ ಮೋದಿ ಬೆಂಬಲಿಗರು ಬಿಸಿಸಿಐ ಪದಾಧಿಕಾರಿಗಳನ್ನು, ಆಟದಲ್ಲಿ ಭಾಗವಹಿಸುತ್ತಿರುವ ಆಟಗಾರರನ್ನು, ಮೌನವಾಗಿ ಕೂತಿರುವ ಕೇಂದ್ರ ಸರ್ಕಾರವನ್ನು ದೇಶದ್ರೋಹಿಗಳೆಂದು ಘೋಷಿಸುತ್ತಾರೆಯೇ ಅಥವಾ ಚೀನಾ ಪ್ರಾಯೋಜಿತ ಐಪಿಎಲ್ ಪಂದ್ಯಗಳ್ನನು ವೀಕ್ಷಿಸುವುದನ್ನು ಬಹಿಷ್ಕರಿಸುತ್ತಾರೆಯೆ ಎಂದು ಅವರು ಪ್ರಶ್ನಿಸಿದ್ದಾರೆ.
“ಜನರಿಗೆ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಬಾಯ್ಕಾಟ್ ಚೀನಾ ಅಭಿಯಾನ ನಡೆಯುತ್ತಿದೆ. ಇನ್ನೊಂದೆಡೆ ಚೀನಾ ಪ್ರಾಯೋಜಿತ ಐಪಿಎಲ್ ನಡೆಯುತ್ತಿದೆ. ಚೀನಾದ ಹಣ, ಹೂಡಿಕೆ, ಪ್ರಾಯೋಜಕತ್ವ, ಜಾಹಿರಾತನ್ನು ಹೇಗೆ ನಿರ್ವಹಿಸಬೇಕು ಎಂದು ಸರ್ಕಾರಕ್ಕೆ ತೀವ್ರ ಗೊಂದಲಗಳಿರುವಾಗ ಚೀನಾ ನಮ್ಮ ವಿಷಯಗಳಲ್ಲಿ ಮೂಗುತೂರಿಸುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ” ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.
Chinese cellphone makers will continue as title sponsors of the IPL while people are told to boycott Chinese products. It’s no wonder China is thumbing it’s nose at us when we are so confused about how to handle Chinese money/investment/sponsorship/advertising.
— Omar Abdullah (@OmarAbdullah) August 2, 2020
ಚೀನಾದ ದೊಡ್ಡ ಕಂಪನಿಗಳು ಬಿಸಿಸಿಐನ ಐಪಿಎಲ್‌ಗೆ ಜಾಹೀರಾತು ನೀಡಲು ಒಪ್ಪಿಗೆ ನೀಡಲಾಗಿದೆ. ಬಾಲ್ಕನಿಯಿಂದ ಟಿವಿ ಎಸೆದು ಚೀನಾದ ವಿರುದ್ಧ ಶೌರ್ಯ ತೋರಿದ್ದ ಈಡಿಯಟ್‌ಗಳನ್ನು ನೋಡಿ ಬೇಸರವಾಗುತ್ತಿದೆ ಎಂದು ಒಮರ್ ಅಬ್ದುಲ್ಲಾ ವ್ಯಂಗ್ಯವಾಡಿದ್ದಾರೆ.
ಅರವಿಂದ್ ಜಾ ಎಂಬವರು, ಅಮಿತ್ ಶಾ ಅವರ ಮಗ ಬಿಸಿಸಿಐನಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುವವರು ಎಂಬುದನ್ನು ಎಂದಿಗೂ ಮರೆಯಬಾರದು. ಐಪಿಎಲ್ ಚೀನಾದ ಪ್ರಾಯೋಜಕತ್ವದೊಂದಿಗೆ ಮುಂದುವರಿಯುತ್ತಿದ್ದರೆ, ಅದು ಬಿಜೆಪಿಯ ಉನ್ನತ ನಾಯಕತ್ವದ ಅನುಮೋದನೆಯೊಂದಿಗೆ ನಡೆಯುತ್ತಿದೆ. ಅಪ್ಲಿಕೇಶನ್ ನಿಷೇಧವು ನಮ್ಮ ಕಣ್ಣಿಗೆ ಮಣ್ಣೆರೆಚುವ ತಂತ್ರವಾಗಿದೆ ಎಂದು ಹೇಳಿದ್ದಾರೆ.
Never forget that Amit Shah's son is a key decision maker at BCCI. If IPL is going ahead with Chinese sponsorship, its with approval from highest leadership of BJP.
The app bans are just wool over our eyes just like incursion news.
Paisa bolta hai.
— Arvind Jha (@jalajboy) August 3, 2020
ಲಡಾಖ್‌ನಲ್ಲಿ ಭಾರತೀಯ ಸೈನಿಕರ ಮಾರಣ ಹೋಮ ನಡೆದಾಗ ಐಪಿಎಲ್ ಮಾಡಿದ್ದ ಟ್ವೀಟ್ ಒಂದರ ಫೋಟೋವನ್ನು ಹೆಕ್ಕಿರುವ ಪ್ರಾಧ್ಯಾಪಕ ಕಾಂಚನ್ ಗುಪ್ತಾ, “ಪೂರ್ವ ಲಡಾಕ್‌ನಲ್ಲಿ LAC ಉದ್ದಕ್ಕೂ ಚೀನಾದೊಂದಿಗಿನ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಸಾವನ್ನಪ್ಪಿದ ನಂತರ ಪ್ರಾಯೋಜಕತ್ವದ ಒಪ್ಪಂದಗಳನ್ನು ಪರಿಶೀಲಿಸುವುದಾಗಿ ಐಪಿಎಲ್ ಹೇಳಿತ್ತು. ಆದರೆ ಈಗ ಚೀನೀ ಪ್ರಾಯೋಜಕತ್ವವನ್ನು ಸ್ವೀಕರಿಸಲು ಅದು ನಿರ್ಧರಿಸಿದೆ. ಸಾಮಾನ್ಯ ವ್ಯಕ್ತಿಗಳನ್ನು ‘ರಾಷ್ಟ್ರ ವಿರೋಧಿ’ ಎಂದು ನಾವು ಸುಲಭವಾಗಿ ಆರೋಪಿಸುತ್ತೇವೆ. ಹಾಗಾದರೆ ಐಪಿಎಲ್ ಏನು?” ಎಂದು ಪ್ರಶ್ನಿಸಿದ್ದಾರೆ.
After reviewing sponsorship deals following the death of 20 #India soldiers in clashes with #China #PLA along #LAC in east Ladakh, @IPL has decided to accept Chinese sponsorship.
We so easily accuse petty inconsequential individuals of being 'anti-national'. What then is IPL? pic.twitter.com/Of41HkZTxQ— Kanchan Gupta (@KanchanGupta) August 3, 2020
ಮಹಾರಾಷ್ಟ್ರದ ಶಾಸಕ ಝೀಶಾನ್ ಸಿದ್ದೇಕಿ, ಚೀನಾ ನಿರ್ಮಿತ ಟಿವಿಯನ್ನು ಒಡೆದುಹಾಕಿದ ವ್ಯಕ್ತಿಗೆ ಸಂತಾಪಗಳು ಎಂದು ವ್ಯಂಗ್ಯವಾಡಿದ್ದಾರೆ.
A moment of silence for all those who broke their Chinese made television sets, they could’ve seen the IPL on it with its Chinese sponsors!
— Zeeshan Siddique (@zeeshan_iyc) August 3, 2020
ಓದಿ: ವಿಶ್ವಕಪ್ ಬೇಡ, ಐಪಿಎಲ್ ಬೇಕು.. ಬದಲಾಗ್ತಿದೆ ಕ್ರಿಕೆಟಿಗರ ಮೈಂಡ್‍ಸೆಟ್!


