ಕ್ವಿಟ್ ಇಂಡಿಯಾ ಚಳವಳಿಯ 78 ನೇ ವಾರ್ಷಿಕೋತ್ಸವದಂದು ಮಹಾತ್ಮ ಗಾಂಧಿಯವರ “ಮಾಡು ಇಲ್ಲವೇ ಮಡಿ” ಎಂಬ ಘೋಷಣೆಗೆ ಹೊಸ ಅರ್ಥವನ್ನು ನೀಡಬೇಕಾಗಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.
‘ಅನ್ಯಾಯದ ವಿರುದ್ಧ ಹೋರಾಡಿ, ಭಯಪಡಬೇಡಿ’ ಎಂದು ರಾಹುಲ್ ಹೇಳಿದ್ದಾರೆ.
ಭಾರತದಲ್ಲಿ ಬ್ರಿಟಿಷ್ ಆಡಳಿತವನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿ 1942 ರ ಆಗಸ್ಟ್ 8 ರಂದು ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಬಾಂಬೆ ಅಧಿವೇಶನದಲ್ಲಿ ಕ್ವಿಟ್ ಇಂಡಿಯಾ ಚಳವಳಿಯನ್ನು ಮಹಾತ್ಮ ಗಾಂಧಿ ಪ್ರಾರಂಭಿಸಿದರು.
ಬ್ರಿಟಿಷರು ದೇಶವನ್ನು ತೊರೆಯುವಂತೆ ಮಾಡಲು ಮಹಾತ್ಮ ಗಾಂಧಿಯವರು ಅಂತಿಮ ಪ್ರಯತ್ನದಲ್ಲಿ ಭಾರತದ ಜನರಿಗೆ “ಡು ಆರ್ ಡೈ” ಎಂದು ಕರೆ ನೀಡಿದ್ದರು.
भारत छोड़ो आंदोलन की 78वीं वर्षगाँठ पर गाँधीजी के ‘करो या मरो’ के नारे को नए मायने देने होंगे। ‘अन्याय के ख़िलाफ़ लड़ो, डरो मत!’ pic.twitter.com/Ha1zZpTb5a
— Rahul Gandhi (@RahulGandhi) August 8, 2020
ಕ್ವಿಟ್ ಇಂಡಿಯಾ ಚಳವಳಿಯ 78 ನೇ ವಾರ್ಷಿಕೋತ್ಸವದಂದು ಗಾಂಧೀಜಿಯವರ ‘ಡು ಆರ್ ಡೈ’ ಘೋಷಣೆಗೆ ಹೊಸ ಅರ್ಥವನ್ನು ನೀಡಬೇಕಾಗಿದೆ. ‘ಅನ್ಯಾಯದ ವಿರುದ್ಧ ಹೋರಾಡಿ, ಭಯಪಡಬೇಡಿ!’ ‘ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ರಾಮ, ಅನ್ಯಾಯ-ದ್ವೇಷದಲ್ಲಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲ: ರಾಹುಲ್ ಗಾಂಧಿ


