Homeಮುಖಪುಟರಾಮ, ಅನ್ಯಾಯ-ದ್ವೇಷದಲ್ಲಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲ: ರಾಹುಲ್ ಗಾಂಧಿ

ರಾಮ, ಅನ್ಯಾಯ-ದ್ವೇಷದಲ್ಲಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲ: ರಾಹುಲ್ ಗಾಂಧಿ

ನಿನ್ನೆ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರ ಇದು ರಾಷ್ಟ್ರೀಯ ಏಕತೆ, ಭ್ರಾತೃತ್ವ ಮತ್ತು ಸಾಂಸ್ಕೃತಿಕ ಸಭೆಯ ಸಂದರ್ಭವಾಗಬೇಕೆಂದು ಹೇಳಿಕೆ ನೀಡಿದ್ದರು

- Advertisement -
- Advertisement -

ರಾಮ ನ್ಯಾಯ, ಸಹಾನುಭೂತಿ ಮತ್ತು ಪ್ರೀತಿಯ ಅಭಿವ್ಯಕ್ತಿ; ಅವರು ಎಂದಿಗೂ ದ್ವೇಷ, ಕ್ರೌರ್ಯ ಮತ್ತು ಅನ್ಯಾಯದಲ್ಲಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

“ಮರ್ಯಾದಾ ಪುರುಷೋತ್ತಮ ರಾಮ ಮಾನವೀಯತೆಯ ತಿರುಳನ್ನು ರೂಪಿಸುವ ಅತ್ಯುತ್ತಮ ಮಾನವ ಗುಣಗಳ ಅಭಿವ್ಯಕ್ತಿ” ಎಂದೂ  ಅವರು ಟ್ವೀಟ್‌ ಮಾಡಿದ್ದಾರೆ.

ಮಂಗಳವಾರ ರಾಹುಲ್ ಗಾಂಧಿ ಸಹೋದರಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ರಾಮ ಮಂದಿರದ ಭೂಮಿ ಪೂಜಾ ಕಾರ್ಯಕ್ರಮಕ್ಕೆ ಮುಂಚಿತವಾಗಿ, ಇದು ರಾಷ್ಟ್ರೀಯ ಏಕತೆ, ಭ್ರಾತೃತ್ವ ಮತ್ತು ಸಾಂಸ್ಕೃತಿಕ ಸಭೆಯ ಸಂದರ್ಭವಾಗಬೇಕೆಂದು ಹೇಳಿಕೆ ನೀಡಿದ್ದರು.

ಕಾಂಗ್ರೆಸ್ ಹಿರಿಯ ನಾಯಕರಾದ ಕಪಿಲ್ ಸಿಬಲ್ ಮತ್ತು ಸಂಸದ ಶಶಿ ತರೂರ್ ಕೂಡ ರಾಮ ದೇವಾಲಯ ಸಮಾರಂಭಕ್ಕೆ ಮುಂಚಿತವಾಗಿ ಟ್ವೀಟ್ ಮಾಡಿದ್ದರು.

ರಾಮ ದೇವಾಲಯದ ಬಹುನಿರೀಕ್ಷಿತ ಅಡಿಪಾಯ ಹಾಕುವ ಸಮಾರಂಭವು ಅಯೋಧ್ಯೆಯಲ್ಲಿ ಬುಧವಾರ ಮುಕ್ತಾಯಗೊಂಡಿದ್ದು, ಪ್ರಧಾನಿ ಮೋದಿ ಅವರು ರಾಮ ಜನ್ಮಭೂಮಿ ಸ್ಥಳದಲ್ಲಿ ಭೂಮಿ ಪೂಜೆ ಸಮಾರಂಭವನ್ನು ನಡೆಸಿದರು.

ಪ್ರಧಾನ ಮಂತ್ರಿಗಳು ‘ಶ್ರೀ ರಾಮ ಜನ್ಮಭೂಮಿ ಮಂದಿರ’ ಕುರಿತು ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು.

ಇದುವರೆಗೂ ತಾತ್ಕಾಲಿಕ ಡೇರೆಯಲ್ಲಿ ತಂಗಿದ್ದ ನಮ್ಮ ರಾಮ ಲಲ್ಲಾ ಅವರಿಗಾಗಿ ಒಂದು ದೊಡ್ಡ ದೇವಾಲಯವನ್ನು ನಿರ್ಮಿಸಲಾಗುವುದು ಎಂದು ಪ್ರಧಾನಿ ಹೇಳಿದರು.


ಇದನ್ನೂ ಓದಿ: ರಾಮನ ಆಶಿರ್ವಾದದಿಂದ ಕೊರೊನಾ ಮಾಯವಾಗಲಿದೆ: ಶಿವಸೇನಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಬಾಬರಿ ಮಸೀದಿ ತೀರ್ಪು ಅನ್ಯಾಯವಾಗಿತ್ತು, ರಾಮನ ಬೋಧನೆಗೆ ವಿರುದ್ಧವಾಗಿ ತೀರ್ಪು ನಿರ್ಮಿಸಿದಾಗ ನೀವು ದೇವಾಲಯವನ್ನು ಹೇಗೆ ನಿರ್ಮಿಸಬಹುದು

  2. ಧರ್ಮದ ಹೆಸರಿನಲ್ಲಿ ಅಧರ್ಮದ ಪ್ರತಿಷ್ಠಾಪನೆ
    ಅಧಿಕಾರ ದುರುಪಯೋಗ ಮಾಡಿ ಇನ್ನೊಬ್ಬರ ಆಸ್ತಿ ಕಸಿದು ಅದರಲ್ಲಿ ಧಾರ್ಮಿಕ ಕೇಂದ್ರ ಕಟ್ಟಿದರೆ ಅದನ್ನು ಧರ್ಮ ಎನ್ನಬಹುದೇ.
    ದೇವ ಒಲಿಯುವನೆ?
    ಭಕ್ತಿ ಹುಟ್ಟುವುದಚ ?.
    ಎಲ್ಲವೂ ರಾಜಕೀಯದ ಮಾಯೇ…
    ಧರ್ಮವೇ ಹೈಜಾಕ್ ಆಗಿದೆ ಇಲ್ಲಿ…

LEAVE A REPLY

Please enter your comment!
Please enter your name here

- Advertisment -

Must Read

‘ಸಕ್ಕರೆ ಮಟ್ಟ ಹೆಚ್ಚಿಸಿಕೊಳ್ಳಲು ಮಾವಿನಹಣ್ಣು, ಸಿಹಿತಿಂಡಿ ಸೇವಿಸುತ್ತಿರುವ ಕೇಜ್ರಿವಾಲ್..; ಇಡಿ ಆರೋಪ

0
ಮಧುಮೇಹಿಯಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವೈದ್ಯಕೀಯ ಜಾಮೀನು ಪಡೆಯಲು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಪ್ರತಿದಿನ ಮಾವಿನಹಣ್ಣು, ಆಲೂ ಪುರಿ ಮತ್ತು ಸಿಹಿತಿಂಡಿಗಳನ್ನು ಸೇವಿಸುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಗುರುವಾರ...