ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಬುಧವಾರ ಎಚ್-1ಬಿ (H-1B) ಕೆಲಸದ ವೀಸಾ ನಿಯಮಗಳಲ್ಲಿ ಕೆಲವನ್ನು ಸಡಿಲಗೊಳಿಸಿದೆ. ನಿಷೇಧಕ್ಕೆ ಮುಂಚಿತವಾಗಿ ಅವರು ಅದೇ ಉದ್ಯೋಗಗಳಿಗೆ ಮರಳುತ್ತಿದ್ದರೆ ವೀಸಾ ಹೊಂದಿರುವವರು ದೇಶಕ್ಕೆ ಪ್ರವೇಶಿಸಲು ಅವಕಾಶ ನೀಡುತ್ತದೆ ಎಂದು ಹೇಳಿದೆ. ಅಮೆರಿಕಾ ಸ್ಟೇಟ್ ಡಿಪಾರ್ಟ್ಮೆಂಟ್‌ನ ನೋಟಿಸ್ ಈ ಕ್ರಮವನ್ನು “ಈ ಪರಿಸ್ಥಿತಿಯಲ್ಲಿ ಉದ್ಯೋಗಿಗಳನ್ನು ಬದಲಿಸಲು ಉದ್ಯೋಗದಾತರಿಗೆ ಒತ್ತಾಯಿಸುವುದು ಆರ್ಥಿಕ ತೊಂದರೆಗಳಿಗೆ ಕಾರಣವಾಗಬಹುದು” ಎಂದು ಹೇಳಿ ಸಮರ್ಥಿಸಿಕೊಂಡಿದೆ.
ಅಮೆರಿಕಾದ ತ್ವರಿತ ಮತ್ತು ಮುಂದುವರಿದ ಆರ್ಥಿಕ ಚೇತರಿಕೆಗೆ ಅನುಕೂಲವಾಗುವಂತೆ ತಾಂತ್ರಿಕ ತಜ್ಞರು, ಹಿರಿಯ ಮಟ್ಟದ ವ್ಯವಸ್ಥಾಪಕರು ಮತ್ತು ಇತರ ಕಾರ್ಮಿಕರಿಗೆ ಪ್ರವೇಶವನ್ನು ಆಡಳಿತವು ಅನುಮತಿಸಿದೆ.
“ನಿರ್ಣಾಯಕ ಮೂಲಸೌಕರ್ಯ ಕ್ಷೇತ್ರಗಳಲ್ಲಿ” ಉದ್ಯೋಗದಲ್ಲಿರುವ ವೀಸಾ ಹೊಂದಿರುವವರ ಪ್ರಯಾಣಕ್ಕೂ ಇದು ಅವಕಾಶ ಮಾಡಿಕೊಟ್ಟಿದೆ. ಇದು ರಕ್ಷಣಾ ಆರೋಗ್ಯ ಮತ್ತು ಸಾರ್ವಜನಿಕ ಆರೋಗ್ಯ ಮತ್ತು ಮಾಹಿತಿಯನ್ನು ಒಳಗೊಂಡಿದೆ.
ಓದಿ: ವೀಸಾಗಳ ಸ್ಥಗಿತ : ಟ್ರಂಪ್ ನಿರಾಶೆಯನ್ನುಂಟು ಮಾಡಿದ್ದಾರೆ- ಸುಂದರ್ ಪಿಚೈ
ಆದರೆ, ನಿರ್ಣಾಯಕ ಮೂಲಸೌಕರ್ಯ ವಲಯದಲ್ಲಿ ಮಾತ್ರ ಉದ್ಯೋಗವು ಸಾಕಾಗುವುದಿಲ್ಲ ಎಂದು ನೋಟಿಸ್ ತಿಳಿಸಿದೆ. ಅರ್ಜಿದಾರರು ಎರಡು ಷರತ್ತುಗಳನ್ನು ಪೂರೈಸಬೇಕು ಎಂದು ಅದು ಹೇಳಿದ್ದು: ಅರ್ಜಿದಾರರು ಸಂಸ್ಥೆಯಲ್ಲಿ ಉನ್ನತ ಸ್ಥಾನವನ್ನು ಹೊಂದಿರಬೇಕು ಅಥವಾ ಅನನ್ಯ ಮತ್ತು ನಿರ್ವಹಣೆಯ ಪ್ರಮುಖವಾದ ಕಾರ್ಯಗಳನ್ನು ಪ್ರತಿಬಿಂಬಿಸುವ ಉದ್ಯೋಗ ಕರ್ತವ್ಯಗಳನ್ನು ಹೊಂದಿರಬೇಕು. ಎರಡನೆಯದಾಗಿ, ಅರ್ಜಿದಾರರ ಉದ್ದೇಶಿತ ಉದ್ಯೋಗ ಕರ್ತವ್ಯಗಳು ಮತ್ತು ವಿಶೇಷ ಅರ್ಹತೆಗಳು ಕಂಪನಿಗೆ ವ್ಯಕ್ತಿಯು ಮಹತ್ವದ ಮತ್ತು ವಿಶಿಷ್ಟ ಕೊಡುಗೆಗಳನ್ನು ಒದಗಿಸುತ್ತಾರೆ ಎಂದಿರಬೇಕು ಎಂದಿದೆ.
ಹೆಚ್ಚುವರಿಯಾಗಿ ಸಾರ್ವಜನಿಕ ಆರೋಗ್ಯ, ಆರೋಗ್ಯ ವೃತ್ತಿಪರರಾಗಿ ಕೆಲಸ ಮಾಡುವವರು, ಕೊರೊನಾ ವೈರಸ್ ಸಾಂಕ್ರಾಮಿಕದ ವೈದ್ಯಕೀಯ ಸಂಶೋಧನೆಗಳಲ್ಲಿ ಕರ್ತವ್ಯ ನಿರ್ವಹಿಸುವವರು, ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ವೈದ್ಯಕೀಯ ಸಂಶೋಧನೆಗಳನ್ನು ನಡೆಸುವ ವೀಸಾ ಹೊಂದಿರುವವರ ಅಮೆರಿಕಾ ಪ್ರಯಾಣಕ್ಕೆ ಆಡಳಿತವು ಅವಕಾಶ ಮಾಡಿಕೊಟ್ಟಿದೆ.
ಜೂನ್ 23 ರಂದು, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2020 ರ ಅಂತ್ಯದವರೆಗೆ ಭಾರತೀಯ ಐಟಿ ವೃತ್ತಿಪರರಿಂದ ಹೆಚ್ಚು ಬೇಡಿಕೆಯಿರುವ H-1B ವೀಸಾ ಸೇರಿದಂತೆ ಹಲವಾರು ವರ್ಗದ ವಿದೇಶಿ ಕೆಲಸದ ವೀಸಾಗಳನ್ನು ಅಮಾನತುಗೊಳಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿದ್ದರು. ಟ್ರಂಪ್ ಅವರ ಈ ನಿರ್ಧಾರದಿಂದ ಕೊರೊನಾ ವೈರಸ್ ಸಾಂಕ್ರಾಮಿಕ ಮಧ್ಯೆ ಅಮೆರಿಕಾದಲ್ಲಿ ನಿರುದ್ಯೋಗ ದರದಲ್ಲಿ ತೀವ್ರ ಏರಿಕೆ ಆಗಿದೆ.
ಕಳೆದ ಐದು ವರ್ಷಗಳಲ್ಲಿ 70% ರಷ್ಟು H-1B ವೀಸಾಗಳನ್ನು ಪಡೆದಿರುವ ಭಾರತೀಯರು ಈ ಕ್ರಮದ ವಿರುದ್ದ ಪ್ರತಿಭಟನೆ ಮಾಡಿದ್ದರು. ಜುಲೈನಲ್ಲಿ, ವಲಸೆ ಕಾನೂನು ಸುಧಾರಣೆಗೆ ಒತ್ತಾಯಿಸಿ H-1B ವೀಸಾದ ಭಾರತೀಯರ ಗುಂಪು ವಾಷಿಂಗ್ಟನ್ ಡಿಸಿಯಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿತ್ತು. ಇದಕ್ಕೂ ಮುನ್ನ ಏಳು ಅಪ್ರಾಪ್ತ ವಯಸ್ಕರು ಸೇರಿದಂತೆ 174 ಭಾರತೀಯರ ಗುಂಪು ಟ್ರಂಪ್ ನಿರ್ಧಾರದ ವಿರುದ್ಧ ಮೊಕದ್ದಮೆ ಹೂಡಿತ್ತು. ಅಲ್ಲದೆ ಈ ಕ್ರಮವನ್ನು ವಿರೋಧಿಸಿ ಅಮೆರಿಕದ ವ್ಯಾಪಾರಿ ಮುಖಂಡರು ಹೇಳಿಕೆ ನೀಡಿದ್ದರು.
ಓದಿ: ಹೆಚ್1ಬಿ ಫೆಡರಲ್ ಏಜೆನ್ಸಿ ವೀಸಾ ರದ್ದು ಮಾಡುವ ಆದೇಶಕ್ಕೆ ಟ್ರಂಪ್ ಸಹಿ


