Homeಮುಖಪುಟಇಂದು ಶ್ರೀಕೃಷ್ಣ ಜೈಲಿನಲ್ಲಿ ಜನಿಸಿದ್ದ. ನೀವು ಜೈಲಿನಿಂದ ಹೊರಹೋಗಲು ಬಯಸುವಿರಾ?: ಈ ಡೈಲಾಗ್ ಹೇಳಿದವರ್ಯಾರು ಗೊತ್ತೆ?

ಇಂದು ಶ್ರೀಕೃಷ್ಣ ಜೈಲಿನಲ್ಲಿ ಜನಿಸಿದ್ದ. ನೀವು ಜೈಲಿನಿಂದ ಹೊರಹೋಗಲು ಬಯಸುವಿರಾ?: ಈ ಡೈಲಾಗ್ ಹೇಳಿದವರ್ಯಾರು ಗೊತ್ತೆ?

- Advertisement -
- Advertisement -

“ನಿಮಗೆ ಜಾಮೀನು ಬೇಕೆ ಅಥವಾ ಜೈಲು ಬೇಕೆ? ಇಂದು ಶ್ರೀಕೃಷ್ಣ ಜೈಲಿನಲ್ಲಿ ಜನಿಸಿದ ದಿನ. ನೀವು ಜೈಲಿನಿಂದ ಹೊರಹೋಗಲು ಬಯಸುವಿರಾ?” ಇದೇನು ಸಿನೆಮಾ ಡೈಲಾಗ್ ಅಲ್ಲ. ಅಥವಾ ಹೇಳಿದವರು ಸಿನಿಮಾ ತಾರೆಯು ಅಲ್ಲ. ಹೀಗೇಳಿದವರು ಸಾಕ್ಷಾತ್ ನಮ್ಮ ದೇಶದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬಾಬ್ಡೆ!

ಆಗಸ್ಟ್ 11 ರಂದು ದೇಶದಾದ್ಯಂತ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗಿದ್ದು ಅಂದು ಭಾರತದ ಮುಖ್ಯ ನ್ಯಾಯಮೂರ್ತಿ ಪ್ರಕರಣವೊಂದನ್ನು ಆಲಿಸುವಾಗ ಅರ್ಜಿದಾರರಿಗೆ ಈ ಪ್ರಶ್ನೆಯನ್ನು ಕೇಳಿದ್ದಾರೆ.

ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾದ ಅಪರಾಧಿ ಧರ್ಮೇಂದ್ರ ವಾಲ್ವಿ ಎಂಬವರಿಂದ ಜಾಮೀನು ಅರ್ಜಿ ಸಲ್ಲಿಸಲಾಗಿದ್ದು, ಸಿಜೆಐ ಬಾಬ್ಡೆ ತಮ್ಮ ನ್ಯಾಯಾಲಯದ ವಿಚಾರಣೆಯ ಜಾಮೀನು ನೀಡುವ ಸಮಯದಲ್ಲಿ ಕೃಷ್ಣನ ಜನ್ಮದಿನದ ಕುರಿತು ಪ್ರಶ್ನೆ ಕೇಳಿದ್ದಾರೆ.


ಓದಿ: ಸಿಜೆಐ ಅಂದ್ರೆ ಸುಪ್ರೀಂ ಕೋರ್ಟ್ ಅಲ್ಲ: ನ್ಯಾಯಾಧೀಶರಿಗಿಂತ ನ್ಯಾಯಾಲಯ ದೊಡ್ಡದು – ಪ್ರಶಾಂತ್ ಭೂಷಣ್


ನನ್ನ ಕಕ್ಷಿದಾರನಿಗೆ ಜಾಮೀನು ಕೋರುತ್ತೇನೆ ಎಂದು ವಕೀಲರು ಉತ್ತರಿಸಿದಾಗ, ಮುಖ್ಯ ನ್ಯಾಯಮೂರ್ತಿ ಉತ್ತರಿಸುತ್ತಾ, “ಒಳ್ಳೆಯದು. ನೀವು ಧರ್ಮಕ್ಕೆ ಹೆಚ್ಚಾಗಿ ಅಂಟಿಕೊಂಡಿಲ್ಲ ಎಂದಿದ್ದಾರೆ.”

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಧರ್ಮೇಂದ್ರ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದು, 1994 ರಲ್ಲಿ ರಾಜಕೀಯ ಎದುರಾಳಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಅವರು ಮತ್ತು ಇತರ ಪಕ್ಷದ ಐವರು ಕಾರ್ಯಕರ್ತರ ಮೇಲೆ ಆರೋಪ ಹೊರಿಸಲಾಗಿತ್ತು.

ಮುಖ್ಯ ನ್ಯಾಯಮೂರ್ತಿ ಅರ್ಜಿದಾರರಿಗೆ ಜಾಮೀನು ನೀಡಿದ್ದು, ಜಾಮೀನು ಬಾಂಡ್‌‌ ಜೊತೆಗೆ ರೂ .25,000 ಮೊತ್ತದ ಜಾಮೀನಿನ ಮೇಲೆ ಬಿಡುಗಡೆ ಮಾಡಲು ನಿರ್ದೇಶಿಸಲಾಗಿದೆ.


ಓದಿ: ಸರ್ಕಾರದ ಪರವಾಗಿ ರಫೇಲ್, ಅಯೋಧ್ಯಾ, ಸಿಬಿಐ ತೀರ್ಪು ನೀಡಿದ ನಂತರ ನಿಮಗೆ ರಾಜ್ಯಸಭಾ ಸ್ಥಾನ ಮತ್ತು ಝಡ್ ಶ್ರೇಣಿಯ ಭದ್ರತೆ ಸಿಗುತ್ತದೆ: ಇದರ ಅರ್ಥವೇನು?


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಜಾಗತಿಕ ಮಾದ್ಯಮಗಳಲ್ಲಿ ಸುದ್ದಿಯಾದ ಪ್ರಧಾನಿಯ ದ್ವೇಷ ಭಾಷಣ: ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಟೀಕೆಗೆ ಗುರಿಯಾದ...

0
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜಸ್ಥಾನದ ಬನ್ಸ್ವಾರಾದಲ್ಲಿ ಮುಸ್ಲಿಮರ ವಿರುದ್ಧ ಮಾಡಿದ್ದ ದ್ವೇಷ ಭಾಷಣ ಜಾಗತಿಕ ಮಾದ್ಯಮಗಳಲ್ಲಿ ಭಾರೀ ಸುದ್ದಿಯಾಗಿದ್ದು, ಮೋದಿ ಮತ್ತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗಿದ್ದಾರೆ. 'ಕೊಳಕು ಭಾಷಣ’ ಆದರೆ...