Homeಮುಖಪುಟಸರ್ಕಾರದ ಪರವಾಗಿ ರಫೇಲ್, ಅಯೋಧ್ಯಾ, ಸಿಬಿಐ ತೀರ್ಪು ನೀಡಿದ ನಂತರ ನಿಮಗೆ ರಾಜ್ಯಸಭಾ ಸ್ಥಾನ ಮತ್ತು...

ಸರ್ಕಾರದ ಪರವಾಗಿ ರಫೇಲ್, ಅಯೋಧ್ಯಾ, ಸಿಬಿಐ ತೀರ್ಪು ನೀಡಿದ ನಂತರ ನಿಮಗೆ ರಾಜ್ಯಸಭಾ ಸ್ಥಾನ ಮತ್ತು ಝಡ್ ಶ್ರೇಣಿಯ ಭದ್ರತೆ ಸಿಗುತ್ತದೆ: ಇದರ ಅರ್ಥವೇನು?

ಪ್ರಶಾಂತ್ ಭೂಷಣ್ ನ್ಯಾಯಾಂಗ ನಿಂದನಾ ಪ್ರಕರಣದಲ್ಲಿ ನ್ಯಾ. ಗೊಗೋಯ್ ವಿರುದ್ಧ  ವಕೀಲ ದುಷ್ಯಂತ್ ದವೆ ವಾಗ್ದಾಳಿ...

- Advertisement -
- Advertisement -

“ರಫೇಲ್ ವಿಚಾರ, ಅಯೋಧ್ಯಾ ತೀರ್ಪು, ಸಿಬಿಐ ತೀರ್ಪು ನೀಡಿದ ನಂತರ ನಿಮಗೆ ರಾಜ್ಯಸಭಾ ಸ್ಥಾನ ಮತ್ತು ಝಡ್ ಶ್ರೇಣಿಯ ಭದ್ರತೆ ಸಿಗುತ್ತದೆ. ಇದು ಯಾವ ರೀತಿಯ ಅನಿಸಿಕೆ ಅಥವಾ ಚಿತ್ರಣವನ್ನು ಮೂಡಿಸುತ್ತದೆ?” ಎಂದು ಮಾಜಿ ಮುಖ್ಯ ನ್ಯಾಯಾಧೀಶ ಗೊಗೊಯ್ ವಿರುದ್ಧ ಸುಪ್ರೀಂಕೋರ್ಟ್ ವಕೀಲ ದುಷ್ಯಂತ್ ದವೆ ವಾಗ್ದಾಳಿ ನಡೆಸಿದ್ದಾರೆ.

ಸುಪ್ರೀಂಕೋರ್ಟ್ ವಕೀಲ ದುಷ್ಯಂತ್ ದವೆಯವರು ಬುಧವಾರ ನ್ಯಾಯಾಂಗ ನಿಂದನಾ ಪ್ರಕರಣದಲ್ಲಿ ಪ್ರಶಾಂತ್ ಭೂಷಣ್ ಪರವಾಗಿ ವಾದ ಮಂಡಿಸಿದರು. ಭಾರತದ ಮಾಜಿ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ಸೇರಿದಂತೆ ಕೆಲವು ನಿರ್ದಿಷ್ಟ ನ್ಯಾಯಾಧೀಶರ ಅಡಿಯಲ್ಲಿ ನ್ಯಾಯಾಂಗದ ಸಮಗ್ರತೆಯ ಕೊರತೆಯ ವಿಷಯದಲ್ಲಿ ಇರುವ ವ್ಯಾಪಕ ಅಭಿಪ್ರಾಯದ ಪ್ರಶ್ನೆಯನ್ನು ಅವರು ಎತ್ತಿದರು.

ನ್ಯಾಯಾಂಗವು ಪತನಗೊಂಡಂತೆ ಕಾಣುವ ಅತ್ಯಂತ ಮಹತ್ವದ ಮತ್ತು ರಾಜಕೀಯವಾಗಿ ಸೂಕ್ಷ್ಮವಾದ ಹಲವಾರು ಪ್ರಕರಣಗಳಲ್ಲಿ ನೀಡಲಾದ ತೀರ್ಪಿನ ಮೇಲೆ ದವೆಯವರು ನ್ಯಾಯಾಲಯದ ಗಮನ ಸೆಳೆದರು.

ಗೊಗೋಯ್ ಅವರನ್ನು ಉಲ್ಲೇಖಿಸಿದ ಅವರು, ರಫೇಲ್, ಅಯೋಧ್ಯಾ ಮತ್ತು ಸಿಬಿಐ ಪ್ರಕರಣಗಳಂತಹ ಹಲವಾರು ಪ್ರಕರಣಗಳಲ್ಲಿ ಕೇಂದ್ರ ಸರಕಾರದ ಪರವಾಗಿರುವ ತೀರ್ಪು ನೀಡಿದ ನಂತರ ರಾಜ್ಯಸಭಾ ನಾಮಕರಣ ಮತ್ತು ಝಡ್ ಶ್ರೇಣಿಯ ಭದ್ರತೆಯನ್ನು ಸ್ವೀಕರಿಸುವ ಮೂಲಕ ಮಾಜಿ ಮುಖ್ಯ ನ್ಯಾಯಾಧೀಶರು ನ್ಯಾಯಾಂಗದ ಬಗ್ಗೆ ಎಂತಹ ಒಂದು ಅಭಿಪ್ರಾಯ ಮೂಡಿಸಿದ್ದಾರೆ ಎಂದು ದವೆ ಪ್ರಶ್ನಿಸಿದರು.

“ನಿಮಗೆ ರಾಜ್ಯಸಭಾ ಸ್ಥಾನ ಮತ್ತು ಝಡ್ ಶ್ರೇಣಿಯ ಭದ್ರತೆ ಸಿಗುತ್ತದೆ…ಇದು ಯಾವ ಅಭಿಪ್ರಾಯ ಮೂಡಿಸುತ್ತದೆ?…ರಫೇಲ್ ತೀರ್ಪು, ಅಯೋಧ್ಯಾ ತೀರ್ಪು, ಸಿಬಿಐ ತೀರ್ಪು. ನೀವು ಈ ತೀರ್ಪುಗಳನ್ನು ನೀಡುತ್ತೀರಿ. ನಿಮಗೆ ಇಂತಹ ಸವಲತ್ತುಗಳು ಸಿಗುತ್ತವೆ. ಇವೆಲ್ಲವೂ ನ್ಯಾಯಾಂಗದ ಮೂಲಕ್ಕೇ ಹೊಡೆಯುವ ಗಂಭೀರವಾದ ವಿಷಯಗಳು” ಎಂದು ದವೆಯವರು ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಬಿ.ಆರ್. ಗವಾಯ್ ಮತ್ತು ಕೃಷ್ಢ ಮುರಾರಿ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ಪೀಠಕ್ಕೆ ಹೇಳಿದರು.

ದವೆಯವರು ಅಲ್ಲಿಗೇ ನಿಲ್ಲಿಸಲಿಲ್ಲ. “ರಾಜಕೀಯವಾಗಿ ಸೂಕ್ಷ್ಮವಾದ ಪ್ರಕರಣಗಳು ಕೆಲವು ನಿರ್ದಿಷ್ಟ ನ್ಯಾಯಾಧೀಶರಿಗೆ ಮಾತ್ರ ಸಿಗುವುದು ಏಕೆ? ಉದಾಹರಣೆಗೆ ನ್ಯಾ. ನಾರಿಮನ್- ಅವರಿಗೆ ಎಂದೂ ಇಂತಹಾ ರಾಜಕೀಯ ಸೂಕ್ಷ್ಮ ಪ್ರಕರಣಗಳ ವಿಚಾರಣೆ ಸಿಗುವುದೇ ಇಲ್ಲ!” ಎಂದು ಅವರು ಪ್ರಶ್ನೆ ಮಾಡಿದರು.

‘ಲೈವ್ ಲಾ’ ವರದಿ ಪ್ರಕಾರ, ನ್ಯಾ. ಮಿಶ್ರಾ ಅವರು, “ನ್ಯಾ. ನಾರಿಮನ್ ಅವರು ಕೆಲವು ಸಾಂವಿಧಾನಿಕ ಪೀಠಗಳ ಭಾಗವಾಗಿದ್ದರು” ಎಂದು ಪ್ರತಿಯಾಡಿದರೆ, ನ್ಯಾ. ಗವಾಯ್ ಅವರು, ನ್ಯಾ. ನಾರಿಮನ್ ಅವರು ಮಣಿಪುರ ಪ್ರಕರಣದ ಭಾಗವಾಗಿದ್ದರು ಎಂದು ಹೇಳಿದರು.

ಇದಕ್ಕೆ ಪ್ರತಿಯಾಗಿ ದವೆಯವರು, ತಾನು ರಾಜಕೀಯವಾಗಿ ಸೂಕ್ಷ್ಮವಾಗಿರುವ ಪ್ರಕರಣಗಳ ಬಗ್ಗೆ ಮಾತನಾಡುತ್ತಿದ್ದು, ಬೇಕಾದರೆ ಇಂತಹ 50 ಪ್ರಕರಣಗಳ ಯಾದಿ ಕೊಡಬಲ್ಲೆ ಎಂದೂ ಸೇರಿಸಿದರು. ದೇಶದ 130 ಕೋಟಿ ಜನತೆಯ ಕುರಿತು ನ್ಯಾಯ ಪೀಠಕ್ಕೆ ಇರುವ ಜವಾಬ್ದಾರಿಯನ್ನು ಅವರು ನೆನಪಿಸಿದರು. “ನೀವು 130 ಕೋಟಿ ಜನರ ಹೆತ್ತವರಂತೆ. ನಮ್ಮ ದೇಶದ ರಾಜಕಾರಣಿಗಳ ಬಗ್ಗೆ ನಮಗೆ ಗೊತ್ತು. ನಾಗರಿಕರ ಹಕ್ಕುಗಳನ್ನು ಎತ್ತಿಹಿಡಿಯುವುದು ಸುಪ್ರೀಂಕೋರ್ಟಿಗೆ ಬಿಟ್ಟದ್ದು” ಎಂದು ಅವರು ಹೇಳಿದರು.

ತಾನು ಈ ಪೀಠದ ಮುಂದೆ ಬಹುಶಃ ಕೊನೆಯ ಬಾರಿ ಹಾಜರಾಗುತ್ತಿದ್ದೇನೆ ಎಂದು ಪ್ರಶಾಂತ್ ಭೂಷಣ್ ಅವರು ಸ್ಪಷ್ಟಪಡಿಸಿರುವಂತೆಯೇ, ಅವರು ಯಾವುದೇ ನ್ಯಾಯಾಂಗ ನಿಂದನೆ ಮಾಡಿಲ್ಲ ಎಂದು ಹೇಳುವ ಮೂಲಕ ಅವರು ತನ್ನ ವಾದವನ್ನು ಕೊನೆಗೊಳಿಸಿದರು.

ತನ್ನ ವಾದದ ವೇಳೆ ದವೆಯವರು, ಭಾರತೀಯ ನ್ಯಾಯಾಂಗಕ್ಕೆ ಪ್ರಶಾಂತ್ ಭೂಷಣ್ ಅವರು ನೀಡಿರುವ ಅಗಾಧವಾದ ಕೊಡುಗೆಯನ್ನು ನ್ಯಾಯಪೀಠಕ್ಕೆ ನೆನಪಿಸಿದರು. ವಿಚಾರಣೆಯನ್ನು ಮುಗಿಸಿದ ನ್ಯಾಯಪೀಠವು ತನ್ನ ಆದೇಶವನ್ನು ಕಾದಿರಿಸಿತು.

ಪ್ರಶಾಂತ್ ಭೂಷಣ ಅವರು ಹಿಂದಿನ ನಾಲ್ವರು ಮುಖ್ಯ ನ್ಯಾಯಾಧೀಶರ ನಡವಳಿಕೆಗಳನ್ನು ಉಲ್ಲೇಖಿಸಿ ನ್ಯಾಯಾಂಗದ ಸಮಗ್ರತೆಯ ಕುರಿತಂತೆ ಪ್ರಶ್ನೆಗಳನ್ನು ಎತ್ತುವ ಎರಡು ಟ್ವೀಟ್‌ಗಳನ್ನು ಮಾಡಿದ್ದಕ್ಕಾಗಿ ಸುಪ್ರೀಂಕೋರ್ಟ್ ಕಳೆದ ತಿಂಗಳು ಅವರ ವಿರುದ್ಧ ಸ್ವಯಂಪ್ರೇರಿತ ನ್ಯಾಯಾಂಗ ನಿಂದನಾ ವಿಚಾರಣೆಯನ್ನು ಆರಂಭಿಸಿತ್ತು. ಜೂನ್ 29ರ ಟ್ವೀಟ್‌ನಲ್ಲಿ  ಭೂಷಣ್ ಅವರು ಮುಖ್ಯ ನ್ಯಾಯಾಧೀಶ ಎಸ್.ಎ. ಬೋಬ್ಡೆ ಅವರು ನಾಗಪುರದಲ್ಲಿ ಬಿಜೆಪಿ ನಾಯಕನೊಬ್ಬನಿಗೆ ಸೇರಿದ ಐಷಾರಾಮಿ ಹ್ಯಾರ್ಲೀ ಡೇವಿಡ್‌ಸನ್ ಬೈಕಿನಲ್ಲಿ ಹೆಲ್ಮೆಟ್ ಮತ್ತು ಮಾಸ್ಕ್ ಇಲ್ಲದೇ ಕುಳಿತಿದ್ದಕ್ಕಾಗಿ ಅವರನ್ನು ಗುರಿಮಾಡಿ ಟೀಕಿಸಿದ್ದರು.

ಕೃಪೆ: ಜನತಾಕಿರಿಪೋರ್ಟರ್

ಅನುವಾದ: ನಿಖಿಲ್ ಕೋಲ್ಪೆ


ಇದನ್ನೂ ಓದಿ: ಸುಪ್ರೀಂಕೋರ್ಟಿನ ನ್ಯಾಯಾಂಗ ನಿಂದನೆ ನೋಟೀಸಿಗೆ ವಕೀಲ ಪ್ರಶಾಂತ್ ಭೂಷಣ್ ಸ್ಫೋಟಕ ಉತ್ತರ! 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...