Homeಮುಖಪುಟಸುಪ್ರೀಂಕೋರ್ಟಿನ ನ್ಯಾಯಾಂಗ ನಿಂದನೆ ನೋಟೀಸಿಗೆ ವಕೀಲ ಪ್ರಶಾಂತ್ ಭೂಷಣ್ ಸ್ಫೋಟಕ ಉತ್ತರ!

ಸುಪ್ರೀಂಕೋರ್ಟಿನ ನ್ಯಾಯಾಂಗ ನಿಂದನೆ ನೋಟೀಸಿಗೆ ವಕೀಲ ಪ್ರಶಾಂತ್ ಭೂಷಣ್ ಸ್ಫೋಟಕ ಉತ್ತರ!

ದೇಶದಲ್ಲಿ ದಬ್ಬಾಳಿಕೆ ಮತ್ತು ಬಹುಸಂಖ್ಯಾವಾದವು ಆಳವಾಗಿ ಬೇರೂರಿದಾಗ ನ್ಯಾಯಾಲಯವು ಶರಣಾಯಿತು. ನಾಗರಿಕ ಹಕ್ಕುಗಳು ಮತ್ತು ಸಂಸ್ಥೆಗಳ ಮೇಲಿನ ಅತಿರೇಕದ ದಾಳಿಗಳನ್ನು ಯಾವುದೇ ಉತ್ತರದಾಯಿತ್ವವೇ ಇಲ್ಲದೆ ಸುಪ್ರೀಂಕೋರ್ಟಿನ ದಯಾಳು ಕಣ್ಣುಗಳ ಮುಂದೆಯೇ ನಡೆಯಲು ಬಿಡಲಾಯಿತು.

- Advertisement -
- Advertisement -

ಜೂನ್ ತಿಂಗಳಲ್ಲಿ ಮಾಡಿದ ಎರಡು ಟ್ವೀಟ್‌ಗಳಿಗಾಗಿ ಸುಪ್ರೀಂಕೋರ್ಟ್ ನೀಡಿದ ಸ್ವಯಂಪ್ರೇರಿತ (sue Motu) ನ್ಯಾಯಾಂಗ ನಿಂದನೆಯ ನೋಟೀಸುಗಳಿಗೆ ವಕೀಲ ಪ್ರಶಾಂತ್ ಭೂಷಣ್ ಅವರು ವಿವರವಾದ ಸ್ಫೋಟಕ ಉತ್ತರವನ್ನು ನೀಡಿದ್ದಾರೆ. ಅವರ ಉತ್ತರದ ನಂತರದ ಈ ಪ್ರಕರಣವು ಆಗಸ್ಟ್ 5ರಂದು ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಬಿ.ಆರ್. ಗವಾಯ್ ಮತ್ತು ಕೃಷ್ಣ ಮುರಾರಿ ಅವರ ಪೀಠದಲ್ಲಿ ವಿಚಾರಣೆಗೆ ಬಂದಿದೆ. 

ಈ ವಿಚಾರಣೆಯ ವಿವರಗಳನ್ನು ಒತ್ತಟ್ಟಿಗಿಟ್ಟರೂ, ಪ್ರಶಾಂತ್ ಭೂಷಣ್ ಅವರು ತನ್ನ ವಿವರವಾದ ಲಿಖಿತ ಉತ್ತರದಲ್ಲಿ ಎತ್ತಿರುವ ಹಲವಾರು ಪ್ರಶ್ನೆಗಳು ಕುತೂಹಲಕಾರಿಯಾಗಿವೆ. ಮೆಹಕ್ ಮಹೇಶ್ವರಿ ಅವರ ದೂರನ್ನು ಸುಪ್ರೀಂಕೋರ್ಟ್ ಸ್ವಯಂ ದೂರನ್ನಾಗಿ ಪರಿವರ್ತಿಸಿದ್ದರೂ, ಮೂಲ ದೂರನ್ನು ಲಗತ್ತಿಸದೇ ನೋಟೀಸು ನೀಡಿರುವುದನ್ನು ಅವರು ಮೊದಲಾಗಿ ಪ್ರಶ್ನಿಸಿದ್ದಾರೆ. ಅಲ್ಲದೇ, ಮಹೇಶ್ವರಿಯವರ ದೂರನ್ನು ನ್ಯಾಯಾಂಗದ ಕಡೆಯಲ್ಲಿ ಇರಿಸಿದ ಆಡಳಿತಾತ್ಮಕ ಆದೇಶಗಳ ಪ್ರತಿಗಳನ್ನೂ ನೋಟೀಸಿನ ಜೊತೆ ಲಗತ್ತಿಸದೇ ಇರುವುದನ್ನೂ ಅವರು ಪ್ರಶ್ನಿಸಿದ್ದಾರೆ.

ಎರಡು ಟ್ವೀಟ್‌ಗಳಿಗಾಗಿ ಭೂಷಣ್ ಅವರ ವಿರುದ್ಧ ನ್ಯಾಯಾಂಗ ನಿಂದನೆಯ ಕಲಾಪ ಆರಂಭಿಸುವಂತೆ ಕೋರುವ ಮಹೇಶ್ವರಿಯವರ ದೂರನ್ನು, ನಿಯಮದಂತೆ ಅಗತ್ಯವಿರುವ ಅಟಾರ್ನಿ ಜನರಲ್ ಅವರ ಅನುಮತಿಯಿಂದ ವಿನಾಯಿತಿ ಕೋರುವ ಅರ್ಜಿಯ ಜೊತೆಯಲ್ಲಿ ಸಲ್ಲಿಸಲಾಗಿತ್ತು. ಸುಪ್ರೀಂಕೋರ್ಟಿನ ಮಹಾ ಕಾರ್ಯದರ್ಶಿಯವರು ತನ್ನ ವಿನಂತಿಯಂತೆ ಈ ದಾಖಲೆಗಳನ್ನು ಒದಗಿಸಿಲ್ಲ ಎಂಬುದನ್ನು ಭೂಷಣ್ ಅವರು ನ್ಯಾಯಪೀಠದ ಗಮನಕ್ಕೆ ತಂದಿದ್ದಾರೆ. ಆದರೂ, ಅಗತ್ಯ ದಾಖಲೆಗಳನ್ನು ಪೂರೈಸದ ಕುರಿತು ತನ್ನ ಪ್ರತಿಭಟನೆಯ ಪೂರ್ವಗ್ರಹವಿಲ್ಲದೆಯೇ ಮುಂದುವರಿದು, ನ್ಯಾಯಾಂಗ ನಿಂದನೆಯ ನೋಟೀಸಿಗೆ “ಪ್ರಾಥಮಿಕ ಉತ್ತರ” ನೀಡಿರುವುದಾಗಿ ಅವರು ಹೇಳಿದ್ದಾರೆ. ತನ್ನ ಎರಡೂ ಟ್ವೀಟ್‌ಗಳನ್ನು ವಿವರಿಸುತ್ತಾ, ಯಾರು ಬೇಕಾದರೂ ತನ್ನ ಅಭಿಪ್ರಾಯವನ್ನು ಒಪ್ಪದಿರಬಹುದು; ಆದರೆ ಅದು ತನ್ನ ಪ್ರಾಮಾಣಿಕವಾದ ಅಭಿಪ್ರಾಯಗಳನ್ನು ನ್ಯಾಯಾಂಗ ನಿಂದನೆಯಾಗಿಸುವುದಿಲ್ಲ ಎಂದು ಭೂಷಣ್ ಹೇಳಿದ್ದಾರೆ.

ಮುಖ್ಯ ನ್ಯಾಯಾಧೀಶರ ಬೈಕ್ ಸವಾರಿ ಟ್ವೀಟ್

ಭಾರತದ ಮುಖ್ಯ ನ್ಯಾಯಾಧೀಶ ಎ.ಎಸ್. ಬೋಬ್ಡೆ ಅವರು ಮಹಾರಾಷ್ಟ್ರದ ನಾಗಪುರದ ರಾಜಭವನದಲ್ಲಿ ಹೆಲ್ಮೆಟ್ ಮತ್ತು ಮಾಸ್ಕ್ ಧರಿಸದೆ ಬಿಜೆಪಿ ನಾಯಕನೊಬ್ಬನಿಗೆ ಸೇರಿದ 50 ಲಕ್ಷ ರೂ. ಮೌಲ್ಯದ ಐಷಾರಾಮಿ ಬೈಕಿನ ಮೇಲೆ ಕುಳಿತಿರುವ ಕುರಿತ ಜೂನ್ 27ರ ತನ್ನ ಟ್ವೀಟ್ ಬಗ್ಗೆ ಭೂಷಣ್ ಅವರು ಕೆಳಗಿನಂತೆ ಸ್ಪಷ್ಟೀಕರಣ ನೀಡಿದ್ದಾರೆ:

“ನಾನು ಬೈಕ್ ಸ್ಟ್ಯಾಂಡ್ ಮೇಲೆ ನಿಂತಿರುವುದನ್ನು ಗಮನಿಸಲಿಲ್ಲ; ಆದುದರಿಂದ ಹೆಲ್ಮೆಟ್‌ನ ಅಗತ್ಯವಿರಲಿಲ್ಲ ಎಂಬುದನ್ನು ಮೊದಲಾಗಿಯೇ ಒಪ್ಪಿಕೊಳ್ಳುತ್ತೇನೆ. ಆದುದರಿಂದ, ನಾನು ನನ್ನ ಟ್ವೀಟ್‌ನ ಆ ಭಾಗಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಆದರೆ, ನನ್ನ ಟ್ವೀಟ್‌ನ ಉಳಿದ ಭಾಗದಲ್ಲಿ ನಾನು ಏನು ಹೇಳಿದ್ದೇನೋ ಅದಕ್ಕೆ ಬದ್ಧನಾಗಿದ್ದೇನೆ.”

ಕೋವಿಡ್-19 ಲಾಕ್‌ಡೌನ್ ಹೇರಿಕೆಯ ನಂತರ ನ್ಯಾಯಾಂಗದ ಸಾಮಾನ್ಯ ಕಲಾಪಗಳು ಇಲ್ಲವಾಗಿದ್ದು, ಕೆಲವೇ ಕೆಲವು ವಿಷಯಗಳ ವಿಚಾರಣೆ- ಅದೂ ವಿಡಿಯೋ ಕಾನ್ಫರೆನ್ಸಿಂಗ್‌ನ “ಅತೃಪ್ತಿಕರ” ವಿಧಾನದ ಮೂಲಕ ನಡೆಯುತ್ತಿರುವುದರಿಂದ, ತನ್ನ ಆತಂಕ ಹೆಚ್ಚುತ್ತಿದ್ದ ಕಾರಣದಿಂದ ತಾನು ಹಾಗೆ ಟ್ವೀಟ್ ಮಾಡಿದೆ ಎಂದು ಸಮರ್ಥಿಸಿಕೊಂಡಿರುವ ಭೂಷಣ್, ದಿಲ್ಲಿಯ ಅನೇಕ ಸರಕಾರಿ ಕಚೇರಿಗಳು ಮತ್ತು ಸಂಸ್ಥೆಗಳು ತಮ್ಮ ಕೆಲಸವನ್ನ ಪುನರಾರಂಭಿಸಿವೆ ಎಂದು ಬೆಟ್ಟುಮಾಡಿ ತೋರಿಸಿದ್ದಾರೆ.

“ಸುಪ್ರೀಂಕೋರ್ಟಿನ ಪರಮೋಚ್ಛ ಆಡಳಿತಾತ್ಮಕ ಅಧಿಕಾರ ಹೊಂದಿರುವ ಮುಖ್ಯ ನ್ಯಾಯಾಧೀಶರು ಕೋವಿಡ್ ಪಿಡುಗಿನ ಕಾರಣದಿಂದ ಕಳೆದ ನಾಲ್ಕು ತಿಂಗಳುಗಳಿಂದ ನ್ಯಾಯಾಲಯದ ಸಾಮಾನ್ಯ ಕಲಾಪ ನಡೆಯಲು ಬಿಡದಿರುವಾಗ, ಅವರೇ ಸಾರ್ವಜನಿಕ ಸ್ಥಳದಲ್ಲಿ ಹಲವಾರು ಜನರು ಸುತ್ತಮುತ್ತ ಇರುವಾಗ ಮಾಸ್ಕ್ ಧರಿಸದೇ ಬೈಕ್ ಮೇಲೆ ಕುಳಿತಿರುವಂತೆ ಕಾಣಿಸಿಕೊಂಡರು. ಇದು ಅಸಮಂಜಸವೆಂದು ನನಗೆ ಅನಿಸಿತು” ಎಂದು ಅವರು ಹೇಳಿದ್ದಾರೆ.

ಸುಪ್ರೀಂಕೋರ್ಟಿನ ಸೀಮಿತ ಕಾರ್ಯಾಚರಣೆಯು ನ್ಯಾಯಾಲಯದ ಕದತಟ್ಟುವ ನಾಗರಿಕರ ಮೂಲಭೂತ ಹಕ್ಕಿಗೆ ಅಡಚಣೆ ಉಂಟುಮಾಡಿದೆ ಎಂಬುದು ಕೇವಲ ತನ್ನ ಅಭಿಪ್ರಾಯ ಮಾತ್ರವಲ್ಲ ಎಂದು ವಿವರಿಸಿರುವ ಭೂಷಣ್, ಸುಪ್ರೀಂಕೋರ್ಟ್ ಬಾರ್ ಎಸೋಸಿಯೇಷನ್, ಕಾನೂನು ವೀಕ್ಷಕರು, ಮಾಜಿ ನ್ಯಾಯಾಧೀಶರು ಮತ್ತು ವಕೀಲರು- ಸುಪ್ರೀಂಕೋರ್ಟ್‌ನ ಲಾಕ್‌ಡೌನ್ ಮತ್ತು ಕೇವಲ ಆಯ್ದ ತುರ್ತು ವಿಷಯಗಳ ವಿಚಾರಣೆಗೆ ಕಲಾಪಗಳನ್ನು ಸೀಮಿತಗೊಳಿಸಿರುವುದನ್ನು ಪ್ರಶ್ನಿಸಿ ಗೊತ್ತುವಳಿಗಳನ್ನು ಅಂಗೀಕರಿಸಿದ್ದಾರೆ ಮತ್ತು ಲೇಖನಗಳನ್ನು ಬರೆದಿದ್ದಾರೆ ಎಂದು ಹೇಳಿದ್ದಾರೆ.

ಕೋವಿಡ್ ಪಿಡುಗಿನಿಂದ ಬಾಧಿತರಾದ ಬಾರ್ ಸದಸ್ಯರಿಗೆ ಹಣಕಾಸಿನ ನೆರವು ಒದಗಿಸುವ ಕುರಿತ ಸ್ವಯಂ ಅರ್ಜಿಯ ಮೇಲೆ ಸುಪ್ರೀಂಕೋರ್ಟ್ ಜುಲೈ 22ರಂದು ನೀಡಿದ ತೀರ್ಪಿನಲ್ಲೇ, ನ್ಯಾಯಾಲಯಗಳು ಮುಚ್ಚಿರುವುದರಿಂದ ವಕೀಲರು ತಮ್ಮ ಜೀವನೋಪಾಯವನ್ನು ಗಳಿಸುವ ಮೂಲಗಳಿಂದ ವಂಚಿತರಾಗಿದ್ದಾರೆ ಎಂದು ಒಪ್ಪಿಕೊಂಡಿದೆ ಎಂದು ಭೂಷಣ್ ಎತ್ತಿತೋರಿಸಿದ್ದಾರೆ.

“ಪ್ರಜಾಪ್ರಭುತ್ವದ ನಾಶ” ಕುರಿತ ಟ್ವೀಟ್

ಜೂನ್ 27ರಂದು ಮಾಡಲಾದ ಮತ್ತು ನ್ಯಾಯಾಂಗ ನಿಂದನೆಯ ನೋಟೀಸಿಗೆ ಮೂಲ ಆಧಾರ ಎಂದು ಹೇಳಲಾದ ಭೂಷಣ್ ಅವರ ಎರಡನೆಯ ಟ್ವೀಟ್‌‌ಗೆ ಸಂಬಂಧಿಸಿದಂತೆ ಅವರು ಮೊದಲ ಟ್ವೀಟ್‌ಗೆ ನೀಡಿದ್ದಕ್ಕಿಂತ ಹೆಚ್ಚು ಉದ್ದವಾದ ಸಮರ್ಥನೆಯನ್ನು ನೀಡಿದ್ದಾರೆ. ಈ ಎರಡನೇ ಟ್ವೀಟ್‌ನಲ್ಲಿ ಅವರು ಹೀಗೆ ಹೇಳಿದ್ದಾರೆ:

“ಭಾರತದಲ್ಲಿ ಅಧಿಕೃತ ತುರ್ತುಪರಿಸ್ಥಿತಿ ಇಲ್ಲದೆಯೂ ಪ್ರಜಾಪ್ರಭುತ್ವವನ್ನು ಹೇಗೆ ನಾಶ ಮಾಡಲಾಗಿದೆ ಎಂಬ ಕುರಿತು ಭವಿಷ್ಯದಲ್ಲಿ ಇತಿಹಾಸಕಾರರು ಕಳೆದ ಆರು ವರ್ಷಗಳತ್ತ ಹಿಂತಿರುಗಿ ನೋಡಿದಾಗ, ನಿರ್ದಿಷ್ಟವಾಗಿ ಅದರ ನಾಶದಲ್ಲಿ ಸುಪ್ರೀಂಕೋರ್ಟಿನ ಪಾತ್ರವನ್ನು, ಅದಕ್ಕಿಂತಲೂ ನಿರ್ದಿಷ್ಟವಾಗಿ ಕಳೆದ ನಾಲ್ಕು ಮುಖ್ಯ ನ್ಯಾಯಾಧೀಶರ ಪಾತ್ರವನ್ನು ಗುರುತಿಸುತ್ತಾರೆ.”

ಕಳೆದ ಆರು ವರ್ಷಗಳ ಅವಧಿಯಲ್ಲಿ ಪ್ರಜಾಪ್ರಭುತ್ವವನ್ನು “ಗಣನೀಯವಾಗಿ ನಾಶ ಮಾಡಲಾಗಿದೆ” ಎಂಬುದನ್ನು ವಿವರಿಸಲು ಪ್ರಯತ್ನಿಸಿರುವ ಭೂಷಣ್ ಅವರು, ಬೇಕೆಂದೋ, ಲೋಪದಿಂದಲೋ ಮಾಡಿದ ತನ್ನ ಕೃತ್ಯಗಳಿಂದ ಸುಪ್ರೀಂಕೋರ್ಟ್, ಭಾರತೀಯ ಪ್ರಜಾಪ್ರಭುತ್ವದ “ನಿರ್ವೀರ್ಯತೆಗೆ” ಅನುವು ಮಾಡಿಕೊಟ್ಟಿದೆ; ಈ ಪ್ರಕ್ರಿಯೆಯಲ್ಲಿ ಕಳೆದ ನಾಲ್ವರು ಮುಖ್ಯ ನ್ಯಾಯಾಧೀಶರ ಪಾತ್ರವು ಅತ್ಯಂತ ನಿರ್ಣಾಯಕವಾಗಿದೆ ಎಂದು ಹೇಳಿದ್ದಾರೆ.

ತನ್ನ ಅಭಿಪ್ರಾಯವನ್ನು ವಿಸ್ತರಿಸಿರುವ ಅವರು, ಕಳೆದ ನಾಲ್ಕು ಮುಖ್ಯ ನ್ಯಾಯಾಧೀಶರ ಅಧಿಕಾರಾವಧಿಗಳಲ್ಲಿ ಕಾರ್ಯಾಂಗದ ಮುಂದೆ ಇರಲೇಬೇಕಾದ ಪ್ರಬಲವಾದ ಮೂಲಭೂತ ಕಡಿವಾಣಗಳು ಸಂಪೂರ್ಣವಾಗಿ ಮಾಯವಾಗಿದ್ದವು ಎಂದು ತನ್ನ ಉತ್ತರದಲ್ಲಿ ಆರೋಪಿಸಿದ್ದಾರೆ. ಭೂಷಣ್ ಅವರು ತನ್ನ ಉತ್ತರದಲ್ಲಿ ಏನು ಬರೆದಿದ್ದಾರೆ ಎಂದರೆ:

“ದೇಶದಲ್ಲಿ ದಬ್ಬಾಳಿಕೆ ಮತ್ತು ಬಹುಸಂಖ್ಯಾವಾದವು ಆಳವಾಗಿ ಬೇರೂರಿದಾಗ ನ್ಯಾಯಾಲಯವು ಶರಣಾಯಿತು. ನಾಗರಿಕ ಹಕ್ಕುಗಳು ಮತ್ತು ಸಂಸ್ಥೆಗಳ ಮೇಲಿನ ಅತಿರೇಕದ ದಾಳಿಗಳನ್ನು ಯಾವುದೇ ಉತ್ತರದಾಯಿತ್ವವೇ ಇಲ್ಲದೆ ಸುಪ್ರೀಂಕೋರ್ಟಿನ ದಯಾಳು ಕಣ್ಣುಗಳ ಮುಂದೆಯೇ ನಡೆಯಲು ಬಿಡಲಾಯಿತು. ಇಂತಹ ರಾಜಕೀಯ ಪರಿಸ್ಥಿತಿಯಲ್ಲಿಯೇ ಅತ್ಯಂತ ಸ್ವತಂತ್ರವಾಗಿದ್ದ ನಿಯಂತ್ರಕ ಸಂಸ್ಥೆಗಳು ಉರುಳಿಬಿದ್ದಿರುವುದು ಮತ್ತು ಸುಪ್ರೀಂಕೋರ್ಟ್ ಕೂಡಾ ಎದ್ದುನಿಂತು ಸರಕಾರದ ಈ ಅತಿರೇಕಗಳಿಗೆ ಕಡಿವಾಣ ಹಾಕಲು ಶಕ್ತವಾಗಿಲ್ಲ.”

ಸಂವಿಧಾನದ ವಿಧಿ 370ರ ರದ್ದತಿ ಹಾಗೂ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂತೆಗೆತ ಕುರಿತ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ತಿಂಗಳುಗಳ ಕಾಲ ತಪ್ಪಿಸಿಕೊಂಡ ರೀತಿಯೇ ಭೂಷಣ್ ಅವರ ಅಭಿಪ್ರಾಯಗಳಿಗೆ ಬೆಂಬಲ ದೊರಕಿಸಿಕೊಟ್ಟಿದೆ. ನ್ಯಾಯಾಲಯವು ಹೇಬಿಯಸ್ ಕಾರ್ಪಸ್ ಅರ್ಜಿಗಳನ್ನು, ಲಾಕ್‌ಡೌನ್ ವಿರುದ್ಧದ ಅರ್ಜಿಗಳನ್ನು, ಕಾಶ್ಮೀರದಲ್ಲಿ ಇಂಟರ್ನೆಟ್ ಸಂಪರ್ಕ ಕಡಿತ ಕುರಿತ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಚಾರಣೆ ನಡೆಸಲಿಲ್ಲ ಎಂದು ಅವರು ಹೇಳಿದ್ದಾರೆ.

“ಅವುಗಳ ವಿಚಾರಣೆ ನಡೆಯುವಾಗಲೂ, ಯಾವುದೇ ಮಧ್ಯಂತರ ಪರಿಹಾರ ನೀಡದೆಯೇ ಮತ್ತೆಮತ್ತೆ ವಿಚಾರಣೆಯನ್ನು ಮುದೂಡಲಾಯಿತು. ಜಾಮಿಯಾ ಮತ್ತು ಜೆಎನ್‌ಯು ಮೇಲಿನ ಗಂಭೀರವಾದ ದಾಳಿಗಳಿಗೂ ಸುಪ್ರೀಂಕೋರ್ಟ್ ಕಿವುಡಾಯಿತು. ನೈಸರ್ಗಿಕ ನ್ಯಾಯದ ಸಂಪೂರ್ಣ ಉಲ್ಲಂಘನೆಯಲ್ಲಿ, ಸರಕಾರವು ನ್ಯಾಯಾಲಯಕ್ಕೆ ಸಲ್ಲಿಸುವ ಸಹಿಯೇ ಇಲ್ಲದ ಟಿಪ್ಪಣಿಗಳನ್ನು ಪ್ರತಿವಾದಿಗಳಿಗೆ ಕೂಡಾ ತೋರಿಸದೆ ಸ್ವೀಕರಿಸಿ, ಆದೇಶಗಳನ್ನು ಹೊರಡಿಸುವ ಮುಚ್ಚಿದ ಲಕೋಟೆ ಎಂಬ ಹೊಸ ನ್ಯಾಯಪದ್ಧತಿ ಆರಂಭವಾಯಿತು” ಎಂದು ಪ್ರಶಾಂತ್ ಭೂಷಣ್ ತನ್ನ ಉತ್ತರದಲ್ಲಿ ಆರೋಪಿಸಿದ್ದಾರೆ.

ಮುಚ್ಚಿದ ಲಕೋಟೆ ಪದ್ಧತಿಯು ಪ್ರಸ್ತುತ ಕೇಂದ್ರ ಗೃಹ ಮಂತ್ರಿಯಾಗಿರುವ ಅಮಿತ್ ಶಾ ವಿರುದ್ಧದ ಸಂಚು ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾ. ಬಿ.ಎಚ್. ಲೋಯಾ ಅವರ ನಿಗೂಢ ಸಾವಿನ ಪ್ರಕರಣಕ್ಕೂ “ಮುಚ್ಚಳ ಹಾಕಲು” ಸುಪ್ರೀಂಕೋರ್ಟಿಗೆ ಅನುವು ಮಾಡಿಕೊಟ್ಟಿತು ಎಂದು ಭೂಷಣ್ ಹೇಳಿದ್ದಾರೆ. “ಅದು ರಫೇಲ್ ರಕ್ಷಣಾ ಹಗರಣವನ್ನು ಮುಚ್ಚಿಹಾಕಲು ಕೂಡಾ ಅವರಿಗೆ ಅನುಕೂಲ ಮಾಡಿಕೊಟ್ಟಿತು. ಅಸ್ಸಾಮಿನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಯ ರಚನಾ ಪ್ರಕ್ರಿಯೆಯ ಮೇಲುಸ್ತುವಾರಿ ಪ್ರಕರಣದಲ್ಲೂ ಈ ಮುಚ್ಚಿದ ಲಕೋಟೆ ಪದ್ಧತಿ ವ್ಯಾಪಕವಾಗಿ ಬಳಕೆಯಾಯಿತು” ಎಂದು ತನ್ನ ಉತ್ತರದಲ್ಲಿ ಭೂಷಣ್ ವಾದಿಸಿದ್ದಾರೆ.

ಕೋವಿಡ್-19 ಲಾಕ್‌ಡೌನ್ ಬಳಿಕದ ವಲಸೆ ಕಾರ್ಮಿಕರ ಬಿಕ್ಕಟ್ಟಿನ ವಿಷಯದ ಕುರಿತು ಬರೆದಿರುವ ಭೂಷಣ್, ಜನರು ಕೆಲವೊಮ್ಮೆ ನೂರಾರು ಕಿ.ಮೀ. ವರೆಗೆ ನಡೆದು ಮನೆ ಸೇರಬೇಕಾದಂತೆ ಮಾಡಿದ, ಅವರ ಉಪವಾಸಕ್ಕೆ ಕಾರಣವಾದ, ಅವರನ್ನು ನಿರಾಶ್ರಿತ ನಿರ್ಗತಿಕರನ್ನಾಗಿ ಮಾಡಿದ ಮಾನವ ಹಕ್ಕುಗಳ ಉಲ್ಲಂಘನೆಯ ಗಂಭೀರ ವಿಚಾರಣೆಯನ್ನು ಕೂಡಾ ನಡೆಸದೆ ಸುಪ್ರೀಂಕೋರ್ಟ್ “ಸರಕಾರದ ವಿವೇಚನೆಯನ್ನು ಬೆಂಬಲಿಸಿತು” ಎಂದು ಕೂಡಾ ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ.

ಇಂತಹಾ ಎಲ್ಲಾ ರಾಜಕೀಯ ಸೂಕ್ಷ್ಮತೆಯ ಪ್ರಕರಣಗಳಲ್ಲಿ ಸರಕಾರದ ಮುಂಚೂಣಿ ವ್ಯಕ್ತಿಯಾಗಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ, ಸರಕಾರಕ್ಕೆ ನ್ಯಾಯಾಲಯದ ನೋಟೀಸು ನೀಡದೆಯೇ, ಸರಕಾರವು ಕೇವಿಯಟ್ ಅರ್ಜಿ ಸಲ್ಲಿಸದೆಯೇ ಈ ಎಲ್ಲಾ ವಿಚಾರಣೆಗಳಲ್ಲಿ ಹಾಜರಾಗಿ ವಾದಿಸಲು ಅವಕಾಶ ನೀಡಲಾಗಿದ್ದು, ಇವೆಲ್ಲವೂ ನಿಯಮಬಾಹಿರವಾಗಿವೆ ಎಂದು ಭೂಷಣ್ ಹೇಳಿದ್ದಾರೆ.

“ಹೆಚ್ಚಿನ ಬಾರಿ ನ್ಯಾಯಾಲಯದ ಬಳಿ ಸಾಲಿಸಿಟರ್ ಜನರಲ್ ಸಲ್ಲಿಸಿದ ಟಿಪ್ಪಣಿಗಳ ಪ್ರತಿಗಳು ಮತ್ತೊಂದು ವರದಿ ಇರುತ್ತಿದ್ದು, ಅದನ್ನು ಪರಿಶೀಲಿಸುವ ಅವಕಾಶ ಪ್ರತಿವಾದಿಗಳಿಗೆ ಇರುತ್ತಿರಲಿಲ್ಲ ಮತ್ತು ಅವುಗಳೇ ಹೆಚ್ಚಿನ ಬಾರಿ ಈ ಪ್ರಕರಣಗಳಲ್ಲಿ ನ್ಯಾಯಾಲಯದ ಆದೇಶಗಳಿಗೆ ಆಧಾರಗಳಾಗಿದ್ದವು” ಎಂದು ಪ್ರಶಾಂತ್ ಭೂಷಣ್ ತನ್ನ ಉತ್ತರದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

(ನಿರೀಕ್ಷಿಸಿ: ಸುಪ್ರೀಂಕೋರ್ಟಿನ ಕಳೆದ ನಾಲ್ವರು ಮುಖ್ಯ ನ್ಯಾಯಾಧೀಶರ ನಡವಳಿಕೆ ಕುರಿತು ವಕೀಲ ಪ್ರಶಾಂತ್ ಭೂಷಣ್ ಗಂಭೀರ ಆರೋಪ)

ವಿ. ವೆಂಕಟೇಸನ್, 

ಅನುವಾದ: ನಿಖಿಲ್ ಕೋಲ್ಪೆ


ಇದನ್ನೂ ಓದಿ: ಪ್ರಶಾಂತ್ ಭೂಷಣ್ ಪರ ನಿಂತ 8ಕ್ಕೂ ಹೆಚ್ಚು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಾಧೀಶರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...