ಚೆನ್ನೈ ಹತ್ತಿರ ಇರುವ 700 ಟನ್ ಸ್ಫೋಟಕ ರಾಸಾಯನಿಕದ ಬಗ್ಗೆ ಚಿಂತೆ!
PC: Trade India

ಬೈರುತ್‌ನಲ್ಲಿ ಅಮೋನಿಯಂ ನೈಟ್ರೇಟ್ ಸ್ಫೋಟಗೊಂಡಿದ್ದರಿಂದ ಕನಿಷ್ಠ 135 ಜನರು ಸಾವನ್ನಪ್ಪಿ, ಸಾವಿರಾರು ಜನರು ಗಾಯಗೊಂಡ ಎರಡು ದಿನಗಳ ನಂತರ, ಚೆನ್ನೈ ಬಳಿಯಿರುವ ಸುಮಾರು 700 ಟನ್ ಸ್ಫೋಟಕ ರಾಸಾಯನಿಕದ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದೆ.

ಪ್ರಸ್ತುತ ಇದು ತಮಿಳುನಾಡಿನ ಕಸ್ಟಮ್ಸ್ ಇಲಾಖೆಯ ವಶದಲ್ಲಿದೆ. ಈ ರಾಸಾಯನಿಕವನ್ನು ಪಟಾಕಿ ಮತ್ತು ರಸಗೊಬ್ಬರಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ಇದು ಭಾರತದ ಪಟಾಕಿ ರಾಜಧಾನಿ ಶಿವಕಾಸಿಯಲ್ಲಿನ ಒಂದು ಗುಂಪಿನದ್ದೆಂದು ತಿಳಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು 2015 ರಲ್ಲಿ ಚೆನ್ನೈ ಬಂದರಿನಲ್ಲಿ ವಶಪಡಿಸಿಕೊಳ್ಳಲಾಯಿತು ಮತ್ತು ಅಂದಿನಿಂದಲೂ ಅಲ್ಲಿಯೇ ಇದೆ.

ಆದರೆ, ಸ್ಫೋಟಕಗಳ ರಾಶಿಯನ್ನು ಇನ್ನು ಮುಂದೆ ಬಂದರಿನಲ್ಲಿ ಸಂಗ್ರಹಿಸಲಾಗುವುದಿಲ್ಲ ಎಂದು ಚೆನ್ನೈ ಬಂದರು ಅಧಿಕಾರಿಗಳು ತಿಳಿಸಿದ್ದಾರೆ.

“ಸುಮಾರು 36 ಕಂಟೇನರ್‌ಗಲ್ಲಿವುರ ಪ್ರತಿಯೊಂದೂ ಸುಮಾರು 20 ಟನ್ ಅಮೋನಿಯಂ ನೈಟ್ರೇಟ್ ಅನ್ನು ಬಹಳ ಹಿಂದೆಯೇ ಸ್ಥಳಾಂತರಿಸಲಾಗಿದೆ ಮತ್ತು ಈಗ ಅವು ಕಸ್ಟಮ್ಸ್ ಇಲಾಖೆಯ ನಿಯಂತ್ರಣದಲ್ಲಿವೆ” ಎಂದು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ನಮ್ಮಲ್ಲಿ 697 ಟನ್ ಅಮೋನಿಯಂ ನೈಟ್ರೇಟ್ ಇದೆ. ಇದನ್ನು ಶ್ರೀ ಅಮ್ಮನ್ ಕೆಮಿಕಲ್ಸ್ ಅಕ್ರಮವಾಗಿ ಆಮದು ಮಾಡಿಕೊಂಡಿತ್ತು. ನಾವು ಅವುಗಳನ್ನು ವಿಲೇವಾರಿ ಮಾಡಲು ಪ್ರಯತ್ನಿಸುತ್ತಿದ್ದೇವೆ. ಶೀಘ್ರದಲ್ಲೇ ಎಲ್ಲಾ ವಿವರಗಳನ್ನು ನೀಡುತ್ತೇವೆ” ಎಂದು ಕಸ್ಟಮ್ಸ್ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆಂದು ಎನ್‌ಡಿಟಿವಿ ವರದಿ ಮಾಡಿದೆ.

ಮಾರಣಾಂತಿಕ ಬೈರುತ್ ದುರಂತವನ್ನು ಉಲ್ಲೇಖಿಸಿ, ಪಿಎಂಕೆ ಮುಖ್ಯಸ್ಥ ಡಾ.ರಾಮದಾಸ್ ಸ್ಫೋಟಕಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಬೇಕೆಂದು ಒತ್ತಾಯಿಸಿದರು.

“ಇದೇ ರೀತಿಯ ಸ್ಫೋಟದ ಅಪಾಯವಿದೆ. ಸ್ಫೋಟಕಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಬೇಕು ಮತ್ತು ಗೊಬ್ಬರ ಮತ್ತು ಇತರ ಅಗತ್ಯಗಳ ತಯಾರಿಕೆಗೆ ಬಳಸಬೇಕು” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಬೈರುತ್ ಬಂದರು ಗೋದಾಮಿನಲ್ಲಿ ಸುಮಾರು 2,750 ಟನ್ ಅಮೋನಿಯಂ ನೈಟ್ರೇಟ್ ಸಂಗ್ರಹವಾಗಿದ್ದು, ಅದು ಮಂಗಳವಾರ ಸ್ಫೋಟಗೊಂಡು ಲೆಬನಾನಿನ ರಾಜಧಾನಿಯ ದೊಡ್ಡ ಭಾಗಗಳನ್ನು ಧ್ವಂಸಮಾಡಿತು.


ಇದನ್ನೂ ಓದಿ: ಲೆಬನಾನ್‌ ಬೈರುತ್ ಬಂದರಿನಲ್ಲಿ ಬೃಹತ್ ಸ್ಫೋಟ!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here