ಲೆಬನಾನ್‌ನ ಬೈರುತ್‌ನಲ್ಲಿ ಕಳೆದ ರಾತ್ರಿ ಸಂಭವಿಸಿದ ಭಾರಿ ಸ್ಫೋಟದಿಂದ ಕನಿಷ್ಠ 73 ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಇಸ್ರೇಲ್ ಮತ್ತು ಸಿರಿಯಾ ನಡುವೆ ಇರುವ ಬೈರುತ್ ಬಂದರಿನ ಬಳಿ ನಡೆದ ಸ್ಫೋಟದಲ್ಲಿ ಬೃಹತ್ ಹೊಗೆಯ ಮೋಡ ಆವರಿಸಿತ್ತು. ಇದು ನೂರಾರು ಮೈಲುಗಳಷ್ಟು ದೂರದಲ್ಲಿರುವ ಸೈಪ್ರಸ್‌ನವರೆಗೆ ವ್ಯಾಪಿಸಿತ್ತು. ಜೊತೆಗೆ ಇದರಿಂದ ಲೆಬನಾನಿನ ರಾಜಧಾನಿಯಲ್ಲಿ 3.3 ತೀವ್ರತೆಯ ಭೂಕಂಪನವಾಗಿದೆ.
ರಸಗೊಬ್ಬರಗಳು ಮತ್ತು ಬಾಂಬುಗಳಲ್ಲಿ ಬಳಸಲಾಗುವ ತೀವ್ರ ಸ್ಫೋಟಕ ವಸ್ತುವಾಗಿರುವ 2,750 ಟನ್ ಅಮೋನಿಯಂ ನೈಟ್ರೇಟ್ ಅನ್ನು ಆರು ವರ್ಷಗಳ ಕಾಲ ಬಂದರು ಗೋದಾಮಿನಲ್ಲಿ ಸುರಕ್ಷತಾ ಕ್ರಮಗಳಿಲ್ಲದೆ ಸಂಗ್ರಹಿಸಲಾಗಿದೆ ಎಂದು ಲೆಬನಾನ್ ಪ್ರಧಾನಿ ಹಸನ್ ಡಯಾಬ್ ಹೇಳಿದ್ದಾರೆ.
ಇದೇ ಸ್ಫೋಟಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಪ್ರಧಾನ ಮಂತ್ರಿ ಸ್ಫೋಟದ ಕಾರಣದ ಬಗ್ಗೆ ತನಿಖೆ ನಡೆಸಬೇಕೆಂದು ಕರೆ ನೀಡಿದ್ದು, ಐದು ದಿನಗಳಲ್ಲಿ ಫಲಿತಾಂಶಗಳು ಬಿಡುಗಡೆಯಾಗುತ್ತವೆ ಎಂದು ಹೇಳಿಕೆ ತಿಳಿಸಿದೆ.
ಹೆಚ್ಚು ಸ್ಫೋಟಕ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಂಡು ಗೋದಾಮಿನಲ್ಲಿ ಸಂಗ್ರಹಿಸಲಾಗಿದೆ ಎಂದು ಲೆಬನಾನ್‌ನ ಸಾಮಾನ್ಯ ಭದ್ರತಾ ಮುಖ್ಯಸ್ಥ ಅಬ್ಬಾಸ್ ಇಬ್ರಾಹಿಂ ಹೇಳಿದ್ದಾರೆ.
ಆರಂಭಿಕ ವರದಿಗಳು ಬಂದರಿನ ಬಳಿಯ ಗೋದಾಮಿನೊಂದರಲ್ಲಿ ಪಟಾಕಿಗಳಿಂದ ಸಂಭವಿಸಿದ ದೊಡ್ಡ ಬೆಂಕಿಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಲೆಬನಾನಿನ ರಾಜ್ಯ ಸುದ್ದಿ ಸಂಸ್ಥೆ ಎನ್‌ಎನ್‌ಎ ತಿಳಿಸಿದೆ.
ರಾಯ್ಟರ್ಸ್ ಪ್ರಕಾರ, ಕನಿಷ್ಠ 78 ಜನರು ಸಾವನ್ನಪ್ಪಿದ್ದಾರೆ ಮತ್ತು ಇನ್ನೂ 4,000 ಜನರು ಗಾಯಗೊಂಡಿದ್ದಾರೆ ಎಂದು ದೇಶದ ಆರೋಗ್ಯ ಸಚಿವ ಹಮದ್ ಹಸನ್ ಹೇಳಿದ್ದಾರೆ.
ಇದುವರೆಗೂ ಅನೇಕ ಜನರು ಕಾಣೆಯಾಗಿದ್ದಾರೆ ಎಂದು ಹಸನ್ ಹೇಳಿದ್ದಾರೆ.
“ಜನರು ತಮ್ಮ ಪ್ರೀತಿಪಾತ್ರರ ಬಗ್ಗೆ ತುರ್ತು ವಿಭಾಗವನ್ನು ಕೇಳುತ್ತಿದ್ದಾರೆ ಮತ್ತು ವಿದ್ಯುತ್ ಇಲ್ಲದ ಕಾರಣ ರಾತ್ರಿಯಲ್ಲಿ ಹುಡುಕುವುದು ಕಷ್ಟವಾಗಿತ್ತು. ನಾವು ನಿಜವಾದ ದುರಂತವನ್ನು ಎದುರಿಸುತ್ತಿದ್ದೇವೆ ಮತ್ತು ಹಾನಿಯ ವ್ಯಾಪ್ತಿಯನ್ನು ನಿರ್ಣಯಿಸಲು ಸಮಯ ಬೇಕಾಗುತ್ತದೆ” ಎಂದು ಅದು ಹೇಳಿದೆ.
ನಗರದ ಗವರ್ನರ್ ಮರ್ವಾನ್ ಅಬ್ಬೌಡ್ ಅವರ ಪ್ರಕಾರ ಕನಿಷ್ಠ 10 ಅಗ್ನಿಶಾಮಕ ದಳದವರು ಕಾಣೆಯಾಗಿದ್ದಾರೆ. ಈ ದೃಶ್ಯವು “ಹಿರೋಷಿಮಾ ಮತ್ತು ನಾಗಾಸಾಕಿ” ಯನ್ನು ನೆನಪಿಸುತ್ತದೆ ಎಂದು ಹೇಳಿದರು.
ನನ್ನ ಜೀವನದಲ್ಲಿ ನಾನು ಈ ಪ್ರಮಾಣದಲ್ಲಿ ವಿನಾಶವನ್ನು ಕಂಡಿಲ್ಲ ಎಂದು ಅಬ್ಬೌದ್ ಹೇಳಿದರು. ಇದು ರಾಷ್ಟ್ರೀಯ ದುರಂತ ಎಂದರು.
“ಬೈರುತ್ ನಗರದಲ್ಲಿ ಸಂಭವಿಸಿದ ದೊಡ್ಡ ಸ್ಫೋಟದಿಂದ ಆಘಾತ ಮತ್ತು ದುಃಖವಾಗಿದೆ. ನಮ್ಮ ಪ್ರಾರ್ಥನೆಗಳು ದುಃಖಿತ ಕುಟುಂಬಗಳು ಮತ್ತು ಗಾಯಗೊಂಡವರೊಂದಿಗೆ ಇವೆ” ಎಂದು ಪ್ರಧಾನ ಮಂತ್ರಿಯವರ ಕಛೇರಿ ಟ್ವೀಟ್ ಮಾಡಿದೆ.
Shocked and saddened by the large explosion in Beirut city leading to loss of life and property. Our thoughts and prayers are with the bereaved families and the injured: PM @narendramodi
— PMO India (@PMOIndia) August 5, 2020
ಇದನ್ನೂ ಓದಿ: ’ನಿಮ್ಮ ಬಗ್ಗೆ ನನಗೆ ಹೆಮ್ಮೆಯಿದೆ…ದೆಹಲಿಗರೆ’: ಮುಖ್ಯಮಂತ್ರಿ ಅರಂವಿಂದ್ ಕೇಜ್ರಿವಾಲ್