’ನಿಮ್ಮ ಬಗ್ಗೆ ನನಗೆ ಹೆಮ್ಮೆಯಿದೆ ದೆಹಲಿಗರೆ’: ಮುಖ್ಯಮಂತ್ರಿ ಅರಂವಿಂದ್ ಕೇಜ್ರಿವಾಲ್
ಫೋಟೋ ಕೃಪೆ: ಔಟ್‌‌ಲುಕ್

ಜೂನ್‌ನಲ್ಲಿ ಸಾವಿನ ಅಂಕಿಅಂಶಗಳನ್ನು ಅಧಿಕಾರಿಗಳು ಪರಿಷ್ಕರಿಸಿದ ನಂತರ ಇದೆ ಮೊದಲ ಬಾರಿಗೆ ಅತಿ ಕಡಿಮೆ ಪ್ರಕರಣವನ್ನು ದೆಹಲಿ ವರದಿ ಮಾಡಿದೆ.

ದೆಹಲಿಯಲ್ಲಿ ಮಂಗಳವಾರ 674 ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದ್ದು, ಸೋಂಕಿನ ಒಟ್ಟು ಸಂಖ್ಯೆ 1,39,156 ಕ್ಕೆ ತಲುಪಿದೆ. ಹೊಸದಾಗಿ 12 ಹೊಸ ಸಾವುಗಳು ದಾಖಲಾಗಿದ್ದು ಒಟ್ಟು ಸಾವಿನ ಸಂಖ್ಯೆ 4,033 ಕ್ಕೆ ತಲುಪಿದೆ.

ದೆಹಲಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 9,897 ಆಗಿದ್ದು, ಅದರಲ್ಲಿ 5,000 ಕ್ಕೂ ಹೆಚ್ಚು ಜನರು ಮನೆಯಲ್ಲೇ ಪ್ರತ್ಯೇಕವಾಗಿ ಇದ್ದಾರೆ.

ಪ್ರಪಂಚದಾದ್ಯಂತ 6.9 ಲಕ್ಷಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿರುವ ಮತ್ತು ಆರ್ಥಿಕತೆಯನ್ನು ಅಸ್ತವ್ಯಸ್ತಗೊಳಿಸಿರುವ ಕೊರೊನಾ ವೈರಸ್ ಬಗ್ಗೆ ಹೇಳುತ್ತಾ, ದೆಹಲಿಯ ಮಾದರಿಯನ್ನು ಶ್ಲಾಘಿಸಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, “ದೆಹಲಿಯಲ್ಲಿ ಸಕ್ರಿಯ ಪ್ರಕರಣಗಳು ಇಂದು 10,000 ಕ್ಕಿಂತ ಕಡಿಮೆ ಉಳಿದಿವೆ. ಸಕ್ರಿಯ ಪ್ರಕರಣಗಳ ವಿಷಯದಲ್ಲಿ ದೆಹಲಿ ಈಗ 14 ನೇ ಸ್ಥಾನದಲ್ಲಿದೆ”

“ದೆಹಲಿ ಜನತೆಯೆ ನಿಮ್ಮ ಬಗ್ಗೆ ನನಗೆ ಹೆಮ್ಮೆ ಇದೆ. ನಿಮ್ಮ ’ದೆಹಲಿ ಮಾದರಿ’ ಎಲ್ಲೆಡೆ ಚರ್ಚೆಯಾಗುತ್ತಿದೆ. ಆದರೆ ನಾವು ಸಂತೃಪ್ತರಾಗುವುದಿಲ್ಲ ಮತ್ತು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತೇವೆ ” ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ದೆಹಲಿಯು ಒಂದು ಹಂತವನ್ನು ತಲುಪಿದೆ ಎಂದು ಮುಖ್ಯಮಂತ್ರಿ ಕಳೆದ ತಿಂಗಳು ಹೇಳಿದ್ದರು.

ವೈರಸ್ ಅನ್ನು ಅನಿರೀಕ್ಷಿತ ಎಂದು ಕರೆದ ಕೇಜ್ರಿವಾಲ್, “ಇದು ಒಂದು ತಿಂಗಳ ನಂತರ ಹೇಗೆ ಹರಡುತ್ತದೆ ಎಂದು ನಮಗೆ ತಿಳಿದಿಲ್ಲ. ಆದ್ದರಿಂದ, ನಾವು ಸಂತೃಪ್ತರಾಗಿರಬಾರದು ಎಂದು ನಾನು ಮತ್ತೆ ಹೇಳುತ್ತಿದ್ದೇನೆ. ಲಸಿಕೆ ಬರುವವರೆಗೆ, ಮಾಸ್ಕ್‌ ಧರಿಸುವುದು, ಸಾಮಾಜಿಕ ದೂರ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳುವಂತಹ ನಿಯಮಗಳನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಬೇಕು” ಎಂದು ಹೇಳಿದ್ದಾರೆ.


ಓದಿ:

ಕೊರೊನಾ ನಿಯಂತ್ರಿಸಲು ದೆಹಲಿ ಮಾದರಿ ಅನುಸರಿಸಿ: ಕೇಂದ್ರ ಸಚಿವ


 

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts