Homeಚಳವಳಿಜಾತಿಪದ್ಧತಿಯ ಕಡುವಿರೋಧಿ, ಹೋರಾಟಗಾರ ಸುಧೀರ್ ಧಾವ್ಳೆ

ಜಾತಿಪದ್ಧತಿಯ ಕಡುವಿರೋಧಿ, ಹೋರಾಟಗಾರ ಸುಧೀರ್ ಧಾವ್ಳೆ

ಒಬ್ಬ ಸಂಘಟಕರಾಗಿ, ಲೇಖಕರಾಗಿ, ಕವಿಯಾಗಿ, ನಾಟಕಕಾರರಾಗಿ, ಸ್ವತಂತ್ರ ಪತ್ರಕರ್ತರಾಗಿ, ಮರಾಠಿ ಪತ್ರಿಕೆಯೊಂದರ ಸಂಪಾದಕರಾಗಿ, ಸುಧೀರ್ ಧಾವ್ಳೆಯವರು ಸಾಮಾಜಿಕ ಅನ್ಯಾಯ ಮತ್ತು ದಲಿತರ ಮೇಲಿನ ದೌರ್ಜನ್ಯಗಳನ್ನು ಸಾರ್ವಜನಿಕ ಚರ್ಚೆಗೆ ತರಲು ಅವಿರತ ಪ್ರಯತ್ನ ಮಾಡಿ, ಪ್ರಜಾಪ್ರಭುತ್ವವವನ್ನು ಒಂದು ಮುಖ್ಯ ಹೋರಾಟದ ಶಕ್ತಿಯಾಗಿ ಪರಿವರ್ತಿಸಲು ದುಡಿದಿದ್ದಾರೆ.

- Advertisement -
- Advertisement -

ಸುಧೀರ್ ಧಾವ್ಳೆ ಅವರ ಹೋರಾಟಗಳ ಬಗೆಗಿನ ಬದ್ಧತೆ, ನ್ಯಾಯದ ಬಗೆಗೆ ಅವರಿಗಿರುವ ಆಳವಾದ ಮೂಲಭೂತ ನಂಬಿಕೆಯ ಮೇಲೆ ನಿಂತಿದೆ. ನಾಗಪುರದ ಅಂಬೇಡ್ಕರ್‌ವಾದಿ ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿದ್ದ, ಇಂದೋರದಲ್ಲಿ ತನ್ನ ಬಾಲ್ಯ ಜೀವನ ಕಳೆದ ಸುಧೀರ್, ಆರಂಭದಿಂದಲೇ ಮಾನವ ಹಕ್ಕುಗಳು ಮತ್ತು ಘನತೆಯ ಸಂಬಂಧಿ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. 1994ನೇ ಇಸವಿಯವರೆಗೂ ನಾಗಪುರದಲ್ಲಿನ ಜನಪರ ಚಳುವಳಿಗಳಲ್ಲಿ ಭಾಗಿಯಾಗಿದ್ದ ಸುಧೀರ್ ತರುವಾಯ ಕೆಲಸದ ಹುಡುಕಾಟದಲ್ಲಿ ಬಾಂಬೆಗೆ ನೆಲೆ ಬದಲಿಸಿದರು.

1995ನೇ ಇಸವಿಯಿಂದ, ಸುಧೀರ್ ಧಾವ್ಳೆ ಯವರು ತಮ್ಮ ಜೀವನವನ್ನು ದಲಿತರ ಮತ್ತು ಇನ್ನಿತರ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳ ವಿರುದ್ಧ ಹೋರಾಡಲು ಮುಡುಪಿಟ್ಟರು. ಅವರು ಬೀದಿ ಹೋರಾಟಗಳಲ್ಲಿ ಮತ್ತು ಕೋರ್ಟ್‌ಗಳಲ್ಲಿನ ಹೋರಾಟಗಳೆರಡರಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದ್ದರು ಮತ್ತು ಘಾಟ್ಕೋಪರ್ ರಮಾಬಾಯಿ ನಗರದಲ್ಲಿ ಜರುಗಿದ ದಲಿತ ಹತ್ಯಾಕಾಂಡದಂತಹ ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧ ಹೋರಾಡಿದ್ದರು. ಆ ಘಟನೆಯಲ್ಲಿ ಅಂಬೇಡ್ಕರ್ ಪ್ರತಿಮೆಯ ವಿರೂಪಗೊಳಿಸದ್ದನ್ನು ವಿರೋಧಿಸಿ ಪ್ರತಿಭಟನೆಯಲ್ಲಿ ನಿರತರಾಗಿದ್ದ 10 ಮಂದಿ ದಲಿತರನ್ನು ಪೊಲೀಸರು ಗುಂಡು ಹಾರಿಸಿ ಕೊಂದಿದ್ದರು.

ಹಾಗೆಯೇ ಖೈರ್ಲಾಂಜಿ ಹೋರಾಟ (2006ರ ದಲಿತ ಕುಟುಂಬ ಒಂದರ ಮಾರಣಹೋಮ), 2008ರ ಅಹಮದಾಬಾದ್ ಜಿಲ್ಲೆಯ ಬಾಬನ್ ಮಿಸಲ್ ಕೊಲೆ, 2008ರ ಮರಾಟ್‌ವಾಡದಲ್ಲಾದ ಸಾಹೇಬರಾವ್ ಜೊಂಧಲೆ ಅವರ ಘೋರ ಕೊಲೆ, ಬೀಡ್ ಜಿಲ್ಲೆಯಲ್ಲಿ 2009ರಲ್ಲಾದ ಸದಾಶಿವ್ ಸಾಲ್ವೆಯವರ ಕೊಲೆ, ನಾಗ್ಪುರದಲ್ಲಿ 2009ರಲ್ಲಾದ ಮನೋರಮಾ ಕಾಂಬ್ಳೆ ಗ್ಯಾಂಗ್ ರೇಪ್ ಮತ್ತು ಕೊಲೆ ಪ್ರಕರಣ, 2009ರಲ್ಲಿ ಔರಂಗಾಬಾದ ಬಳಿಯ ಪಾಲ್ಗಾಂವ್ ನಲ್ಲಿ ಕೊಲೆಯಾದ ರೋಹಿದಾಸ್ ತೂಪೆ, ಮತ್ತು ಮಹಾರಾಷ್ಟ್ರದಲ್ಲಿ ಇನ್ನು ಹತ್ತು ಹಲವು ದಲಿತರ ಕೊಲೆ ಮತ್ತು ದೌರ್ಜನ್ಯದ ಕೇಸ್‌ಗಳ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

2002ರಲ್ಲಿ, ಗುಜರಾತ್‌ನಲ್ಲಾದ ಸಾಮೂಹಿಕ ಹತ್ಯಾಕಾಂಡದ ನಂತರದ ದಿನಗಳಲ್ಲಿ, ವಿದ್ರೋಹಿ ಎನ್ನುವ ಮರಾಠಿ ಪತ್ರಿಕೆಯೊಂದನ್ನು ಪ್ರಾರಂಭಿಸಿದರು. ನಾಲ್ಕು ಪುಟಗಳ ಪತ್ರಿಕೆಯಾಗಿ ಶುರುವಾಗಿ ನಂತರ ಕೆಲವು ತಿಂಗಳುಗಳ ನಂತರ ಎಂಟು ಪುಟಗಳ ಪತ್ರಿಕೆಯಾಗಿ ಮಾರ್ಪಾಡಾಯಿತು. ಕೆಲವೇ ವರ್ಷಗಳಲ್ಲಿ ಒಂದು ಪೂರ್ಣ ಪ್ರಮಾಣದ ಪತ್ರಿಕೆಯ ಸ್ವರೂಪ ಪಡೆದು ತಿಂಗಳಿಗೆ ಎರಡು ಬಾರಿ ಮುದ್ರಣ ಹೊಂದತ್ತಾ, ರಾಷ್ಟದಲ್ಲಿ ಜರುಗುವ ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾತನಾಡಲು ಶುರುಮಾಡಿತು. ಈಗಲೂ ದಲಿತರ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಮಾನವಹಕ್ಕುಗಳ ಉಲ್ಲಂಘನೆಯ ಬಗ್ಗೆ ದಲಿತರ ದನಿಯಾಗಿ ಹೋರಾಟ ಮುಂದುವರೆಸಿ, ಸತ್ಯಶೋಧನ ವರದಿಗಳನ್ನು ಮತ್ತು ಮೌಲ್ಯಯುತ ಸಾಹಿತ್ಯವನ್ನು ಪ್ರಕಟಿಸುವ ಪತ್ರಿಕೆಯಾಗಿ ಮುಂದುವರೆದಿದೆ.

ಇದನ್ನೂ ಓದಿ: ಎಷ್ಟೋ ಆದಿವಾಸಿ ಕುಟುಂಬಗಳ ಪ್ರೀತಿಯ ಪುತ್ರ ಮಹೇಶ್ ರಾವುತ್ ಬಂಧನ ನ್ಯಾಯವೇ?

2006ರ ಖೈರ್ಲಾಂಜಿ ಹತ್ಯಾಕಾಂಡದ ನಂತರ, ಬಹುತೇಕ ಅಂಬೇಡ್ಕರ್‌ವಾದಿಗಳು, ಎಡ ಮತ್ತು ಇತರ ಪ್ರಗತಿಪರ ಸಂಘಟನೆಗಳು, ತಮ್ಮ ಹೋರಾಟದ ಸ್ವರೂಪಗಳನ್ನು ಒಗ್ಗೂಡಿಸಿಕೊಂಡು, ಜಾತಿ ವಿನಾಶದ ಪ್ರತಿರೋಧದ ಮೂಲಕ, ಧೀರ್ಘಕಾಲದ ಗುರಿಗಳನ್ನು ಹೊಂದಿರುವ ರಾಜಕೀಯ ಚಳುವಳಿ ಮಾಡುವ ನಿರ್ಧಾರಕ್ಕೆ ಬಂದವು. ಈ ಹೊಸ ಆಶಯದೊಂದಿಗೆ, ಮುಂಬೈನ ಚೈತನ್ಯ ಭೂಮಿಯಲ್ಲಿ ಡಿಸೆಂಬರ್ 6, 2007ರಂದು “Republican Panthers Jaatiya Antachi Chalwal” (ಜಾತಿ ವಿನಾಶ ರಿಪಬ್ಲಿಕನ್ ಪ್ಯಾಂಥರ್ಸ್ ಅಂದೋಲನ) ಸಂಘಟನೆ ಚಾಲನೆಗೆ ಬಂದಿತು.

ಸುಧೀರ್ ಧಾವ್ಳೆ, ಈ ಸಂಘಟನೆಯ ಸಂಸ್ಥಾಪಕ ಸದಸ್ಯರಲ್ಲೊಬ್ಬರಾಗಿದ್ದರು. ತಮ್ಮ ಹಲವು ವರ್ಷಗಳ ಕಾಲದ ರಾಜಕೀಯ ಬೌದ್ಧಿಕ ಪರಿಜ್ಞಾನದ ಸಹಾಯದಿಂದ, ಜಾತಿ ವಿನಾಶವನ್ನು ಕೇಂದ್ರದಲ್ಲಿ ಇಟ್ಟುಕೊಂಡು ರಿಪಬ್ಲಿಕನ್ ಪ್ಯಾಂಥರ್ಸ್ ಸಂಘಟನೆಗೆ ಬೇಕಾದ ತಾತ್ವಿಕ ಸ್ವರೂಪವನ್ನು ತಂದುಕೊಟ್ಟರು. ಒಂದು ಸಾಂಸ್ಕೃತಿಕ ಸಂಘಟನೆಯಾಗಿ, ತಮ್ಮ ಕ್ರಾಂತಿಕಾರಿ ಸಂಗೀತ, ಬೀದಿ ನಾಟಕಗಳನ್ನು ಸ್ಲಂಗಳಿಗೆ, ಕಾರ್ಮಿಕ ಸಂಘಟನೆಗಳಿಗೆ, ಶಾಲೆಗಳಿಗೆ, ಹಲವು ಪ್ರತಿಭಟನೆಗಳಿಗೆ ಕೊಂಡೊಯ್ದು, ಹಿಂದೂ ಜಾತಿ ಪದ್ಧತಿಯ ದೌರ್ಜನ್ಯಗಳನ್ನು ಜನರಿಗೆ ತಲಪುವಂತೆ ಮಾಡಿದರು .

2011ರಲ್ಲಿ, ಮಹಾರಾಷ್ಟ್ರ ಪೊಲೀಸ್ ಧಾವ್ಳೆಯವರನ್ನು ದೇಶದ್ರೋಹದ ಆರೋಪದ ಮತ್ತು ಆತಂಕವಾದಿ ಸಂಘಟನೆಯ ಸದಸ್ಯ ಮತ್ತು ಅವರಿಗೆ ಸಹಕಾರ ನೀಡುತ್ತಿರುವ ಅರೋಪಗಳನ್ನು ಹೊರಿಸಿ ಬಂಧಿಸಿದರು. 2014ರ ಮೇ ತಿಂಗಳಲ್ಲಿ, 40 ತಿಂಗಳು ಜೈಲಿನಲ್ಲಿ ಸೆರೆವಾಸ ಅನುಭವಿಸದ ನಂತರ, ಮಹಾರಾಷ್ಟ್ರದ ಗೊಂಡಿ ಜಿಲ್ಲೆಯ ಯುಎಪಿಎ ವಿಶೇಷ ನ್ಯಾಯಾಲಯದ ಮುಖ್ಯನ್ಯಾಯಾಧೀಶರಾದ ಆರ್ ಜಿ ಅಸ್ಮರ್, ಧಾವ್ಳೆ ಮತ್ತು ಇನ್ನಿತರ 8 ಮಂದಿಯನ್ನು ಎಲ್ಲಾ ಆರೋಪಗಳಿಂದ ದೋಷಮುಕ್ತಗೊಳಿಸಿ ನಿರಪರಾಧಿ ಎಂದು ತೀರ್ಪು ನೀಡಿದರು. ಬಹಳ ಖಾರವಾಗಿ ಪ್ರತಿಕ್ರಿಯಿಸಿದ್ದ ಕೋರ್ಟಿನ ತೀರ್ಪು, ರಾಜ್ಯ ಪೊಲೀಸ್ ತನಿಖೆಯ ಮೇಲೆ ಟೀಕಾ ಪ್ರಹಾರ ಮಾಡಿ ಅಸಮಧಾನ ಸೂಚಿಸಿತ್ತು.

ವಿದ್ರೋಹಿ ಪತ್ರಿಕೆಯನ್ನು ಶುರು ಮಾಡಿದ್ದುದೇ, ವ್ಯವಸ್ಥೆಯ ಕೆಂಗಣ್ಣಿಗೆ ಗುರಿಯಾಗಿ ಧಾವ್ಳೆಯವರನ್ನು ಬಂಧಿಸಲು ಕಾರಣವಾಗಿತ್ತು ಎಂಬುದು ಎಲ್ಲರ ನಂಬಿಕೆ. ಬಿಡುಗಡೆಯ ನಂತರ ಸುಧೀರ್‌ರವರು ಪತ್ರಿಕೆಯ ಪ್ರಸಾರವನ್ನು ಇನ್ನಷ್ಟು ಹೆಚ್ಚಿಸುವುದರ ಜತೆಗೆ, ಹಲವಾರು ಚಳುವಳಿಗಳು, ಪ್ರತಿಭಟನೆಗಳನ್ನು ಸಾಮಾಜಿಕ ಸಮಸ್ಯೆಗಳ ಮೇಲೆ ಹಮ್ಮಿಕೊಂಡರು. ಜಾತಿ ದೌರ್ಜನ್ಯಗಳ ಮೇಲೆ ಹೋರಾಡುವ ಹಲವಾರು ಸಂಘಟನೆಗಳ ಒಕ್ಕೂಟಗಳಾದ, ಜಾತಿ ಅತ್ಯಾಚಾರ್ ವಿರೋಧಿ ಕೃತಿ ಸಮಿತಿ (ಜಾತಿ ದೌರ್ಜನ್ಯ ವಿರೋಧಿ ಕಾರ್ಯ ಸಮಿತಿ), ಸಾಮಾಜಿಕ ನ್ಯಾಯಕ್ಕಾಗಿ ಜಂಟಿ ಸಮಿತಿ, ಭೀಮ್ ಕೋರೆಗಾಂವ್ ಶೌರ್ಯ ದಿನ್ ಪ್ರೇರಣಾ ಅಭಿಯಾನ, ಮುಂತಾದವುಗಳ ಜತೆ ಕೈಜೋಡಿಸಿ ಸಕ್ರಿಯವಾಗಿ ಮುನ್ನಡೆಸಿದ್ದರು. ಸಾಂದರ್ಭಿಕವಾಗಿ, ಇವರ ಜೊತೆಗೆ ಸದ್ಯದ ಭೀಮ್ ಕೋರೆಗಾಂವ್ ಪ್ರಕರಣದ ಸಹ ಆರೋಪಿ ವಕೀಲ ಸುರೇಂದ್ರ ಗಾಡ್ಲಿಂಗ್, 2011 ರ ಪ್ರಕರಣದಲ್ಲಿ ಧಾವ್ಳೆ ಅವರನ್ನು ಪ್ರತಿನಿಧಿಸಿದ್ದರು.

ಸುಧೀರ್ ತಮ್ಮ ನೆಲಮಟ್ಟದ ಹೋರಾಟ ರಾಜಕೀಯ ಅನುಭವಗಳನ್ನು ಮತ್ತು ತಿಳಿವಳಿಕೆಯನ್ನು ಬರಹಕ್ಕಿಳಿಸಿದರು. ಕೇವಲ ವಿದ್ರೋಹಿ ಪತ್ರಿಕೆಯ ಮೂಲಕ ಮಾತ್ರವಲ್ಲದೆ, ಹಲವಾರು ಸಾಮಾಜಿಕ -ರಾಜಕೀಯ ವಿಚಾರಗಳ ಮೇಲೆ ಅವರು ಬರೆದ ಮತ್ತು ಸಂಪಾದಿಸಿದ ಹಲವು ಪುಸ್ತಕಗಳಲ್ಲಿ ಕೂಡ ಅವರು ಇದನ್ನು ಸಾಧಿಸಿದ್ದಾರೆ. ತಾವು ಜೈಲಿನಲ್ಲಿದ್ದ ದಿನಗಳಲ್ಲಿಯೂ, ಮೂರು ಪುಸ್ತಕಗಳನ್ನು ಬರೆದಿದ್ದಾರೆ. ಜನಸಮೂಹದ ನೋವು ಮತ್ತು ಸಂಘರ್ಷಗಳ ಸಮ್ಮಿಲನ ಅವರ ಲೇಖನಗಳ ಜೀವಾಳ.

ಸುಧೀರ್ ತಮ್ಮ ಹಲವಾರು ಸಂಗಾತಿಗಳೊಂದಿಗೆ ದಲಿತ, ಮರಾಠ ಮತ್ತು ಮುಸ್ಲಿಂ ನಾಯಕರನ್ನು ಒಂದು ಸಮಾನ ವೇದಿಕೆಯಲ್ಲಿ ಒಗ್ಗೂಡಿಸಿ, ಸಮಾಜದ ವಿವಿಧ ದುರ್ಬಲ ಸಮುದಾಯಗಳ ಮೇಲಿನ ಪ್ರಭುತ್ವದ ದೌರ್ಜನ್ಯವನ್ನು ಚರ್ಚಿಸಲು ಭೀಮ ಕೋರೆಗಾಂವ್ ಘಟನೆಯ 200ನೇ ವರ್ಷದ ಸಂಸ್ಮರಣೆಯ ದಿನದಂದು, ಎಲ್ಗಾರ್ ಪರಿಷದ್ ಸಭೆಯನ್ನು ಡಿಸೆಂಬರ್ 31, 2017ರಲ್ಲಿ ಕರೆನೀಡಿದ್ದರು.

ಒಬ್ಬ ಸಂಘಟಕರಾಗಿ, ಲೇಖಕರಾಗಿ, ಕವಿಯಾಗಿ, ನಾಟಕಕಾರರಾಗಿ, ಸ್ವತಂತ್ರ ಪತ್ರಕರ್ತರಾಗಿ, ಮರಾಠಿ ಪತ್ರಿಕೆಯೊಂದರ ಸಂಪಾದಕರಾಗಿ, ಸುಧೀರ್ ಧಾವ್ಳೆಯವರು ಸಾಮಾಜಿಕ ಅನ್ಯಾಯ ಮತ್ತು ದಲಿತರ ಮೇಲಿನ ದೌರ್ಜನ್ಯಗಳನ್ನು ಸಾರ್ವಜನಿಕ ಚರ್ಚೆಗೆ ತರಲು ಅವಿರತ ಪ್ರಯತ್ನ ಮಾಡಿ, ಪ್ರಜಾಪ್ರಭುತ್ವವವನ್ನು ಒಂದು ಮುಖ್ಯ ಹೋರಾಟದ ಶಕ್ತಿಯಾಗಿ ಪರಿವರ್ತಿಸಲು ದುಡಿದಿದ್ದಾರೆ.

ಸುಧೀರ್‌ರವರ ಮಾತುಗಳು ತಮ್ಮ ಕ್ರಿಯಾಶೀಲತೆಯಿಂದ, ಧೃಡತೆಯಿಂದ ಶಿಲೆಯನ್ನೂ ಚಲಿಸುವ ಹಾಗೆ ಮಾಡಬಲ್ಲವು. ಸುಧೀರ್ ಪ್ರತಿ ಚಳುವಳಿಯೂ ಹೇಗೆ “ಅನನ್ಯ”ವಾಗಿರಬೇಕು ಎಂದು ವಿವರಿಸುತ್ತಾರೆ. ನಮ್ಮದೇ ಅನನ್ಯ ಕ್ರಾಂತಿಗಾಗಿ …

“ಇದು ಯಾವ ಸೀಮೆಯ ನಗರ?

ನೀವು ಯಾವ ಸೀಮೆಯ ಜನರು?

ಒಂದು ಅನ್ಯಾಯವಾದಾಗ ಆ ನಗರದಲ್ಲಿ ದಂಗೆಯಾಗಬೇಕು.

ಹಾಗೇನಾದರೂ ದಂಗೆಯಾಗದಿದ್ದರೆ,

ಆ ನಗರ ಉರಿದು ಬೆಳಗಾಗುವಷ್ಟರಲ್ಲಿ ಬೂಧಿಯಾಗುವುದೇ ಉತ್ತಮ …”

 

ಕೃಪೆ: ಮುಂಬೈ ರೈಸಸ್ ಟು ಸೇವ್ ಡೆಮಾಕ್ರಸಿ

ಅನುವಾದ: ಮಂಜುನಾಥ ಚಾರ್ವಾಕ


ಇದನ್ನೂ ಓದಿ: ಕಾಶ್ಮೀರದ ಪ್ರಜಾಸತ್ತಾತ್ಮಕ ಹೋರಾಟಕ್ಕೆ ಪ್ರೇರೇಪಣೆಯ ಗೌತಮ್ ನೌಲಾಖ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...