Homeಅಂತರಾಷ್ಟ್ರೀಯಅಮೆರಿಕಾದ ಟಿಕ್‌ಟಾಕ್‌ ಖರೀದಿಸಲು ಮುಂದಾದ ’ಒರಾಕಲ್ ಕಾರ್ಪ್’

ಅಮೆರಿಕಾದ ಟಿಕ್‌ಟಾಕ್‌ ಖರೀದಿಸಲು ಮುಂದಾದ ’ಒರಾಕಲ್ ಕಾರ್ಪ್’

- Advertisement -
- Advertisement -

ಚೀನಾ ಮೂಲದ ಕಂಪೆನಿ ಬೈಟ್‌ಡ್ಯಾನ್ಸ್ ಮಾಲಿಕತ್ವದ ಟಿಕ್‌ಟಾಕನ್ನು ಖರೀದಿಸಲು ಒರಾಕಲ್‌ ಕಾರ್ಪ್ ಪ್ರಾಥಮಿಕ ಮಾತುಕತೆ ನಡೆಸಿದ್ದು ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಅಪ್ಲಿಕೇಶನ್‌ನ ಕಾರ್ಯಾಚರಣೆಯನ್ನು ಖರೀದಿಸಲು ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಫೈನಾನ್ಷಿಯಲ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಒರಾಕಲ್ ಕಾರ್ಪ್ ಅಮೆರಿಕ ಮೂಲದ ಬಹುರಾಷ್ಟ್ರೀಯ ಕಂಪ್ಯೂಟರ್ ತಂತ್ರಜ್ಞಾನ ಕಂಪೆನಿಯಾಗಿದ್ದು ಕ್ಯಾಲಿಫೋರ್ನಿಯಾದ ರೆಡ್‌ವುಡ್ ಶೋರ್ಸ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ.

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಟಿಕ್ ಟಾಕ್‌ ನಿಷೇಧಕ್ಕೆ ಸಹಿ ಹಾಕಿದ ನಂತರ ಹಲವು ಕಂಪನಿಗಳು ಅದನ್ನು ಖರೀದಿಸಲು ಮುಂದಾಗಿದ್ದವು.

ಒರಾಕಲ್ ಈಗಾಗಲೆ ಅಮೆರಿಕಾದ ಕೆಲವು ಹೂಡಿಕೆದಾರರೊಂದಿಗೆ ಕೆಲಸ ಮಾಡುತ್ತಿದ್ದು, ಈಗಾಗಲೇ ಜನರಲ್ ಅಟ್ಲಾಂಟಿಕ್ ಮತ್ತು ಸಿಕ್ವೊಯ ಕ್ಯಾಪಿಟಲ್ ಸೇರಿದಂತೆ ಬೈಟ್ ಡ್ಯಾನ್ಸ್‌ನಲ್ಲಿ ಪಾಲು ಹೊಂದಿದೆ ಎಂದು ಪತ್ರಿಕೆ ವರದಿ ಮಾಡಿದೆ.

ಫೈನಾನ್ಷಿಯಲ್ ಟೈಮ್ಸ್ ವರದಿಯ ಬಗ್ಗೆ ಬೈಟ್‌ಡ್ಯಾನ್ಸ್ ಮತ್ತು ಟಿಕ್‌ಟಾಕ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಆದರೆ ಒರಾಕಲ್ ಪ್ರತಿಕ್ರಿಯಿಸಲು ನಿರಾಕರಿಸಿದೆ ಎನ್ನಲಾಗಿದೆ.

ಅಮೆರಿಕಾದಲ್ಲಿನ ಟಿಕ್‌ಟಾಕ್‌ ಕಾರ್ಯಾಚರಣೆಯನ್ನು ಸ್ವಾಧೀನಪಡಿಸಿಕೊಳ್ಳಲು ಆಸಕ್ತಿ ವ್ಯಕ್ತಪಡಿಸಿ ಟ್ವಿಟರ್ ಬೈಟ್‌ಡ್ಯಾನ್ಸ್ ಅನ್ನು ಸಂಪರ್ಕಿಸಿದೆ ಎಂದು ರಾಯಿಟರ್ಸ್ ಈ ತಿಂಗಳ ಆರಂಭದಲ್ಲಿ ವರದಿ ಮಾಡಿತ್ತು, ಆದರೆ ಇದೆಲ್ಲದೆ ಮಧ್ಯೆ ಮೈಕ್ರೋಸಾಫ್ಟ್ ಕಾರ್ಪ್ ಇದನ್ನು ಕೊಳ್ಳಲು ತುದಿಕಾಲಲ್ಲಿ ನಿಂತಿದೆ.

ಮೈಕ್ರೋಸಾಫ್ಟ್ ಯುರೋಪ್ ಮತ್ತು ಭಾರತದಲ್ಲಿ ಟಿಕ್ ಟಾಕ್ ಖರೀದಿಸಲು ವಿಶೇಷವಾಗಿ ಆಸಕ್ತಿ ಹೊಂದಿದ್ದು, ಇತ್ತೀಚೆಗೆ ಚೀನಾದೊಂದಿಗಿನ ಗಡಿ ಉದ್ವಿಗ್ನತೆಯ ನಂತರ ಭಾರತ ಸರ್ಕಾರ ಇದನ್ನು ನಿಷೇಧಿಸಿತ್ತು.

ಆದರೆ ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳನ್ನು ಹೊರತುಪಡಿಸಿ ಯಾವುದೇ ಆಸ್ತಿಯನ್ನು ಮಾರಾಟ ಮಾಡಲು ಬೈಟ್ ಡ್ಯಾನ್ಸ್ ಆಸಕ್ತಿ ಹೊಂದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.


ಓದಿ: ಟಿಕ್‌ಟಾಕ್, ವೀಚಾಟ್ ಜೊತೆಗಿನ ವಹಿವಾಟುಗಳ ನಿಷೇಧ: ಡೊನಾಲ್ಡ್ ಟ್ರಂಪ್ ಸಹಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ: ರೇವಣ್ಣ ನಿವಾಸದಲ್ಲಿ ಎಸ್‌ಐಟಿ ತಂಡದಿಂದ ಸ್ಥಳ ಮಹಜರು

0
ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಮಹಿಳೆಯೊಬ್ಬರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಎಸ್‌ಐಟಿ ತಂಡ, ಇಂದು (ಮೇ 4) ಹಾಸನದ ಹೆಚ್‌.ಡಿ ರೇವಣ್ಣ ಅವರ ನಿವಾಸದಲ್ಲಿ ಮಹಜರು ನಡೆಸಿದೆ. ಡಿವೈಎಸ್‌ಪಿ...