ಟ್ವಿಟ್ಟರ್‌ನಲ್ಲಿ 4.38 ಕೋಟಿ ಅನುಯಾಯಿಗಳನ್ನು ಹೊಂದಿರುವ ಬಾಲಿವುಡ್ ಚಿತ್ರನಟ ಅಮಿತಾಬ್ ಬಚ್ಚನ್ ಗುರುವಾರ ರಾತ್ರಿ “ಮಾನ್ಸೂನ್ 400 ಮಿಲಿಯನ್ ವರ್ಷಗಳಷ್ಟು ಹಳೆಯದು ಎಂದು ನಿಮಗೆ ತಿಳಿದಿದೆಯೇ? ಅದನ್ನು ಎಲ್ಲೋ ಓದಿದ ನೆನಪು.. ಆದರೆ ಅದನ್ನು ಹೇಗೆ ಮತ್ತು ಯಾರು ಲೆಕ್ಕ ಹಾಕಿದರು ..?” ಎಂದು ಟ್ವೇಟ್ ಮಾಡಿದ್ದಾರೆ.
ಅವರ ಈ ಪೋಸ್ಟ್ 2,100 ಬಾರಿ ರಿಟ್ವೀಟ್ ಮಾಡಲಾಗಿದ್ದು, 40,500 ಲೈಕ್‌ಗಳು ಪಡೆದಿದೆ. ಅದರ ಆರ್ಕೈವ್ ಇಲ್ಲಿದೆ.
T 3633 – Did you know that the MONSOONS are 400 million years old ? read it some where .. BUT how and who calculated it ..??
— Amitabh Bachchan (@SrBachchan) August 20, 2020
ಫ್ಯಾಕ್ಟ್‌ಚೆಕ್
ನಮ್ಮ ಮಾನ್ಸೂನ್ ಕೇವಲ 40 ಮಿಲಿಯನ್‌ಗಳಷ್ಟು ಹಳೆಯದಾಗಿದೆ. ನಟ ಅಮಿತಾಬ್ ಬಚ್ಚನ್ ಪ್ರಶ್ನಿಸಿರುವಂತೆ ನಮ್ಮ ಮಾನ್ಸೂನ್ 400 ಮಿಲಿಯನ್ ವರ್ಷಗಳಷ್ಟು ಹಳೆಯದು ಎಂಬ ವಾದ ತಪ್ಪಾಗಿದೆ.
ವಿಶ್ವದ ಅತಿದೊಡ್ಡ ಹವಾಮಾನ ವ್ಯವಸ್ಥೆಗಳಲ್ಲಿ ಒಂದಾಗಿರುವ ಏಷ್ಯನ್ ಮಾನ್ಸೂನ್ 40 ಮಿಲಿಯನ್ ವರ್ಷಗಳಷ್ಟು ಹಳೆಯದು ಎಂದು ಅಂತರರಾಷ್ಟ್ರೀಯ ಸಂಶೋಧನಾ ತಂಡದ ಹೊಸ ಅಧ್ಯಯನವು ಕಂಡುಹಿಡಿದಿದೆ ಎಂದು ಸೈನ್ಸ್ ಡೈಲಿ ಎಂಬ ವಿಜ್ಞಾನ ವೆಬ್‌ಸೈಟ್ ಮಾಹಿತಿ ನೀಡುತ್ತದೆ.
ಈ ಹಿಂದೆ, ಟಿಬೆಟಿಯನ್ ಪ್ರಸ್ಥಭೂಮಿ ಮತ್ತು ಹಿಮಾಲಯ ಪರ್ವತಗಳು ಖಂಡಾಂತರ ಚಲನೆಯಿಂದ ಮೇಲೆದ್ದ ಪರಿಣಾಮವಾಗಿ ಮಾನ್ಸೂನ್ 22-25 ಮಿಲಿಯನ್ ವರ್ಷಗಳಷ್ಟು ಹಳೆಯದು ಎಂದು ವಿಜ್ಞಾನಿಗಳು ನಂಬಿದ್ದರು. ಆದರೆ ಹೊಸ ಅಧ್ಯಯನಗಳು ಏಷ್ಯಾದ ಮಾನ್ಸೂನ್ 40 ಮಿಲಿಯನ್ ವರ್ಷಗಳಷ್ಟು ಹಿಂದೆ ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್ ಮತ್ತು ಬೆಚ್ಚಗಿನ ತಾಪಮಾನದ ಅವಧಿಯಿಂದಲೂ ಅಸ್ತಿತ್ವದಲ್ಲಿದೆ ಎಂದು ಕಂಡುಹಿಡಿದಿದೆ.
ಅಮಿತಾಬ್ ಬಚ್ಚನ್ ಸುಳ್ಳು ವಾದಗಳನ್ನು ಮಂಡಿಸುವ ಪೋಸ್ಟ್ ಮಾಡುವುದು ಇದೇ ಮೊದಲ ಬಾರಿಯಲ್ಲ. ಈ ಹಿಂದೆ ಅವರು ಗೀತರಚನೆಕಾರ ಮತ್ತು ಕವಿ ಪ್ರಸೂನ್ ಜೋಶಿ ಬರೆದ ಕವಿತೆಯೊಂದನ್ನು ತಮ್ಮ ತಂದೆ, ಕವಿ ಹರಿವನ್ಶ್ ರಾಯ್ ಬಚ್ಚನ್ ಅವರು ಬರೆದದ್ದು ಎಂದು ಸುಳ್ಳು ಬರೆದಿದ್ದರು. ನಂತರದ ಟ್ವೀಟ್‌ನಲ್ಲಿ ಆದ ಪ್ರಮಾದವನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದ್ದರು.
ಅಲ್ಲದೇ ಕೊರೊನಾ ಲಾಕ್‌ಡೌನ್ ಸಮಯದಲ್ಲಿ ನರೇಂದ್ರ ಮೋದಿಯವರು ಚಪ್ಪಾಳೆ ತಟ್ಟಲು, ತಟ್ಟೆ ಬಡಿಯಲು ಸೂಚಿಸಿದ್ದರು. ಆಗ ಅಮಿತಾಬ್ ಬಚ್ಚನ್‌ರವರು ಈ ಶಬ್ದಗಳಿಂದ ಉಂಟಾಗುವ ತರಂಗಗಳಿಂದ ಕೊರೊನಾ ವೈರಸ್ ಸಾಯುತ್ತದೆ ಎಂದು ಟ್ವೀಟ್ ಮಾಡಿದ್ದೆರು. ನೆಟ್ಟಿಗರು ಇದರ ವಿರುದ್ಧ ಕಿಡಿಕಾರಿದಾಗ ಅವರು ಟ್ವೀಟ್ ಡಿಲೀಟ್ ಮಾಡಿದ್ದರು.
ನಮ್ಮ ಮಾನ್ಸೂನ್ ಕೇವಲ 40 ಮಿಲಿಯನ್ ವರ್ಷಗಳಷ್ಟು ಹಳೆಯದಾಗಿದೆ. ಅಮಿತಾಬ್ ಬಚ್ಚನ್ ಅವರ ಟ್ವೀಟ್‌ನಲ್ಲಿನ ಮಾನ್ಸೂನ್ 400 ವರ್ಷಗಳಷ್ಟು ಹಳೆಯದು ಎಂಬ ಮಾಹಿತಿ ತಪ್ಪಾಗಿದೆ.
ಓದಿ: ಸುಶಾಂತ್ ಸಿಂಗ್ ಸೊಸೆಯ ಬಗ್ಗೆ ಆಜ್‌ತಕ್ ಸೇರಿದಂತೆ ಹಲವಾರು ಮಾಧ್ಯಮಗಳು ಸುದ್ದಿ ಮಾಡಿದ್ದ ಈ ವರದಿ ಸುಳ್ಳು


