ಕಾವೇರಿ ಕಾಲಿಂಗ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ಕರ್ನಾಟಕ ಹೈಕೋರ್ಟ್, ಡಿಸ್ಕವರಿ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿರುವ ಕಾವೇರಿ ಕಾಲಿಂಗ್ ಕಾರ್ಯಕ್ರಮದ ಪ್ರದರ್ಶನ ನಿಲ್ಲಿಸುವಂತೆ ಅರ್ಜಿದಾರ ಚಾನೆಲ್‌ಗೆ ನೋಟಿಸ್ ಕಳುಹಿಸಿದ್ದಾರೆಯೇ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ಇಶಾ ಫೌಂಡೇಶನ್‌ಗೆ ನಿರ್ದೇಶಿಸಿತು.
ಇದಕ್ಕೆ ಉತ್ತರಿಸಿದ ಇಶಾ ಫೌಂಡೇಶನ್ ಪರವಾಗಿ ಹಾಜರಾದ ವಕೀಲ ಉದಯ್ ಹೊಲ್ಲಾ, ಪ್ರಕರಣವು ಹೈಕೋರ್ಟ್ ಮುಂದೆ ಬಾಕಿ ಇದೆ ಆದರೆ ಕಾರ್ಯಕ್ರಮ ಪ್ರಸಾರವಾದರೆ ಅದು ನ್ಯಾಯಾಲಯ ನಿಂದನೆಗೆ ಕಾರಣವಾಗಲಿದೆ ಎಂದು ತಿಳಿಸಿ ಅರ್ಜಿದಾರ ಮೂರು ನೋಟಿಸ್‌ಗಳನ್ನು ಚಾನೆಲ್‌ಗೆ ಕಳುಹಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮವನ್ನು ತಡೆಹಿಡಿಯಲು ನ್ಯಾಯಾಲಯವು ಯಾವುದೇ ಮಧ್ಯಂತರ ಆದೇಶವನ್ನು ಅಂಗೀಕರಿಸಿಲ್ಲ ಎಂದು ಅವರು ಸೂಚಿಸಿದರು.
ಇದನ್ನೂ ಓದಿ: ಆಧ್ಯಾತ್ಮಕ ಸಂಘಟನೆಯಾದ ಕಾರಣಕ್ಕೆ ಯಾರೂ ಕಾನೂನಿಗಿಂತ ಮಿಗಿಲಲ್ಲ: ಜಗ್ಗಿ ವಾಸುದೇವ್‌ಗೆ ಹೈಕೋರ್ಟ್ ತರಾಟೆ.
ಚಾನೆಲ್‌ಗೆ ನೋಟಿಸ್ ಕಳುಹಿಸಿದ್ದೀರಾ ಎಂದು ಅರ್ಜಿದಾರರೊಂದಿಗೆ ಪ್ರಶ್ನಿಸಿದ ನ್ಯಾಯಪೀಠಕ್ಕೆ ಉತ್ತರಿಸಿದ ಅವರು ಇಶಾ ಫೌಂಡೇಶನ್ ನನಗೆ ಅಫಿಡವಿಟ್ ಸಲ್ಲಿಸಿಲ್ಲ ಎಂದು ಹೇಳಿದರು. ಅರ್ಜಿದಾರರಿಗೆ ಮತ್ತೊಮ್ಮೆ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಪೀಠ ಇಶಾ ಫೌಂಡೇಶನ್‌ಗೆ ನಿರ್ದೇಶನ ನೀಡಿ, “ನೀವು ಚಾನೆಲ್‌ಗಳನ್ನು ತಪ್ಪುದಾರಿಗೆಳೆಯುವ ಹಾಗಿಲ್ಲ” ಎಂದು ಅಭಿಪ್ರಾಯಪಟ್ಟಿತು.
ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು, ಕಾವೇರಿ ಕಾಲಿಂಗ್ ಕಾರ್ಯಕ್ರಮವು ಸರ್ಕಾರಿ ಜಮೀನಿನಲ್ಲಿದೆ ಮತ್ತು ಇದು ಸರ್ಕಾರಿ ಯೋಜನೆಯಾಗಿದೆ ಎಂದು ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಲಾಗಿದೆ ಎಂಬ ಎರಡು ವಿಷಯಗಳನ್ನು ಮಾತ್ರ ನಿರ್ಧರಿಸಬೇಕಾಗಿದೆ ಎಂದು ಸೂಚಿಸಿತು.
ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಸೆಪ್ಟೆಂಬರ್ 8 ರಂದು ಮುಂದೂಡಿದೆ.
ಈ ಮಧ್ಯೆ, ಇಶಾ ಪ್ರತಿಷ್ಠಾನವು ಪ್ರಸ್ತಾಪಿಸಿರುವ ‘ಕಾವೇರಿ ಕಾಲಿಂಗ್’ ಯೋಜನೆ ರಾಜ್ಯ ಸರ್ಕಾರದ ಯೋಜನೆಯಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿತ್ತು.
ದೂರುದಾರರಾದ ವಕೀಲ ಎ.ವಿ. ಅಮರನಾಥ್ ಅವರ ಅರ್ಜಿಯ ಪ್ರಕಾರ, ಇಶಾ ಫೌಂಡೇಶನ್ ಕಾವೇರಿಯ ಉಗಮ ಸ್ಥಳವಾದ ತಲಕಾವೆರಿಯಿಂದ ತಿರುವರೂರಿನವರೆಗೆ 639 ಕಿಲೋಮೀಟರ್ ವ್ಯಾಪ್ತಿಯ ಕಾವೇರಿ ನದಿ ತೀರದಲ್ಲಿ 253 ಕೋಟಿ ಮರದ ಸಸಿಗಳನ್ನು ನೆಡಲು ಯೋಜಿಸಿದೆ. ಇದಕ್ಕಾಗಿ ಸಾರ್ವಜನಿಕರಿಂದ ಒಂದು ಮರ ನೆಡುವಿಕೆಗೆ 42 ರೂ. ವನ್ನು ಫೌಂಡೇಶನ್ ಪಡೆಯುತ್ತಿದ್ದು, ಅಂದರೆ ಇದು ಒಟ್ಟು 10 ಸಾವಿರ ಕೋಟಿ ರೂಪಾಯಿಗಿಂತಲೂ ಹೆಚ್ಚು ಸಂಗ್ರಹಿಸುತ್ತಿದೆ. ಇದು ದೊಡ್ಡ ಹಗರಣವಾಗಿದೆ ಎಂದು ಅರ್ಜಿದಾರ ವಕೀಲ ಅಮರನಾಥ್ ದೂರಿದ್ದಾರೆ.
ಓದಿ: ’ಕಾವೇರಿ ಕೂಗು’ ಎಂಬುದು ರಾಜಕೀಯ, ಮೋಸ ಮತ್ತು ನಾಟಕ: ಜಗ್ಗಿ ವಾಸುದೇವ್ ನಡೆಗೆ ಪರಿಸರ ಕಾರ್ಯಕರ್ತರ ಆಕ್ಷೇಪ


