Homeಅಂತರಾಷ್ಟ್ರೀಯನೊಬೆಲ್​ ಶಾಂತಿ ಪ್ರಶಸ್ತಿಗೆ ಡೊನಾಲ್ಡ್ ಟ್ರಂಪ್ ಹೆಸರು ಶಿಫಾರಸ್ಸು: ನಾರ್ವೇಯ ಸಂಸತ್ ಸದಸ್ಯ

ನೊಬೆಲ್​ ಶಾಂತಿ ಪ್ರಶಸ್ತಿಗೆ ಡೊನಾಲ್ಡ್ ಟ್ರಂಪ್ ಹೆಸರು ಶಿಫಾರಸ್ಸು: ನಾರ್ವೇಯ ಸಂಸತ್ ಸದಸ್ಯ

ನಾರ್ವೇಯ ಸಂಸತ್ ಸದಸ್ಯ ಮತ್ತು ಟೋ ಸಂಸದೀಯ ಸಭೆಯ ಅಧ್ಯಕ್ಷ ಕ್ರಿಸ್ಟಿಯನ್ ಟೈಬ್ರಿಂಗ್​​ ಜೆಡ್ಡೆ. ಟ್ರಂಪ್​ ಹೆಸರನ್ನು ನೊಬೆಲ್​ ಶಾಂತಿ ಪುರಸ್ಕಾರಕ್ಕೆ ಶಿಫಾರಸು ಮಾಡಿದ್ದಾರೆ

- Advertisement -
- Advertisement -

ಇಸ್ರೇಲ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಡುವಿನ ಶಾಂತಿ ಒಪ್ಪಂದ ಕ್ಕೆ ಸಹಾಯ ಮಾಡಿದ್ದಕ್ಕಾಗಿ  ಟ್ರಂಪ್ ಹೆಸರನ್ನು ಶಿಫಾರಸ್ಸು 2021ರ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ನಾರ್ವೇಯ ಸಂಸತ್ ಸದಸ್ಯ ಮತ್ತು ನ್ಯಾಟೋ ಸಂಸದೀಯ ಸಭೆಯ ಅಧ್ಯಕ್ಷ ಕ್ರಿಸ್ಟಿಯನ್ ಟೈಬ್ರಿಂಗ್​​ ಜೆಡ್ಡೆ, ಟ್ರಂಪ್​ ಹೆಸರನ್ನು ನೊಬೆಲ್​ ಶಾಂತಿ ಪುರಸ್ಕಾರಕ್ಕೆ ಶಿಫಾರಸು ಮಾಡಿದ್ದಾರೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.

ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್​ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್​ ಶಾಂತಿ ಒಪ್ಪಂದ ಏರ್ಪಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದನ್ನು ಗಮನದಲ್ಲಿರಿಸಿಕೊಂಡು ಜೆಡ್ಡೆ ಈ ನಾಮನಿರ್ದೇಶನ ಮಾಡಿದ್ದಾರೆ ಎಂದು ಡಿ.ಡಬ್ಲ್ಯು ನ್ಯೂಸ್ ವರದಿ ಮಾಡಿದೆ.

ಉಭಯ ರಾಷ್ಟ್ರಗಳ ನಡುವೆ ಹದಗೆಟ್ಟಿದ್ದ ಸಂಬಂಧವನ್ನು ಸರಿಪಡಿಸುವಲ್ಲಿ ಟ್ರಂಪ್ ಆಡಳಿತವು ಪ್ರಮುಖ ಪಾತ್ರ ವಹಿಸಿದೆ ಎಂದು ನೊಬೆಲ್ ಸಮಿತಿಗೆ ಬರೆದ ಪತ್ರದಲ್ಲಿ ಟೈಬ್ರಿಂಗ್ ಜೆಡ್ಡೆ ಬರೆದಿದ್ದಾರೆ.

ಈ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ 4 ಜಿ ಸೇವೆ ವಿಸ್ತರಣೆ ಇಲ್ಲ: ಗೃಹ ಸಚಿವಾಲಯ

ಜೆಡ್ಡೆ ನಾರ್ವೇ ಸಂಸತ್ತಿನ ನಾಲ್ಕು ಅವಧಿಯ ಸದಸ್ಯರಾಗಿದ್ದು, ನ್ಯಾಟೋ ಪಾರ್ಲಿಮೆಂಟರಿ ಅಸೆಂಬ್ಲಿಯಲ್ಲಿ ನಾರ್ವೇಯನ್ ಡೆಲಿಗೇಶನ್​ನ ಮುಖ್ಯಸ್ಥರಾಗಿದ್ದಾರೆ. ಫಾಕ್ಸ್ ನ್ಯೂಸ್ ಜತೆಗೆ ಮಾತನಾಡುತ್ತ ಅವರು ಇಸ್ರೇಲ್​-ಯುಎಇ ಶಾಂತಿ ಒಪ್ಪಂದ ಪ್ರಕ್ರಿಯೆಯಲ್ಲಿ ಟ್ರಂಪ್ ಪಾತ್ರ ಪ್ರಮುಖವಾದುದು. ಅವರ ಅರ್ಹತೆಗಾಗಿ, ಅವರು ಶಾಂತಿ ಪ್ರಶಸ್ತಿ ನಾಮನಿರ್ದೇಶಿತರಿಗಿಂತ ರಾಷ್ಟ್ರಗಳ ನಡುವೆ ಶಾಂತಿಯನ್ನು ಸೃಷ್ಟಿಸಲು ಹೆಚ್ಚು ಪ್ರಯತ್ನಿಸಿದ್ದಾರೆಂದು ನಾನು ಭಾವಿಸುತ್ತೇನೆ” ಎಂದು ಫಾಕ್ಸ್ ನ್ಯೂಸ್‌ಗೆ ತಿಳಿಸಿದ್ದಾರೆ. ಈ ಹಿಂದೆ 2018ರಲ್ಲಿಯೂ ಟ್ರಂಪ್‌ಗೆ ನೊಬೆಲ್​ ಶಾಂತಿ ಪುರಸ್ಕಾರ ನೀಡುವಂತೆ ಶಿಫಾರಸ್ಸು ಮಾಡಿದ್ದರು.

ಅಧಿಕೃತ ನೊಬೆಲ್ ವೆಬ್‌ಸೈಟ್ ಪ್ರಕಾರ, 2020ರ ಶಾಂತಿ ಪ್ರಶಸ್ತಿಗೆ 318 ಅಭ್ಯರ್ಥಿಗಳು ಇದ್ದರು. 2021 ರ ಬಹುಮಾನವನ್ನು ಮುಂದಿನ ವರ್ಷದ ಅಕ್ಟೋಬರ್‌ ನಂತರ ಘೋಷಿಸಲಾಗುವುದು.


ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಗುಜರಾತ್‌ನ ಅದಾನಿ ಬಂದರಿನ ಮೂಲಕ ಹಸುಗಳನ್ನು ಅರಬ್‌ ದೇಶಕ್ಕೆ ಕಳಿಸಲಾಗುತ್ತಿದೆ...

0
ಗುಜರಾತ್‌ನ ಅದಾನಿ ಬಂದರಿನ ಮೂಲಕ ಟ್ರಕ್‌ಗಳಲ್ಲಿ ಸಾವಿರಾರು ಹಸುಗಳನ್ನು ತುಂಬಿ ವಧೆಗಾಗಿ ಅರಬ್‌ ದೇಶಗಳಿಗೆ ಕಳಿಸಲಾಗುತ್ತಿದೆ ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿನಾಯಕ್ ಕಟ್ಟಿಕ್ಕರ ಕನ್ನಡಿಗ ಎಂಬ ಫೇಸ್‌ಬುಕ್ ಬಳಕೆದಾರ...