ಮುಸ್ಲಿಂ ವಿವಾಹದಲ್ಲಿ ಭಾಗವಹಿಸಿದ್ದಕ್ಕೆ RSS ಕಾರ್ಯಕರ್ತನ ಮೇಲೆ ಹಲ್ಲೆ ಮಾಡಲಾಯಿತೇ?

ಕೇರಳದ ಮುಸ್ಲಿಂ ವಿವಾಹದಲ್ಲಿ ಪಾಲ್ಗೊಂಡಿದ್ದರಿಂದ, ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (RSS) ಸೇರಿದ ಚಂದ್ರಬಾಸ್ ಎಂದು ಗುರುತಿಸಲ್ಪಟ್ಟ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿದೆ ಎಂಬ ಹೇಳಿಕೆಯೊಂದಿಗೆ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಕೇರಳದಲ್ಲಿ ಹಿಂದೂ ಕಾರ್ಯಕರ್ತನ ವಿರುದ್ಧ ದೌರ್ಜನ್ಯ ಹೇಗೆ ನಡೆಯುತ್ತಿವೆ ಎಂದು ಪ್ರತಿಪಾದಿಸಲು ಚಿತ್ರವನ್ನು ಬಳಸಲಾಗುತ್ತಿದೆ.

ಅದೇ ಹೇಳಿಕೆಯೊಂದಿಗೆ ಈ ಚಿತ್ರವನ್ನು ಟ್ವಿಟರ್ ಬಳಕೆದಾರರೊಬ್ಬರು, “ರಾಷ್ಟ್ರೀಯ ಸ್ವಯಂಸೇವಕರ ಮೇಲಿನ ಇಂತಹ ಹಲ್ಲೆಯ ಘಟನೆಗಳಿಗೆ ಕೇರಳ ಇನ್ನೂ ಎಷ್ಟು ದಿನ ಆಶ್ರಯ ಕೊಡಲು ಸಾಧ್ಯ.  ಕೇರಳದಲ್ಲಿ ಬಿಜೆಪಿ ಬರುವವರೆಗೆ ಮಾತ್ರ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಗಾಲ್ವಾನ್‌ ಕಣಿವೆಯಲ್ಲಿ ಸಾವಿಗೀಡಾದ ಚೀನಾ ಸೈನಿಕರ ಸಮಾಧಿಯೆಂದು ಹಳೆಯ ಚಿತ್ರಗಳನ್ನು ಪ್ರಸಾರ ಮಾಡಿದ ಮಾಧ್ಯಮಗಳು

ಇದೇ ಚಿತ್ರವನ್ನು “0% ಮಾನವೀಯತೆ, 100% ಸಾಕ್ಷರತೆ, ಕೇರಳಕ್ಕೆ ನಾಚಿಕೆಯಾಗಬೇಕು” ಎಂದು ಹಂಚಿಕೊಂಡಿದ್ದಾರೆ. ಹಲವಾರು ಫೇಸ್‌ಬುಕ್ ಬಳಕೆದಾರರು ಸಹ ಅದೇ ನಿರೂಪಣೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್: 

ಈ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಯು ನಟನಾಗಿದ್ದು, ಅರ್ಜುನ್ ರತನ್ ಎಂಬುದು ಈತನ ಹೆಸರು. ಈ ದೃಶ್ಯವು ಕರಿಕ್ಕು ಎಂಬ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಅಪ್‌ಲೋಡ್ ಮಾಡಲಾದ ‘ಸ್ಮೈಲ್ ಪ್ಲೀಸ್’ ಎಂಬ ವೀಡಿಯೊದಲ್ಲಿ ಕಂಡುಬಂದಿದೆ ಎಂದು ದಿ ಕ್ವಿಂಟ್ ವರದಿ ಮಾಡಿದೆ.

ಹಲವಾರು ಟ್ವಿಟರ್ ಬಳಕೆದಾರರು ಈ ಚಿತ್ರಗಳನ್ನು ಯೂಟ್ಯೂಬ್ ಚಾನೆಲ್‌ನ ‘ಕರಿಕ್ಕು’ ವೀಡಿಯೋದಿಂದ ತೆಗೆದುಕೊಳ್ಳಲಾಗಿದೆ ಎಂದು ಗುರುತಿಸಿದ್ದಾರೆ. ಈ ವ್ಯಕ್ತಿಯು ನಟಿಸಿರುವ ವೀಡಿಯೋವನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

ಇದಲ್ಲದೆ, ಕಿತ್ತಳೆ ಬಣ್ಣದ ಕುರ್ತಾ ಧರಿಸಿದ, ವೈರಲ್ ಚಿತ್ರದಲ್ಲಿರುವ ವ್ಯಕ್ತಿಯನ್ನು ವೆಬ್ ಸರಣಿಯಲ್ಲಿ ಅದೇ ಉಡುಪಿನಲ್ಲಿ ಕಾಣಬಹುದು. ವಿಡಿಯೋದಲ್ಲಿ ಅವರ ಪಾತ್ರಕ್ಕೆ ಚಂದ್ರಬಾಸ್ ಎಂದು ಹೆಸರಿಸಲಾಗಿದೆ.

ಈ ವೀಡಿಯೋದಲ್ಲಿನ ಕೊನೆಯ ದೃಶ್ಯಗಳಲ್ಲಿ, ಈ ವ್ಯಕ್ತಿಯನ್ನು ಅದೇ ಗಾಯಗಳು ಮತ್ತು ಅದೇ ಬಟ್ಟೆಯೊಂದಿಗೆ ಕಾಣಬಹುದು. ಆಗಸ್ಟ್ 19 ರಂದು ಈ ನಟ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅದೇ ಚಿತ್ರಗಳನ್ನು ಹಂಚಿಕೊಂಡಿದ್ದಾನೆ.

ವೈರಲ್ ಚಿತ್ರಗಳಲ್ಲಿ ಕಂಡುಬರುವಂತೆ, ಕಾರ್ಯಕರ್ತನ ಕೇಸರಿ ತಿಲಕವಾಗಲಿ, ಪ್ರಸಂಗವಾಗಲಿ ವಾಸ್ತವದ ವೀಡಿಯೋದಲ್ಲಿ ಕಂಡುಬರುವುದಿಲ್ಲ ಎಂಬುದು ಗಮನಾರ್ಹ.

ಹಾಗಾಗಿ, “ಮಲಯಾಳಂ ವೆಬ್ ಸರಣಿಯ ನಟನ ಚಿತ್ರಗಳನ್ನು, ಕೇರಳದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಲಾಗಿದೆ” ಎಂಬ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ ಎಂಬುದು ತಿಳಿದುಬಂದಿದೆ.


ಇದನ್ನೂ ಓದಿ: ಫ್ಯಾಕ್ಟ್‌‌ಚೆಕ್‌: ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರು ಕಾಳಿ ದೇವಿಯ ಮೂರ್ತಿ ಸುಟ್ಟರೆ?

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts