Homeಚಳವಳಿಖಾಸಗೀಕರಣದ ವಿರುದ್ಧ ಬಿಪಿಸಿಎಲ್ ನೌಕರರಿಂದ 48 ಗಂಟೆಗಳ ಮುಷ್ಕರ

ಖಾಸಗೀಕರಣದ ವಿರುದ್ಧ ಬಿಪಿಸಿಎಲ್ ನೌಕರರಿಂದ 48 ಗಂಟೆಗಳ ಮುಷ್ಕರ

ಟೆಂಡರ್ ಮುಖಾಂತರ ಖಾಸಗೀಕರಣಕ್ಕಾಗಿ ಮಾರಾಟ / ಖರೀದಿ ಒಪ್ಪಂದದ ಷರತ್ತುಗಳನ್ನು ಅಂಗೀಕರಿಸುವುದು, ನೌಕರರ ನಿವೃತ್ತಿಯ ಪ್ರಯೋಜನಗಳಾದ ಭವಿಷ್ಯ ನಿಧಿ, ಪಿಂಚಣಿ ಮತ್ತು ವೈದ್ಯಕೀಯ ಪ್ರಯೋಜನಗಳ ಮೊಟಕುಗೊಳಿಸುವಂತಾಗುತ್ತದೆ.

- Advertisement -
- Advertisement -

ಭಾರತದ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್) ನ 4,800 ಕ್ಕೂ ಹೆಚ್ಚು ಉದ್ಯೋಗಿಗಳು  ಸರ್ಕಾರದ ಖಾಸಗೀಕರಣದ ವಿರುದ್ಧ 48 ಗಂಟೆಗಳು ಮುಷ್ಕರ ನಡೆಸಿದ್ದಾರೆ. ಕಂಪನಿಯ ತ್ವರಿತ ಖಾಸಗೀಕರಣಕ್ಕೆ ಅನುಕೂಲವಾಗುವ ದೀರ್ಘಾವಧಿಯ ವೇತನ ಇತ್ಯರ್ಥಕ್ಕೆ ಸಹಿ ಹಾಕುವ ನಿರ್ಧಾರದ ವಿರುದ್ಧ ಮುಷ್ಕರ ನಡೆದಿದೆ.

ಸೋಮವಾರ ಬೆಳಿಗ್ಗೆ ಪ್ರಾರಂಭವಾದ ಮುಷ್ಕರಕ್ಕೆ ಬಿಪಿಸಿಎಲ್‌ನ ಕೊಚ್ಚಿ ಮತ್ತು ಮುಂಬೈ ಸಂಸ್ಕರಣಾಗಾರಗಳಲ್ಲಿನ 15 ಒಕ್ಕೂಟಗಳು ಮತ್ತು ದೇಶದ ವಿವಿಧ ಭಾಗಗಳ ನೌಕರರು ಸಾಥ್ ನೀಡಿದ್ದರು. ಕೊಚ್ಚಿ ಮತ್ತು ಮುಂಬೈ  ಸಂಸ್ಕರಣಾಗಾರಗಳು, ಎಲ್‌ಪಿಜಿ ಸ್ಥಾವರಗಳು ಮತ್ತು ಗುರುತು ಮಾಡಿದ್ದ ಡಿಪೋಗಳನ್ನು ಬಂದ್ ಮಾಡಿ ಮೊದಲ ದಿನ ಪ್ರತಿಭಟನೆ ಮಾಡಲಾಗಿದೆ ಎಂದು ಪೆಟ್ರೋಲಿಯಂ ಮತ್ತು ಗ್ಯಾಸ್ ವರ್ಕರ್ಸ್ ಫೆಡರೇಶನ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ನೊಗೆನ್ ಚುಟಿಯಾ ನ್ಯೂಸ್‌ಕ್ಲಿಕ್‌ಗೆ ತಿಳಿಸಿದರು.

ದಲಿತರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ: 10 ದಿನ ಕಳೆದರೂ ಆರೋಪಿಯನ್ನು ಬಂಧಿಸದ ಪೊಲೀಸ್
ಇದನ್ನೂ ಓದಿ: ಕೆಜಿಎಫ್: ದಲಿತ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ- 10 ದಿನ ಕಳೆದರೂ ಆರೋಪಿಗಳನ್ನು ಬಂಧಿಸದ ಪೋಲಿಸರು

ಮುಷ್ಕರಕ್ಕೆ ಕಾರಣಗಳೇನು..?

ಭಾರತದ ಎರಡನೇ ಅತಿದೊಡ್ಡ ಇಂಧನ ವ್ಯಾಪಾರಿ ಮತ್ತು ಮೂರನೇ ಅತಿದೊಡ್ಡ ತೈಲ ಸಂಸ್ಕರಣಾಕಾರ ಘಟಕ ಬಿಪಿಸಿಎಲ್‌ನಲ್ಲಿ 2017 ರ ಜನವರಿ 1 ರಿಂದ ವೇತನ ಪರಿಷ್ಕರಣೆ ಬಾಕಿ ಉಳಿದಿದೆ. ಆದಾಗ್ಯೂ, ಒಕ್ಕೂಟಗಳು ಸಾರ್ವಜನಿಕ ಉದ್ಯಮ ಇಲಾಖೆಯ ಮಾರ್ಗಸೂಚಿಗಳ ಪ್ರಕಾರ ವೇತನ ಇತ್ಯರ್ಥಕ್ಕೆ ಒತ್ತಾಯಿಸುತ್ತಿವೆ.

“ಮ್ಯಾನೇಜ್ಮೆಂಟ್ ಬಹಳ ಕಡಿಮೆ ಪರಿಷ್ಕರಣೆಯನ್ನು ನೀಡಿದೆ, ಇದು ಐಒಸಿ, ಒಎನ್‌ಜಿಸಿ, ಎಚ್ಪಿಸಿಎಲ್‌ಗಳಿಗಿಂತ ಕೆಳಗಿದೆ. ದೀರ್ಘಕಾಲದಿಂದ ಬಿಪಿಸಿಎಲ್ ನೌಕರರು ಇತರ ಸಾರ್ವಜನಿಕ ವಲಯದ ತೈಲ ಕಂಪನಿಗಳಿಗೆ ಸಮನಾಗಿ ಪ್ರಯೋಜನಗಳನ್ನು ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ” ಎಂದು ಚುಟಿಯಾ ಹೇಳಿದ್ದಾರೆ.

PC: News Click

ಇದನ್ನೂ ಓದಿ: ಉನ್ನಾವೊ: ಅತ್ಯಾಚಾರದ ದೂರು ದಾಖಲಿಸಲು ವಿಫರಾಲದ ಜಿಲ್ಲಾಧಿಕಾರಿ ವಿರುದ್ದ ಕ್ರಮಕ್ಕೆ ಸಿಬಿಐ ಶಿಫಾರಸ್ಸು

ಟೆಂಡರ್ ಮುಖಾಂತರ ಖಾಸಗೀಕರಣಕ್ಕಾಗಿ ಮಾರಾಟ / ಖರೀದಿ ಒಪ್ಪಂದದ ಷರತ್ತುಗಳನ್ನು ಅಂಗೀಕರಿಸುವುದು ನೌಕರರ ನಿವೃತ್ತಿಯ ಪ್ರಯೋಜನಗಳಾದ ಭವಿಷ್ಯ ನಿಧಿ, ಪಿಂಚಣಿ ಮತ್ತು ವೈದ್ಯಕೀಯ ಪ್ರಯೋಜನಗಳ ಮೊಟಕುಗೊಳಿಸುವಂತಾಗುತ್ತದೆ. ಈ ಕುರಿತು ಮಾತುಕತೆಗಾಗಿ ಸಭೆ ಕರೆದು, ವಿವಿಧ ಬೇಡಿಕೆಗಳ ಬಗ್ಗೆ ಚರ್ಚಿಸಲು ಮ್ಯಾನೆಜ್‌ಮೆಂಟ್ ನಿರಾಕರಿಸಿದೆ ಎಂದು ಕೊಚ್ಚಿನ್ ರಿಫೈನರಿ ವರ್ಕರ್ಸ್ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಎಂ.ಜಿ. ಅಜಿ ತಿಳಿಸಿದ್ದಾರೆ.

ಕೊಚ್ಚಿ ರಿಫೈನರಿಸ್‌ನಿಂದಲೇ ಮುಷ್ಕರದಲ್ಲಿ 1,000 ಕ್ಕೂ ಹೆಚ್ಚು ನೌಕರರು ಭಾಗವಹಿಸಿದ್ದರು. ಕೊಚ್ಚಿ ರಿಫೈನರೀಸ್ ವರ್ಕರ್ಸ್ ಅಸೋಸಿಯೇಶನ್ (ಸಿಐಟಿಯು), ಕೊಚ್ಚಿನ್ ರಿಫೈನರೀಸ್ ಎಂಪ್ಲಾಯೀಸ್ ಅಸೋಸಿಯೇಶನ್ (ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್), ರಿಫೈನರಿ ಎಂಪ್ಲಾಯೀಸ್ ಯೂನಿಯನ್ ಮತ್ತು ಬಿಪಿಸಿಎಲ್ ಮಜ್ದೂರ್ ಸಂಘ (ಬಿಎಂಎಸ್) ಗೆ ಸೇರಿದ ನೌಕರರು.

ಕಂಪನಿಯ ಸಂಭಾವ್ಯ ಸ್ವಾಧೀನಪಡಿಸಿಕೊಳ್ಳುವವರಿಗೆ ಬಿಪಿಸಿಎಲ್ನಲ್ಲಿ ನೌಕರರ ರಕ್ಷಣೆ, ಆಸ್ತಿ ತೆಗೆಯುವಿಕೆ ಮತ್ತು ವ್ಯವಹಾರ ಮುಂದುವರಿಕೆ ಕುರಿತು ಮಾರ್ಗದರ್ಶನ ನೀಡುವ ಸರ್ಕಾರದ ನಿರ್ಧಾರವನ್ನು ಬಿಡ್ಡಿಂಗ್‌ ನಂತರದ ಹಂತದಲ್ಲಿ ತಿಳಿಸಲಾಗುತ್ತದೆ. ಇದನ್ನು ಹೂಡಿಕೆ ಇಲಾಖೆ ಹೊರಡಿಸಿದ ಖಾಸಗೀಕರಣ ನಿಯಮಗಳಲ್ಲಿ ಉಲ್ಲೇಖಿಸಲಾಗಿದೆ. ಸರ್ಕಾರ ಬಿಪಿಸಿಎಲ್‌ನಲ್ಲಿ ತನ್ನ ಸಂಪೂರ್ಣ 52.98% ಪಾಲನ್ನು ಮಾರಾಟ ಮಾಡುತ್ತಿದೆ.

ಸೆಪ್ಟೆಂಬರ್ 30 ರ ನಂತರ ಅರ್ಹರಿಗೆ ಹಣಕಾಸು ಅಥವಾ ಬೆಲೆ ಬಿಡ್‌ಗಳನ್ನು ಸಲ್ಲಿಸುವಂತೆ ಕೇಳಲಾಗುತ್ತದೆ.


ಇದನ್ನೂ ಓದಿ: ಜನರ ಮೇಲೆ ಸೋಂಕು ನಿವಾರಕ ಸಿಂಪಡಣೆ ಹಾನಿಕಾರಕ: ಕ್ರಮ ಕೈಗೊಳ್ಳುವಂತೆ ಸುಪ್ರೀಂ ಸೂಚನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...