Homeಮುಖಪುಟಉನ್ನಾವೊ: ಅತ್ಯಾಚಾರದ ದೂರು ದಾಖಲಿಸಲು ವಿಫರಾಲದ ಜಿಲ್ಲಾಧಿಕಾರಿ ವಿರುದ್ದ ಕ್ರಮಕ್ಕೆ ಸಿಬಿಐ ಶಿಫಾರಸ್ಸು

ಉನ್ನಾವೊ: ಅತ್ಯಾಚಾರದ ದೂರು ದಾಖಲಿಸಲು ವಿಫರಾಲದ ಜಿಲ್ಲಾಧಿಕಾರಿ ವಿರುದ್ದ ಕ್ರಮಕ್ಕೆ ಸಿಬಿಐ ಶಿಫಾರಸ್ಸು

ಮಾಜಿ ಜಿಲ್ಲಾಧಿಕಾರಿ ಸೇರಿದಂತೆ ಮೂರು ಪೊಲೀಸ್ ಅಧಿಕಾರಗಳ ವಿರುದ್ದ ಕ್ರಮಕೈಗೊಳ್ಳವಂತೆ ಯು.ಪಿ ಸರ್ಕಾರಕ್ಕೆ ಸಿಬಿಐ ಪತ್ರ ಬರೆದಿದ್ದರೂ ಇದುವರೆಗೂ ಉತ್ತರಿಸಿಲ್ಲ.

- Advertisement -
- Advertisement -

ಅಪ್ತಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಹಾಗೂ ಬಾಲಕಿಯ ತಂದೆಯನ್ನು ಕೊಂದ ಪ್ರಕರಣದಲ್ಲಿ 10 ವರ್ಷ ಶಿಕ್ಷೆಗೆ ಒಳಗಾಗಿರುವ ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ವಿರುದ್ಧ ದೂರು ದಾಖಲಿಸಲು ವಿಫಲರಾಗಿದ್ದ ಪ್ರಕರಣ ಸಂಬಂಧ ಉನ್ನಾವೊ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಬಿಐ ಉತ್ತರ ಪ್ರದೇಶ ಸರ್ಕಾರಕ್ಕೆ ಪತ್ರ ಬರೆದಿದೆ.

ಮಾಜಿ ಜಿಲ್ಲಾಧಿಕಾರಿ ಹಾಗೂ ಮೂವರು ಪೊಲೀಸರ ವಿರುದ್ದ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶದ ಸರ್ಕಾರಕ್ಕೆ ಸಿಬಿಐ ಆಗಸ್ಟ್ ಎರಡನೇ ವಾರದಲ್ಲೆ ಪತ್ರ ಬರೆದಿದ್ದರೂ ಇದುವರೆಗೆ ಯಾವುದೇ ಉತ್ತರ ಬಂದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಉನ್ನಾವ್‌ ಅತ್ಯಾಚಾರ ಸಂತ್ರಸ್ತೆಯ ತಂದೆ ಕೊಲೆ ಪ್ರಕರಣ: ಬಿಜೆಪಿಯ ಮಾಜಿ ಶಾಸಕ ಕುಲದೀಪ್‌ ಸೆಂಗಾರ್‌ಗೆ 10 ವರ್ಷ ಜೈಲು

ಅಂದಿನ ಜಿಲ್ಲಾಧಿಕಾರಿ ಅದಿತಿ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿದ್ದ ಪುಷ್ಪಾಂಜಲಿ ದೇವಿ ಮತ್ತು ನೇಹಾ ಪಾಂಡೆ, ಹೆಚ್ಚುವರಿ ಎಸ್ಪಿ ಅಷ್ಟಭುಜ ಪ್ರಸಾದ್ ಸಿಂಗ್ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿದೆ.

ಅದಿತಿ ಸಿಂಗ್ 2009 ನೇ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದು, ಪ್ರಸ್ತುತ ಹಾಪುರ್‌ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪುಷ್ಪಾಂಜಲಿ ದೇವಿ 2006 ನೇ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದು ಮಂಗಳವಾರ ಇವರನ್ನು ರೈಲ್ವೆಯ ಡಿಐಜಿ ಆಗಿ ನಿಯೋಜಿಸಲಾಗಿತ್ತು. ನೇಹಾ ಪಾಂಡೆ 2009 ನೇ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದು ಪ್ರಸ್ತುತ ಕೇಂದ್ರ ನಿಯೋಜನೆಯಲ್ಲಿ ಗುಪ್ತಚರ ಬ್ಯೂರೊದಲ್ಲಿದ್ದಾರೆ. 2017 ರ ಅಕ್ಟೋಬರ್‌ನಲ್ಲಿ ಪಾಂಡೆಯವರನ್ನು ವರ್ಗಾಯಿಸಿದ ಬಳಿಕ ಪುಷ್ಪಾಂಜಲಿ ದೇವಿ ಉನ್ನಾವೊಗೆ ವರ್ಗಾವಣೆಯಾಗಿ ಬಂದಿದ್ದರು.

ಅಷ್ಟಭುಜ ಪ್ರಸಾದ್ ಸಿಂಗ್ ಐಪಿಎಸ್ ಕೇಡರ್‌ಗೆ ಬಡ್ತಿ ಪಡೆದಿದ್ದು, ಪ್ರಸ್ತುತ ಪ್ರಾಂತೀಯ ಸಶಸ್ತ್ರ ಪಡೆಯ 12 ನೇ ಬೆಟಾಲಿಯನ್ ಕಮಾಂಡೆಂಟ್ ಆಗಿ ಫತೇಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

2017 ರಲ್ಲಿ 17 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿದ್ದು, ದೂರು ನೀಡಿದ ಮಹಿಳೆ ಲಕ್ನೋದಲ್ಲಿ ಮುಖ್ಯಮಂತ್ರಿ ನಿವಾಸದ ಮುಂದೆ ಆತ್ಮಹತ್ಯೆಗೆ ಪ್ರಯತ್ನಿಸಿದ ನಂತರ ಎಪ್‌ಐಆರ್‌ ದಾಖಲಾತ್ತು.


ಇದನ್ನೂ ಓದಿ: ಪೊಲೀಸರು ಮಾಡಿದ ನ್ಯಾಯದ ಕೊಲೆ ಮತ್ತು ದ್ವಂದ್ವಭಕ್ತರ ಉನ್ನಾವ್ ಅತ್ಯಾಚಾರ ಒಂದು ದೇಶ ಎರಡು ನ್ಯಾಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...